ಎಲೆಕ್ಟ್ರಾನಿಕ್ಸ್‌ ವೋಟಿಂಗ್‌ ಮೆಷಿನ್‌ ಕಾರ್ಯ‌ನಿರ್ವ‌‌ಹಣೆ ಹೇಗೆ?

By Ashwath
|

ಏಪ್ರಿಲ್‌ 17ರಂದು ಕರ್ನಾಟದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದರೆ,ಇತ್ತ ಚುನಾವಣಾ ಆಯೋಗ ನ್ಯಾಯಸಮ್ಮತ ಚುನಾವಣೆಗಾಗಿ ಎಲೆಕ್ಟ್ರಾನಿಕ್ಸ್‌ ವೋಟಿಂಗ್‌ ಮೆಷಿನ್‌ನ್ನು ಬಳಸುವುದು ಹೇಗೆ ಎನ್ನುವುದರ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ. ಆರಂಭದಲ್ಲಿ ಮತದಾನ ಮಾಡುವವರಿಗೆ ಇವಿಎಂ ಬಗ್ಗೆ ಸ್ವಲ್ಪ ಗೊಂದಲವಿರುತ್ತದೆ.ಹೀಗಾಗಿ ಎಲೆಕ್ಟ್ರಾನಿಕ್ಸ್‌ ವೋಟಿಂಗ್‌ ಮೆಷಿನ್‌ ಹೇಗೆ ಕೆಲಸ ಮಾಡುತ್ತದೆ?ಇದರ ವಿಶೇಷತೆ? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

1

1


ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ಭಾರತದಲ್ಲಿ ಮೊದಲು ಬಳಕೆಯಾಗಿದ್ದು,1981ರ ಕೇರಳ ಉಪಚುನಾವಣೆಯಲ್ಲಿ.ಉತ್ತರ ಪರವೂರು 50 ಕ್ಷೇತ್ರದಲ್ಲಿ ವೋಟಿಂಗ್‌ ಮೆಷಿನ್‌ ಬಳಕೆಯಾಗಿತ್ತು.ಬಳಿಕ 1998ರ ಲೋಕಸಭಾ ಚುನಾವಣೆಯಲ್ಲಿ ಮಧ್ಯ ಪ್ರದೇಶ 5,ರಾಜಸ್ತಾನ 5, ದೆಹಲಿಯ 6 ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಚುನಾವಣಾ ಆಯೋಗ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ನ್ನು ಬಳಕೆ ಮಾಡಿತು.

2

2


ಬೆಂಗಳೂರಿನ ಬಿ.ಇ.ಎಲ್. ಮತ್ತು ಹೈದರಾಬಾದ್‌‌‌‌ನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ 1989-90ರಲ್ಲಿ ಎಲೆಕ್ಟ್ರಾನಿಕ್ಸ್ ವೋಟಿಂಗ್‌ ಮೆಷಿನ್‌ನ್ನು ಅಭಿವೃದ್ಧಿ ಪಡಿಸಿದೆ.

3

3


ಕ್ಯಾಲ್‌ಕ್ಯೂಲೇಟರ್ ಮಾದರಿಯಲ್ಲಿರುವ ಈ ವಿದ್ಯುನ್ಮಾನ ಮತಯಂತ್ರವು ಬ್ಯಾಲೇಟ್ ಯೂನಿಟ್,ಕಂಟ್ರೋಲ್ ಯೂನಿಟ್ ಎನ್ನುವ ಎರಡು ಘಟಕಗಳನ್ನು ಹೊಂದಿದೆ.

photo curtsy: wikipedia

4

4

ಬ್ಯಾಲೆಟ್‌ ಯುನಿಟ್‌:
ಮತದಾರರು ತಮ್ಮ ಮತ ಚಲಾಯಿಸಲು ಬಳಸುವ ಮತದಾನ ಘಟಕ

ಕಂಟ್ರೋಲ್ ಯುನಿಟ್:
ಮತಗಟ್ಟೆಯಲ್ಲಿ ಅಧಿಕಾರಿಗಳ ನಿಯಂತ್ರಣದಲ್ಲಿರುವ ನಿಯಂತ್ರಣ ಘಟಕ.

photo curtsy: wikipedia

5

5

ಕಂಟ್ರೋಲ್‌‌ ಯುನಿಟ್‌ನ ಕೆಳ ಭಾಗದಲ್ಲಿ ಯಾರಿಗೂ ಒಂದು ಮತವೂ ದಾಖಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ‘ಕ್ಲೀಯರ್' ಬಟನ್‌ ಇದೆ.ಮತದಾನ ಪ್ರಾರಂಭವಾಗುವ ಮೊದಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಸಮ್ಮುಖದಲ್ಲಿ ಮತಯಂತ್ರದಲ್ಲಿನ 'ಕ್ಲೀಯರ್' ಬಟನ್‌ ಒತ್ತಿದ ಬಳಿಕ ಮತದಾನ ಪ್ರಕ್ರಿಯೆ ಆರಂಭವಾಗುತ್ತದೆ.

6

6

ಚುನಾವಣೆ ವೇಳೆ ವಿದ್ಯುತ್‌ ಅಭಾವದಿಂದಾಗಿ ಮತದಾನ ಪ್ರಕ್ರಿಯೆಯ ಗೊಂದಲ ತಪ್ಪಿಸಲು, 6 ವೋಲ್ಟ್‌ನ ಅಲ್ಕಾಲೈನ್‌ ಬ್ಯಾಟರಿಯಿಂದ ಕಾರ್ಯ‌ನಿರ್ವ‌ಹಿಸುವಂತೆ ವಿದ್ಯುನ್ಮಾನ ಮತಯಂತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ.

7

7


ಒಂದು ಮತಯಂತ್ರ ಗರಿಷ್ಟ 3,840 ವೋಟ್‌ಗಳನ್ನು ಮಾತ್ರ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಸಾಧಾರಣವಾಗಿ 1500 ಮತಗಳಿಗೆ ಒಂದು ಚುನಾವಣಾ ಬೂತ್‌ ಇರುವುದರಿಂದ ಒಂದು ಮತಯಂತ್ರದಲ್ಲೇ ಆ ಬೂತ್‌ನ ಎಲ್ಲಾ ಮತದಾರರು ಚುನಾವಣೆ ಮಾಡಬಹುದು.

8

8


ಒಂದು ಮತಯಂತ್ರದಲ್ಲಿ 16 ಅಭ್ಯರ್ಥಿ‌ಗಳ ಹೆಸರು ಮತ್ತು ಅವರಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆಗಳನ್ನು ದಾಖಲಿಸಬಹುದು. ಒಂದು ವೇಳೆ 16ಕ್ಕಿಂತ ಹೆಚ್ಚಿನ ಅಭ್ಯರ್ಥಿ‌ಗಳಿದ್ದರೆ ಪರ್ಯಾಯವಾಗಿ ಮತ್ತೊಂದು ಮತಯಂತ್ರವನ್ನು ಬಳಸಲಾಗುತ್ತದೆ. ಅಭ್ಯರ್ಥಿ‌ಗಳ ಸಂಖ್ಯೆ 64 ಮೀರಿದ್ದಲ್ಲಿ ಹಳೇಯ ಪೇಪರ್‌ ಬ್ಯಾಲೆಟ್‌ ವಿಧಾನವನ್ನು ಅನುಸರಿಸಲಾಗುತ್ತದೆ.

9

9


ಮತದಾರ ಅಧಿಕಾರಿಗಳಿಗೆ ಗುರುತಿನ ಚೀಟಿ ನೀಡಿ ನೋಂದಣಿ ಪುಸ್ತಕಕ್ಕೆ ಸಹಿ ಹಾಕಿದ ಬಳಿಕ ಬ್ಯಾಲೆಟ್‌ ಯುನಿಟ್‌ಗೆ ಕಳುಹಿಸಲಾಗುತ್ತದೆ. ಮತಗಟ್ಟೆಯ ಅಧಿಕಾರಿ ತನ್ನಲ್ಲಿರುವ ಕಂಟ್ರೋಲ್‌ ಯುನಿಟ್‌ನಲ್ಲಿ 'ವೋಟ್‌' ಬಟನ್‌ ಒತ್ತಿದ ಕೂಡಲೇ ಬ್ಯಾಲೆಟ್‌ ಯುನಿಟ್‌ನಲ್ಲಿ'ಹಸಿರು' ದೀಪ ಉರಿಯುತ್ತದೆ. ಹಸಿರು ದೀಪ ಉರಿಯುತ್ತಿದ್ದರೆ ಬ್ಯಾಲೆಟ್‌ ಬಾಕ್ಸ್‌ ಸರಿಯಾಗಿ ಕಾರ್ಯನಿರ್ವ‌ಹಿಸುತ್ತಿದ್ದು, ಮತಚಲಾವಣೆಗೆ ಸಿದ್ದವಾಗಿದೆ ಎಂದರ್ಥ‌.ಬಳಿಕ ನಿಮ್ಮ ಆಯ್ಕೆಯ ಅಭ್ಯರ್ಥಿ‌ಯ ಗುರುತಿನ ಚಿತ್ರದ ಸಮೀಪವಿರುವ 'ನೀಲಿ' ಬಟನ್‌ ಒತ್ತಬೇಕು. ನೀಲಿ ಬಟನ್‌ ಒತ್ತಿದ ಕೂಡಲೇ ಮತದಾರ ಆಯ್ಕೆ ಮಾಡಿದ ಅಭ್ಯರ್ಥಿ‌ಯ ಬಲಭಾಗದಲ್ಲಿ 'ಕೆಂಪು' ದೀಪ ಉರಿಯುತ್ತದೆ. ಕೆಂಪು ದೀಪ ಉರಿದ ಬೀಪ್‌ ಸೆಕೆಂಡ್‌ ಬಂದಲ್ಲಿ ಮತ ಚಲಾವಣೆಯಾಗಿದೆ ಎಂದು ತಿಳಿಯಬಹುದು. ಬೀಪ್‌ ಶಬ್ಧ ಬಾರದೇ ಇದ್ದಲ್ಲಿ ಮತಗಟ್ಟೆಯ ಅಧಿಕಾರಿಯನ್ನು ಸಂಪರ್ಕಿಸಿಬೇಕು.

10

10


ಮತದಾನ ಪ್ರಕ್ರಿಯೆ ಆರಂಭವಾದ ಬಳಿಕ ಮತಗಟ್ಟೆಯ ಅಧಿಕಾರಿ ಎಷ್ಟು ಮತ ಚಲಾವಣೆ ಆಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಪ್ರತಿ ಅರ್ಧ‌ಗಂಟೆಗೊಮ್ಮೆ ನೋಂದಣಿ ಪುಸ್ತಕದಲ್ಲಿ ದಾಖಲಾದ ಮತದಾರರ ಸಂಖ್ಯೆ ಮತ್ತು ಕಂಟ್ರೋಲ್‌ ಯುನಿಟ್‌ನಲ್ಲಿರುವ 'ಟೋಟಲ್‌ ವೋಟ್ಸ್‌' ಬಟನ್‌ ಒತ್ತುವ ಮೂಲಕ ತಾಳೆ ನೋಡಿ ಪರಿಶೀಲಿಸಲಾಗುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X