ಒಂದು ಕ್ಯಾಮೆರಾ ಖರೀದೀಸುವಾಗ ಈ 6 ಮುಖ್ಯ ವಿಷಯಗಳನ್ನು ಮರೆಯದಿರಿ!!

|

ಮಾನವನ ಬಾವನ ಲೋಕಕ್ಕೆ ಅತಿ ಹತ್ತಿರವಾದ ಆವಿಷ್ಕಾರಗಳಲ್ಲಿ ಕ್ಯಾಮೆರಾ ಕೂಡ ಒಂದು. ಕತ್ತಲೆ ಕೋಣೆಯಿಂದ ಇಂದಿನ ಡಿಎಸ್‍ಎಲ್‍ಆರ್ ಹಾಗೂ ಮೊಬೈಲ್ ಕ್ಯಾಮೆರಾದವರೆಗಿನ ಇಲ್ಲಿಯವರೆಗಿನ ಪಯಣವೇ ಒಂದು ಸೋಜಿಗ. ಆದರೆ, ಈಗೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೇ ಅತ್ಯುತ್ತಮ ಫೋಟೊಗಳನ್ನು ಚಿತ್ರಿಸಬಹುದಾದರೆ ಒಂದು ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನು ಖರೀದಿಸುವ ಅವಶ್ಯಕತೆ ಏನಿದೆ ಎಂದು ಹಲವರ ಪ್ರಶ್ನೆ. ನಿಮ್ಮ ಪ್ರಶ್ನೆಯೂ ಇದೇ ಆಗಿದ್ದರೆ ಅದು ಖಂಡಿತವಾಗಿಯೂ ಅರ್ಥವಿಲ್ಲದ್ದು ಎನ್ನಬಹುದು.

ಏಕೆಂದರೆ, ಸ್ಮಾರ್ಟ್‌ಫೋನ್‌ ಕ್ಯಾಮೆರಾ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗೆ ಪೈಪೋಟಿ ನೀಡುವಂತೆ ಬೆಳೆಯಲು ಇನ್ನು ಹಲವು ವರ್ಷಗಳೇ ಬೇಕಾಗಬಹುದು ಎಂದರೆ ನೀವು ನಂಬದೇ ಇರಬಹುದು. ಒಂದು ಯಾಂತ್ರಿಕ ಮೈ ಎಲ್ಲಾ ಸೇರಿ ಒಂದು ಚಿತ್ರವನ್ನು ಸೆರೆಹಿಡಿಯಲು ನೆರವವಾಗುವ ಡಿಜಿಟಲ್ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ ಎಂದರೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳೂ ಸ್ಮಾರ್ಟ್‌ಫೋನ್‌ಗಿಂತ ಹೆಚ್ಚಿನದನ್ನು ಹೊಂದಿದೆ ಎಂಬ ಸರಳ ವಿಷಯವನ್ನು ನಾವು ತಿಳಿಯಬಹುದು.

ಒಂದು ಕ್ಯಾಮೆರಾ ಖರೀದೀಸುವಾಗ ಈ 6 ಮುಖ್ಯ ವಿಷಯಗಳನ್ನು ಮರೆಯದಿರಿ!!

ಹಾಗಾಗಿ, ಡಿಜಿಟಲ್ ಕ್ಯಾಮೆರಾ ಖರೀದಿಸಿದ ನಂತರ ಅದರ ಮಾರುಕಟ್ಟೆ ಈಗಲೇ ಬೀಳಬಹುದು ಎಂಬ ಲೆಕ್ಕಾಚಾರ ತಪ್ಪು ಎಂಬುದು ನನ್ನ ಅಭಿಪ್ರಾಯ. ಇದೆಲ್ಲಾ ಈಗ ಹೇಳಲು ಕಾರಣ ಇಷ್ಟೆ. ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸಬೇಕೆ ಎಂಬ ಗೊಂದಲವನ್ನು ಹೊಂದಿರುವವರ ಗೊಂದಲವನ್ನು ಪರಿಹರಿಸಲು ಒಂದೆಡೆಯಾದರೆ, ಡಿಜಿಟಲ್ ಕ್ಯಾಮೆರಾ ಖರೀದಿಸುವ ಮುನ್ನ ತಿಳಿಯಬೇಕಾದ ಅಂಶಗಳು ಯಾವುವು ಎಂಬುದು ಹಲವರ ಪ್ರಶ್ನೆಯಾಗಿದೆ. ಹಾಗಾಗಿ, ಈಗ ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇನೆ.

ಮೆಗಾಪಿಕ್ಸೆಲ್ ಮುಖ್ಯವಲ್ಲ!

ಮೆಗಾಪಿಕ್ಸೆಲ್ ಮುಖ್ಯವಲ್ಲ!

ಡಿಎಸ್‌ಎಲ್‌ಆರ್ ಕ್ಯಾಮೆರಾ ಮಾರುಕಟ್ಟೆಯಲ್ಲಿ 10 ರಿಂದ 15 ಮೆಗಾಪಿಕ್ಸೆಲ್‌ಗಿಂತ ಕಡಿಮೆಯ ಡಿಎಸ್‌ಎಲ್‌ಆರ್ ಕ್ಯಾಮೆರಾ ದೊರೆಯುವುದೇ ಕಷ್ಟ. ಹಾಗಿರುವಾಗ ನಾವು ಮೆಗಾಪಿಕ್ಸೆಲ್ ಬಗ್ಗೆ ಹೆಚ್ಚಿನ ಗಮನ ಬೇಕಾಗಿಲ್ಲ ಎನ್ನಬಹುದು. ಬಹುತೇಕ ಜನರು ಕೇವಲ ಮೆಗಾಪಿಕ್ಸೆಲ್ ಹೆಚ್ಚಿದ್ದರೆ ಮಾತ್ರ ಅತ್ಯುತ್ತಮ ಕ್ಯಾಮೆರಾ ಎಂಬ ನಿರ್ಧಾರಕ್ಕೆ ಬಂದಿರುವುದು ತಪ್ಪೆಂದು ನನ್ನ ಅಭಿಪ್ರಾಯ.

ಲೆನ್ಸ್ ಖರೀದಿ ಬಗ್ಗೆ ತಿಳಿದಿರಿ.

ಲೆನ್ಸ್ ಖರೀದಿ ಬಗ್ಗೆ ತಿಳಿದಿರಿ.

ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸುವಾಗ ಜೊತೆಗೆ ಬರುವ ಒಂದು ಲೆನ್ಸ್ ಸಾಮಾನ್ಯ ಉಪಯೋಗಕ್ಕಷ್ಟೆ ಸಾಕಾಗುತ್ತದೆ. ಆದರೆ, ನೀವು ವೃತ್ತಿ ಪರರಾಗಿ ಅಥವಾ ವೈಲ್ಡ್ ಲೈಫ್ ಫೋಟೋಗ್ರಫಿ ಉದ್ದೇಶಕ್ಕಾಗಿ ಕ್ಯಾಮೆರಾ ಖರೀದಿಸುತ್ತಿದ್ದರೆ ಮ್ಯಾಕ್ರೋ ಲೆನ್ಸ್, ಟೆಲಿಫೋಟೋ ಲೆನ್ಸ್, ಜೂಮ್ ಲೆನ್ಸ್, ಪ್ರೈಮ್ ಲೆನ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ.

ಕ್ಯಾಮೆರಾ VS ಲೆನ್ಸ್!

ಕ್ಯಾಮೆರಾ VS ಲೆನ್ಸ್!

ನೀವು ಕ್ಯಾಮೆರಾ ಖರಿದಿಸುವ ಮುನ್ನವೇ ನಿಮಗೆ ಬೇಕಿರುವ ಲೆನ್ಸ್ ಯಾವುದು ಎಂಬುದನ್ನು ತಿಳಿದುಕೊಳ್ಳಿ. ನಾವು ಯಾವ ಕ್ಯಾಮೆರಾ ಬಳಸುತ್ತಿದ್ದೇವೋ ಅದಕ್ಕೆ ಸರಿಹೊಂದುವಂತಹ ಲೆನ್ಸನ್ನೇ ಬಳಸಲೇಬೇಕಾಗುತ್ತದೆ. ಉದಾಹರಣೆಗೆ ನಿಕಾನ್ ಕ್ಯಾಮೆರಾದಲ್ಲಿ ಲೆನ್ಸ್ ಅನ್ನು ಕೆನಾನ್ ಹಾಗೂ ಕ್ಯಾಮೆರಾ ಲೆನ್ಸನ್ನು ಸೋನಿ ಕ್ಯಾಮೆರಾದಲ್ಲಿ ಬಳಸಲು ಸಾಧ್ಯವಿಲ್ಲ .

 ಸೆನ್ಸರ್ ಗಾತ್ರ

ಸೆನ್ಸರ್ ಗಾತ್ರ

ಡಿಎಸ್‌ಎಲ್‌ಆರ್ ಕ್ಯಾಮರಾದ ಗುಣವೈಶಿಷ್ಟ್ಯಗಳ ಪಟ್ಟಿಯಲ್ಲಿ ಕ್ಯಾಮೆರಾ ಖರೀದಿದಾರರು ಇದರ ಬಗ್ಗೆ ಹೆಚ್ಚು ತಿಳಿಯಬೇಕು. ಈ ಸೆನ್ಸರ್ ಗಾತ್ರ ದೊಡ್ಡದಿದ್ದಷ್ಟೂ ಒಳ್ಳೆಯದು. ಇದರಲ್ಲಿ ಸಿಸಿಡಿ (CCD) ಮತ್ತು ಸಿಮೋಸ್ (CMOS) ಸೆನ್ಸರ್‌ಗಳು ಇವೆ. ಇವುಗಳ ಪರ ಹಾಗು ವಿರೋಧ ಮಾಡುವವರಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಎರಡರಲ್ಲಿ ಯಾವುದಾದರೂ ಇದ್ದರೂ ಸರಿ.

ಸೆನ್ಸರ್ ಕ್ಲೀನಿಂಗ್

ಸೆನ್ಸರ್ ಕ್ಲೀನಿಂಗ್

ನೀವು ಖರೀದಿಸುವ ಡಿಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಲೆನ್ಸ್ ಬದಲಿಸಬಹುದಾದರಿಂದ ಹಾಗೆ ಮಾಡುವಾಗ ಕ್ಯಾಮರಾದ ಸೆನ್ಸರ್ ಮೇಲೆ ಧೂಳು ಕುಳಿತುಕೊಳ್ಳುವುದು ಸಾಮಾನ್ಯ. ಸೆನ್ಸರ್ ಕ್ಲೀನಿಂಗ್ ವ್ಯವಸ್ಥೆ ಇದ್ದರೆ ಸಂವೇದಕವನ್ನು ಸ್ವಚ್ಛಮಾಡಬಹುದು. ಆದುದರಿಂದ ಇಂತಹ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿ.

ಕ್ಯಾಮೆರಾ ಬ್ಯಾಟರಿ ಬಗ್ಗೆ ಗಮನವಿರಲಿ!

ಕ್ಯಾಮೆರಾ ಬ್ಯಾಟರಿ ಬಗ್ಗೆ ಗಮನವಿರಲಿ!

ಡಿಎಸ್‌ಎಲ್‌ಆರ್ ಕ್ಯಾಮರಾ ಖರೀದಿಸುತ್ತದ್ದರೆ ಆ ಕ್ಯಾಮೆರಾದಲ್ಲಿ ಯಾವ ಬ್ಯಾಟರಿ ಬಳಸಿದ್ದಾರೆ ಎಂಬುದನ್ನು ತಿಳಿಯುವುದು ಮುಖ್ಯ. ಒಮ್ಮೆ ಪೂರ್ತಿ ಚಾರ್ಜ್ ಆದರೆ ಎಷ್ಟು ಫೋಟೋ ತೆಗೆಯಬಹುದು ಎಂಬುದರ ಕಡೆಗೂ ಗಮನ ಹರಿಸಬೇಕು. ಒಮ್ಮೆ ಚಾರ್ಜ್‌ ಮಾಡಿದರೆ 2,500 ಫೋಟೋ ತೆಗೆಯಬಹುದಾದ ಬ್ಯಾಟರಿ ಸಾಮರ್ಥ್ಯದ ಕ್ಯಾಮೆರಾಗಳನ್ನು ಖರೀದಿದರೆ ಒಳ್ಳೆಯದು

Best Mobiles in India

English summary
A decent camera bag that can hold your DSLR along with two or more lenses.DSLR Camera Buying Guide. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X