'ಪ್ರೈವೇಟ್ ವಿಂಡೋ' ಬಳಸಿದರೆ ಇಂಟರ್‌ನೆಟ್ ಪ್ರಪಂಚದಲ್ಲಿ ಸೇಫ್!..ಆದರಿದು ಯಾರಿಗೂ ಗೊತ್ತಿಲ್ಲಾ!!
ಪ್ರೈವೇಟ್ ವಿಂಡೋ ಎಂಬ ಕಂಪ್ಯೂಟರ್ ಬ್ರೌಸರ್ ಪದ ನಮ್ಮಲ್ಲಿನ ಬಹುತೇಕರಿಗೆ ಹೊಸದಾಗಿ ಕೇಳಿಸುತ್ತವೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಬಳಕೆಯಾಗುವ ಈ ಎರಡು ಪದಗಳು ಭಾರತೀಯರಿಗೆ ಮಾತ್ರ ಹೆಚ್ಚು ಉಪಯೋಗಕಾರಿಯಾದವು!!
ಇನ್‌ಕಾಗ್ನಿಟೋ ವಿಂಡೋ ಅಥವಾ ಪ್ರೈವೇಟ್ ವಿಂಡೋ ಎಂಬ ಕಂಪ್ಯೂಟರ್ ಬ್ರೌಸರ್ ಪದಗಳು ನಮ್ಮಲ್ಲಿನ ಬಹುತೇಕರಿಗೆ ಹೊಸದಾಗಿ ಕೇಳಿಸುತ್ತವೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಬಳಕೆಯಾಗುವ ಈ ಎರಡು ಪದಗಳು ಭಾರತೀಯರಿಗೆ ಮಾತ್ರ ಹೆಚ್ಚು ಉಪಯೋಗಕಾರಿಯಾದವು ಎಂಬುದು ಮಾತ್ರ ಅಷ್ಟೆ ಸತ್ಯ.!!
ಹೌದು, ಗೂಗಲ್‌ನ ಕ್ರೋಮ್, ಮೋಝಿಲಾದ ಫೈರ್‌ಫಾಕ್ಸ್, ಒಪೆರಾ, ಸಫಾರಿ ಮುಂತಾದ ಎಲ್ಲಾ ಬ್ರೌಸರುಗಳು ಬಳಕೆದಾರರ ಖಾಸಗಿ ಮಾಹಿತಿಯ ಭದ್ರತೆಗಾಗಿ ತಮ್ಮದೇ ಆದ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿವೆ. ಆ ಸುರಕ್ಷತೆಯ ಒಂದು ಭಾಗವೇ ಇನ್‌ಕಾಗ್ನಿಟೋ ಅಥವಾ ಪ್ರೈವೇಟ್ ಮೋಡ್ ಎಂಬ ವ್ಯವಸ್ಥೆ.!!
ಹಾಗಾದರೆ, ಏನಿದು ಪ್ರೈವೇಟ್ ವಿಂಡೋ? ಅದನ್ನು ನಾವೇಕೆ ಬಳಸಬೇಕು? ಪ್ರೈವೇಟ್ ವಿಂಡೋ ಬಳಸುವುದು ಹೇಗೆ? ಇದರಿಂದ ಆಗುವ ಉಪಯೋಗಗಳೇನು? ಎಂಬೆಲ್ಲಾ ಅಂಶಗಳನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.!! ಕುತೋಹಲದ ಪ್ರೈವೇಟ್ ವಿಂಡೋ ಬಗ್ಗೆ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ಪ್ರೈವೇಟ್ ವಿಂಡೋ?( ಇನ್‌ಕಾಗ್ನಿಟೋ ವಿಂಡೋ)
ಇಂಟರ್‌ನೆಟ್ ಸೌಕರ್ಯದಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಅಂತಹ ಅಪಾಯಗಳಲ್ಲಿ ವೈರಸ್ ದಾಳಿ, ಪ್ರೈವೆಸಿ ಬ್ರೀಚ್ ಎಂಬ ಹಲವು ಸಮಸ್ಯೆಗಳು ಕಂಪ್ಯೂಟರ್ ಬಳಕೆದಾರರನ್ನು ಕಾಡುತ್ತಿವೆ.! ನಿಮ್ಮ ಜಾಲತಾಣವನ್ನು ಇನ್ನೊಬ್ಬರು ನೋಡುವ ಸಾಧ್ಯತೆ ಇದೆ.! ಹಾಗಾಗಿಯೇ, ಬಳಕೆದಾರರ ರಕ್ಷಣೆಗೆ ಹುಟ್ಟಿಕೊಂಡ ವ್ಯವಸ್ಥೆಯೇ ಪ್ರೈವೇಟ್ ವಿಂಡೋ!!

ಪ್ರೈವೇಟ್ ವಿಂಡೋ ತೆರೆಯುವುದು ಹೇಗೆ?
ನೀವಿಗ ಕಂಪ್ಯೂಟರ್‌ನಲ್ಲಿ ಕ್ರೋಮ್ ಬ್ರೌಸರ್ ಬಳಕೆ ಮಾಡುತ್ತಿದ್ದೀರಾ ಎಂದಿಟ್ಟುಕೊಳ್ಳಿ. ಬಳಕೆ ಮಾಡುವಾಗ ಪ್ರೈವೇಟ್ ವಿಂಡೋ ತೆರೆಯಲು ಕೀಬೋರ್ಡ್‌ನಲ್ಲಿ 'ಶಿಫ್ಟ್ ಕೀ' ಹಾಗೂ 'ಕಂಟ್ರೋಲ್ ಕೀ' ಒಟ್ಟಿಗೇ ಒತ್ತಿ ನಂತರ 'ಎನ್' ಬಟನ್ ಒತ್ತಿದರೆ ಹೊಸದೊಂದು ಬ್ರೌಸರ್ ಪ್ರೈವೇಟ್ ವಿಂಡೋ ತೆರೆದುಕೊಳ್ಳುತ್ತದೆ.! ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲಾ ಫೈರ್‌ಫಾಕ್ಸ್‌ನಲ್ಲಾದರೆ, ಶಿಫ್ಟ್ + ಕಂಟ್ರೋಲ್ + ಪಿ ಬಟನ್ ಒತ್ತಿದಾಗ ಹೊಸ ವಿಂಡೋ ತೆರೆದುಕೊಳ್ಳುತ್ತದೆ.!!

ಪತ್ತೆದಾರನೊಬ್ಬನ ಮುಖದ ಐಕಾನ್!!
ಕ್ರೋಮ್, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲಾ ಯಾವುದೇ ಬ್ರೌಸರ್‌ನಲ್ಲಾದರೂ ಸಹ ಪ್ರೈವೇಟ್ ವಿಂಡೋ ತೆರೆದರೆ ಅದರ ಮೇಲ್ಭಾಗದ ಎಡಮೂಲೆಯಲ್ಲಿ ಕನ್ನಡಕಧಾರಿ ಪತ್ತೆದಾರನೊಬ್ಬನ ಮುಖದ ಐಕಾನ್ ಕಾಣಿಸುತ್ತದೆ. ಈ ಐಕಾನ್ ಮೂಡಿದ ಬ್ರೌಸರ್ ವಿಂಡೋದಲ್ಲಿಯೇ ನೀವು ಬ್ರೌಸಿಂಗ್ ಮಾಡಿದರಾಯಿತು.!

ಪ್ರೈವೇಟ್ ವಿಂಡೋಯಿಂದ ಸುರಕ್ಷತೆ ಹೇಗೆ?
ನಿಮ್ಮ ಕಂಪ್ಯೂಟರನ್ನು ಹ್ಯಾಕರ್‌ಗಳಿಂದ, ವೈರಸ್ ಕುತಂತ್ರಾಂಶಗಳಿಂದ ಮತ್ತು ಖಾಸಗಿತನಕ್ಕೆ ಧಕ್ಕೆಯಾಗದಂತೆ ಪ್ರೈವೇಟ್ ವಿಂಡೋ ಬಹುಪಾಲು ರಕ್ಷಿಸಬಲ್ಲುದು. ಮತ್ತು ನಿಮ್ಮೆಲ್ಲಾ ಸರ್ಚ್ ಹಿಸ್ಟರಿಯನ್ನು ಸೇವ್ ಮಾಡದ ಹಾಗೂ ನಿಮ್ಮ ಯಾವುದೇ ಮಾಹಿತಿಯನ್ನು ಈ ಬ್ರೌಸರ್ ಕಲೆಯಾಕುವುದಿಲ್ಲ.!! ಆದರೆ, ಆನ್‌ಲೈನ್‌ನಲ್ಲಿ ನಿಮ್ಮ ಮೇಲೆ ಹದ್ದಿನ ಕಣ್ಣಿಡುವವರಿಂದ ಏನನ್ನೂ ಬಚ್ಚಿಡಲಾಗುವುದಿಲ್ಲ ಎಂಬುದು ನೆನಪಿರಲಿ.


ಪೋರ್ನ್ ಮೋಡ್' ಅಂತಲೂ ಕರೀತಾರೆ!!
ಬಳಕೆದಾರರ ಹಿಸ್ಟರಿ ಸಂಗ್ರಹಿಸದೇ ಇರುವ ಹಾಗೂ ವೈರಸ್ ಕುತಂತ್ರಾಂಶಗಳಿಂದ ಕಾಪಾಡಿಕೊಳ್ಳುವ ಪ್ರೈವೇಟ್ ವಿಂಡೋವನ್ನು ವಿದೇಶಗಳಲ್ಲಿ 'ಪೋರ್ನ್ ಮೋಡ್' ಅಂತಲೂ ಕರೀಯುತ್ತಾರಂತೆ. ಅಂದರೆ ಈ ಮೋಡ್‌ನಲ್ಲಿ ಪೋರ್ನ್ ವೆಬ್ ತಾಣಗಳನ್ನು ವೀಕ್ಷಿಸಿದರೆ ಬ್ರೌಸಿಂಗ್ ಮಾಡಿದ್ದು ಯಾರಿಗೂ ತಿಳಿಯುವುದಿಲ್ಲವೆಂಬ ಭರವಸೆ.!!!


Click it and Unblock the Notifications








