Home
ಟೆಕ್ ನೌಕರಿ

ಆಪಲ್ ನಲ್ಲಿ ನಿಮ್ಮ ಬಗೆಗಿನ ಮಾಹಿತಿಗಳ ವರದಿ ಪಡೆಯಬಹುದು...ಹೇಗೆ ಗೊತ್ತಾ?

By Sushma Charhra

ಆಪಲ್ ವಿಶ್ವದ ದೊಡ್ಡ ಟೆಕ್ ಕಂಪೆನಿಗಳಲ್ಲಿ ಒಂದು..ಅದರ ಬಳಕೆದಾರರ ಬಗೆಗಿನ ಸಾಕಷ್ಟು ಡಾಟಾಗಳು ಆಪಲ್ ಬಳಿ ಇದೆ. ಫೇಸ್ ಬುಕ್ ಮತ್ತು ಗೂಗಲ್ ಗಳಂತೆ ನಿಮ್ಮ ಡಾಟಾ ಬಳಸಿ ನಿಮಗೆ ಜಾಹಿರಾತು ನೀಡುವ ಕೆಲಸವನ್ನು ಆಪಲ್ ಎಂದಿಗೂ ಮಾಡುವುದಿಲ್ಲ. ಆಪಲ್ ಆ ನಿಟ್ಟಿನಲ್ಲಿ ಬಳಕೆದಾರರಿಗೆ ನೀಡಿದ ಪ್ರತಿಜ್ಞೆಯನ್ನು ಉಳಿಸಿಕೊಂಡಿದೆ. ಆಪಲ್ ಇದ್ದರೆ ನಿಮ್ಮ ಡಾಟಾ ಭದ್ರವಾಗಿದೆ ಎಂತಲೇ ಅರ್ಥ.

ಬೇರೆಯವರ ಕಣ್ಣಿಗೆ ಅದು ಬೀಳುವುದಿಲ್ಲ. ಬೇರೆಯವರಷ್ಟೇ ಯಾಕೆ, ಆಪಲ್ ನ ಒಳಗೇ ಕೆಲಸ ನಿರ್ವಹಿಸುವವರಿಗೂ ಅದು ಸಿಗುವುದಿಲ್ಲ. ಆದರೂ ಆಪಲ್ ನಿಮ್ಮ ಬಗ್ಗೆ ಕೆಲವು ಡಾಟಾ ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೆ. ಉದಾಹರಣೆಗೆ ಬಿಲ್ಲಿಂಗ್ ಅಡ್ರೆಸ್, ಫೇಸ್ ಟೈಮ್ ಕಾಲ್ ಮೆಟಾ ಡೇಟಾ ಇತ್ತಾದಿಗಳು. ಹಾಗಾದ್ರೆ ಆಪಲ್ ನಿಮ್ಮ ಬಗೆಗಿನ ಯಾವೆಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದೆ ಎಂಬ ವರದಿ ನಿಮಗೆ ಬೇಕಾ.. ಸಿಂಪಲ್ ಹಂತಗಳನ್ನು ಅನುಸರಿಸಿ ಅದನ್ನು ತಿಳಿದುಕೊಳ್ಳಬಹುದು.

ಆಪಲ್ ನಲ್ಲಿ ನಿಮ್ಮ ಬಗೆಗಿನ ಮಾಹಿತಿಗಳ ವರದಿ ಪಡೆಯಬಹುದು...ಹೇಗೆ ಗೊತ್ತಾ?


ಆಪಲ್ ನಲ್ಲಿ ನಿಮ್ಮ ಬಗೆಗೆ ಇರುವ ಮಾಹಿತಿಗಳ ವರದಿಯನ್ನು ಪಡೆಯುವುದು ಹೇಗೆ?

1. ಆಪಲ್ ಪ್ರೈವೆಸಿ ಪೇಜ್ ಗೆ ತೆರಳಿ

2. ನಿಮ್ಮ ಆಪಲ್ ಐಡಿ ಬಳಸಿ ಸೈನ್ ಇನ್ ಆಗಿ

3. ಒಂದು ವೇಳೆ ನೀವು ಯುರೋಪಿಯನ್ ಯೂನಿಯನ್ ನಲ್ಲಿದ್ದರೆ. ಈ ಪುಟವು ನಿಮಗೆ ನಿಮ್ಮೆಲ್ಲ ಡಾಟಾವನ್ನು ಆಪಲ್ ನಿಂದ ಡೌನ್ ಲೋಡ್ ಮಾಡಲು ಅವಕಾಶ ನೀಡುತ್ತೆ. ಒಂದು ವೇಳೆ, ಯುರೋಪಿಯನ್ ಯೂನಿಯನ್ ನಿಂದ ಹೊರಗಿನವರಾಗಿದ್ದರೆ... ಈ ಪೇಜ್ ಗೆ ತೆರಳಿ
4. ಮೂರನೇ ಸ್ಟೆಪ್ ನಲ್ಲಿ ತಿಳಿಸಿದ ಪೇಜ್ ನಲ್ಲಿ ನಿಮ್ಮೆಲ್ಲ ಮಾಹಿತಿಗಳನ್ನು ನೀಡಿ. ವಿಷಯವನ್ನು ಆಡ್ ಮಾಡಿ ಮತ್ತು ಕಾಂಟ್ಯಾಕ್ಟ್ ಫಾರ್ಮ್ ನಲ್ಲಿ ಆಪಲ್ ಸರ್ವರ್ ನಲ್ಲಿ ಸೇವ್ ಆಗಿರುವ ಎಲ್ಲಾ ಮಾಹಿತಿಗಳನ್ನು ಪಡೆಯಲು ಅಥವಾ ನೋಡಲು ಇಚ್ಛಿಸುತ್ತಿರುವುದಾಗಿ ಬರೆಯಿರಿ.

5. ನೀವು ಹೀಗೆ ಬರೆದ 24 ಗಂಟೆಗಳ ಒಳಗೆ, ನಿಮಗೆ ಆಪಲ್ ನಿಂದ ಒಂದು ಈ-ಮೇಲ್ ಬರಲಿದೆ. ಅದರಲ್ಲಿ ಆಪಲ್ ನ ವ್ಯಕ್ತಿ ನಿಮ್ಮ ಡೀಟೈಲ್ ಕೇಳಲಿದ್ದಾರೆ. ನಿಮ್ಮ ಪೂರ್ಣ ಹೆಸರು, ವಿಳಾ, ಆಪಲ್ ಇಮೇಲ್ ಐಡಿ, ಸ್ಥಳದ ವಿಳಾಸ. ಇತ್ಯಾದಿ. ಜಸ್ಟ್ ಈ ಇಮೇಲ್ ಗೆ ಎಲ್ಲಾ ಮಾಹಿತಿಗಳನ್ನು ನೀಡಿ ಪ್ರತ್ಯುತ್ತರ ಕಳುಹಿಸಿ.

6. ಮತ್ತೆ ಕಾಯುವ ಸಮಯ. ಒಂದು ವಾರ ಅಥವಾ 10 ದಿನದ ಒಳಗೆ ಆಪಲ್ ನಿಂದ ಮತ್ತೊಂದು ಇಮೇಲ್ ಬರಲಿದೆ. ಅದರಲ್ಲಿ ಆಪಲ್ ನಿಮ್ಮ ಬಗ್ಗೆ ಸಂಗ್ರಹಿಸಿಟ್ಟಿರುವ ಎಲ್ಲಾ ಮಾಹಿತಿಗಳನ್ನೊಂಡ ವರದಿ ಇರಲಿದೆ. ಆದರೆ ಇದು ಪಾಸ್ ವರ್ಡ್ ಪ್ರೊಟೆಕ್ಟ್ ಆಗಿರುತ್ತದೆ. ಝಿಪ್ ಫೈಲ್ ವೊಂದು ನಿಮಗೆ ಲಭ್ಯವಾಗಿರುತ್ತೆ. ಆಪಲ್ ಝಿಪ್ ಫೈಲ್ ತೆರೆಯಲು ಮತ್ತೊಂದು ಇಮೇಲನ್ನು ನಿಮಗೆ ಕಳುಹಿಸಿಕೊಡಲಿದೆ.

7. ಒಮ್ಮೆ ನಾವು ಇದನ್ನು ತೆರೆದರೆ. ಒಂದು ಸ್ಪ್ರೆಡ್ ಶೀಟ್ ತೆರೆದುಕೊಳ್ಳಲಿದೆ. ಇದರಲ್ಲಿ ಆಪಲ್ ನಿಮ್ಮ ಬಗ್ಗೆ ಹೊಂದಿರುವ ಡಾಟಾಗಳ ವಿವರ ಇರುತ್ತೆ.

ಆಪಲ್ ನಲ್ಲಿ ನಿಮ್ಮ ಬಗೆಗಿನ ಮಾಹಿತಿಗಳ ವರದಿ ಪಡೆಯಬಹುದು...ಹೇಗೆ ಗೊತ್ತಾ?


ನಾವು ಹೀಗೆ ಪರೀಕ್ಷಿಸಿದಾಗ 17 ಸ್ಪ್ರೆಡ್ ಶೀಟ್ ಗಳನ್ನು ಆಪಲ್ ಕಳುಹಿಸಿಕೊಟ್ಟಿದೆ.ಇದರಲ್ಲಿ ನಾವು ಯಾವೆಲ್ಲ ಆಪ್ ಗಳನ್ನು ಡೌನ್ ಲೋಡ್ ಮಾಡಿದ್ದೇವೆ, . ನಾವು ಫೇಸ್ ಟೈಮ್ ಮೂಲಕ ಕರೆ ಮಾಡಿದ ವ್ಯಕ್ತಿಗಳ ಇಮೇಲ್ ಅಡ್ರೆಸ್ ಗಳು ಇತ್ಯಾದಿಗಳಿದ್ದವು. ಹಾಗಾದ್ರೆ ಯಾವೆಲ್ಲ ವರದಿಗಳ ಲಿಸ್ಟ್ ಸಿಕ್ಕಿದೆ ಸಣ್ಣ ಡೀಟೈಲ್ಸ್ ಇಲ್ಲಿದೆ ನೋಡಿ..

• ನಮ್ಮ ಫೋನ್ ನಂಬರ್, ಇಮೇಲ್ ಅಡ್ರೆಸ್, ಸ್ಟ್ರೀಟ್ ಅಢ್ರೆಸ್, ಆಪಲ್ ಐಡಿಯನ್ನು ಕ್ರಿಯೇಟ್ ಮಾಡಿದ ದಿನಾಂಕ ಮ್ತು ಸಮಯ

• ಯಾವ ಸಮಯದಲ್ಲಿ ಆಪಲ್ ನ ಕಸ್ಟಮರ್ ಸಪೋರ್ಟ್ ಪಡೆದಿದ್ದೇವೆ ಎಂಬ ವಿವರ.

ಆಂಡ್ರಾಯ್ಡ್‌ನಲ್ಲಿ Facebook Instagram ವಿಡಿಯೋ ಡೌನ್‌ಲೋಡ್ ಮಾಡುವುದು ಹೇಗೆ..?

• ಆಪ್ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿದ ಎಲ್ಲಾ ಆಪ್ ಗಳ ವಿವರ ಮತ್ತು ಮ್ಯಾಕ್ ಆಪ್ ಸ್ಟೋರ್ ಮೂಲಕ ಆಪಲ್ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಿದ ಆಪ್ ಗಳ ವಿವರ

• ಐಕ್ಲೌಡ್ ಲಾಗ್ಸ್, ಬುಕ್ ಮಾರ್ಕ್, ಫೋಟೋ ಲೈಬ್ರರಿ, ಬ್ರೌಸಿಂಗ್ ಹಿಸ್ಟರಿ ಇತ್ಯಾದಿಗಳು ಇರುತ್ತೆ. ಜೊತೆಗೆ ಐಪಿ ಅಡ್ರೆಸ್ ಮತ್ತು ಸಮಯದ ಮಾಹಿತಿಯೂ ಒಳಗೊಂಡಿರುತ್ತೆ.

• ಸಫಾರಿ ಬ್ರೌಸಿಂಗ್ ಹಿಸ್ಟರಿ, ಡಿವೈಸಿನ ಹೆಸರು ಮತ್ತು ಅದ್ರ ಆಪರೇಟಿಂಗ್ ಸಿಸ್ಟಮ್ ನ ಮಾಹಿತಿ ಇರುತ್ತೆ.

• ನಾವು ಬಳಸಿದ ಆಪಲ್ ಪ್ರೊಡಕ್ಟ್ ಗಳ ಸೀರಿಯಲ್ ನಂಬರ್ ಗಳು ಮತ್ ಅದರ ವಾರೆಂಟಿ ಎಕ್ಸ್ ಪೈರಿ ದಿನಾಂಕ

• ಐಟ್ಯೂನ್ಸ್ ಗೆ ಸೈನ್ ಇನ್ ಆದ ಸಮಯದ ವಿವರ

• ಗೇಮ್ ಸೆಂಟರ್ ನಿಂದ ಗೇಮ್ ಆಡಿದ ಸಮಯ ಮತ್ತು ಅದರ ಐಪಿ ಆಡ್ರೆಸ್ ಗಳನ್ನೊಳಗೊಂಡ ವಿವರಗಳು.

• ಐಟ್ಯೂನ್ಸ್ ನಿಂದ ಡೌನ್ ಲೋಡ್ ಮಾಡಿದ ಹಾಡುಗಳ ವಿವರ.

ಆಪಲ್ ನಲ್ಲಿ ನಿಮ್ಮ ಬಗೆಗಿನ ಮಾಹಿತಿಗಳ ವರದಿ ಪಡೆಯಬಹುದು...ಹೇಗೆ ಗೊತ್ತಾ?


ಭವಿಷ್ಯದಲ್ಲಿ ಆಪಲ್ ಸಂಸ್ಥೆ ಈಮೇಲ್ ಮೆಥೆಡ್ ನಿಂದ ಡಾಟಾ ಪಡೆಯುವ ವಿಧಾನವನ್ನು ತೆಗೆದು ಹಾಕಿ ಬೇರೆ ರೀತಿಯಲ್ಲಿ ಡಾಟಾ ಪಡೆಯುವ ವ್ಯವಸ್ಥೆ ಮಾಡುವ ಸಾಧ್ಯತೆಗಳಿವೆ. ಆದರೆ ಅಲ್ಲಿವರೆಗೆ ಇದು ಒಂದು ಒಳ್ಳೆಯ ಮೆಥೆಡ್ ಆಗಿದೆ. ಆದರೆ ಈ ಡಾಟಾಗಳು ಅತ್ಯಧಿಕ ಎಂಬಂತೆ ಭಾವಸಾಗುತ್ತೆ. ಆದರೆ ಮಾಹಿತಿಗಳ ಸೂಕ್ತವಾಗಿದ್ದು, ಅಗತ್ಯವಿರುವವರಿಗೆ ಉಪಯುಕ್ತವಾಗಿಯೇ ಇರುತ್ತೆ.

Best Mobiles in India

English summary
How to Download a Copy of All the Data Apple Has on You. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+