ನೀವೇ ಉಚಿತ ಸಿಗ್ನಲ್ 'ಬೂಸ್ಟರ್' ತಯಾರಿಸಿ..ಮನೆಯ ಒಳಗೆ ನೆಟ್‌ವರ್ಕ್ ಹೆಚ್ಚಿಸಿ!!

|

ನಮ್ಮ ಮನೆಯ ಹೊರಗೆ ಹೇರಳವಾಗಿ ನೆಟ್‌ವರ್ಕ್ ಸಿಗುತ್ತದೆ. ಆದರೆ, ಮನೆಯ ಒಳಗೆ ಮಾತ್ರ ಇಂಟರ್‌ನೆಟ್ ವೇಗ ಬಹಳ ಕಡಿಮೆ ಇದೆ ಎಂದು ನಿಮ್ಮ ಚಿಂತೆಯೇ?. ಹಾಗಾದರೆ, ಇನ್ಮುಂದೆ ಚಿಂತೆ ಬಿಡಿ. ಮನೆಯ ಒಳಗೆ ನೆಟ್‌ವರ್ಕ್ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ ಎಂದರೆ, ನೀವೇ ಈಗ ಒಂದು ಸಿಗ್ನಲ್ ಬೂಸ್ಟರ್ ಅನ್ನು ಉಚಿತವಾಗಿ ತಯಾರಿಸಿಕೊಳ್ಳಬಹುದು.

ಹೌದು, ಸಿಗ್ನಲ್ ಬೂಸ್ಟರ್ ಖರೀದಿಸಲು ಹೆಚ್ಚು ಹಣವನ್ನು ವೆಚ್ಚ ಮಾಡದಂತೆಯೇ ಮೆನೆಯಲ್ಲಿಯೇ ಸಿಗ್ನಲ್ ಬೂಸ್ಟರ್ ತಯಾರಿಸಬಹುದು. ಇದಕ್ಕಾಗಿ ನಿಮಗೆ ಒಂದು ಲೋಹದಿಂದ ಮಾಡಿದ ಡಬ್ಬ ಮತ್ತು ಪೆನ್ಸಿಲ್ ಸಾಕಾಗುತ್ತದೆ. ಬೋರ್ನ್‌ವಿಟಾದಂತಹ ಲೋಹದ ಡಬ್ಬಗಳು ನಿಮ್ಮ ಮನೆಯಲ್ಲಿ ಇದ್ದರೆ, ಕೆಲವೇ ನಿಮಿಷಗಳಲ್ಲಿ ಒಂದು ಬೂಸ್ಟರ್ ಅನ್ನು ನೀವು ನಿರ್ಮಿಸಬಹುದು.

ನೀವೇ ಉಚಿತ ಸಿಗ್ನಲ್ 'ಬೂಸ್ಟರ್' ತಯಾರಿಸಿ..ಮನೆಯ ಒಳಗೆ ನೆಟ್‌ವರ್ಕ್ ಹೆಚ್ಚಿಸಿ!!

ನೀವೇ ತಯಾರಿಸಿದ ಈ ಒಂದು ಡಬ್ಬದಿಂದ ನಿಮ್ಮ ಮನೆಯ ಒಳಗೆಯೇ ಪ್ರಸ್ತುತ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಇಂಟರ್‌ನೆಟ್ ಡೌನ್‌ಲೋಡ್ ಮಾಡಬಹುದು.! ಹಾಗಾದರೆ, ಕೇವಲ ಒಂದು ಲೋಹದ ಡಬ್ಬ ಮತ್ತು ಪೆನ್ಸಿಲ್ದಿಂದ ನೀವೇ ಒಂದು ಸಿಗ್ನಲ್ ಬೂಸ್ಟರ್ ಅನ್ನು ಉಚಿತವಾಗಿ ತಯಾರಿಸುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸಿಗ್ನಲ್ ಬೂಸ್ಟರ್ ಮಾಡುವ ವಿಧಾನ! 1

ಸಿಗ್ನಲ್ ಬೂಸ್ಟರ್ ಮಾಡುವ ವಿಧಾನ! 1

ಮನೆಯಲ್ಲಿ ಇರುವ ಒಂದು ಹಳೆಯ ಡಬ್ಬ ತೆಗೆದುಕೊಳ್ಳಿ.ಈ ಡಬ್ಬವನ್ನು ಉದ್ದಕ್ಕೆ ಕತ್ತರಿಸಿ ಎರಡು ಭಾಗವನ್ನಾಗಿ ಮಾಡಿ. ಅದು ಸಿಲಿಂಡರಿನಾಕೃತಿಯಲ್ಲಿರಬೇಕು ಹಾಗೂ ಅದು ಲೋಹದಿಂದ ಮಾಡಿರಬೇಕು. ಅಮುಲ್ ಅಥವಾ ಬೋರ್ನ್‌ವಿಟಾ ಡಬ್ಬ ಈ ಕೆಲಸಕ್ಕೆ ಹೇಳಿ ಮಾಡಿಸಿದಂತಿದೆ. ನಂತರ ಅದನ್ನು ಮನೆಯ ಯಾವುವಾದರೂ ಒಂದು ಜಾಗದಲ್ಲಿ ಇಡಿ.

ಸಿಗ್ನಲ್ ಬೂಸ್ಟರ್ ಮಾಡುವ ವಿಧಾನ! 2

ಸಿಗ್ನಲ್ ಬೂಸ್ಟರ್ ಮಾಡುವ ವಿಧಾನ! 2

ಡಬ್ಬವನ್ನು ಉದ್ದಕ್ಕೆ ಕತ್ತರಿಸಿ ಎರಡು ಭಾಗವನ್ನಾಗಿ ಮಾಡಿ. ನಂತರ ಒಂದು ಭಾಗವನ್ನು ಮನೆಯಲ್ಲಿ ಬೆಳಕು ಬರುವಂತಹ ಒಂದು ಜಾಗದಲ್ಲಿ ಇಡಿ. ನಂತರ ಯಾವುದಾದರೂ ಹಳೆಯ ಟಿವಿ ಕೇಬಲ್ ಅಥವಾ ಒಂದು ತಾಮ್ರದ ತಂತಿ ಮನೆಯಲ್ಲಿದ್ದರೆ, ಅದನ್ನು ಕತ್ತರಿಸಿದ ಡಬ್ಬಕ್ಕೆ ಸಿಕ್ಕಿಸಿ ಮನೆಯ ಹೊರಗೆ ಕನೆಕ್ಷನ್ ಹೋಗುವಂತೆ ಜೋಡಿಸಿ.

ಮತ್ತೊಂದು ತುದಿಯಲ್ಲಿ ಪೆನ್ಸಿಲ್!

ಮತ್ತೊಂದು ತುದಿಯಲ್ಲಿ ಪೆನ್ಸಿಲ್!

ತಾಮ್ರದ ತಂತಿಯ ಒಂದು ತುದಿಯನ್ನು ಡಬ್ಬಕ್ಕೆ ಮತ್ತು ಮತ್ತೊಂದು ತುದಿಯನ್ನು ಪೆನ್ಸಿಲ್‌ಗೆ ಸೇರಿಸಿ. ಪೆನ್ಸಿಲ್‌ನಲ್ಲಿರುವ ಗ್ರಾಫೈಲ್ ಲೆಡ್‌ಗೆ ತಾಮ್ರದ ತಂತಿ ಸೆರಿಕೊಂಡಂತೆ ಇರಲಿ. ನಂತರ ಆ ಪೆನ್ಸಿಲ್ ಅನ್ನು ಮನೆಯ ಹೊರಭಾಗಕ್ಕೆ ಇಟ್ಟುಬಿಡಿ.(ನೆನಪಿರಲಿ: ನೀವು ಪೆನ್ಸಿಲ್ ಇಡುವ ಜಾಗ ಹೆಚ್ಚು ನೆಟ್‌ವರ್ಕ್ ಹೊಂದಿದೆ ಎಂಬುದನ್ನು ಗಮನಿಸಿ)

ಏನಿದು ತಂತ್ರಜ್ಞಾನ?

ಏನಿದು ತಂತ್ರಜ್ಞಾನ?

ಮನೆಯಲ್ಲಿಯೇ ಬೂಸ್ಟರ್ ತಯಾರಿಸುವುದು ಚಿಕ್ಕದಾದ ತಂತ್ರವಷ್ಟೆ. ಅರ್ಧ ಸಿಲಿಂಡರಿನಾಕೃತಿಯ ಲೋಹದ ಡಬ್ಬವು ತನ್ನ ಮೈಮೇಲೆ ಬಿದ್ದ ಕಿರಣಗಳನ್ನು ತನ್ನ ಕೇಂದ್ರ ಭಾಗಕ್ಕೆ ಪ್ರತಿಫಲಿಸಿ ಒಂದು ಕೇದ್ರದಲ್ಲಿ ಕೇಂದ್ರೀಕರಣಗೊಳ್ಳುವಂತೆ ಮಾಡುತ್ತದೆ. ಜೊತೆಗೆ ಪೆನ್ಸಿಲ್ ಸಹಾಯದಿಂದ ಹೆಚ್ಚು ನೆಟ್‌ವರ್ಕ್ ಅನ್ನು ತನ್ನೆಡೆಗೆ ಸೆಳೆದುಕೊಳ್ಳುವುದರಲ್ಲಿ ಇದು ಸಫಲವಾಗುತ್ತದೆ.

ಮೂರು ಪಟ್ಟು ಹೆಚ್ಚು ಇಂಟರ್‌ನೆಟ್!

ಮೂರು ಪಟ್ಟು ಹೆಚ್ಚು ಇಂಟರ್‌ನೆಟ್!

ಮನೆಯಲ್ಲಿಯೇ ತಯಾರಿಸಿದ ಒಂದು ಬೂಸ್ಟರ್ ಸಹಾಯದಿಂದ ಅಲ್ಲಿ ನಿಮಗೆ ಲಭ್ಯವಿರುವ ಇಂಟರ್‌ನೆಟ್ಗಿಂತ ಮೂರು ಪಟ್ಟು ವೇಗದ ಇಂಟರ್‌ನೆಟ್ ನಿಮಗೆ ಸಿಗಲಿದೆ. ಅರ್ಧ ಸಿಲಿಂಡರಿನಾಕೃತಿಯ ಲೋಹದ ಡಬ್ಬದ ಒಳಗೆ ನಿಮ್ಮ ವೈಫೈ ಡಿವೈಸ್ ಅನ್ನು ಇಟ್ಟರೆ ನಿಮಗೆ ವೇಗದ ಇಂಟರ್‌ನೆಟ್ ಲಭ್ಯವಾಗುವುದನ್ನು ನೀವು ಕಣ್ಣಾರೆ ನೋಡಬಹುದು.

ನೆಟ್‌ ಸ್ಲೋ ಇದಿಯಾ? ಈ ಟ್ರಿಕ್ಸ್ ಬಳಸಿ ಸೂಪರ್ ಸ್ಪೀಡ್‌ ಇಂಟರ್‌ನೆಟ್‌ ಆನಂದಿಸಿ..!

ನೆಟ್‌ ಸ್ಲೋ ಇದಿಯಾ? ಈ ಟ್ರಿಕ್ಸ್ ಬಳಸಿ ಸೂಪರ್ ಸ್ಪೀಡ್‌ ಇಂಟರ್‌ನೆಟ್‌ ಆನಂದಿಸಿ..!

ಸದ್ಯದ ಪರಿಸ್ಥಿತಿಯಲ್ಲಿ ನಮ್‌ ಜನ ಊಟ ಬೇಕಾದ್ರೇ ಬಿಟ್ಟಿರ್ತಾರೆ ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್ ಮಾತ್ರ ಬಿಟ್ಟಿರಲ್ಲ. ಮಾನವನ ಮೂಲ ಅಗತ್ಯತೆಗಳಾದ ಆಶ್ರಯ, ಊಟ, ಬಟ್ಟೆ ಜತೆಯಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್‌ ಸೇರಿ ಬಹಳಷ್ಟು ದಿನಗಳಾಗಿವೆ. ನಾವೀಗಾಗ್ಲೆ GPRSನಿಂದ 2Gಗೆ 2Gಯಿಂದ 3Gಗೆ ಬಂದಿದ್ದಾಯ್ತು, ಇಲ್ಲಿಂದ 4G ಬಳಸ್ತಿದಿವಿ ನೆಕ್ಸ್ಟ್ 5G ಸರದಿ.

ಎಲ್ಲಾ ನೆಟ್‌ವರ್ಕ್‌ ಸೇವಾದಾತರು ನಮ್ಮದೇ ಸ್ಪೀಡ್‌ ಇಂಟರ್‌ನೆಟ್‌ ಎಂದು ತರಹೇವಾರಿ ಜಾಹೀರಾತು ನೀಡುತ್ತಿವೆ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ಬಾರಿ 2Gಗಿಂತ ಕಡಿಮೆ ವೇಗದಲ್ಲಿ ಇಂಟರ್‌ನೆಟ್‌ ಬಳಸ್ತಿರ್ತಿವಿ. ನೆಟ್‌ ಸ್ಪೀಡ್‌ ಆಗ್ಬೇಕೆಂದರೆ ಏನ್ ಮಾಡ್ಬೇಕು ಅಂತ ಎಲ್ಲರನ್ನೂ ಕೇಳಿರ್ತಿವಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್‌ ಸ್ಪೀಡ್ ಹೆಚ್ಚಬೇಕಾದರೆ ನೀವು ಸ್ವಲ್ಪ ಜಾಣ್ಮೆ ಪ್ರದರ್ಶಿಸಬೇಕು. ಕೆಲವೊಂದು ಸ್ಮಾರ್ಟ್‌ ಟ್ರಿಕ್ಸ್‌ ಉಪಯೋಗಿಸಬೇಕು. ಅಂತಹ ಟ್ರಿಕ್ಸ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಈ ಟ್ರಿಕ್ಸ್‌ಗಳನ್ನು ಉಪಯೋಗಿಸಿ ಸೂಪರ್‌ ಸ್ಪೀಡ್‌ನಲ್ಲಿ ಇಂಟರ್‌ನೆಟ್‌ ಬಳಸಿ.

1. ಮೊದಲು ನಿಮ್ಮ ನೆಟ್‌ವರ್ಕ್‌ ಸೆಟ್ಟಿಂಗ್ಸ್‌ ಪರಿಶೀಲಿಸಿ

1. ಮೊದಲು ನಿಮ್ಮ ನೆಟ್‌ವರ್ಕ್‌ ಸೆಟ್ಟಿಂಗ್ಸ್‌ ಪರಿಶೀಲಿಸಿ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ವರ್ಕ್‌ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದರಿಂದ ನೆಟ್‌ ವೇಗದಲ್ಲಿನ ದೋಷ ಪರಿಹರಿಸಬಹುದು. ಅನೇಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ವರ್ಕ್ ಸೆಟ್ಟಿಂಗ್‌ಗಳು ಜೆನರಲ್‌ ಸೆಟ್ಟಿಂಗ್‌ಗಳಡಿಯಲ್ಲಿರುತ್ತವೆ. ಈ ಸೆಟ್ಟಿಂಗ್‌ಗಳು ಮೊಬೈಲ್‌ ಕಂಪನಿಯ ಆಧಾರದ ಮೇಲೆ ಬದಲಾಗಬಹುದು. ಈ ಸೆಟ್ಟಿಂಗ್‌ನಲ್ಲಿ ನಿಮ್ಮ ನೆಟ್‌ವರ್ಕ್ ವೇಗ ನಿರ್ಬಂಧಿತವಾಗಿದೆಯೇ ಮತ್ತು ಸರಿಯಾದ ನೆಟ್‌ವರ್ಕ್‌ಗೆ ಸಂಪರ್ಕವಾಗಿದೆಯೇ ಎಂದು ಪರಿಶೀಲಿಸಿ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಸ್ವಯಂಚಾಲಿತ ನೆಟ್‌ವರ್ಕ್‌ ಆಯ್ಕೆ ಹೊಂದಿರುತ್ತವೆ. ಮ್ಯಾನುಯಲ್ ನೆಟ್‌ವರ್ಕ್ ಆಯ್ಕೆ ಮಾಡಿಕೊಂಡು ನಿಮ್ಮ ನೆಟ್‌ವರ್ಕ್ ಆಪರೇಟರ್‌ನ್ನು ನೀವೇ ಆಯ್ಕೆ ಮಾಡಿ. ಇದನ್ನು ಮಾಡುವ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 4G LTE ಸಕ್ರಿಯವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

2. ಕ್ಯಾಷೆ ಡೇಟಾ ಡಿಲೀಟ್‌ ಮಾಡಿ

2. ಕ್ಯಾಷೆ ಡೇಟಾ ಡಿಲೀಟ್‌ ಮಾಡಿ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಲಾಗಿನ್, ಸ್ಥಳ ಮುಂತಾದ ಮಾಹಿತಿಯನ್ನು ಸಂಗ್ರಹಿಸಿಕೊಂಡು ಕ್ಯಾಷೆ ಮೆಮೊರಿಯಲ್ಲಿ ಇಟ್ಟುಕೊಂಡಿರುತ್ತವೆ. ಈ ರೀತಿ ಸಂಗ್ರಹವಾದ ಕ್ಯಾಷೆ ಮೆಮೊರಿಯಲ್ಲಿ ಅನಗತ್ಯ ಮಾಹಿತಿಯು ಸಂಗ್ರಹವಾಗಿ ಇಂಟರ್‌ನೆಟ್‌ ವೇಗವನ್ನು ಕಡಿಮೆಗೊಳಿಸುತ್ತವೆ. ಈ ರೀತಿ ಸಂಗ್ರಹವಾದ ಕ್ಯಾಷೆ ಮೆಮೊರಿಯನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಕಾರ್ಯಕ್ಷಮತೆ ಹೆಚ್ಚಿಸಬಹುದಾಗಿದ್ದು, ಇನ್-ಟರ್ನ್ ಬ್ರೌಸಿಂಗ್ ವೇಗವನ್ನು ಗಮನಾರ್ಹವಾಗಿ ಸುಧಾರಿಸಬಹುದಾಗಿದೆ.

3. ಆಡ್-ಬ್ಲಾಕರ್ ಬಳಸಿ

3. ಆಡ್-ಬ್ಲಾಕರ್ ಬಳಸಿ

ನೆಟ್‌ ಬ್ರೌಸ್ ಮಾಡುವಾಗ ಬರುವ ಜಾಹೀರಾತುಗಳು ಬ್ರೌಸಿಂಗ್ ಡೇಟಾದ ಹೆಚ್ಚಿನ ಭಾಗವನ್ನು ಬಳಸುತ್ತವೆ. ಇದರಿಂದ ಪೇಜ್‌ ಡೌನ್‌ಲೋಡ್‌ ಆಗುವುದು ತಡವಾಗುತ್ತದೆ. ಇದು ನೆಟ್‌ ಸ್ಲೋ ಆಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ. ಇದರಿಂದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ವೇಗವು ಸಹ ಕುಂದುತ್ತದೆ. ಆದ್ದರಿಂದ ಆಡ್‌ ಬ್ಲಾಕರ್‌ಗಳನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಈ ಆಯ್ಕೆಯನ್ನು ಕೆಲವು ಬ್ರೌಸರ್‌ಗಳು ತಮ್ಮ ಸೆಟ್ಟಿಂಗ್‌ನಲ್ಲಿಯೇ ನೀಡಿರುತ್ತವೆ. ಇನ್ನು ಕೆಲವುಗಳಿಗೆ ಪ್ಲೇ ಸ್ಟೋರ್‌ನಿಂದ ಆಡ್ ಬ್ಲಾಕರ್‌ ಆಪ್ ಡೌನ್‌ಲೋಡ್ ಮಾಡಿಕೊಂಡು ಜಾಹೀರಾತುಗಳನ್ನು ನಿರ್ಬಂಧಿಸಬಹುದು. ಇದರಿಂದ ಖಂಡಿತ ನೆಟ್‌ ವೇಗ ಹೆಚ್ಚುತ್ತದೆ.

4.ಉಪಯೋಗಿಸದ ಆಪ್‌ಗಳನ್ನು ಅನ್ಇನ್‌ಸ್ಟಾಲ್ ಮಾಡಿ

4.ಉಪಯೋಗಿಸದ ಆಪ್‌ಗಳನ್ನು ಅನ್ಇನ್‌ಸ್ಟಾಲ್ ಮಾಡಿ

ಕುತೂಹಲದಿಂದ ಹೊಸ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಒಂದೇರಡು ಬಾರಿ ಬಳಸಿ ಆ ಆಪ್‌ಗಳನ್ನೇ ಮರೆತು ಬಿಡುತ್ತೇವೆ. ಇಂತಹ ಉಪಯೋಗಿಸದ ಹಲವು ಆಪ್‌ಗಳಿಂದ ನಿಮ್ಮ ಸ್ಮಾರ್ಟ್‌ಫೋನ್‌ ವೇಗ ಕುಸಿಯುತ್ತದೆ. ಈ ಆಪ್‌ಗಳು ಅನಗತ್ಯ ಸಂಗ್ರಹ ಹಾಗೂ ಕಾರ್ಯನಿರ್ವಹಣೆ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯನಿರ್ವಹಣೆ ವೇಗವನ್ನು ಕುಂಠಿತಗೊಳಿಸುತ್ತವೆ. ಇಂತಹ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ವೇಗ ಹೆಚ್ಚಿಸುವುದಲ್ಲದೇ ನೆಟ್‌ ಬ್ರೌಸಿಂಗ್ ವೇಗವನ್ನು ಸುಧಾರಿಸಲು ನೆರವು ನೀಡುತ್ತದೆ.

5. ವೇಗ ಮತ್ತು ಲೈಟ್‌ ಬ್ರೌಸರ್ ಬಳಸಿ

5. ವೇಗ ಮತ್ತು ಲೈಟ್‌ ಬ್ರೌಸರ್ ಬಳಸಿ

ಇಂಟರ್‌ನೆಟ್ ಬ್ರೌಸ್ ಮಾಡಲು ಹಲವು ಆಪ್‌ಗಳಿವೆ. ಉತ್ತಮವಾದ ವೇಗದಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡಲು ಉತ್ತಮ ಬ್ರೌಸರ್ ಆಯ್ಕೆ ಮಾಡಬೇಕಾದ ಅಗತ್ಯವಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗಂತಾನೇ ವಿಶೇಷವಾಗಿ ನಿರ್ಮಿಸಲಾದ ಅನೇಕ ವೆಬ್ ಬ್ರೌಸರ್‌ಗಳು ಲಭ್ಯವಿವೆ. ಇಂತಹವುಗಳಲ್ಲಿ ವೇಗದ ಮತ್ತು ಲೈಟ್‌ ಆಗಿರುವ ಬ್ರೌಸರ್‌ ಬಳಸಿ. ಇದರಿಂದ ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಒತ್ತಡ ಬರದೇ ವೇಗದ ಬ್ರೌಸಿಂಗ್ ಅನುಭವ ಪಡಯಬಹುದು. ಯುಸಿ ಬ್ರೌಸರ್, ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್‌ನಂತಹ ಆಪ್‌ಗಳು ಉತ್ತಮ ಆಯ್ಕೆಯಾಗಬಹುದು.

6. ಗರಿಷ್ಠ ಡೇಟಾ-ಲೋಡಿಂಗ್ ಆಯ್ಕೆ ಸಕ್ರಿಯಗೊಳಿಸಿ

6. ಗರಿಷ್ಠ ಡೇಟಾ-ಲೋಡಿಂಗ್ ಆಯ್ಕೆ ಸಕ್ರಿಯಗೊಳಿಸಿ

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗಳಲ್ಲಿ ವೈರ್‌ಲೆಸ್‌ ಮತ್ತು ನೆಟ್‌ವರ್ಕ್ ಸೆಟ್ಟಿಂಗ್‌ಗಳ ಅಡಿಯಲ್ಲಿ ನೀವು ಜಿಪಿಆರ್ಎಸ್ ವರ್ಗಾವಣೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಕರೆ ಮಾಡಲು ಮತ್ತು ಡೇಟಾ ಆದ್ಯತೆಯ ಆಯ್ಕೆಯಿದ್ದು, ಡೇಟಾ ಆದ್ಯತೆ ಆಯ್ಕೆಗೆ ಬದಲಾಯಿಸುವುದರಿಂದ ಸುಧಾರಿತ ಇಂಟರ್‌ನೆಟ್ ವೇಗ ಪಡೆಯಬಹುದಾಗಿದೆ.

7. ಸ್ಪೀಡ್‌ ಬೂಸ್ಟರ್‌ಗಳನ್ನು ಬಳಸಿ

7. ಸ್ಪೀಡ್‌ ಬೂಸ್ಟರ್‌ಗಳನ್ನು ಬಳಸಿ

ಎಲ್ಲಾ ಆಪ್‌ಗಳು ಸ್ಮಾರ್ಟ್‌ಫೋನ್‌ಗಳ ವೇಗ ಕಡಿಮೆ ಮಾಡುತ್ತವೆ ಎಂಬ ಸಾಮಾನ್ಯ ಕಲ್ಪನೆ ಅಸಮರ್ಪಕವಾದದ್ದು, ನಿಮ್ಮ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ ಇಂಟರ್‌ನೆಟ್ ವೇಗ ಹೆಚ್ಚಿಸಲು ಹಲವು ಆಪ್‌ಗಳು ಲಭ್ಯವಿವೆ. ಬೇಕಾದರೆ Google Play Storeನಿಂದ ಡೌನ್‌ಲೋಡ್‌ ಮಾಡಿಕೊಂಡು ವೇಗವಾಗಿ ಇಂಟರ್‌ನೆಟ್ ಬಳಸಬಹುದಾಗಿದೆ.

8.ಮತ್ತೊಂದಿಷ್ಟು

8.ಮತ್ತೊಂದಿಷ್ಟು

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಇಂಟರ್‌ನೆಟ್ ವೇಗ ಹೆಚ್ಚಿಸಲು ಇವು ಕೆಲವು ತಂತ್ರಗಳು ಮತ್ತು ಸಲಹೆಗಳಾಗಿವೆ ಅಷ್ಟೇ, ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವ ಇತರ ಹಲವಾರು ಕಾರಣಗಳಿವೆ. ದೋಷಪೂರಿತ ಹಾರ್ಡ್‌ವೇರ್ ಅಥವಾ ಹೊಂದಾಣಿಕೆಯಾಗದ ಸಾಫ್ಟ್‌ವೇರ್ ಸಹ ವೇಗ ಕುಂಠಿತಕ್ಕೆ ಕಾರಣವಾಗಬಹುದು. ಆ ಸಾಧ್ಯತೆಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಲ್ಲದಿದ್ದರೆ ಮೇಲೆ ತಿಳಿಸಿದ ಟ್ರಿಕ್ ಬಳಸಿ ಸೂಪರ್ ಸ್ಪೀಡ್ ಇಂಟರ್‌ನೆಟ್‌ ಬಳಸಬಹುದು.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಈ 10 ಮಾರ್ಗಗಳಿಂದ ಸೂಪರ್ ಸ್ಪೀಡ್ ಆಗುತ್ತದೆ..!

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಈ 10 ಮಾರ್ಗಗಳಿಂದ ಸೂಪರ್ ಸ್ಪೀಡ್ ಆಗುತ್ತದೆ..!

ಆಂಡ್ರಾಯ್ಡ್ ಫೋನ್ ಗಳು ಇತ್ತೀಚೆಗೆ ಪ್ರೊಸೆಸರ್., RAM, ಮತ್ತು ಅಧಿಕ ಸ್ಟೋರೆಜ್ ಸಾಮರ್ಥ್ಯದಿಂದಾಗಿ ಫಾಸ್ಟ್ ಆಗಿ ವರ್ಕ್ ಆಗುತ್ತವೆ. ಆದರೆ ನಮ್ಮಲ್ಲಿ ಹಲವರು ಸ್ಮಾರ್ಟ್ ಫೋನ್ ನಲ್ಲಿ cached ಡಾಟಾ, ಅಗತ್ಯವಿಲ್ಲದ ಫೈಲ್ ಗಳು, ಫೋಲ್ಡರ್ ಗಳನ್ನು ತುಂಬಿಸಿಕೊಂಡು ಅದು ವೇಗವಾಗಿ ಕೆಲಸ ಮಾಡದಂತೆ ಮಾಡಿಕೊಂಡು ಬಿಡುತ್ತಾರೆ.

ಅದಕ್ಕೆ ಪರಿಹಾರವಾಗಿ ಹೆಚ್ಚಿನವರು ಆಂಡ್ರಾಯ್ಡ್ ಆಂಟಿ ವೈರಸ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ಬಿಡುತ್ತಾರೆ. ಒಂದೇ ಟ್ಯಾಪ್ ನಲ್ಲಿ ಸುಲಭದ ಪರಿಹಾರ ಇದು ಎಂದು ಅವರು ಅಂದುಕೊಂಡಿರುತ್ತಾರೆ. ಆದರೆ ನಾವು ನಿಮಗೆ ಇದನ್ನು ಹೊರತು ಪಡಿಸಿ ಅನೇಕ ಹಲವು ವಿಧಾನಗಳಿಂದಾಗಿ ನಿಮ್ಮ ಸ್ಮಾರ್ಟ್ ಪೋನ್ ನ್ನು ಇನ್ನಷ್ಟು ವೇಗ ಗೊಳಿಸಿಕೊಳ್ಳಬಹುದು ಎಂದು ಹೇಳಿದರೆ ನಿಮಗೆ ನಂಬಿಕೆ ಇದಿಯಾ...? ಹಾಗಾದರೆ ಏನು ಮಾಡಬೇಕು ಎಂದು ಕೇಳುತ್ತಿದ್ದೀರಾ.. ಮುಂದೆ ಓದಿ..

1. ಹೋಮ್ ಸ್ಕ್ರೀನ್ ಸ್ವಚ್ಛಗೊಳಿಸಿ

1. ಹೋಮ್ ಸ್ಕ್ರೀನ್ ಸ್ವಚ್ಛಗೊಳಿಸಿ

ಹೋಮ್ ಸ್ಕ್ರೀನ್ ನಲ್ಲಿ ತುಂಬಿಸಿಕೊಳ್ಳುವುದು ಸರಿಯಲ್ಲ. ಪ್ರತಿಯೊಂದು ಆಪ್ ಗಳ ಶಾರ್ಟ್ ಕಟ್ ಗಳನ್ನು ಹೋಮ್ ಸ್ಕ್ರೀನ್ ನಲ್ಲಿ ತುಂಬಿಸಿಕೊಳ್ಳಬೇಡಿ. ವಾತಾವರಣ, ವಾರ್ತೆಗಳು ಇವೆಲ್ಲವೂ ಯಾವಾಗಲೂ ಅಪ್ ಡೇಟ್ ಆಗುತ್ತಲೇ ಇರುವ ಆಪ್ ಗಳಾಗಿರುತ್ತವೆ. ಇವುಗಳು ಹೋಮ್ ಸ್ಕ್ರೀನ್ ನಲ್ಲಿ ಇರುವುದರಿಂದ ನೀವು ಹೋಮ್ ಸ್ಕ್ರೀನ್ ಅನ್ ಲಾಕ್ ಮಾಡಿದಾಗಲೆಲ್ಲ ಇವು ಅಪ್ ಡೇಟ್ ಆಗಬೇಕಾಗುತ್ತದೆ. ಆಗ ಸಹಜವಾಗಿ ನಿಮ್ಮ ಫೋನ್ ಸ್ಲೋ ಆದಂತೆ ನಿಮಗೆ ಭಾಸವಾಗುತ್ತೆ. ಆದಷ್ಟು ಹೋಮ್ ಸ್ಕ್ರೀನ್ ನಲ್ಲಿ ಇವುಗಳನ್ನು ಇಟ್ಟುಕೊಳ್ಳಬೇಡಿ.

2. ಡಾಟಾ ಸೇವರ್ ಮೋಡ್ ಎನೇಬಲ್ ಮಾಡಿ

2. ಡಾಟಾ ಸೇವರ್ ಮೋಡ್ ಎನೇಬಲ್ ಮಾಡಿ

ಕ್ರೋಮ್ ಬ್ರೌಸರ್ ನಲ್ಲಿ ಡಾಟಾ ಸೇವರ್ ಮೋಡ ನ್ನು ಅನೇಬಲ್ ಮಾಡಿ ಇರಿ. ಯಾಕೆಂದರೆ ಇದು ನಿಮ್ಮ ಪೇಜನ್ನು ಕಂಪ್ರೆಸ್ ಮಾಡುತ್ತದೆ. ಕಡಿಮೆ ಡಾಟಾದಲ್ಲಿ ಪೇಜ್ ಗಳು ಲೋಡ್ ಆಗಿ ಫಾಸ್ಟ್ ಆಗುತ್ತದೆ. ಆದ್ರೆ ಸ್ವಲ್ಪ ಇಮೇಜ್ ಮತ್ತು ವೀಡಿಯೋ ಕ್ವಾಲಿಟಿಯಲ್ಲಿ ನೀವು ಸ್ವಲ್ಪ ಕಾಂಪ್ರಮೈಜ್ ಆಗಬೇಕಾಗುತ್ತದೆ ಮತ್ತು ಡಾಟಾ ಸ್ಪೀಡ್ ನಲ್ಲೂ ಸ್ವಲ್ಪ ನೀವು ಸಹಿಸಿಕೊಳ್ಳಬೇಕಾಗಬಹುದು.

3. ಆಟೋ ಸಿಂಕ್ ಆಫ್ ಮಾಡಿ

3. ಆಟೋ ಸಿಂಕ್ ಆಫ್ ಮಾಡಿ

ಇತ್ತೀಚೆಗಿನ ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆ ಇದ್ದೇ ಇರುತ್ತೆ. ನೀವು ಜಸ್ಟ್ ಅಲ್ಲಿಗೆ ಹೋದರೆ ಸಾಕು, ನಿಮ್ಮ ಆಪ್ ಗಳು ಬ್ಯಾಕ್ ಗ್ರೌಂಡ್ ನಲ್ಲಿ ಹೇಗೆ ಆಟೋ ಸಿನ್ಕ್ರೋನೈಜೇಷನ್ ಆಗಬೇಕು ಎಂಬುದು ತಿಳಿಯುತ್ತದೆ.ನೀವು ಯಾವ ಆಪ್ ಗೆ ಆಟೋ ಸಿನ್ಕ್ರೋನೈಜೇಷನ್ ಬೇಕಾಗಿಲ್ಲ ಎಂದು ಬಯಸುತ್ತೀರೋ ಅದನ್ನು ಸ್ವಿಚ್ ಆಪ್ ಮಾಡಬಹುದು.

4. ಟಾಸ್ಕ್ ಕಿಲ್ಲರ್ಸ್ ಗಳು ನಿಮ್ಮ ಆಪ್ ಗಳನ್ನು ನಿಧಾನಗೊಳಿಸುತ್ತೆ

4. ಟಾಸ್ಕ್ ಕಿಲ್ಲರ್ಸ್ ಗಳು ನಿಮ್ಮ ಆಪ್ ಗಳನ್ನು ನಿಧಾನಗೊಳಿಸುತ್ತೆ

ಎಸ್ , ನೀವು ಇದನ್ನು ಕೇಳಿರಬಹುದು. ಟಾಸ್ಕ್ ಕಿಲ್ಲಿಂಗ್ ಆಪ್ ಗಳು ಆಪ್ ಆರಂಭವಾಗುವುದನ್ನು ನಿಧಾನಗೊಳಿಸುತ್ತೆ. ಇದು ಯಾಕೆಂದರೆ ಕೆಲವು ಆಪ್ ಗಳನ್ನು. ಅವು ಯಾವಾಗಲಾದರೂ ಬ್ಯಾಕ್ ಗ್ರೌಂಡ್ ನಲ್ಲಿ ಸ್ಥಗಿತಗೊಂಡರೆ ಆಂಡ್ರಾಯ್ಡ್ ಗಳು ಮ್ಯಾನೇಜ್ ಮಾಡುತ್ತಿರುತ್ತೆ, ಯಾವಾಗ ಟಾಸ್ಕ್ ಕಿಲ್ಲರ್ಸ್ ಗಳು ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುವ ಆಪ್ ನ್ನು ಶಟ್ಡೌನ್ ಮಾಡಿದಾಗ, ಪುನಃ ಮೊದಲಿನಿಂದ ಬೂಟ್ ಮಾಡಲು ಸಮಯ ತೆಗೆದುಕೊಳ್ಳುತ್ತೆ. ಕೇವಲ ಸಮಯ ಮಾತ್ರವಲ್ಲ ಹೆಚ್ಚು ಬ್ಯಾಟರಿಯನ್ನು ಬಯಸುತ್ತೆ.

5. ಸ್ಮಾರ್ಟ್ ಫೋನ್ ಪ್ರೊಸೆಸರ್ ಅನ್ನು ಓವರ್ ಲಾಕ್ ಮಾಡಿ

5. ಸ್ಮಾರ್ಟ್ ಫೋನ್ ಪ್ರೊಸೆಸರ್ ಅನ್ನು ಓವರ್ ಲಾಕ್ ಮಾಡಿ

ಒಂದು ವೇಳೆ ನಿಮಗೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ರೂಟ್ ಮಾಡುವುದು ಹೇಗೆ ಎಂದು ತಿಳಿದಿದ್ದರೆ ಮತ್ತು ನಿಮ್ಮಲ್ಲಿ ಒಳ್ಳೆಯ ಓವರ್ ಕ್ಲಾಕಿಂಗ್ ಆಪ್ ಇದ್ದರೆ, snappier UI ಅನುಭವ ಪಡೆಯಲು ನೀವು ಸಿದ್ಧರಾಗಿರಿ.,. ಇಂತಹ ಕೆಲವು ವಿಚಾರಗಳ ನಿಮ್ಮ ಮೊಬೈಲನ್ನು ಹೆಚ್ಚು ಬಿಸಿಯಾಗುವಂತೆ ಮಾಡಬಹುದು ಮತ್ತು ಬೇಗನೆ ಬ್ಯಾಟರಿ ಖಾಲಿಯಾಗುವಂತೆಯೂ ಮಾಡಬಹುದು.

6. cached ಡಾಟಾ ಕ್ಲೀನ್ ಮಾಡಿ

6. cached ಡಾಟಾ ಕ್ಲೀನ್ ಮಾಡಿ

ಇದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಮೆಥೆಡ್ ಆಗಿದೆ. ನಿಮ್ಮ ಫೋನಿನಲ್ಲಿರುವ ಜಂಕ್ ಫೈನ್ ಗಳನ್ನು ರಿಮೂವ್ ಮಾಡಿ,. ಇದು ನಿಮ್ಮ ಸಾರ್ಟ್ ಫೋನ್ ಕೆಲವು ಟಾಸ್ಕ್ ಗಳನ್ನು ವೇಗವಾಗಿ ಮಾಡಲು ನೆರವು ನೀಡುತ್ತೆ. ಇದಕ್ಕಾಗಿ ನಿಮಗೆ ಹಲವು ಬಿಲ್ಟ್ ಇನ್ ಆಪ್ ಗಳು ಲಭ್ಯವಾಗುತ್ತೆ.

7. ಬ್ಯಾಕ್ ಗ್ರೌಂಡ್ ನಲ್ಲಿ ಆಪ್ಸ್ ರನ್ ಆಗುವುದನ್ನು ನಿಲ್ಲಿಸಿ

7. ಬ್ಯಾಕ್ ಗ್ರೌಂಡ್ ನಲ್ಲಿ ಆಪ್ಸ್ ರನ್ ಆಗುವುದನ್ನು ನಿಲ್ಲಿಸಿ

ನಿಮ್ಮ ಫೋನಿನ ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುವ ಕೆಲವು ಆಪ್ ಗಳನ್ನು ಡಿಆಕ್ಟಿವೇಟ್ ಮಾಡಿ. ನೀವು ಪದೇ ಪದೇ ಬಳಸದೇ ಇರುವ ಆಪ್ ಗಳನ್ನು ಕ್ಲಿಯರ್ ಮಾಡಿ., ಇದು RAM ನ್ನು ಫ್ರೀ ಆಗಿರುತ್ತೆ ಮತ್ತು ಪ್ರೊಸೆಸರ್ ಗೆ ಲೋಡ್ ಆಗುವುದು ತಪ್ಪುತ್ತೆ. ಇದು ಇತರೆ ಆಪ್ ಗಳು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತೆಯ. ಇದಕ್ಕಾಗಿ ನಿಮಗೆ ಹಲವು ಥರ್ಡ್ ಪಾರ್ಟಿ ಆಪ್ ಗಳೂ ಕೂಡ ಲಭ್ಯವಾಗುತ್ತೆ.

8. ನಿಮ್ಮದೇ ಆದ ROM ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ

8. ನಿಮ್ಮದೇ ಆದ ROM ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ

ನೀವು ಒಂದು ವೇಳೆ ಪ್ರೊಗ್ರಾಮರ್ ಆಗಿದ್ದು, ನಿಮಗೆ ರೂಟಿಂಗ್ ನಲ್ಲಿ ಉತ್ತಮ ಅನುಭವವಿದ್ದರೆ, ಕಸ್ಟಮ್ rom ಇನ್ಸ್ಟಾಲ್ ಮಾಡಲು ಪ್ರಯತ್ನಿಸಿ. ಇದರಿಂದಾಗಿ ನೀವು ಕೇವಲ ಹೊಸ ವೈಶಿಷ್ಟ್ಯಗಳ ಬಗ್ಗೆ ಹೋಲ್ಡ್ ಇಟ್ಟುಕೊಳ್ಳುವುದು ಮಾತ್ರವಲ್ಲ, ಒಂದು ವೇಳೆ ನಿಮ್ಮ ಆಂಡ್ರಾಯ್ಡ್ ಬೆಂಬಲಿಸದೇ ಇದ್ದರೂ ಕೂಡ ಹೊಸ ಆಂಡ್ರಾಯ್ಡ್ ವರ್ಷನ್ ನಿಮಗೆ ಲಭ್ಯವಾಗುತ್ತೆ.

9. OS ಅನ್ನು ಅಪ್ ಟು ಡೇಟ್ ಇಟ್ಟಿರಿ

9. OS ಅನ್ನು ಅಪ್ ಟು ಡೇಟ್ ಇಟ್ಟಿರಿ

ನಿಮ್ಮ ಸ್ಮಾರ್ಟ್ ಫೋನ್ ಇನ್ನೂ ಕೂಡ os ಅಪ್ ಗ್ರೇಡ್ ಸೈಕಲ್ ನಲ್ಲೇ ಇದ್ದರೆ. ಲೇಟೆಸ್ಟ್ ವರ್ಷನ್ನು ಬಿಡುಗಡೆಗೊಂಡ ಕೂಡಲೇ ಅಪ್ ಡೇಟ್ ಮಾಡಿ. ಇದು ನಿಮ್ಮ ಹಳೆಯ ವರ್ಷನ್ ನ ಬಗ್ ಗಳಿಂದ ದೂರವಿರಿಸುತ್ತೆ ಮತ್ತು ಸ್ಮಾರ್ಟ್ ಫೋನ್ ನ್ನು ಹೊಸತರಂತೆ ಮಾಡ, ಹಲವು ಸಮಸ್ಯೆಗಳನ್ನು ಪರಿಹರಿಸಿ, ನಿಮಗೆ ಹೆಚ್ಚು ಆರಾಮ ಒದಗಿಸಿ, ಬಳಕೆ ಯೋಗ್ಯವಾಗುವಂತೆ ಮಾಡುತ್ತೆ.

10. ಯಾವುದೂ ವರ್ಕ್ ಆಗದೇ ಇದ್ದರೆ, ಫ್ಯಾಕ್ಟರಿ ರಿಸೆಟ್ ಮಾಡುವ ಮಾರ್ಗವಿದೆ.

10. ಯಾವುದೂ ವರ್ಕ್ ಆಗದೇ ಇದ್ದರೆ, ಫ್ಯಾಕ್ಟರಿ ರಿಸೆಟ್ ಮಾಡುವ ಮಾರ್ಗವಿದೆ.

ಇದು ನಿಮ್ಮ ಕೊನೆಯ ಪ್ರಯತ್ನವಾಗಬಹುದು. ನೀವು ರೂಟಿಂಗ್ ನಲ್ಲಿ ಅಪರಿಚಿತರಾಗಿದ್ದರೆ, ನಿಮ್ಮ ಆಂಡ್ರಾಯ್ಡ್ ಅಫೀಶಿಯಲ್ ಆಗಿಲ್ಲದೇ os ಅಪ್ ಡೇಟ್ ಸೈಕಲ್ ಇಲ್ಲದೇ ಇದ್ದರೆ ,ಥರ್ಡ್ ಪಾರ್ಟಿ ಆಪ್ ಗಳನ್ನು ನಿಮ್ಮ ಡಾಟಾ ಕ್ಲಿಯರೆನ್ಸ್ ಗೆ ನೀವು ಬಳಸಲು ಇಚ್ಛಿಸದೇ ಇದ್ದರೆ, ನಿಮಗಿರುವ ಕೊನೆಯ ಆಯ್ಕೆ ಫ್ಯಾಕ್ಟರಿ ರಿಸೆಟ್. ನಿಮ್ಮ ಸೆಟ್ಟಿಂಗ್ಸ್ ಪೇಜಿನಲ್ಲಿ ನೀವಿದನ್ನು ಗಮನಿಸಬಹುದು.. ಇದನ್ನು ಮಾಡುವ ಮುನ್ನ ನಿಮ್ಮ ಡಾಟಾ ಬ್ಯಾಕ್ ಅಪ್ ಪಡೆದುಕೊಂಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಂಡಿರಿ ಅಷ್ಟೇ..

Most Read Articles
Best Mobiles in India

English summary
Whatever the cause, you can boost that signal and get the maximum. signal, it will connect to the Wi-Fi network and your phone calls and text. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more