ಒಮ್ಮೆಲೆ ಸಾವಿರಾರು ಇಮೇಲ್ ಮೆಸೇಜ್‌ಗಳನ್ನು ಡಿಲೀಟ್ ಮಾಡುವುದು ಹೇಗೆ?
ಪ್ರತಿಯೋರ್ವ ಇಂಟರ್‌ನೆಟ್ ಬಳಕೆದಾರನೂ ಕೂಡ ಇಮೇಲ್ ಅಕೌಂಟ್ ಹೊಂದಿರುರುತ್ತಾರೆ. ಆದರೆ, ಇಮೇಲ್ ಅಕೌಂಟ್ ಹೊಂದಿರುವ ಶೇ.90 ರಷ್ಟು ಮಂದಿ ಮಾತ್ರ ಇಮೇಲ್ ತೆರೆದು ಮೆಸೇಜ್‌ಗಳನ್ನು ನೋಡಿ ಬೇಕಿಲ್ಲದ ಮೆಸೇಜ್‌ಗಳನ್ನು ಡಿಲೀಟ್ ಮಾಡುವುದಿಲ್ಲ. ಹಾಗಾಗಿ, ಅವರ ಇನ್‌ಬಾಕ್ಸ್‌ನಲ್ಲಿ ಸಾವಿರಾರು ಅನ್‌ರೀಡ್ ಮೆಸೇಜ್‌ಗಳು ತುಂಬಿಕೊಂಡಿರುತ್ತವೆ.
ಇಮೇಲ್ ಅಕೌಂಟ್ ಅನ್ನು ಯಾವ ಆನ್‌ಲೈನ್ ಸೇವಾದಾತರು ಕೇಳಿದರೂ ಮರುಮಾತಿಲ್ಲದೆ ಅದಕ್ಕೆ ಸಮ್ಮತಿಸುವ ಜನರು ಅವುಗಳು ಕಳುಹಿಸುವ ಮೇಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಕಂಪೆನಿಗಳು ದಿನವೂ ನೂರಾರು ಮೇಲ್ ಕಳುಹಿಸುವುದರಿಂದ ಇನ್‌ಬಾಕ್ಸ್‌ನಲ್ಲಿ ಸಾವಿರಗಟ್ಟಲೆ ಅನ್‌ರೀಡ್ ಮೆಸೇಜ್‌ಗಳು ದಿನದಿಂದ ದಿನಕ್ಕೆ ತುಂಬಿಕೊಳ್ಳುತ್ತಲೇ ಇರುತ್ತವೆ.

ಈ ಸಾವಿರಾರು ಇಮೇಲ್‌ಗಳನ್ನು ಡಿಲೀಟ್ ಮಾಡದೇ ಎಲ್ಲರೂ ಸುಮ್ಮನಾಗುತ್ತಾರೆ. ಆದರೆ, ನಿಮಗೆ ಗೊತ್ತಾ? ಇಮೇಲ್ ಇನ್‌ಬಾಕ್ಸ್‌ನಲ್ಲಿ ಅನ್‌ರೀಡ್ ಮೆಸೇಜ್‌ಗಳು ದಿನದಿಂದ ದಿನಕ್ಕೆ ತುಂಬಿಕೊಳ್ಳುತ್ತಾ ಹೋದರೆ ನಿಮ್ಮ ಇಮೇಲ್ ಸ್ಟೋರೇಜ್ ಸ್ಪೇಸ್ ಕಡಿಮೆಯಾಗುತ್ತಾ ಬರುತ್ತದೆ. ಮೆಸೇಜ್‌ಗಳು ಹೆಚ್ಚುತ್ತಾ ಹೋದಷ್ಟೂ ನಿಮ್ಮ ಮೇಲ್‌ನಲ್ಲಿ ಜಾಗದ ಕೊರತೆ ಉಂಟಾಗುತ್ತದೆ.

15 ಜಿಬಿ ಸ್ಟೋರೇಜ್ ಸ್ಪೇಸ್
ಗೂಗಲ್ ತನ್ನ ಮೇಲ್, ಡ್ರೈವ್ ಮತ್ತು ಫೋಟೊ ಸೇವೆಗಳೆಲ್ಲಾ ಸೇರಿ 15 ಜಿಬಿ ಸ್ಟೋರೇಜ್ ಸ್ಪೇಸ್ ಮಾತ್ರ ಉಚಿತವಾಗಿ ಕೊಡುತ್ತಿದೆ. ಹಾಗಾಗಿ, ನಮಗೆ ಬೇಕಿಲ್ಲದ ಸಾವಿರಾರು ಅನ್‌ರೀಡ್ ಮೆಸೇಜ್‌ಗಳು ನಿಮ್ಮ ಜಿಮೇಲ್‌ನ ಇನ್‌ಬಾಕ್ಸ್‌ನಲ್ಲಿ ಉಳಿದಿದ್ದರೆ ಅವನ್ನೆಲ್ಲಾ ಒಂದೇ ಬಾರಿಗೆ ಸುಲಭವಾಗಿ ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಇಂದು ತಿಳಿಯಿರಿ.

ಜಿಮೇಲ್‌ಗೆ ಸೈನ್‌ಇನ್ ಆಗಿ.
ಸಾವಿರಾರು ಅನ್‌ರೀಡ್ ಮೆಸೇಜ್‌ಗಳು ನಿಮ್ಮ ಜಿಮೇಲ್‌ನ ಇನ್‌ಬಾಕ್ಸ್‌ನಲ್ಲಿ ಉಳಿದಿದ್ದರೆ ಅವನ್ನೆಲ್ಲಾ ಒಂದೇ ಬಾರಿಗೆ ಡಿಲೀಟ್ ಮಾಡುವ ಆಯ್ಕೆ ಇದೆ. ಇನ್‌ಬಾಕ್ಸ್‌ನಲ್ಲಿರುವ ಅನ್‌ರೀಡ್ ಮೆಸೇಜ್‌ಗಳೆಲ್ಲವನ್ನೂ ಒಮ್ಮೆಲೇ ಡಿಲೀಟ್ ಮಾಡಲು ಮೊದಲು ಜಿಮೇಲ್‌ಗೆ ಸೈನ್‌ಇನ್ ಆಗಿ.

in:inbox is:unread ಎಂದು ಟೈಪಿಸಿ!
ಮೇಲ್ ಪೇಜ್‌ನ ಮೇಲ್ಭಾಗದ ಸರ್ಚ್ ಬಾರ್‌ನಲ್ಲಿ in:inbox is:unread ಎಂದು ಟೈಪಿಸಿ ಎಂಟರ್ ಒತ್ತಿ. ಈಗ ಎಲ್ಲಾ ಅನ್‌ರೀಡ್ ಮೆಸೇಜ್‌ಗಳೂ ಕಾಣುತ್ತವೆ. ಈ ಎಲ್ಲಾ ಅನ್‌ರೀಡ್ ಮೆಸೇಜ್‌ಗಳೂ ಲಿಸ್ಟ್ ಆದ ಬಳಿಕ ಸೆಲೆಕ್ಸ್ ಆಲ್ ಮಾಡಿ, ಡಿಲೀಟ್ ಕೊಡಿ. ಈಗ ಎಲ್ಲಾ ಅನ್‌ರೀಡ್ ಮೆಸೇಜ್‌ಗಳೂ ಒಂದೇ ಬಾರಿ ಡಿಲೀಟ್ ಆಗುತ್ತವೆ.

ಬೇಕಿರುವ ಮೆಸೇಜ್‌ಗಳನ್ನು ನೋಡಿಕೊಳ್ಳಿ!
ಎಲ್ಲಾ ಅನ್‌ರೀಡ್ ಮೆಸೇಜ್‌ಗಳನ್ನೂ ಒಮ್ಮೆಗೇ ಡಿಲೀಟ್ ಮಾಡುವ ಮುನ್ನ ನಿಮಗೆ ಬೇಕಿರುವ ಮೆಸೇಜ್‌ಗಳು ಡಿಲೀಟ್ ಆಗದಂತೆ ನೋಡಿಕೊಳ್ಳಿ. ಮುಖ್ಯವಾದ ಮೇಲ್‌ಗಳೂ ಅನ್‌ರೀಡ್‌ನಲ್ಲಿದ್ದರೆ ಒಮ್ಮೆ ಸರ್ಚ್ ಮಾಡಿ ನೋಡಿ. ಏಕೆಂದರೆ ಅನ್‌ರೀಡ್ ಮೆಸೇಜ್‌ಗಳೆಲ್ಲವನ್ನೂ ಒಮ್ಮೆಗೇ ಡಿಲೀಟ್ ಕೊಟ್ಟರೆ ಇವು ಶಾಶ್ವತವಾಗಿ ಡಿಲೀಟ್ ಆಗುತ್ತವೆ.


ಇ–ಅಭ್ಯಾಸ ರೂಢಿಸಿಕೊಳ್ಳಿ!
ಇಮೇಲ್‌ಗೆ ಬರುವ ಬೇಕಿಲ್ಲದ ಮೆಸೇಜ್‌ಗಳನ್ನು ಡಿಲೀಟ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಗೂಗಲ್ ಸ್ಟೋರೇಜ್ ಸ್ಪೇಸ್ ಉಳಿಯುತ್ತದೆ. ಎಲ್ಲಾ ಅನ್‌ರೀಡ್ ಮೆಸೇಜ್‌ಗಳನ್ನು ಒಂದೇ ಬಾರಿ ಡಿಲೀಟ್ ಮಾಡುವ ಆಯ್ಕೆ ಇದ್ದರೂ ಕೂಡ ದಿನವೂ ಇಮೇಲ್ ಮೆಸೇಜ್ ಡಿಲೀಟ್ ಮಾಡುವ ಇ-ಅಭ್ಯಾಸ ಇಟ್ಟುಕೊಳ್ಳಿ.


Click it and Unblock the Notifications








