Home
ಟೆಕ್ ನೌಕರಿ

ಗೂಗಲ್ ನಿಮ್ಮನ್ನು ಟ್ರ್ಯಾಕ್ ಮಾಡದಂತೆ ಸೇಫ್ ಆಗಿರುವುದು ಹೇಗೆ?!

ಆಂಡ್ರಾಯ್ಡ್ ಬಳಕೆದಾರರ ಖಾಸಗಿ ಮಾಹಿತಿ ಹಾಗೂ ಅವರು ಬಳಸುವ ಸೇವೆಗಳ ಮಾಹಿತಿಯನ್ನು ಗೂಗಲ್‌ ಸಂಗ್ರಹಿಸುತ್ತದೆ ಎಂಬ ವಿಷಯ ಈಗ ಬಹುತೇಕರಿಗೆ ತಿಳಿದಿದೆ. ಆದರೆ, ಹೀಗೆ ಗೂಗಲ್‌ ಮಾಹಿತಿ ಸಂಗ್ರಹಿಸುವುದನ್ನು ಬಳಕೆದಾರರು ನಿಯಂತ್ರಿಸಲು ಅವಕಾಶವಿದೆ. ಬಳಕೆದಾರರು ತಮ್ಮ ಖಾಸಗಿ ಮಾಹಿತಿಯನ್ನು ಸಹ ಗೂಗಲ್‌ಗೆ ಸಿಗದಂತೆ ನಿಯಂತ್ರಿಸಲೂಬಹುದು.

ಉದಾಹರಣೆಗೆ, ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಗೂಗಲ್‌ ಸೇರಿದಂತೆ ಹಲವು ತಂತ್ರಜ್ಞಾನ ಕಂಪೆನಿಗಳು ಬಳಕೆದಾರರ ಮಾಹಿತಿ ಸಂಗ್ರಹದ ಬಗ್ಗೆ ಖಾಸಗಿತನದ ನೀತಿಯಲ್ಲಿ (privacy policy) ತಿಳಿಸಿರುತ್ತವೆ. ಹಾಗಾಗಿ, ಬಳಕೆದಾರರು ತಮ್ಮ ಸ್ಥಳದ ಮಾಹಿತಿಹಾಗೂ ಸ್ಥಳದ ಮಾಹಿತಿಯ ಇತಿಹಾಸವನ್ನು (location history) ಗೂಗಲ್‌ಗೆ ಸಿಗದಂತೆ ಮಾಡಬಹುದು.

ಗೂಗಲ್ ನಿಮ್ಮನ್ನು ಟ್ರ್ಯಾಕ್ ಮಾಡದಂತೆ ಸೇಫ್ ಆಗಿರುವುದು ಹೇಗೆ?!

ಇನ್ನು ಎಲ್ಲಾ ಸಂದರ್ಭದಲ್ಲಿ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸಿದರೆ ಕೆಲವು ಸೇವೆಗಳನ್ನು ಪಡೆಯಲುತೊಡಕೂ ಸಹ ಆಗಬಹುದು.ಇದಕ್ಕಾಗಿ ಬಳಕೆದಾರರು ತಮ್ಮ ಮಾಹಿತಿಯನ್ನು ಸೇಹಂಚಿಕೊಳ್ಳಬಹುದು ಅಥವಾ ಹಂಚಿಕೊಳ್ಳದೆಯೂ ಇರಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸುವ ಆಯ್ಕೆ ಬಗ್ಗೆ ನಾವು ಪೂರ್ಣವಾಗಿ ತಿಳಿಯೋಣ.

ಮಾಹಿತಿ ಸಂಗ್ರಹಿಸುವುದು ಏಕೆ?

ಮಾಹಿತಿ ಸಂಗ್ರಹಿಸುವುದು ಏಕೆ?

ಗೂಗಲ್ ಸೇರಿದಂತೆ ಬಹುತೇಕ ಮೊಬೈಲ್‌ ತಯಾರಿಕಾ ಕಂಪೆನಿಗಳು ಹಾಗೂ ಆಪ್‌ ಅಭಿವೃದ್ಧಿಪಡಿಸುವ ಕಂಪೆನಿಗಳು ತಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಬಳಕೆದಾರರ ಮಾಹಿತಿ ಸಂಗ್ರಹಿಸುತ್ತವೆ. ಇದು ಒಳ್ಳೆಯ ಉದ್ದೇಶಕ್ಕೆ ಆದರೂ, ಅವುಗಳು ಕಲೆಹಾಕುವ ಈ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಯನ್ನೂ ನಾವು ಅಲ್ಲಗಳೆಯುವಂತಿಲ್ಲ.

ಮಾಹಿತಿ ಸಂಗ್ರಹಿಸುವುದನ್ನು ತಪ್ಪಿಸಬೇಕೆ?

ಮಾಹಿತಿ ಸಂಗ್ರಹಿಸುವುದನ್ನು ತಪ್ಪಿಸಬೇಕೆ?

ಎಲ್ಲಾ ಸಂದರ್ಭದಲ್ಲಿ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸಿದರೆ ಕೆಲವು ಸೇವೆಗಳನ್ನು ಪಡೆಯಲುತೊಡಕೂ ಸಹ ಆಗಬಹುದು. ಆದರೆ, ಜಾಹೀರಾತು ನಿಯಂತ್ರಣಕ್ಕೆ, ಥರ್ಡ್‌ ಪಾರ್ಟಿ ಆಪ್‌ಗಳಿಂದ ಆತಂಕ ನಿವಾರಿಸಿಕೊಳ್ಳಲು ಹಾಗೂ ನಿಮ್ಮ ಅಂತರ್ಜಾಲ ಚಟುವಟಿಕೆಗಳು ಇತರರಿಗೆ ತಿಳಿಯದಂತೆ ಮಾಡಲು ಕೆಲವೊಮ್ಮೆ ನಿಮ್ಮ ಮಾಹಿತಿಯನ್ನು ನಿಯಂತ್ರಿಸಬೇಕು.

ನಿಯಂತ್ರಣಕ್ಕೆ

ನಿಯಂತ್ರಣಕ್ಕೆ

ಪ್ರತಿಯೊಂದೂ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌,ವಿಶಿಷ್ಟವಾದ ಜಾಹೀರಾತು ಸಂಖ್ಯೆಯನ್ನು (Advertising ID) ಹೊಂದಿರುತ್ತದೆ ಎಂಬುದನ್ನು ನೆನಪಿಡಿ. ಬಳಕೆದಾರರು ಜಾಹೀರಾತು ನಿಯಂತ್ರಿಸಲು ಡಿವೈಸ್‌ನ Settingsಗೆ ಹೋಗಿ Google ಮೇಲೆ ಕ್ಲಿಕ್ ಮಾಡಿ. ಬಳಿಕ Ads ಮೇಲೆ ಕ್ಲಿಕ್ಕಿಸಿ. ಇಲ್ಲಿ ನೀವು ಜಾಹೀರಾತು ನಿಯಂತ್ರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಥರ್ಡ್‌ ಪಾರ್ಟಿ ಆಪ್‌ ಭಯ!

ಥರ್ಡ್‌ ಪಾರ್ಟಿ ಆಪ್‌ ಭಯ!

ಬಹುತೇಕ ಬಳಕೆದಾರರು ಮತ್ತೆ ಮತ್ತೆ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಟೈಪ್‌ ಮಾಡುವುದು ತಪ್ಪುತ್ತದೆ ಎನ್ನುವ ಕಾರಣಕ್ಕಾಗಿ ಥರ್ಡ್‌ ಪಾರ್ಟಿ ಆಪ್‌ಗಳಿಂದ ಲಾಗ್‌ಇನ್‌ ಆಗುವ ಆಯ್ಕೆಯನ್ನು ಗೂಗಲ್‌ ಒದಗಿಸಿದೆ. ಖಾಸಗಿ ಮಾಹಿತಿಯ ಬಗ್ಗೆ ಆತಂಕ ಹುಟ್ಟಿಸುವ ಇವನ್ನು ಬಳಕೆದಾರರು ಗೂಗಲ್‌ ಪ್ಲಸ್‌ಗೆ ಹೋಗಿ ಈ ಥರ್ಡ್‌ ಪಾರ್ಟಿ ಆಪ್‌ಗಳನ್ನು ಡಿಲಿಂಕ್ ಮಾಡಬಹುದು.

ನಿಮ್ಮ ಅಂತರ್ಜಾಲ ಹೆಜ್ಜೆಗಳು!

ನಿಮ್ಮ ಅಂತರ್ಜಾಲ ಹೆಜ್ಜೆಗಳು!

ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಅಳಿಸುವ ಮೂಲಕವೂ ನಿಮ್ಮ ಅಂತರ್ಜಾಲ ಚಟುವಟಿಕೆಗಳ ಮಾಹಿತಿಯನ್ನು ಅಳಿಸಬಹುದು. ಇದಕ್ಕಾಗಿ ನಿಮ್ಮ ಬ್ರೌಸರ್ ಆಯ್ಕೆಗಳಿಗೆ ಹೋಗಿ Clear Browsing history ಒತ್ತಿ. ಇನ್ನು .My Activity ಕ್ಲಿಕ್ ಮಾಡಿ Activity Controls ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನಿಮ್ಮ ಅಂತರ್ಜಾಲ ಚಟುವಟಿಕೆಗಳನ್ನು ನಿಯಂತ್ರಿಸಬಹುದು.

ಸ್ಥಳದ ಮಾಹಿತಿ ಹಂಚಿಕೊಳ್ಳದಿರಲು

ಸ್ಥಳದ ಮಾಹಿತಿ ಹಂಚಿಕೊಳ್ಳದಿರಲು

ಗೂಗಲ್‌ ಅಸಿಸ್ಟನ್ಸ್, ಗೂಗಲ್‌ ನಕ್ಷೆ ಮುಂತಾದ ಸೇವೆಗಳಿಗಾಗಿ ಗೂಗಲ್‌ ಸ್ಥಳದ ಮಾಹಿತಿಯನ್ನು ಸಂಗ್ರಹಿಸುತ್ತದೆ. ಸ್ಥಳದ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸಲು, ಡಿವೈಸ್‌ Settingsಗೆ ಹೋಗಿ ಅಲ್ಲಿ ಕಾಣುವ Google ಮೇಲೆ ಕ್ಲಿಕ್ ಮಾಡಿ. ಬಳಿಕ Location ಮೇಲೆ ಕ್ಲಿಕ್ ಮಾಡಿ. ಇಲ್ಲಿ Location ಅನ್ನು Off ಮತ್ತು On ಮಾಡುವ ಆಯ್ಕೆಗಳಿರುತ್ತವೆ. ಇಲ್ಲಿ Off ಆಯ್ಕೆ ಮಾಡಿ.

Best Mobiles in India

English summary
Within the Settings menu choose Accounts & privacy, then Google Account History. Within Account History select the first option - Web & App Activity..to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+