ಗೂಗಲ್ ಕ್ರೋಮ್‌ನಲ್ಲಿ ಮೂಡುವ ಪಾಪ್-ಅಪ್‌ ಬ್ಲಾಕ್ ಮಾಡುವುದು ಹೇಗೆ?

Written By:

ಆಂಡ್ರಾಯ್ಡ್ ಬಳಕೆದಾರರು ಇಂಟರ್‌ನೆಟ್‌ ಬಳಕೆಗೆ ಬಹುತೇಕ ಗೂಗಲ್ ಕ್ರೋಮ್ ಬಳಸದೇ ಇರುವವರಿಲ್ಲ ಎನ್ನಬಹುದು. ಹಾಗಾಗಿ, ಇದನ್ನೇ ಎನ್‌ಕ್ಯಾಶ್ ಮಾಡಿಕೊಳ್ಳುವ ಗೂಗಲ್ ಕ್ರೋಮ್ ಬ್ರೌಸರ್ ಪಾಪ್-ಅಪ್‌ಗಳ ಮೂಲಕ ನಮ್ಮನ್ನು ಒಂದು ಆಯ್ಕೆಗಾಗಿ ಪ್ರೇರೇಪಿಸುತ್ತದೆ. ಇದು ಹಲವು ಬಾರಿ ಕಿರಿಕಿರಿ ಉಂಟುಮಾಡುತ್ತದೆ.!!

ಹೌದು, ಇಂತಹ ಪಾಪ್-ಅಪ್‌ಗಳು ನಮ್ಮ ಆಯ್ಕೆಯನ್ನು ಬದಲಿಸುವುದಲ್ಲದೇ, ನಮ್ಮ ತಾಳ್ಮೆಯನ್ನು ಕೆಡಿಸುವ ಹಂತಕ್ಕೆ ಒಮ್ಮೊಮ್ಮೆ ಹೋಗಿ ನಿಲ್ಲುವುದುಂಟು.!! ಹಾಗಾಗಿ, ಇಂತಹ ಪಾಪ್‌-ಅಪ್‌ಗಳ ಕಿರಿಕಿರಿಯನ್ನು ಅನುಭವಿಸುವುದರ ಬದಲು ಅವುಗಳನ್ನು ಬ್ಲಾಕ್ ಮಾಡಬಹುದು.!! ಹಾಗಾದರೆ, ಕ್ರೋಮ್‌ನಲ್ಲಿ ಮೂಡುವ ಪಾಪ್‌-ಅಪ್‌ಗಳನ್ನು ಹೇಗೆ ಬ್ಲಾಕ್ ಮಾಡುವುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಾಪ್‌– ಅಪ್‌ ಬ್ಲಾಕ್‌ ಮಾಡುವುದು ಹೇಗೆ?

ಪಾಪ್‌– ಅಪ್‌ ಬ್ಲಾಕ್‌ ಮಾಡುವುದು ಹೇಗೆ?

ನಿಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಗೂಗಲ್‌ ಕ್ರೋಮ್‌ ಆಪ್‌ ತೆರೆಯಿರಿ. ಕ್ರೋಮ್‌ ತೆರೆದ ನಂತರ ನಿಮ್ಮ ಬಲ ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೆನು ಬಟನ್ ಮೇಲೆ ಕ್ಲಿಕ್ಕಿಸಿ. ಹಲವು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ 'ಸೆಟ್ಟಿಂಗ್ಸ್ ಅಡ್ವಾನ್ಸ್ಡ್' ಆಯ್ಕೆ ಮೇಲೆ ಕ್ಲಿಕ್‌ ಮಾಡಿ.!!

ಸೈಟ್‌ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ.!!

ಸೈಟ್‌ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ.!!

'ಸೆಟ್ಟಿಂಗ್ಸ್ ಅಡ್ವಾನ್ಸ್ಡ್' ಆಯ್ಕೆ ಮೇಲೆ ಕ್ಲಿಕ್‌ ಮಾಡಿದ ನಂತರ ಹಲವು ಆಯ್ಕೆಗಳು ಮತ್ತೆ ಮೂಡುತ್ತವೆ. ಅದರಲ್ಲಿ 'ಸೈಟ್‌ ಸೆಟ್ಟಿಂಗ್ಸ್' ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ನಂತರ ಪಾಪ್‌-ಅಪ್ಸ್ ಆಯ್ಕೆ ಕಾಣಿಸುತ್ತದೆ. ನೀವು ಪಾಪ್‌-ಅಪ್‌ ಬ್ಲಾಕ್‌ ಮಾಡಲು ಅಲ್ಲಿ ಕಾಣುವ ಬಟನ್‌ ಅನ್ನು ಆಫ್( ಎಡಕ್ಕೆ) ಎಳೆಯಿರಿ. ಎಡಕ್ಕೆ ಎಳೆದರೆ ಪಾಪ್‌-ಅಪ್‌ಗಳು ಬ್ಲಾಕ್‌ ಆಗುತ್ತವೆ.

ಮತ್ತೆ ತೆಗೆಯಬೇಕೆಂದರೆ

ಮತ್ತೆ ತೆಗೆಯಬೇಕೆಂದರೆ

ನಿಮಗೆ ಪಾಪ್‌-ಅಪ್‌ನಿಂದಲೇ ಹೆಚ್ಚು ಅನುಕೂಲವಾಗುತ್ತದೆ ಎಂದು ಅನಿಸಿದರೆ ಮೊದಲಿನ ಹಾಗೆಯೇ ಆಯ್ಕೆಗಳನ್ನು ಮಾಡಿರಿ. ನಂತರ ಪಾಪ್‌-ಅಪ್‌ ಆಯ್ಕೆಗೆ ಹೋಗಿ ಬಟನ್‌ ಅನ್ನು ಬಲಕ್ಕೆ ಎಳೆದರೆ ಪಾಪ್‌-ಅಪ್‌ ಎನೆಬಲ್ ಆಗುತ್ತದೆ. ಬ್ರೌಸಿಂಗ್‌ ಮಾಡುವಾಗ ಪಾಪ್‌-ಅಪ್‌ಗಳು ನಿಮ್ಮ ಪರದೆಯ ಮೇಲೆ ಮತ್ತೆ ಕಾಣಿಸಿಕೊಳ್ಳುತ್ತವೆ.!!

ಪಾಪ್–ಅಪ್‌ ಬ್ಲಾಕ್‌ ಮಾಡುವುದು ಒಳ್ಳೆಯದು!!

ಪಾಪ್–ಅಪ್‌ ಬ್ಲಾಕ್‌ ಮಾಡುವುದು ಒಳ್ಳೆಯದು!!

ಬ್ರೌಸಿಂಗ್‌ ಅಭ್ಯಾಸ ಹೆಚ್ಚಾಗಿರುವ ಹಲವರು ಪಾಪ್‌-ಅಪ್‌ಗಳನ್ನು ಬ್ಲಾಕ್‌ ಮಾಡುವುದು ಸಾಮಾನ್ಯ. ಪಾಪ್‌-ಅಪ್‌ಗಳನ್ನು ಹ್ಯಾಕರ್‌ಗಳು ಗಾಳದಂತೆ ಬಳಸುವುದು ಹೆಚ್ಚು. ಹಾಗಾಗಿ, ಇಂತಹ ಪಾಪ್‌-ಅಪ್‌ ಮೇಲೆ ಕ್ಲಿಕ್ಕಿಸಿ ಅನಗತ್ಯವಾಗಿ ಸೈಬರ್ ಕ್ರಿಮಿನಲ್‌ಗಳಿಗೆ ಸಿಲುಕದೇ ಇರಬಹುದು.!!

ಒದಿರಿ:ಚೀನಾ ಮೊಬೈಲ್ ಕಂಪೆನಿಗಳಿಗೆ ಸವಾಲ್ ಹಾಕಿದ 'ಗ್ಯಾಲಕ್ಸಿ ಆನ್ ಮ್ಯಾಕ್ಸ್'!! ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Click the Chrome menu on the browser toolbar, then select Settings.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot