ನಮ್ಮ ಮನೆಯನ್ನು ಸ್ಮಾರ್ಟ್ ಮನೆಯನ್ನಾಗಿಸುವುದು ಹೇಗೆ?

|

ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಗ್ಯಾಜೆಟ್‌ಗಳ ಬಳಕೆಯಾಗುತ್ತಿದೆ. ಎಲ್ಲರೂ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಗ್ಯಾಜೆಟ್‌ಗಳನ್ನು ಬಳಸಲು ಆರಂಭಿಸಿದ್ದಾರೆ ಎನ್ನುವುದು ನಿಜವೇ ಆಗಿರುವ ವಿಷಯವಾಗಿದ್ದರೂ ಕೂಡ, ಅವರು ಹೆಚ್ಚು ಸ್ಮಾರ್ಟ್ ಫೋನ್ ಗಳಿಗೆ ಮಾತ್ರ ಸೀಮಿತಗೊಳ್ಳುತ್ತಿದ್ದಾರೆ ಮತ್ತು ಆ ಮೂಲಕ ಜೀವನವನ್ನು ಸರಾಗಗೊಳಿಸಿಕೊಳ್ಳುತ್ತಿದ್ದಾರೆ.

ಆದರೆ, ಭಾರತದಲ್ಲಿ ಮನೆಯ ಒಳಗೆ ಅಂದರೆ ಹೋಮ್ ಆಟೋಮೇಷನ್ ವಿಚಾರ ಇನ್ನೂ ಕೂಡ ಅಷ್ಟು ಪ್ರಸ್ತುತವಾಗುತ್ತಿಲ್ಲ. ಎಲ್ಲರೂ ಅದನ್ನು ಪ್ರಯತ್ನಿಸುತ್ತಲೂ ಇಲ್ಲ. ಹೆಚ್ಚಿನ ಜನ ಅದನ್ನು ಪ್ರಾರಂಭಿಸುವುದು ಹೇಗೆ ಎಂಬ ಗೊಂದಲದಲ್ಲೇ ಇದ್ದರೆ, ಅಂತಹ ಡಿವೈಸ್ಗಳ ಖರೀದಿ ಹೇಗೆ ಮತ್ತು ಅದನ್ನು ಬಳಸುವುದು ಹೇಗೆ? ಎಂಬ ಲೆಕ್ಕಾಚಾರಗಳಲ್ಲಿ ಹಲವರು ತೊಡಗಿದ್ದಾರೆ.

ನಮ್ಮ ಮನೆಯನ್ನು ಸ್ಮಾರ್ಟ್ ಮನೆಯನ್ನಾಗಿಸುವುದು ಹೇಗೆ?

ಮೊದಲ ಬಾರಿಗೆ ಸ್ಮಾರ್ಟ್ ಡಿವೈಸ್ ಗಳನ್ನು ಮನೆಯಲ್ಲಿ ಬಳಸಲು ಅಥವಾ ಇಂಟೀರಿಯರ್ಗೆ ಸ್ಮಾರ್ಟ್ ಡಿವೈಸ್ ಗಳನ್ನು ಬಳಕೆ ಮಾಡಲು ಯೋಚಿಸುತ್ತಿರುವವರು ಈ ಲೇಖನವನ್ನು ಒಮ್ಮೆ ಓದಿ. ಹೋಮ್ ಆಟೋಮೇಷನ್ ಎಂಬುವುದು ಭವಿಷ್ಯದಲ್ಲಿ ಹೆಚ್ಚು ಬಳಕೆಯಾಗುವುದರಿಂದ, ನಿಮ್ಮ ಮನೆಯನ್ನು ಸ್ಮಾರ್ಟ್ ಮನೆಯನ್ನಾಗಿ ಪರಿವರ್ತಿಸುವ ಬಗ್ಗೆ ಇಲ್ಲೊಂದಿಷ್ಟು ಸಲಹೆಗಳಿವೆ.

• ಇಂಟರ್ ನೆಟ್ ಸಂಪರ್ಕ ಸರಿಯಾಗಿ ಇರಲಿ

• ಇಂಟರ್ ನೆಟ್ ಸಂಪರ್ಕ ಸರಿಯಾಗಿ ಇರಲಿ

ಎಲ್ಲಾ ವಸ್ತಗಳೂ ಸಸೂತ್ರವಾಗಿ ಕೆಲಸ ನಿರ್ವಹಿಸುವಂತೆ ಮಾಡಬೇಕಾದರೆ ಪ್ರಮುಖವಾಗಿ ಬೇಕಾಗುವುದು ಅಂತರ್ಜಾಲ ಸಂಪರ್ಕ. ಯಾವಾಗಲೂ ಅಂತರ್ಜಾಲ ಸಂಪರ್ಕ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲೇಬೇಕು. ನಿಮ್ಮ ವೈಫೈ ರೂಟರ್ ಮತ್ತು ಹೆಚ್ಚು ಡಾಟಾ ಸಂಪರ್ಕ ಮತ್ತು ನೆಟ್ ವರ್ಕ್ ಸರಿಯಾಗಿ, ವೇಗವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಇದರ ಸಂಪರ್ಕ ಸರಿಯಾಗಿ ಇಲ್ಲದೇ ಇದ್ದಲ್ಲಿ ನೀವು ಕೊಡುವ ಕಮಾಂಡ್ ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.

• ಸ್ಮಾರ್ಟ್ ಲೈಟ್ ಬಲ್ಬ್ ಗಳು

• ಸ್ಮಾರ್ಟ್ ಲೈಟ್ ಬಲ್ಬ್ ಗಳು

ನಿಮ್ಮ ಮನೆಗಳನ್ನು ಉತ್ತಮವಾಗಿ, ಅಂದವಾಗಿ, ಭವಿಷ್ಯದ ಮನೆಯನ್ನಾಗಿ ರೂಪಿಸಲು ಸಿಗುವ ಅತ್ಯುತ್ತಮ ಸಾಧಗಳೆಂದರೆ ಅದು ಸ್ಮಾರ್ಟ್ ಬಲ್ಬ್ ಗಳು. ಇವುಗಳು ನಿಮ್ಮ ಸೋರ್ಸ್ ಡಿವೈಸ್ ಗಳಿಗೆ ಕನೆಕ್ಟ್ ಮಾಡಿ ಇಡಲಾಗುತ್ತದೆ. ಉದಾಹರಣೆಗೆ ನಿಮ್ಮ ಮೊಬೈಲ್. ಇವುಗಳ ಬ್ರೈಟ್ ನೆಸ್ ಇಲ್ಲವೇ ಕಲರ್ ನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ಗಳ ಮುಖಾಂತರ ನಿಯಂತ್ರಿಸಿಕೊಳ್ಳಬಹುದು.

• ಸ್ಮಾರ್ಟ್ ಸ್ಪೀಕರ್

• ಸ್ಮಾರ್ಟ್ ಸ್ಪೀಕರ್

ಸ್ಮಾರ್ಟ್ ಸ್ಪೀಕರ್ ಗಳು ನಿಮ್ಮ ಹಲವಾರು ಕೆಲಸಗಳಿಗೆ ನೆರವಾಗುತ್ತದೆ. ಈ ಸ್ಪೀಕರ್ ಗಳು ಗೂಗಲ್, ಅಮೇಜಾನ್, ಆಪಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳಿಂದ ಲಭ್ಯವಿದೆ. ಇವುಗಳು ನಿಮಗಾಗಿ ಹಾಡುಗಳನ್ನು ಪ್ಲೇ ಮಾಡಬಲ್ಲವು. ಸ್ಮಾರ್ಟ್ ಲೈಟ್ ಗಳ ಕಂಟ್ರೋಲ್, ಟಿವಿಯ ನಿಯಂತ್ರಣ, ಮ್ಯೂಸಿಕ್ ಸಿಸ್ಟಮ್, ಕರೆಗಳನ್ನು ಸ್ವೀಕರಿಸಲು ಇಲ್ಲವೇ ಮಾಡಲು, ಮೆಸೇಜ್ ಗಳನ್ನು ಕಳಿಸಲು ಇತ್ಯಾದಿಗಳನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ಸಹಾಯದಿಂದಲೇ ಮಾಡಿಬಿಡಬಹುದು.

• ಸ್ಮಾರ್ಟ್ ಕ್ಯಾಮರಾ

• ಸ್ಮಾರ್ಟ್ ಕ್ಯಾಮರಾ

ಮನೆಯ ಹೊರಗೆ ಬಾಗಿಲ ಬಳಿ ಅಳವಡಿಸಲಾಗಿರುವ ಕ್ಯಾಮರಾ, ಲಿವಿಂಗ್ ರೂಮ್ ಮತ್ತು ನಿಮ್ಮ ಮಕ್ಕಳ ಕೋಣೆಯಲ್ಲಿ ಕ್ಯಾಮರಾ ಅಳವಡಿಸುವುದು ಬಹಳ ಮುಖ್ಯವಾಗಿರುತ್ತದೆ. ಈ ಕ್ಯಾಮರಾಗಳು ನಿಮ್ಮ ಮೊಬೈಲ್ ಅಥವಾ ಟ್ಯಾಬ್ ಗೆ ಕನೆಕ್ಟ್ ಮಾಡಿ ಆಕ್ಟಿವೇಟ್ ಮತ್ತು ಸ್ವಿಚ್ ಆಫ್ ಮಾಡಲು ಅವಕಾಶವಿರುವಂತೆ ಮಾಡಲು ಸಾಧ್ಯವಾಗುತ್ತದ. ಕೆಲವು ಯಾವಾಗಲೂ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಯಾವುದೇ ಅಹಿತ ಸಂದರ್ಬದಲ್ಲಿ ನಿಮ್ಮನ್ನ ಅಲರ್ಟ್ ಮಾಡುತ್ತದೆ.

• ಸ್ಮಾರ್ಟ್ ಸ್ವಿಚ್ಚಸ್

• ಸ್ಮಾರ್ಟ್ ಸ್ವಿಚ್ಚಸ್

ಸ್ಮಾರ್ಟ್ ಸ್ವಿಚ್ ಗಳು ಸ್ವಲ್ಪ ದುಬಾರಿಯಾಗುತ್ತದೆ ಆದರೆ ನಿಭಾಯಿಸಲು ಬಹಳ ಸುಲಭವಾಗುತ್ತದೆ. ಹಾಗಾಗಿ ನಿಮ್ಮ ಮನೆಗಳಿಗೆ ಸ್ಮಾರ್ಟ್ ಸ್ವಿಚ್ ಗಳನ್ನು ಬಳಕೆ ಮಾಡಬಹುದು. ಹೆಚ್ಚಿನವು ಮೋಷನ್ ಸೆನ್ಸರ್ ವ್ಯವಸ್ಥೆಯನ್ನು ಹೊಂದಿರುತ್ತದೆ. ನಿರ್ಧಿಷ್ಟ ಕೋಣೆಯ ಯಾವುದೋ ಲೈಟ್ ಆಫ್ ಅಥವಾ ಆನ್ ಮಾಡುವುದನ್ನು ಮಾಡಬಹುದಾಗಿರುತ್ತದೆ.

• ಇತರೆ ಇಂಟರ್ ನೆಟ್ ಸಂಬಂಧಿ ಆಕ್ಸಸರಿಗಳು

• ಇತರೆ ಇಂಟರ್ ನೆಟ್ ಸಂಬಂಧಿ ಆಕ್ಸಸರಿಗಳು

ಇನ್ನಿತರೆ ವಸ್ತುಗಳನ್ನು ಈ ಪಟ್ಟಿಗೆ ಸೇರಿಸಿಕೊಳ್ಳಿ. ವೈಫೈ ನಿಯಂತ್ರಿತ ವಾಷಿಂಗ್ ಮೆಷಿನ್, ಎಸಿ, ಗೀಸರ್ ಇತ್ಯಾದಿಗಳನ್ನು ಬಳಸುವುದು. ಇವೆಲ್ಲವೂ ಸ್ಮಾರ್ಟ್ ಫೋನ್ ಗೆ ಇಂಟರ್ ನೆಟ್ ಸೌಲಭ್ಯದಿಂದ ಕನೆಕ್ಟ್ ಮಾಡಿ ಆಕ್ಟಿವೇಟ್ ಮಾಡಲಾಗುತ್ತದೆ ಮತ್ತು ಆಫ್ ಮಾಡುವುದಾದರೂ ಸ್ಮಾರ್ಟ್ ಫೋನ್ ಮೂಲಕವೇ ಮಾಡಲು ಸಾಧ್ಯವಾಗುತ್ತದೆ.

• ಕೆನೆಕ್ಟೆಟ್ ಆಕ್ಸಸರೀಸ್

• ಕೆನೆಕ್ಟೆಟ್ ಆಕ್ಸಸರೀಸ್

ಗೆಜೆಟ್ ಗಳನ್ನೆಲ್ಲ ಕನೆಕ್ಟ್ ಮಾಡುವುದು ಬಹಳ ಮುಖ್ಯ, ಬೇರೆ ಬೇರೆ ಕೋಣೆಗಳಲ್ಲಿರುವ ಹಲವಾರು ಸ್ಪೀಕರ್ ಗಳನ್ನು ಅಥವಾ ನಿಮ್ಮ ದೊಡ್ಡ ಟಿವಿಯ ಸೌಂಡ್ ಬಾರ್ ಅಥವಾ ಇತರೆ ಇಂತಹ ವಸ್ತುಗಳನ್ನು ಇಂಟರ್ ನೆಟ್ ಸಹಾಯದಿಂದ ನಿಯಂತ್ರಿಸಿಕೊಳ್ಳುವುದು. ನಿಮ್ಮ ಮೊಬೈಲ್ ಮುಟ್ಟದೆಯೂ ವಾಯ್ಸ್ ಕಮಾಂಡ್ ಮೂಲಕ ನೀವು ನಿಮ್ಮ ಸ್ಮಾರ್ಟ್ ಸ್ಪೀಕರ್ ಗಳನ್ನು ಬಳಸಬಹುದು. ಯಾವುದೇ ನಿರ್ಧಿಷ್ಟ ಹಾಡು ಅಥವಾ ವೀಡಿಯೋವನ್ನು ಪ್ಲೇ ಮಾಡುವಂತೆ ಮಾಡಬಹುದು. ಲೈಟ್ಸ್ ಗಳನ್ನು ಕೂಡ ಆಡಿಯೋ ಮೂಲಕವೇ ನೀವು ನಿಯಂತ್ರಿಸುವ ಅವಕಾಶಗಳು ಬಂದಿದೆ.

Most Read Articles
Best Mobiles in India

English summary
Get a smart speaker for the main hangout room. And a waterproof portable smart speaker if you have outdoor space. Rig a whole room with smart lights. Or try just one smartbulb where you need it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more