Just In
- 8 hrs ago ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- 9 hrs ago Realme: ರಿಯಲ್ಮಿ ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಗಣನೆ! ಅಮೋಲೆಡ್ ಡಿಸ್ಪ್ಲೇ ಆಯ್ಕೆ
- 10 hrs ago ನೀವು ಜಿಯೋ ಗ್ರಾಹಕರೇ?..ಹಾಗಿದ್ರೆ, ಈ ಪ್ಲ್ಯಾನಿಗೆ ಖಂಡಿತಾ ಫಿದಾ ಆಗ್ತೀರಾ!
- 12 hrs ago Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಂಡ್ರಾಯ್ಡ್ ಫೋನಿನಲ್ಲಿ ಮೆಸೇಜ್ಗಳನ್ನು ಹೈಡ್ ಮಾಡುವುದು ಹೇಗೆ?
ಮೆಸೇಜ್ಗಳನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವುದಕ್ಕಾಗಿಯೇ ಇರುವ ಜನಪ್ರಿಯ ಮೆಸೇಜಿಂಗ್ ಆಪ್ಗಳಾಗಿರುವ ವಾಟ್ಸ್ಆಪ್ ಹೈಕ್, ಫೇಸ್ ಬುಕ್ ಮೆಸೇಂಜರ್, ಟೆಲಿಗ್ರಾಂ, ಇತ್ಯಾದಿಗಳನ್ನು ಬಳಸದೇ ಇರುವವರು ಕಡಿಮೆ ಎನ್ನಬಹುದು. ಮುಖಕ್ಕೆ ಮುಖ ಕೊಟ್ಟು ಮಾತನಾಡುವುದಕ್ಕಿಂತ ಮೊಬೈಲ್ ನಲ್ಲಿ ಮೆಸೇಜ್ ಕಳಿಸಿ ಮಾತನಾಡುವುದು ಹೆಚ್ಚಿರುವುದರಿಂದ ಇವುಗಳ ಬಳಕೆ ಕೂಡ ಹೆಚ್ಚಾಗಿದೆ. ಇದರಿಂದ ನಮ್ಮ ಖಾಸಾಗಿತನ ಕೂಡ ನಮ್ಮ ಫೋನಿನಲ್ಲಿ ಭಧ್ರವಾಗದೇ ಇರುವಂತಹ ಪರಿಸ್ಥಿತಿ ಕೂಡ ಎದುರಾಗಿದೆ.
ನಮ್ಮ ಎಸ್ಎಂಎಸ್ ಇನ್ಬಾಕ್ಸ್ ಗಳು ಬಹಳ ಮಹತ್ವಪೂರ್ಣವಾಗಿರುವ ಕೆಲವು ಮಾಹಿತಿಗಳನ್ನು ಒಳಗೊಂಡಿರುತ್ತದೆ. ಹಾಗಾಗಿ, ಎಸ್ಎಂಎಸ್ ಇನ್ ಬಾಕ್ಸ್ ನಲ್ಲಿರುವುದನ್ನು ನಾವು ಯಾರೊಂದಿಗೂ ಕೂಡ ಹಂಚಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಅದೇ ಕಾರಣಕ್ಕಾಗಿ ನಾವು ಆಂಡ್ರಾಯ್ಡ್ ಫೋನಿನಲ್ಲಿ ಮೆಸೇಜ್ ಗಳನ್ನು ಹೈಡ್ ಮಾಡಲು ಸಾಧ್ಯವಾಗುವಂತಹ ಕೆಲವು ಆಪ್ ಗಳು ಅಭಿವೃಧ್ಧಿಗೊಂದಿವೆ. ಒಂದು ವೇಳೆ ನಾವು ಎಸ್ಎಂಎಸ್ ಬಗ್ಗೆ ಅಷ್ಟೇನು ಕೇರ್ ತೆಗೆದುಕೊಳ್ಳುವುದಿಲ್ಲ ಎಂದರೆ ನಿಮಗೆ ಇವುಗಳ ಅವಶ್ಯಕತೆಯಿಲ್ಲ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕೆಲವು ಅತ್ಯದ್ಭುತವಾಗಿರುವ ಆಪ್ ಲಾಕರ್ ಗಳು ಅಥವಾ ಟೆಕ್ಸ್ ಮೆಸೇಜ್ ಹೈಡರ್ ಗಳು ಲಭ್ಯವಿದೆ. ಅವುಗಳಲ್ಲಿ ಟೆಕ್ಸ್ಟ್ ಮೆಸೇಜ್ ಮತ್ತು ಎಸ್ಎಂಎಸ್ ಗಳನ್ನು ಆಂಡ್ರಾಯ್ಡ್ ನಲ್ಲಿ ಹೈಡ್ ಮಾಡುವುದಕ್ಕೆ ಇರುವ ಕೆಲವು ಬೆಸ್ಟ್ ಆಪ್ ಗಳ ಬಗ್ಗೆ ಹೇಳುತ್ತಿದ್ದೇವೆ ಮತ್ತು ಅಂತಹ ಐದು ಆಪ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಹಾಗಾದರೆ, 2019ರ ಅತ್ಯುತ್ತಮ ಆಂಡ್ರಾಯ್ಡ್ ಎಸ್ಎಂಎಸ್ ಲಾಕರ್ ಗಳು ಯಾವುವು ಎಂಬುವನ್ನು ಮುಂದಿನ ಸ್ಲೈಡರ್ಗಳಲ್ಲಿ ಓದಿ ತಿಳಿಯಿರಿ.
ಗೋ ಎಸ್ಎಂಎಸ್ ಪ್ರೋ( GO SMS Pro)
ಗೂಗಲ್ ಪ್ಲೇ ಸ್ಟೋರ್ ನಲ್ಲ ಲಭ್ಯವಿರುವ ಅತೀ ಹೆಚ್ಚು ರೇಟಿಂಗ್ ಪಡೆದಿರುವ ಆಂಡ್ರಾಯ್ಡ್ ಮೆಸೇಜಿಂಗ್ ಆಪ್ ಗೋ ಎಸ್ಎಂಎಸ್ ಪ್ರೋ. ಇದು ಸುಮಾರು 100 ಮಿಲಿಯನ್ ಡೌನ್ ಲೋಡ್ ಗಳನ್ನು ಕಂಡಿದೆ ಮತ್ತು ಇದು ಹಲವಾರು ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತದೆ. ಇದು ನಿಮಗೆ ಪ್ರೈವೇಟ್ ಮೆಸೇಜಿಂಗ್ ವಾಲ್ಟ್ ನ್ನು ನೀಡುತ್ತದೆ ಅಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್ ಗಳನ್ನು ಸೇರಿಸಿಕೊಳ್ಳಬಹುದು. ನಂತರ ನೀವು ಅದಕ್ಕೆ ಪಾಸ್ ವರ್ಡ್ ಪ್ರೊಟೆಕ್ಷನ್ ಕೂಡ ನೀಡಬಹುದು. ಹಾಗಾಗಿ ಇದು ಅತ್ಯುತ್ತಮವಾಗಿರುವ ಮೆಸೇಜ್ ಗಳನ್ನು ಹೈಡ್ ಮಾಡುವುದಕ್ಕೆ ಇರುವ ಆಪ್ ಆಗಿದೆ.
ವಾಲ್ಟ್(Vault)
ವಾಲ್ಟ್ ಹಲವು ಕಾರಣಗಳಿಗೆ ಉಪಯೋಗವಾಗುವ ಆಂಡ್ರಾಯ್ಡ್ ಆಪ್ ಆಗಿದ್ದು ಇದರಲ್ಲಿ ಫೋಟೋಗಳು, ವೀಡಿಯೋಗಳು, ಕಾಲ್ ಲಾಗ್ ಗಳು ಮತ್ತು ಎಸ್ಎಂಎಸ್ ಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಹೈಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ ಕಾಲ್ ಮತ್ತು ಎಸ್ಎಂಎಸ್ ಗಳನ್ನು ಸಪರೇಟ್ ಪೆನಲ್ ನಲ್ಲಿ ಹೈಡ್ ಮಾಡುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ. ಯಾರ ಎಸ್ಎಂಎಸ್ ಹೈಡ್ ಮಾಡಬೇಕು ಎಂಬ ಬಗ್ಗೆ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ನ್ನು ಇಂಪೋರ್ಟ್ ಮಾಡಿದರೆ ಸಾಕು.ಪ್ರೈವೇಟ್ ಕಾಂಟ್ಯಾಕ್ಟ್ ಗಳ ನೋಟಿಫಿಕೇಷನ್ ನ್ನು ಕೂಡ ಇದು ಹೈಡ್ ಮಾಡುತ್ತದೆ. ಹಾಗಾಗಿ ಇದು ಮತ್ತೊಂದು ಬೆಸ್ಟ್ ಆಪ್ ಅನ್ನಿಸಿಕೊಂಡಿದೆ.
ಮೆಸೇಜ್ ಲಾಕರ್
ಹೆಸರೇ ಸೂಚಿಸುವಂತೆ, ಮೆಸೇಜ್ ಲಾಕರ್ ಮತ್ತೊಂದು ಆಂಡ್ರಾಯ್ಡ್ ಆಪ್ ಆಗಿದ್ದು ಮೆಸೇಜ್ ಗಳನ್ನು ಮತ್ತೊಬ್ಬರ ಕಣ್ಣಿನಿಂದ ತಪ್ಪಿಸಿ ನಿಮ್ಮಲ್ಲೇ ಭದ್ರವಾಗಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ. ಕೇವಲ ಎಸ್ಎಂಎಸ್ ಗಳನ್ನು ಪಾತ್ರವೇ ಅಲ್ಲ ಬದಲಾಗಿ ಪಾಸ್ ವರ್ಡ್ ಗಳನ್ನು ಕೂಡ ಇವು ಪ್ರೊಟೆಕ್ಟ್ ಮಾಡುತ್ತವೆ. ವಾಟ್ಸ್ ಆಪ್, ಜಿಮೇಲ್, ಟೆಲಿಗ್ರಾಂ, ಫೇಸ್ ಬುಕ್ ಮೆಸೇಂಜರ್, ಸ್ಕೈಪ್ ಇತ್ಯಾದಿಗಳ ಮೆಸೇಜ್ ಗಳನ್ನು ನೀವಿಲ್ಲಿ ಸೇವ್ ಮಾಡಿ ಇಡಬಹುದು.ಇದಿಷ್ಟೇ ಅಲ್ಲದೆ ಇದೊಂದು ಸಿಂಪಲ್ ಇಂಟರ್ ಫೇಸ್ ಆಗಿದೆ. ಅದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಮೆಸೇಜ್ ಲಾಕರ್ ಹೆಚ್ಚು ಪ್ರಸಿದ್ಧಿಯಾಗುತ್ತಿದೆ.
ಎಸ್ಎಂಎಸ್ ಲಾಕ್
ಆಂಡ್ರಾಯ್ ಸ್ಮಾರ್ಟ್ ಫೋನ್ ಗಳಲ್ಲಿ ಎಸ್ಎಂಎಸ್ ಗಳನ್ನು ಸಿಂಪಲ್ ಆಗಿ ಲಾಕ್ ಮಾಡಿ ಇಟ್ಟುಕೊಳ್ಳುವುದಕ್ಕಾಗಿ ಆಂಡ್ರಾಯ್ಡ್ ಆಪ್ ನ್ನು ಹುಡುಕಾಡುತ್ತಿದ್ದರೆ ಎಸ್ಎಂಎಸ್ ಲಾಕ್ ಬೆಸ್ಟ್ ಆಪ್ ಆಗಿದೆ. ಎಸ್ಎಂಎಸ್ ಲಾಕ್ ಹೆಚ್ಚಿನ ಎಲ್ಲಾ ಮೆಸೇಜಿಂಗ್ ಆಪ್ ಗಳಾಗಿರುವ ಮೆಸೆಂಜರ್, ಹ್ಯಾಂಗ್ಸ್ ಔಟ್, ವಿಚಾಟ್ , ಟೆಲಿಗ್ರಾಂ ಇತ್ಯಾದಿಗಳ ಪಾಸ್ ವರ್ಡ್ ಗಳನ್ನು ಸೇವ್ ಮಾಡುತ್ತದೆ. ಮತ್ತು ಸುಲಭದಲ್ಲಿ ಬಳಕೆ ಮಾಡಬಹುದಾದ ಇಂಟರ್ಫೇಸ್ ಇದಾಗಿದೆ.
ಪ್ರೈವೇಟ್ ಮೆಸೇಜ್ ಬಾಕ್ಸ್
ಪ್ರೈವೇಟ್ ಮೆಸೇಜ್ ಆಪ್ ಮತ್ತೊಂದು ಆಂಡ್ರಾಯ್ಡ್ ಟೆಕ್ಸ್ಟ್ ಮೆಸೇಜ್ ಲಾಕರ್ ಆಗಿದ್ದು ಎಸ್ಎಂಎಸ್ ಇನ್ ಬಾಕ್ಸ್ ಜೊತೆಗೆ ಪಿನ್ ಅಥವಾ ಪಾಸ್ ವರ್ಡ್ ಗಳನ್ನು ಕೂಡ ಇದು ಹೈಡ್ ಮಾಡಿ ಇಡುತ್ತದೆ. ಇದರಲ್ಲಿ ಬಳಕೆದಾರರು ಕಾಂಟ್ಯಾಕ್ಟ್ ಆಡ್ ಮಾಡಿದ ಕೂಡಲೇ ಆ ಕಾಂಟ್ಯಾಕ್ಟ್ ನ ಎಲ್ಲಾ ಮೆಸೇಜ್ ಗಳು ಅಂದರೆ ಇನ್ ಕಮ್ಮಿಂಗ್, ಔಟ್ ಗೋಯಿಂಗ್ ಮೆಸೇಜ್ ಗಳು ಹೈ ಸ್ವಯಂಚಾಲಿತವಾಗಿ ಹೈಡ್ ಆಗುತ್ತದೆ. ಹಿಡನ್ ಎಸ್ಎಂಎಸ್ ಗಳನ್ನು ಆಕ್ಸಿಸ್ ಮಾಡುವುದಕ್ಕಾಗಿ ನೀವು ಪಿನ್ ಅಥವಾ ಪಾಸ್ ವರ್ಡ್ ನ್ನು ಬಳಕೆ ಮಾಡಬೇಕಾಗುತ್ತದೆ. ಅದೇ ಕಾರಣಕ್ಕೆ ಪ್ರೈವೇಟ್ ಮೆಸೇಜ್ ಬಾಕ್ಸ್ ಬೆಸ್ಟ್ ಆಪ್ ಎನಿಸಿಕೊಂಡಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999