ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಸ್ಟೇಟಸ್‌ನ್ನು ಡಿಸೇಬಲ್ ಮಾಡುವುದು ಹೇಗೆ?

By GizBot Bureau
|

ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಸಾಕಷ್ಟು ಬೆಳವಣಿಗೆಗಳು ಮತ್ತು ಅಪ್ ಡೇಟ್ ಗಳು ಆಗುತ್ತಲೇ ಇದೆ. ಫೇಕ್ ಅಕೌಂಟ್ ಗಳ ನಿಯಂತ್ರಣ, ವೆರಿಫಿಕೇಷನ್ ಪ್ರೊಸೆಸ್ ಗಳು ಇತ್ಯಾದಿಗಳು ಫೋಟೋ ಶೇರಿಂಗ್ ಆಪ್ ನ ಭದ್ರತೆಯನ್ನು ಬಲಪಡಿಸುತ್ತಿದೆ. ಅಷ್ಟೇ ಅಲ್ಲ ಬಳಕೆದಾರರ ಪ್ರೈವೆಸಿ ರಕ್ಷಣೆಗೂ ಕೂಡ ಇನ್ಸ್ಟಾಗ್ರಾಂ ಹೆಚ್ಚು ಒತ್ತು ನೀಡಿದಂತೆ ಕಾಣುತ್ತಿದೆ.

ಹೌದು, ಈ ವರ್ಷದ ಆರಂಭದಲ್ಲಿ ಇನ್ಸ್ಟಾಗ್ರಾಂ ಯಾರು ಕೊನೆಯ ಬಾರಿ ನಿಮ್ಮ ಅಕೌಂಟ್ ವೀಕ್ಷಿಸಿದರು ಮತ್ತು ನೀವು ಕೊನೆಯ ಬಾರಿ ಯಾವಾಗ ಆನ್ ಲೈನ್ ಆಗಿದ್ದು ಎಂಬ ವಿವರವನ್ನು ತಿಳಿಯುವಂತೆ ಮಾಡಲಾಗಿತ್ತು. ಅವರ ಪ್ರೊಫೈಲ್ ನಲ್ಲಿ ಆನ್ ಲೈನ್ ಇರುವವರನ್ನು ಹಸಿರು ನಿಶಾನೆಯನ್ನಾಗಿ ಮಾಡಿ ಪರಿವರ್ತನೆಗೊಳಿಸಿತ್ತು. ಇದು ಫೇಸ್ ಬುಕ್ ಮೆಸೇಜಂರ್ ನಲ್ಲಿದ್ದಂತೆಯೇ ಆಗಿತ್ತು.

ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಸ್ಟೇಟಸ್‌ನ್ನು ಡಿಸೇಬಲ್ ಮಾಡುವುದು ಹೇಗೆ?

ಇದು ಹೆಚ್ಚಿನ ಬಳಕೆದಾರರಿಗೆ ಪ್ರಯೋಜನಕ್ಕೆ ಬಂದರೂ ಕೂಡ, ಹಲವಾರು ಬಳಕೆದಾರರು ತಾವು ಆನ್ ಲೈನ್ ಇರುವುದನ್ನು ಬೇರೆಯವರಿಗೆ ತಿಳಿಯುವುದನ್ನು ಇಚ್ಛಿಸುವುದಿಲ್ಲ. ಹಾಗಾಗಿ ಇನ್ಸ್ಟಾಗ್ರಾಂ ಈ ವೈಶಿಷ್ಟ್ಯತೆಯಲ್ಲಿ ಈಗ ನಿಮ್ಮ ಆನ್ ಲೈನ್ ಸ್ಟೇಟಸ್ ನ್ನು ಡಿಸೇಬಲ್ ಮಾಡಿ ಇಡುವ ಸೌಕರ್ಯವನ್ನು ಒದಗಿಸುತ್ತಿದೆ.

ನೀವು ಕೂಡ ಒಂದು ವೇಳೆ ನಿಮ್ಮ ವಯಕ್ತಿಕ ವಿಚಾರವನ್ನು ಹಂಚಿಕೊಳ್ಳಲು ಇಚ್ಛಿಸದೇ ಅಂದರೆ, ಫೋಟೋ ಶೇರಿಂಗ್ ಆಪ್ ನಲ್ಲಿ ನೀವು ಯಾವಾಗ ಆನ್ ಲೈನ್ ಇರುತ್ತೀರಿ ಎಂಬುದು ಬೇರೆಯವರಿಗೆ ತಿಳಿಯಬಾರದು ಎಂದು ನೀವು ಇಚ್ಛಿಸುವವರಾಗಿದ್ದರೆ, ನಿಮ್ಮ ಸ್ಟೇಟಸ್ ನ್ನು ಆನ್ ಲೈನ್ ನಿಂದ ಡಿಸೇಬಲ್ ಮಾಡಿ ಲಾಗಿನ್ ಆಗಿದ್ದರೂ ಕೂಡ ಆಫ್ ಲೈನ್ ನಲ್ಲಿ ಇರುವಂತೆ ಮಾಡುವುದು ಹೇಗೆ ಎಂಬ ವಿವರಣೆಯನ್ನು ನಾವು ಈ ಲೇಖನದಲ್ಲಿ ನಿಮಗೆ ಒದಗಿಸುತ್ತಿದ್ದೇವೆ.

ಇನ್ಸ್ಟಾಗ್ರಾಂನಲ್ಲಿ ಹಸಿರು ನಿಶಾನೆಯನ್ನು ಡಿಸೇಬಲ್ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಸ್ಟೇಟಸ್‌ನ್ನು ಡಿಸೇಬಲ್ ಮಾಡುವುದು ಹೇಗೆ?

. ಐಓಎಸ್ ಬಳಕೆದಾರರಿಗೆ:

ಐಒಎಸ್ ಬಳಕೆದಾರರು ಇನ್ಸ್ಟಾಗ್ರಾಂಗೆ ಲಾಗಿ ಇನ್ ಆಗಿ ಮತ್ತು ಪ್ರೊಫೈಲ್ ಟ್ಯಾಬ್ ಕಡೆಗೆ ಧಾವಿಸಿ. ಅಲ್ಲಿ ನೀವು ಸೆಟ್ಟಿಂಗ್ಸ್ ಆಯ್ಕೆಯನ್ನು ಗಮನಿಸಬಹುದು. ಆಪ್ ಇಂಟರ್ ಫೇಸ್ ನ ಮೇಲ್ಬಾಗದ ಬಲತುದಿಯಲ್ಲಿ ಅದು ಇರುತ್ತದೆ. ಆ ಆಯ್ಕೆಯನ್ನು ಟ್ಯಾಪ್ ಮಾಡಿದರೆ ಅದು ನಿಮ್ಮನ್ನು ಪ್ರೊಫೈಲ್ ವಿಂಡೋಗೆ ಕರೆದೊಯ್ಯುತ್ತದೆ. ಈಗ ನೀವು ಸ್ಕ್ರೋಲ್ ಡೌನ್ ಮಾಡಿದರೆ ಪ್ರೈವಸಿ ಮತ್ತು ಸೆಕ್ಯುರಿಟಿ ವಿಭಾಗವನ್ನು ಗಮನಿಸಬಹುದು. ಈ ವಿಭಾಗದಲ್ಲಿ ನೀವು ಆಕ್ಟೀವ್ ಸ್ಟೇಟಸ್ ಅನ್ನೋ ಆಯ್ಕೆಯನ್ನು ಗಮನಿಸುತ್ತೀರಿ. ಈಗ ನೀವು ಈ ಆಯ್ಕೆಯನ್ನು ಟಾಗಲ್ ಮಾಡಿ ಅಲ್ಲಿ ಸ್ವಿಚ್ ಆಫ್ ಮಾಡಿದರೆ ನೀವು ಆನ್ ಲೈನ್ ಇದ್ದರೂ ಕೂಡ ಇನ್ಸ್ಟಾಗ್ರಾಂನಲ್ಲಿ ಇತರರಿಗೆ ಆಫ್ ಲೈನ್ ಇರುವಂತೆಯೇ ಅನ್ನಿಸುತ್ತದೆ.

. ಆಂಡ್ರಾಯ್ಡ್ ಬಳಕೆದಾರರಿಗೆ:

ಆಂಡ್ರಾಯ್ಡ್ ಬಳಕೆದಾರರು ಮೊದಲು ಇನ್ಸ್ಟಾಗ್ರಾಂ ಆಪ್ ಗೆ ಲಾಗಿನ್ ಆಗಿ. ನಂತರ ಪ್ರೊಫೈಲ್ ಟ್ಯಾಬ್ ನ್ನು ಟ್ಯಾಪ್ ಮಾಡಿ. ಕೆಳಭಾಗದ ಬಲ ಬದಿಯಲ್ಲಿ ಇದರ ಐಕಾನ್ ಇರುತ್ತದೆ. ಈ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿದ ನಂತರ ಸ್ಕ್ರೋಲ್ ಡೌನ್ ಮಾಡಿದರೆ ನೀವು ಪ್ರೈವೆಸಿ ಮತ್ತು ಸೆಕ್ಯುರಿಟಿ ವಿಭಾಗವನ್ನು ಗಮನಿಸುತ್ತೀರಿ. ಅಲ್ಲಿಂದ ನೀವು ಆಕ್ಟೀವ್ ಸ್ಟೇಟಸ್ ಆಯ್ಕೆಯನ್ನು ಗಮನಿಸಿ ಮತ್ತು ಅದನ್ನು ಸ್ವಿಚ್ ಆಫ್ ಮಾಡಿ.

ಹೀಗೆ ನೀವು ಆಂಡ್ರಾಯ್ಡ್ ನಲ್ಲಿರುವ ನಿಮ್ಮ ಫೋಟೋ ಶೇರಿಂಗ್ ಆಪ್ ಇನ್ಸ್ಟಾಗ್ರಾಂನಲ್ಲಿ ಆನ್ ಲೈನ್ ಇದ್ದರೂ ಕೂಡ ಇತರರಿಗೆ ಆಫ್ ಲೈನ್ ಆಗಿರುವಂತೆ ಗೋಚರಿಸುವಂತೆ ಮಾಡಿಕೊಂಡು ನಿಮ್ಮ ಪ್ರೈವೆಸಿಯನ್ನು ಕಾಪಾಡಿಕೊಳ್ಳಬಹುದು.

ಇತ್ತೀಚೆಗೆ ಆಸ್ಟ್ರೇಲಿಯಾ ಸೇರಿದಂತೆ ಇತರೆ ದೇಶಗಳಲ್ಲಿ ಇನ್ಸ್ಟಾಗ್ರಾಂ ವೆರಿಫಿಕೇಷನ್ ಪ್ರೊಸೆಸ್ ನ್ನು ಮಾಡುತ್ತಿದ್ದು, ಅದು ಮುಂದಿನ ದಿನಗಳಲ್ಲಿ ಭಾರತದಲ್ಲೂ ನಡೆಯುವ ಸಾಧ್ಯತೆ ಇದೆ. ಆ ಮೂಲಕ ಫೇಕ್ ಅಕೌಂಟ್ ಗಳಿಗೆ ಕಡಿವಾಣ ಹಾಕುವ ಪ್ರಯತ್ನಗಳು ಇನ್ಸ್ಟಾಗ್ರಾಂ ಕಡೆಯಿಂದ ನಡೆಯುತ್ತಿದ್ದು, ಸುಳ್ಳು ಸುದ್ದಿಗಳನ್ನು ಹರಡುವ ಮತ್ತು ಇತರರಿಗೆ ಅನಾವಶ್ಯಕವಾಗಿ ತೊಂದರೆ ನೀಡುವ ಫೇಕ್ ಅಕೌಂಟ್ ಗಳಿಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.

Best Mobiles in India

English summary
How to disable Active Status from your Instagram app. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X