ಫೇಸ್‌ಬುಕ್‌ನಲ್ಲಿ ಮ್ಯೂಸಿಕ್ ಸ್ಲೈಡ್ ಶೋ ರಚಿಸುವುದು ಹೇಗೆ?!
ಫೇಸ್‌ಬುಕ್‌ನಲ್ಲಿ ಚಿತ್ರಗಳನ್ನು ಸ್ಲೈಡ್ ಶೋ ಆಗಿ ರಚಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ ದಿನದಿಂದ ದಿನಕ್ಕೆ ಅಪ್‌ಡೇಟ್ ಆಗುತ್ತಿರುತ್ತದೆ. ಆದರೆ, ಆ ಎಲ್ಲಾ ಅಪ್‌ಡೇಟ್‌ಗಳು ಎಲ್ಲಾ ಬಳಕೆದಾರರಿಗೆ ತಿಳಿದಿರುವುದಿಲ್ಲ ಮತ್ತು ಹೆಚ್ಚು ಜನರು ಅಪ್‌ಡೇಟ್‌ಗಳನ್ನು ಬಳಸುವುದಿಲ್ಲ.! ಹಾಗಾಗಿ, ಫೆಸ್‌ಬುಕ್‌ನಲ್ಲಿಂದು ಸ್ಲೈಡ್ ಶೋ ಹೇಗೆ ರಚಿಸುವುದು ಎಂದು ತಿಳಿಯೋಣ.!!
ಹೌದು, ಫೇಸ್‌ಬುಕ್‌ನಲ್ಲಿ ಬಹಳ ಸುಲಭವಾಗಿ ಸ್ಲೈಡ್ ಶೋ ರಚಿಸಬಹುದು. ಮ್ಯೂಸಿಕ್ ಜೊತೆಗೆ ಚಿತ್ರಗಳ ಸ್ಲೈಡ್ ಶೋ ರಚಿಸಿ ಅದನ್ನು ಫೇಸ್‌ಬುಕ್‌ನಲ್ಲಿ ಹರಿಬಿಡಬಹುದು.!! ಹಾಗಾದರೆ, ಫೇಸ್‌ಬುಕ್‌ನಲ್ಲಿ ಚಿತ್ರಗಳನ್ನು ಸ್ಲೈಡ್ ಶೋ ಆಗಿ ರಚಿಸಿಕೊಳ್ಳುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಫೇಸ್‌ಬುಕ್ ತೆರೆಯಿರಿ.!!
ಫೇಸ್‌ಬುಕ್ ಆಪ್ ತೆರೆದು 'ಇಲ್ಲಿ ಏನಾದರೂ ಬರೆಯಿರಿ' ಎಂಬಲ್ಲಿ ಕ್ಲಿಕ್ ಮಾಡಿ. ನಂತರ ತೆರಯುವ ಆಯ್ಕೆಗಳಲ್ಲಿ Slideshow ಎಂಬ ಆಯ್ಕೆಯನ್ನು ಒತ್ತಿರಿ. ಈಗ ADD PHOTOS ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಫೋನ್‍ನಲ್ಲಿರುವ ಚಿತ್ರಗಳ ಪೈಕಿ ಯಾವ ಚಿತ್ರಗಳನ್ನು ಸ್ಲೈಡ್ ಶೋ ಮಾಡಬೇಕೋ ಆಯಾ ಚಿತ್ರಗಳ ಮೇಲೆ ಕ್ಲಿಕ್ ಮಾಡಿ.!!

ಮ್ಯೂಸಿಕ್ ಅಳವಡಿಸಿ.!!
ADD PHOTOSಗೆ ಚಿತ್ರಗಳನ್ನು ಸೇರಿಸಿದ ನಂತರ NEXT ಎಂಬಲ್ಲಿ ಕ್ಲಿಕ್ ಮಾಡಿ. ಈಗ ಆ ಚಿತ್ರಗಳಿಗೆ ಮ್ಯೂಸಿಕ್ ನೀಡಲು ಅಲ್ಲಿ ಕಾಣುವ MUSIC ಎಂಬ ಆಯ್ಕೆಯ ಮೇಲೆ ಕ್ಲಿಕ್ಕಿಸಿ. ಹಲವು ಮ್ಯೂಸಿಕ್ ಫೈಲ್‌ಗಳಲ್ಲಿ ಚಿತ್ರಗಳಿಗೆ ಸೂಕ್ತವೆನಿಸುವ ಮ್ಯೂಸಿಕ್ ಫೈಲ್ ಅನ್ನು ಆರಿಸುವುದು ನಿಮ್ಮ ಸೃಜನಶೀಲತೆ.!!

ಸ್ಲೈಡ್ ಶೋಗೆ ಹೆಸರು ನೀಡಿ.!!
ಮ್ಯೂಸಿಕ್ ಆಯ್ಕೆಯ ನಂತರ ಸ್ಲೈಡ್ ಶೋಗೆ ಹೆಸರೊಂದನ್ನು ನೀಡಿ. ಇದಕ್ಕಾಗಿ ಇಲ್ಲಿನ TITLE ಎಂಬಲ್ಲಿ ಕ್ಲಿಕ್ ಮಾಡಿ. ನಿಮಗೆ ಇಷ್ಟವಾದ ಹೆಸರು ಕೊಟ್ಟು NEXT ಕ್ಲಿಕ್ ಮಾಡಿ. ಈಗ ಚಿತ್ರಗಳ ಸ್ಲೈಡ್ ಶೋ ವಿಡಿಯೊ ರಚನೆಯಾಗುತ್ತದೆ.! ಅದನ್ನು ವೀಕ್ಷಿಸಿ ನೋಡಿ.!!


ಸ್ಲೈಡ್ ಶೋ ಟ್ಯಾಗ್ ಮಾಡಿ.!!
ಸ್ಲೈಡ್ ಶೋ ಕ್ರಿಯೇಟ್ ಆದ ನಂತರ ಸ್ಲೈಡ್ ಶೋವನ್ನು ನಿಮ್ಮ ಫೇಸ್‌ಬುಕ್ ಗೆಳೆಯರಿಗೆ ಟ್ಯಾಗ್ ಮಾಡುವ ಅವಕಾಶವಿದೆ. ನೀವು ಟ್ಯಾಗ್ ಮಾಡಿರುವ ಗೆಳೆಯರ ಪ್ರೊಫೈಲ್ ಚಿತ್ರವೂ ಈ ಸ್ಲೈಡ್ ಕೊನೆಗೆ ಕಾಣಿಸಿಕೊಳ್ಳುತ್ತದೆ. ಇದನ್ನು ಎಲ್ಲರಿಗೂ ಕಾಣುವಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಬಹುದು.!!


Click it and Unblock the Notifications








