Just In
- 37 min ago
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- 1 hr ago
ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?
- 2 hrs ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- 2 hrs ago
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
Don't Miss
- Movies
"ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ": ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ
- News
ವಂದೇ ಭಾರತ್ ರೈಲಿಗಿಂತ 'ವಂದೇ ಮೆಟ್ರೋ' ಹೇಗೆ ಭಿನ್ನ? ಇಲ್ಲಿವೆ ಪ್ರಮುಖ ವೈಶಿಷ್ಟ್ಯ-ವಿಶೇಷತೆಗಳು
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Automobiles
ಹೆಲ್ಮೆಟ್ ಧರಿಸಿ ಬಂದ್ರೂ ಪತ್ತೆಹಚ್ಚಿದ ಅಭಿಮಾನಿಗಳು... ವಿಡಿಯೋ ವೈರಲ್
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿ ಹೆಚ್ಚಿಸುವುದು ಹೇಗೆ?!
ಶೇ.50ಕ್ಕಿಂತ ಹೆಚ್ಚು ಭಾರತಿಯ ಸ್ಮಾರ್ಟ್‌ಪೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯೊಂದು ಇತ್ತೀಚಿಗಷ್ಟೆ ಪ್ರಕಟವಾಗಿತ್ತು. ಸ್ಮಾರ್ಟ್‌ಪೋನಿನಲ್ಲಿನ ಸ್ಟೋರೇಜ್ ಕಡಿಮೆ ಇರುವುದರಿಂದಲೇ ಬಹುತೇಕ ಸ್ಮಾರ್ಟ್‌ಪೋನ್ ವೇಗ ಕೂಡ ಕಡಿಮೆಯಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನ ವೇಗವನ್ನು ವರ್ಧಿಸಲು ಸಹಾಯವಾಗುವಂತೆ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಹೆಚ್ಚಿಸುವ ಸುಲಭ ವಿಧಾನಗಳನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿರುವ ಅಗತ್ಯ ಸಲಹೆಗಳು ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನಿನ ಸ್ಪೇಸ್ ಅನ್ನು ಕ್ಲಿಯರ್ ಮಾಡಿಬಿಡುತ್ತವೆ.

#1 ಹಳೆಯ ಸಂದೇಶಗಳನ್ನು ಅಳಿಸಿ
ನಿಮ್ಮ ಹಳೆಯ ಸಂದೇಶಗಳನ್ನು ಅಳಿಸಿ. ಇದು ನಿಮ್ಮ ಫೋನ್‌ನಲ್ಲಿ ಹೆಚ್ಚು ಸ್ಥಳವನ್ನು ಒದಗಿಸಲು ಸಹಾಯ ಮಾಡುತ್ತದೆ.

2ಫೋಟೋ ಅಪ್‌ಲೋಡ್ ಆನ್ ಮಾಡಿ
ಗೂಗಲ್ ಫೋಟೋಗಳಿಗಾಗಿ ಫೋಟೋ ಅಪ್‌ಲೋಡ್ ಅನ್ನು ಆನ್ ಮಾಡಿ. ಇದರಿಂದ ನಿಮ್ಮೆಲ್ಲಾ ಫೋಟೋಗಳು ವೈಫೈ ಅಥವಾ ಮೊಬೈಲ್ ನೆಟ್‌ವರ್ಕ್ ಮೂಲಕ ನಿಮ್ಮ ಗೂಗಲ್ ಖಾತೆಯಲ್ಲಿ ಸಂಗ್ರಹವಾಗುತ್ತದೆ. ಈ ರೀತಿ ನಿಮ್ಮ ಫೋನ್‌ನಿಂದ ಫೋಟೋಗಳನ್ನು ತೆಗೆದುಹಾಕಬಹುದು.

#3 ಎಲ್ಲಾ ಫೈಲ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ರವಾನಿಸಿ
ಸ್ಮಾರ್ಟ್‌ಫೋನಿನಲ್ಲಿರುವ ಎಲ್ಲಾ ಫೈಲ್‌ಗಳನ್ನು ಮೈಕ್ರೋ ಎಸ್‌ಡಿ ಕಾರ್ಡ್‌ಗೆ ರವಾನಿಸುವುದೂ ಕೂಡ ಫೋನ್‌ನಲ್ಲಿ ಸ್ಥಳಾವಕಾಶವನ್ನು ಒದಗಿಸುತ್ತದೆ.

#4 ಆನ್‌ಲೈನ್‌ನಲ್ಲೇ ಹಾಡು!
ನಿಮ್ಮ ಫೋನ್‌ನಲ್ಲಿ ಸ್ಥಳಾವಕಾಶವನ್ನು ಒದಗಿಸಲು ಇದು ಅತ್ಯಂತ ಸೂಕ್ತವಾದುದು. ನಿಮ್ಮ ಫೋನ್‌ನಲ್ಲಿ ಎಲ್ಲಾ ಹಾಡುಗಳನ್ನು ಅಳಿಸಿ. ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗಳಿಗೆ ಬದಲಾಯಿಸಿಕೊಳ್ಳಿ. ಇದರಿಂದ ಫೋನ್ ಸ್ಪೇಸ್ ಅನ್ನು ಉಳಿಸಿಕೊಳ್ಳಬಹುದು.

#5 ನಾರ್ಮಲ್ ಫೋಟೋಸ್ ಕ್ಲಿಕ್ಕಿಸಿ
ನಿಮ್ಮ ಫೋನ್‌ನಲ್ಲಿ ನಾರ್ಮಲ್ ಫೋಟೋಗಳನ್ನು ಕ್ಲಿಕ್ಕಿಸುವುದರ ಮೂಲಕ ಸ್ಥಳಾವಕಾಶವನ್ನು ಹೆಚ್ಚಿಸಬಹುದು. ಹೈ ಡೆಫಿನೇಶನ್ ಫೋಟೋಗಳನ್ನು ತೆಗೆದರೆ ನಿಮ್ಮ ಸ್ಟೋರೇಜ್ ಸ್ಪೇಸ್ ಅನ್ನು ಇದು ಬಳಸಿಕೊಳ್ಳುತ್ತದೆ

#6 ಬ್ರೌಸರ್ ಕ್ಯಾಶ್ ಕ್ಲೀನ್ ಮಾಡಿ
ನೀವು ಕ್ರೋಮ್ ಬ್ರೌಸರ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಕ್ಯಾಶ್, ಡೇಟಾ ಮತ್ತು ಹಿಸ್ಟ್ರಿ ಕ್ಲಿಯರ್ ಮಾಡುವುದು ಅತ್ಯುತ್ತಮ.

#7 ಉಳಿಸಿದ ಇನ್‌ಸ್ಟಾಗ್ರಾಮ್ ಫೋಟೋಗಳನ್ನು ಡಿಲೀಟ್ ಮಾಡಿ
ಸ್ಪೇಸ್ ವಿಷಯದಲ್ಲಿ ಡೇಟಾದಲ್ಲಿ ಹೆವಿ ಎಂದೆನಿಸಿರುವ ಫೋಟೋಗಳನ್ನು ಅಳಿಸಿ ನಂತರ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

#8 ಆಫ್‌ಲೈನ್ ಡೇಟಾ ಅಳಿಸಿ
ನಿಮ್ಮ ಆಫ್‌ಲೈನ್ ವೀಡಿಯೊಗಳು, ಹಾಡುಗಳು ಹೆಚ್ಚಿನ ಸ್ಟೋರೇಜ್ ಸ್ಪೇಸ್ ಅನ್ನು ತೆಗೆದುಕೊಳ್ಳುತ್ತದೆ. ಅಪ್ಲಿಕೇಶನ್‌ಗೆ ಹೋಗಿ ಮತ್ತು ನೀವು ಉಳಿಸಿರುವ ಆಫ್‌ಲೈನ್ ವೀಡಿಯೊಗಳನ್ನು ಕ್ಲಿಯರ್ ಮಾಡಿ.

#9 ಬೇಡದ ಅಪ್ಲಿಕೇಶನ್‌ಗಳನ್ನು ಅಳಿಸಿ
ಬೇಡದ ಅಪ್ಲಿಕೇಶನ್‌ಗಳನ್ನು ಅಳಿಸಿ ಇದರಿಂದ ಸಾಕಷ್ಟು ಸ್ಪೇಸ್ ನಿಮಗೆ ದೊರೆಯುತ್ತದೆ.

#10 ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ
ನಿಮ್ಮ ಫೋನ್ ಅನ್ನು ನಿಧಾನಗೊಳಿಸುತ್ತಿರುವ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಇದು ಕ್ಯಾಮೆರಾ ಅಪ್ಲಿಕೇಶನ್‌ಗಳನ್ನು ಕೂಡ ಒಳಗೊಂಡಿರಬಹುದು. ಅದಷ್ಟು ಇವುಗಳ ಬಳಕೆಯನ್ನು ಕಡಿಮೆ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470