Home
ಟೆಕ್ ನೌಕರಿ

ಆಪಲ್ 'ಐಒಎಸ್ 11' ಒಎಸ್ ಅಪ್‌ಡೇಟ್ ಹೇಗೆ!?..ಯಾವೆಲ್ಲಾ ಐಫೋನ್‌ಗಳಿಗೆ ಲಭ್ಯ?

ಈ ಆಪರೇಟಿಂಗ್ ಸಿಸ್ಟಮ್‌ ನಿಮ್ಮನ್ನು ಐಫೋನ್ ಮೂಲಕ ಮತ್ತಷ್ಟು ಚೆಂದದ ಅನುಭವಕ್ಕೆ ಕರೆದೊಯ್ಯಲಿದೆ.!!

By Bhaskar N J

ಆಪಲ್ ಕಂಪೆನಿ ತನ್ನ ನೂತನ ಆಪರೇಟಿಂಗ್ ಸಿಸ್ಟಮ್‌ 'ಐಒಎಸ್ 11' ಅನ್ನು ಬಿಡುಗಡೆಗೊಳಿಸಿದ್ದು ಈಗಾಗಲೇ ಅಪ್‌ಡೇಟ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. 'ಐಒಎಸ್ 11' ಇದೀಗ ಮತ್ತಷ್ಟು ಅಪ್‌ಡೇಟ್ ಹೊಂದಿದ್ದು, ಈ ಆಪರೇಟಿಂಗ್ ಸಿಸ್ಟಮ್‌ ನಿಮ್ಮನ್ನು ಐಫೋನ್ ಮೂಲಕ ಮತ್ತಷ್ಟು ಚೆಂದದ ಅನುಭವಕ್ಕೆ ಕರೆದೊಯ್ಯಲಿದೆ.!!

ಸಿರಿ, ಮ್ಯಾಪ್, ಕೀಬೋರ್ಡ್,ಕಂಟ್ರೋಲ್ ಸೆಂಟರ್ ಹೀಗೆ ಸರಿಸುಮಾರು 30 ಕ್ಕಿಂತಲೂ ಹೆಚ್ಚು ಫೀಚರ್ಸ್ ಅಪ್‌ಡೇಟ್ ಹೊಂದಿರುವ 'ಐಒಎಸ್ 11' ಆಪರೇಟಿಂಗ್ ಸಿಸ್ಟಮ್‌ ಹೊಂದಿದ್ದು, ಹಾಗಾದರೆ, ಯಾವ ಯಾವ ಐಫೋನ್‌ಗಳಿಗೆ 'ಐಒಎಸ್ 11' ಒಎಸ್ ಅಪ್‌ಡೆಟ್ ಸಿಗಲಿದೆ? ಅಪ್‌ಡೆಟ್ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯಾವೆಲ್ಲಾ ಐಫೋನ್‌ಗಳಿಗೆ 'ಐಒಎಸ್ 11'  ಲಭ್ಯ?

ಯಾವೆಲ್ಲಾ ಐಫೋನ್‌ಗಳಿಗೆ 'ಐಒಎಸ್ 11' ಲಭ್ಯ?

ಈಗಾಗಲೇ ಮಾರುಕಟ್ಟೆಯಲ್ಲಿರುವ ಐಫೋನ್ 7, ಐಫೋನ್ 6, 6Sಐಫೋನ್ SE, ಐಫೋನ್ 5S, ಐಪ್ಯಾಡ್ ಏರ್, ಐಪ್ಯಾಡ್ ಪ್ರೋ ಹಾಗೂ ಐಪ್ಯಾಡ್ ಮಿನಿ ಸ್ಮಾರ್ಟ್‌ಫೋನ್‌ಗಳಿಗೆ ಐಒಎಸ್ 11' ಆಪರೇಟಿಂಗ್ ಸಿಸ್ಟಮ್ ಲಭ್ಯವಿದೆ.!!

ಯಾವೆಲ್ಲಾ ಐಫೋನ್‌ಗಳಿಗೆ ''ಐಒಎಸ್ 11'' ಲಭ್ಯವಿಲ್ಲ?

ಯಾವೆಲ್ಲಾ ಐಫೋನ್‌ಗಳಿಗೆ ''ಐಒಎಸ್ 11'' ಲಭ್ಯವಿಲ್ಲ?

ಐಫೋನ್ 5 ಹಾಗೂ 5ಸಿ ಐಫೋನ್ 4ಎಸ್ ಹಾಗೂ ಐಪ್ಯಾಡ್ 4 ಸರಣಿ ಸ್ಮಾರ್ಟ್‌ಫೋನ್‌ಗಳಿಗೆ ನೂತನ ಆಪರೇಟಿಂಗ್ ಸಿಸ್ಟಮ್ ಐಒಎಸ್ 11 ಲಭ್ಯವಿಲ್ಲ, ಈ ಸ್ಮಾರ್ಟ್‌ಫೋನ್‌ಗಳ ಹಾರ್ಡ್ವೇರ್ ನೂತನ ಐಒಎಸ್ 11 ತಂತ್ರಾಂಶವನ್ನು ಬೆಂಬಲಿಸುವುದಿಲ್ಲ.!!

ಬುಧವಾರದಿಂದ ಅಪ್‌ಡೇಟ್ ಲಭ್ಯ!!

ಬುಧವಾರದಿಂದ ಅಪ್‌ಡೇಟ್ ಲಭ್ಯ!!

ಜಾಗತಿಕವಾಗಿ ಸೆ.19ರಂದು ಬಿಡುಗಡೆಯಾಗಿದ್ದ ಐಒಎಸ್ 11 ಆಪರೇಟಿಂಗ್ ಸಿಸ್ಟಂ ಬುಧವಾರದಿಂದ ಭಾರತೀಯ ಐಫೋನ್ ಸಾಧನಗಳಿಗೂ ಲಭ್ಯವಾಗತೊಡಗಿದೆ. ಹಾಗಾಗಿ, ಐಒಎಸ್ 11 ಒಎಸ್ ಅಪ್‌ಡೇಟ್ ಮೂಲಕ ಐಫೋನ್ ಅನ್ನು ಮತ್ತಷ್ಟು ಚೆಂದದ ಅನುಭವದಲ್ಲಿ ಬಳಕೆ ಮಾಡಬಹುದು.!!

''ಐಒಎಸ್ 11'' ಅಪ್‌ಡೇಟ್ ಹೇಗೆ?

''ಐಒಎಸ್ 11'' ಅಪ್‌ಡೇಟ್ ಹೇಗೆ?

ಐಫೋನ್ ಸೆಟ್ಟಿಂಗ್ಸ್ ತೆರೆದು ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಆಪಲ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಸೈನ್‌ಇನ್ ಆಗಿರಿ. 'ಐಒಎಸ್ 11' ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ನಂತರ 'ಎನ್‌ಲೋಲ್ ಮೈ ಡಿವೈಸ್' ಆಯ್ಕೆಯನ್ನು ಒತ್ತಿದರೆ 'ಐಒಎಸ್ 11' ಇನ್‌ಸ್ಟಾಲ್ ಆಗುತ್ತದೆ. ಮತ್ತು ನಿಮ್ಮ ಫೋನ್ ರೀಬೂಟ್ ಆಗುತ್ತದೆ .!!

ಅಪ್‌ಡೇಟ್ ಮಾಡುವ ಮುನ್ನ ತಿಳಿದಿರಿ.!!

ಅಪ್‌ಡೇಟ್ ಮಾಡುವ ಮುನ್ನ ತಿಳಿದಿರಿ.!!

ಐಒಎಸ್ 11 ತಂತ್ರಾಂಶವು 1.89 ಜಿಬಿ ಇದ್ದು ವೈಫೈ ಸಂಪರ್ಕದ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದು. ಇನ್ನು ಕಡಿಮೆ ಮೆಮೊರಿ ಹೊಂದಿರುವ ಡಿವೈಸ್‌ಗಳ ಮೆಮೊರಿಯನ್ನು ಕಂಪ್ಯೂಟರಿಗೆ ವರ್ಗಾಯಿಸಿ ಸಾಕಷ್ಟು ಸ್ಥಳಾವಕಾಶ ಮಾಡಿಕೊಂಡ ಬಳಿಕವೇ ಅಪ್‌ಡೇಟ್ ಮಾಡಿಕೊಂಡರೆ ಒಳ್ಳೆಯದು.!!

Best Mobiles in India

English summary
Don't wait for others to tell you how cool iOS 11 is! Head over to this quick guide to download and install iOS 11 beta 10 on your iPhone and iPad.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+