Just In
Don't Miss
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಿಂಡೋಸ್ 10' ಬಳಕೆದಾರರು ಇದನ್ನೊಮ್ಮೆ ಟ್ರೈ ಮಾಡಿ ನೋಡಿ!
ಯಾವುದೇ ಗ್ಯಾಜೆಟ್ ಆದರೂ ಸ್ವಲ್ಪ ದಿನ ಬಳಕೆ ಮಾಡಿದ ನಂತರ ಅದರ ವೇಗ ಕುಸಿಯುತ್ತಲೇ ಸಾಗುತ್ತದೆ. ನಿಮಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಈ ಡಿವೈಸ್ ಗಳ ಹಣೆಬರಹವೇ ಇಷ್ಟು ಎಂದು ಹೇಳುವವರು ಹಲವರಿದ್ದಾರೆ. ಅವರು ಹೇಳುವುದು ನಿಜ ಕೂಡ. ಆದರೆ, ನಿಮಗೆ ಗೊತ್ತಾ?, ಈ ಮಾತು ಸಂಪೂರ್ಣವಾಗಿ ನಿಜವೂ ಅಲ್ಲ.! ಗ್ಯಾಜೆಟ್‌ಗಳು ಯಾವಾಗಲೂ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಕೆಲಸ ಮಾಡಲು ಅದೆಷ್ಟು ಕಿರಿಕಿರಿ ಕೊಡುತ್ತವೆ. ಆದರೆ, ಅವುಗಳ ಸರಿಯಾದ ನಿರ್ವಹಣೆ ಅವುಗಳ ಕೆಲಸವನ್ನು ಸುಸ್ಥಿರವಾಗಿಡುವಂತೆ ಮಾಡುತ್ತದೆ.

ಯಾವಾಗಲೂ ಕೇವಲ ಹಾರ್ಡ್ ವೇರ್ ಗಳ ಸಮಸ್ಯೆಯಿಂದ ಮಾತ್ರ ಗ್ಯಾಜೆಟ್ ಸ್ಲೋ ಸಮಸ್ಯೆ ಉಂಟಾಗುವ ಎಂದು ಭಾವಿಸಬೇಡಿ. ಬದಲಾಗಿ ಕೆಲವೊಮ್ಮೆ, ಕೆಲವೊಮ್ಮೆ, ಯಾಕೆ ಹೆಚ್ಚಿನ ಸಂದರ್ಭದಲ್ಲಿ ನಿಮ್ಮ ಸಾಫ್ಟ್ ವೇರ್ ಗಳ ಕಾರಣದಿಂದಾಗಿ ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಯ ವೇಗ ಕಡಿಮೆಯಾಗುತ್ತದೆ.ಒಂದು ವೇಳೆ ನೀವು ಇದೇ ಸಮಸ್ಯೆಯನ್ನು ವಿಂಡೋಸ್ 10 ನಲ್ಲಿ ಎದುರಿಸುತ್ತಿದ್ದರೆ, ನಾವಿಲ್ಲಿ ಕೆಲವು ಸಲಹೆ ಗಳನ್ನು ಹೇಳುತ್ತಿದ್ದೆವೆ ಮತ್ತು ಆ ಮೂಲಕ ನೀವು ನಿಮ್ಮ ವಿಂಡೋಸ್ 10 ಪಿಸಿಯ ವೇಗವನ್ನು ಹೆಚ್ಚಿಸಿಕೊಳ್ಳಲು ನೆರವು ಸಿಗಲಿದೆ. ಟ್ರೈ ಮಾಡಿ ನೋಡಿ.

1. ''ಆಟೋ ಲೋಡರ್ '' ರಿಮೂವ್ ಮಾಡಿ
ನೀವು ನಿಮ್ಮ ಲ್ಯಾಪ್ ಟಾಪ್ ನ್ನು ಆನ್ ಮಾಡುತ್ತಿದ್ದಂತೆ ಕೆಲವು ಪ್ರೊಗ್ರಾಮ್ಸ್ ಗಳು ಆಟೋಮ್ಯಾಟಿಕಲಿ ಲೋಡ್ ಆಗುತ್ತದೆ. ಯಾವೆಲ್ಲ ಪ್ರೊಗ್ರಾಮ್ ಗಳು ಹೀಗೆ ಲೋಡ್ ಆಗುತ್ತವೆ ಎಂದು ತಿಳಿಯಬೇಕಿದ್ದರೆ, ಕೆಲವು ಸರಳ ಸಲಹೆಗಳನ್ನು ಪಾಲಿಸಿ. ಟಾಸ್ಕ್ ಬಾರ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು ಟಾಸ್ಕ್ ಮ್ಯಾನೇಜರ್ ನ್ನು ಆಯ್ಕೆ ಮಾಡಿ. ಇಲ್ಲಿ ನೀವು ಸ್ಟಾರ್ಟ್ ಅಪ್ ಟ್ಯಾಬ್ ನ್ನು ಗಮನಿಸುತ್ತೀರಿ. ಅದನ್ನು ಕ್ಲಿಕ್ಕಿಸಿ..ಈಗ ನೀವು ಯಾವೆಲ್ಲ ಪ್ರೊಗ್ರಾಮ್ ಗಳು ಅಟೋಮ್ಯಾಟಿಕಲಿ ಲೋಡ್ ಆಗುತ್ತದೆ ಎಂಬ ಮಾಹಿತಿಯ ಪಟ್ಟಿಯನ್ನು ಪಡೆಯಲಿದ್ದೀರಿ. ನೀವು ಇದನ್ನು ನಿಲ್ಲಿಸಲು, ಅದರ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಡಿಸೇಬಲ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

2. ವಿಂಡೋಸ್ ಟಿಪ್ಸ್ ಅನ್ನು ಸ್ಟಾಪ್ ಮಾಡಿ
ಮೈಕ್ರೋಸಾಫ್ಟ್ ನಿಮಗೆ ಲೇಟೆಸ್ಟ್ ಸಲಹೆಗಳು, ಟ್ರಿಕ್ಸ್ ಗಳನ್ನು ನೀಡುತ್ತದೆ. ಇದು ನಿಜಕ್ಕೂ ನಿಮ್ಮ ಸಿಸ್ಟಮ್ ನ್ನು ನಿಧಾನಗೊಳಿಸುತ್ತದೆ.. ಈ ಟಿಪ್ಸ್ ಮತ್ತು ಟ್ರಿಕ್ಸ್ ನ್ನು ಡಿಸೇಬಲ್ ಮಾಡಲು, ಈ ಕೆಳಗೆ ತಿಳಿಸುವ ಮಾರ್ಗವನ್ನು ಅನುಸರಿಸಿ. ಸ್ಟಾರ್ಟ್ ಅನ್ನು ಕ್ಲಿಕ್ಕಿಸಿ ಮತ್ತು ಸೆಟ್ಟಿಂಗ್ಸ್ ಗೆ ತೆರಳಿ. ಮತ್ತು ಇಲ್ಲಿ ಸಿಸ್ಟಮ್ ಟ್ಯಾಬನ್ನು ಕ್ಲಿಕ್ಕಿಸಿ ಮತ್ತು ನೀವು ನೋಟಿಫಿಕೇಷನ್ ಮತ್ತು ಆಕ್ಷನ್ ಆಯ್ಕೆಯನ್ನು ಎಡಭಾಗದಲ್ಲಿ ಗಮನಿಸುತ್ತೀರಿ. ಅಲ್ಲಿ ಟರ್ನಿಂಗ್ ಆಫ್ " ಗೆಟ್ ಟಿಪ್ಸ್, ಟ್ರಿಕ್ಸ್ ಎಂಡ್ ಸಜೆಷನ್" ಅನ್ನುವ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ಕಿಸಿ ಮತ್ತು ನೀವು ಮತ್ತೆ ಅದನ್ನು ಗಮನಿಸುವುದಿಲ್ಲ.

3. ಡಿಸ್ಕ್ ಕ್ಲೀನ್ ಅಪ್
ಈ ಸಲಹೆಯು ಬಹುಶ್ಯಃ ವಿಂಡೋಸ್ ಹುಟ್ಟಿದಾಗಿನಿಂದ ಇರುವುದೇ ಆಗಿದೆ. ಅದರೂ ಇನ್ನೂ ಇದನ್ನು ಬಳಕೆ ಮಾಡುತ್ತಾ ಇರುವುದಕ್ಕೆ ಕಾರಣವಿದೆ. ಯಾಕೆಂದರೆ ಅದು ಅಷ್ಟು ಪರಿಣಾಮಕಾರಿಯಾಗಿರುವ ವಿಧಾನವಾಗಿದೆ. ಸರ್ಚ್ ಅಥವಾ Cortana ಫೀಲ್ಡ್ ನಲ್ಲಿ , ಜಸ್ಟ್ Disk Cleanup ಎಂದು ಟೈಪ್ ಮಾಡಿ,. ಇಲ್ಲಿ ನೀವು ಕೆಲವು ಫೈಲ್ ಮತ್ತು ಡಾಟಾಗಳನ್ನು ಗಮನಿಸುತ್ತೀರಿ. ಡಿಸ್ಕ್ ಕ್ಲೀನ್ ಅಪ್ ಅಗತ್ಯವಿಲ್ಲದ ಫೈಲ್ ಗಳನ್ನು ಜಾಗೃತಿ ಮಾಡುತ್ತೆ. ಇದು ನಿಮಗೆ ಬಹಳಷ್ಟು ಜಾಗವನ್ನು ಉಳಿಸುತ್ತದೆ ಮತ್ತು ಮೆಷಿನ್ ನ ಕೆಲಸದ ವೇಗವನ್ನೂ ಹೆಚ್ಚಿಸುತ್ತದೆ.

4. ರಿಮೂವ್ ಬ್ಲೋಟ್ ವೇರ್
ಹಲವಾರು ಬ್ರ್ಯಾಂಡ್ ಗಳು ಇತ್ತೀಚಿನ ದಿನಗಳಲ್ಲಿ ಲ್ಯಾಪ್ ಟಾಪ್ ನಲ್ಲಿ ಅಗತ್ಯವಿಲ್ಲದೆ ತುಂಬಿಕೊಳ್ಳುತ್ತವೆ. ಅವುಗಳು ನಿಮ್ಮ ಸಿಸ್ಟಮ್ ನ ಫರ್ಫಾಮೆನ್ಸ್ ಮೇಲೆ ವ್ಯತಿರಿಕ್ತ ಪರಿಣಾಮ ಮಾಡುತ್ತವೆ. ಆದರೆ, ನೀವು ಈ ಪ್ರೀ-ಇನ್ಸಾಲ್ಡ್ ಆಪ್ ಗಳನ್ನು ತೆಗೆಯಬಹುದು.ಸ್ಟಾರ್ಟ್ ಮೆನು ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಕಂಟ್ರೋಲ್ ಪೆನಲ್ ಗೆ ತೆರಳಿ. ಪ್ರೊಗ್ರಾಮ್ ಟ್ಯಾಬ್ ನಲ್ಲಿ ಅನ್ ಇನ್ಸ್ಟಾಲ್ ಪ್ರೊಗ್ರಾಮ್ ನ್ನು ಕ್ಲಿಕ್ಕಿಸಿ. ಯಾವುದೇ ಆಪ್ ಅಥವಾ ಪ್ರೋಗ್ರಾಮ್ ಅನ್ನು ಆಯ್ಕೆ ಮಾಡಿ, ಅದು ನಿಮಗೆ ಬೇಡವಾಗಿದ್ದು, ನಿಮ್ಮನ್ನ ಸುಮ್ಮನೆ ಬಲವಂತವಾಗಿ ಅದನ್ನು ಇರಿಸಿಕೊಳ್ಳುವಂತೆ ಮಾಡಿದ್ದರೆ, ಅವುಗಳನ್ನು ಜಸ್ಟ್ ರಿಮೂವ್ ಮಾಡಿಬಿಡಿ.

5. ನೋಟವನ್ನು ಬದಲಾಯಿಸಿ
ನೀವು ನಿಮ್ಮ ವಿಂಡೋಸ್ 10 ಕಾಣುವ ಬಗೆಯನ್ನು ಬದಲಿಸಬಹುದು, ಆ ಮೂಲಕ ನಿಮ್ಮ ಸಿಸ್ಟಮ್ ನ ವೇಗ ಹೆಚ್ಚುತ್ತದೆ. ಈ ಕ್ರಮಗಳನ್ನು ಅನುಸರಿಸಿ. ಸ್ಟಾರ್ಟ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಸಿಸ್ಟಮ್ ಅನ್ನು ಆಯ್ಕೆ ಮಾಡಿ.ಇಲ್ಲಿ ಎಡಭಾಗದಲ್ಲಿ, ಅಡ್ವ್ನಾಸ್ಡ್ ಸಿಸ್ಟಮ್ ಸೆಟ್ಟಿಂಗ್ಸ್ ಟ್ಯಾಬ್ ಅನ್ನು ಅಯ್ಕೆ ಮಾಡಿ. ಇಲ್ಲಿಗೆ ತಲುಪಿದಾಗ ನಿಮಗೆ ಸಿಸ್ಟಮ್ ಪ್ರಾಪರ್ಟಿಯ ಡೈಲಾಗ್ ಬಾಕ್ಸ್ ಗಳು ಕಾಣಿಸುತ್ತವೆ. ಅಲ್ಲಿ ಸೆಟ್ಟಿಂಗ್ಸ್ ಬಟನ್ ಅನ್ನು ಕ್ಲಿಕ್ ಮಾಡಿ. ನೀವಿಲ್ಲಿ ಕೆಲವು ಆಯ್ಕೆಗಳನ್ನು ಅನ್ ಚೆಕ್ ಮಾಡಬಹುದಾಗಿರುತ್ತದೆ,ಉತ್ತಮ ಫರ್ಫಾಮೆನ್ಸ್ ಗಾಗಿ ಕೆಲವು ಆಯ್ಕೆಗಳನ್ನು ಹಾಗೆ ಮಾಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470