ನಿಮ್ಮ ಸ್ಮಾರ್ಟ್‌ಪೋನ್‌ ವೇಗ ಹೆಚ್ಚಿಸಬೇಕೆ?...ಇಲ್ಲಿವೆ 'ಒಎಸ್' ತಜ್ಞರು ಹೇಳಿದ ತಂತ್ರಗಳು!!

ಹಳೆಯ ಸ್ಮಾರ್ಟ್‌ಪೋನ್‌ಗಳ ವೇಗ ವೃದ್ಧಿಸುವ ಸಲುವಾಗಿ ಆಪರೇಟಿಂಗ್ ಸಿಸ್ಟಂ ತಜ್ಞರು ಹಲವು ಮಾಹಿತಿಗಳನ್ನು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೀಡಿದ್ದಾರೆ.!!

|

ಸ್ಮಾರ್ಟ್‌ಫೋನ್‌ಗಳು ಸ್ಲೋ ಆಗಲು ಹಲವು ಕಾರಣಗಳಿವೆ ಆದರೆ ಮತ್ತೆ ಸ್ಮಾರ್ಟ್‌ಫೋನ್ ವೇಗ ಹೆಚ್ಚಿಸಲು ಮಾತ್ರ ಕೆಲವೇ ಕೆಲವು ದಾರಿಗಳಿವೆ.! ಹೌದು, ಹಳೆಯ ಸಾಧನಗಳ ಕಾರ್ಯಕ್ಷಮತೆ ನಿಧಾನವಾಗುವುದನ್ನು ತಪ್ಪಿಸಲು ಹಲವು ಪರಿಹಾರಗಳಿದ್ದು ಅವುಗಳ ಮೂಲಕ ಗ್ಯಾಜೆಟ್‌ಗಳ ವೇಗ ವೃದ್ಧಿಸಬಹುದು.!!

ಇದಕ್ಕಾಗಿಯೇ, ಹಳೆಯ ಸ್ಮಾರ್ಟ್‌ಪೋನ್‌ಗಳ ವೇಗ ವೃದ್ಧಿಸುವ ಸಲುವಾಗಿ ಆಪರೇಟಿಂಗ್ ಸಿಸ್ಟಂ ತಜ್ಞರು ಹಲವು ಮಾಹಿತಿಗಳನ್ನು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೀಡಿದ್ದಾರೆ.!! ಹಾಗಾದರೆ, ಆಪರೇಟಿಂಗ್ ಸಿಸ್ಟಂ ತಜ್ಞರು ಹೇಳಿದಂತೆ ಹಳೆ ಸ್ಮಾರ್ಟ್‌ಫೋನ್ ವೇಗ ಹೆಚ್ಚಿಸಲು ಏನು ಮಾಡಬೇಕು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಕ್ಲೀನಿಂಗ್ ಅಪ್‌ ಮಾಡಿ!!

ಕ್ಲೀನಿಂಗ್ ಅಪ್‌ ಮಾಡಿ!!

ದೀರ್ಘ ಅವಧಿಯಲ್ಲಿ ಕೆಲವು ಅನವಶ್ಯಕ ಫೈಲ್‌ಗಳು ಫೋನ್‌ ಮೆಮೊರಿಯಲ್ಲಿ ಸಂಗ್ರಹಗೊಂಡು ಮೊಬೈಲ್‌ನ ವೇಗ ಕುಂಠಿತವಾಗುತ್ತದೆ. ಹಾಗಾಗಿ, ಫೋನ್‌ನಲ್ಲಿರುವ ಅನವಶ್ಯಕ ಫೈಲ್‌ಗಳನ್ನು ಡಿಲೀಟ್ ಮಾಡಿ ಫೋನ್ ವೇಗವನ್ನು ಹೆಚ್ಚಿಸಬಹುದು.! ಫೋನ್‌ ಸೆಟ್ಟಿಂಗ್ಸ್ ತೆರೆದು ಫೋನ್ ರಿಸೆಟ್ ಮಾಡಿದರೆ ಅನವಶ್ಯಕ ಫೈಲ್‌ಗಳು ಡಿಲೀಟ್ ಆಗಲಿದೆ.!! ಆದರೆ, ಫೋನ್ ರಿಸೆಟ್ ಮಾಡುವ ಮುನ್ನ ಉಪಯುಕ್ತ ಡೇಟಾವನ್ನು ಸೇವ್ ಮಾಡಿಕೊಳ್ಳಿ.!!

ಕ್ಲೀನ್ ಇನ್‌ಸ್ಟಾಲ್ ಮಾಡಿ!!

ಕ್ಲೀನ್ ಇನ್‌ಸ್ಟಾಲ್ ಮಾಡಿ!!

ಎಲ್ಲಾ ಮೊಬೈಲ್ ಕಂಪೆನಿಗಳು ಒಂದೆ ಕ್ಲಿಕ್‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್‌ಗ್ರೇಡ್ ಮಾಡಲು ಸೂಚಿಸುತ್ತವೆ. ಹಾಗಾಗಿ, ಮೊಬೈಲ್ ಅಪ್‌ಡೇಟ್ ಮಾಡುವ ಮುನ್ನ ನಿಮ್ಮೆಲ್ಲಾ ಮೊಬೈಲ್ ಡೇಟಾ ಖಾಲಿ ಮಾಡಿ ಅಪ್‌ಡೇಟ್ ಮಾಡಿ.! ಮೊಬೈಲ್‌ ಅನ್ನು ಹಾಗೆಯೇ ಅಪ್‌ಡೇಟ್ ಮಾಡಿದರೆ ಒಎಸ್ ಕ್ರಾಶ್ ಆಗುವ ಸಂಭವ ಹೆಚ್ಚಿರುತ್ತದೆ.!!

ಮೆಮೊರಿ ಬಗ್ಗೆ ಗಮನವಿರಲಿ!!

ಮೆಮೊರಿ ಬಗ್ಗೆ ಗಮನವಿರಲಿ!!

16GB, 32GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್‌ನಿಂದಾಗಿ ಸ್ಮಾರ್ಟ್‌ಫೋನ್‌ಗಳು ನಿಧಾನವಾಗುತ್ತವೆ.! ಹಾಗಾಗಿ, ಮೆಮೊರಿ ಇರುವ ಅರ್ಧಕ್ಕಿಂತ ಕಡಿಮೆ ಸ್ಟೋರೇಜ್‌ ಇರಲಿ.!!

ಆನ್‌ಲೈನ್ ಸೇವೆ ಬಳಸಿಕೊಳ್ಳಿ.!!

ಆನ್‌ಲೈನ್ ಸೇವೆ ಬಳಸಿಕೊಳ್ಳಿ.!!

ಯಾವುದೇ ಡಾಕ್ಯುಮೆಂಟ್ ಮತ್ತು ಇನ್ನಿತರ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಂತಹ ಆನ್‌ಲೈನ್ ಸ್ಟೋರೇಜ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು.ಇನ್ನು ಫೋಟೊಗಳು ಹೆಚ್ಚಿದ್ದಷ್ಟು ಫೋನ್ ನಿಧಾನವಾಗುವ ಸಾಧ್ಯತೆ ಇದ್ದು, ಫೋಟೊ ಲೈಬ್ರೆರಿಯನ್ನು ಗೂಗಲ್‌ ಫೋಟೊಸ್‌ನಂಥ ತಾಣಗಳಿಗೆ ಮೂವ್ ಮಾಡುವ ಮೂಲಕ ಮೆಮೊರಿ ಸಾಮರ್ಥ್ಯ ಹೆಚ್ಚಿಸಬಹುದು.!!

ಕಡಿಮೆ ಆಪ್‌ಗಳನ್ನು ಬಳಸಿ.!!

ಕಡಿಮೆ ಆಪ್‌ಗಳನ್ನು ಬಳಸಿ.!!

ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡಬಹುದಾದ ಶಕ್ತಿ ಸ್ಮಾರ್ಟ್‌ಫೋನ್‌ಗಳಿಗಿದ್ದರೂ ಸಹ, ಒಮ್ಮೆಲೆ ಹೆಚ್ಚು ಆಪ್‌ಗಳನ್ನು ಬಳಕೆ ಮಾಡುವುದು ಫೋನ್ ಸ್ಲೋ ಆಗಲು ಕಾರಣವಾಗಿರುತ್ತದೆ. ಹಾಗಾಗಿ, ಒಂದೇ ಸಾರಿ ಹಲವು ಆಪ್‌ಗಳನ್ನು ಬಳಕೆ ಮಾಡದಿರುವುದು ಒಳ್ಳೆಯದು.!!

Best Mobiles in India

English summary
Restart your Smartphone. A quick and simple fix for a slow device is to simply restart it.. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X