ಸ್ಮಾರ್ಟ್‌ಫೋನ್ ಎನ್‌ಸ್ಕ್ರಿಪ್ಟ್ ಮಾಡಿಕೊಳ್ಳಲೇಬೇಕು ಏಕೆ ಮತ್ತು ಹೇಗೆ!?

ನಿಮ್ಮ ಫೋಟೊ,ವಿಡಿಯೋ ಮತ್ತು ಇತರ ದಾಖಲೆಗಳನ್ನು ಯಾವ ಸೈಬರ್ ಹ್ಯಾಕರ್‌ಗಳು ಹ್ಯಾಕ್ ಮಾಡಲು ಸಾಧ್ಯವಾಗದಂತೆ ಕಾಪಾಡಲು ಈ ತಂತ್ರಜ್ಞಾನ ಅಭಿವೃದ್ದಿಪಡಿಸಲಾಗಿದೆ.!!

|

ಇಂಟರ್‌ನೆಟ್‌ ಪ್ರಪಂಚದಲ್ಲಿ ವಯಕ್ತಿಕ ಡೇಟಾ ಕಾಪಾಡಿಕೊಳ್ಳುವುದು ಬಹುದೊಡ್ಡ ತೊಂದರೆ ಎನ್ನಬಹುದು. ಏಕೆಂದರೆ, ಸ್ಮಾರ್ಟ್‌ ಪ್ರಪಂಚದಲ್ಲಿ ಎಲ್ಲಾ ದಾಖಲೆಗಳನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ಇಟ್ಟುಕೊಳ್ಳುವುದರಿಂದ ಆ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಎಂಬುದೇ ಎಲ್ಲರ ಚಿಂತೆಯಾಗಿದೆ.!!

ಹಾಗಾಗಿಯೇ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಫೋನ್‌ ಎನ್‌ಸ್ಕ್ರಿಪ್ಟ್ ಮಾಡುವ ಆಯ್ಕೆಯನ್ನು ನೀಡಿವೆ. ನಿಮ್ಮ ಫೋಟೊ,ವಿಡಿಯೋ ಮತ್ತು ಇತರ ದಾಖಲೆಗಳನ್ನು ಯಾವ ಸೈಬರ್ ಹ್ಯಾಕರ್‌ಗಳು ಹ್ಯಾಕ್ ಮಾಡಲು ಸಾಧ್ಯವಾಗದಂತೆ ಕಾಪಾಡಲು ಈ ತಂತ್ರಜ್ಞಾನ ಅಭಿವೃದ್ದಿಪಡಿಸಲಾಗಿದೆ.!!

ಸ್ಮಾರ್ಟ್‌ಫೋನ್ ಎನ್‌ಸ್ಕ್ರಿಪ್ಟ್ ಮಾಡಿಕೊಳ್ಳಲೇಬೇಕು ಏಕೆ ಮತ್ತು ಹೇಗೆ!?

ಈಗಾಗಲೇ ಎಲ್ಲಾ ಸ್ಮಾರ್ಟ್‌ಫೊನ್‌ಗಳು ಎನ್‌ಸ್ಕ್ರಿಪ್ಟ್ ಆಗಿ ಬರುತ್ತಿವೆ. ಆದರೂ, ನಿಮ್ಮ ಫೋನ್ ಎನ್‌ಸ್ಕ್ರಿಪ್ಟ್ ಆಗಿರದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ ಮತ್ತು ಎನ್‌ಸ್ಕ್ರಿಪ್ಟ್ ಮಾಡುವವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಎನ್‌ಸ್ಕ್ರಿಪ್ಟ್ ಮಾಡುವ ಮೊದಲು!!

ಎನ್‌ಸ್ಕ್ರಿಪ್ಟ್ ಮಾಡುವ ಮೊದಲು!!

ಸ್ಮಾರ್ಟ್‌ಫೋನ್‌ನಲ್ಲಿ ಶೇಕಡ 80 ಪರ್ಸೆಂಟ್‌ಗಿಂತ ಹೆಚ್ಚು ಚಾರ್ಜ್ ಇರಲಿ. ನಿಮ್ಮಫೋನ್ ಚಾರ್ಜ್ ಹಾಕಿಯೇ ಈ ಕಾರ್ಯ ಮುಂದುವರೆಸಿದರೆ ಇನ್ನೂ ಉತ್ತಮ.! ಜತೆಗೆ ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಕ್‌ಅಪ್ ತೆಗೆದುಕೊಳ್ಳಿರಿ. (ಯಾವಾಗಲೂ ಸ್ಮಾರ್ಟ್‌ಫೋನ್‌ ಬ್ಯಾಕಪ್ ಇಟ್ಟುಕೊಳ್ಳುವುದು ಒಳ್ಳೆಯದು)

ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಸ್ಟೆಪ್ 1

ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಸ್ಟೆಪ್ 1

ನಿಮ್ಮ ಸ್ಮಾರ್ಟ್‌ಫೊನ್ ಸೆಟ್ಟಿಂಗ್ಸ್ ಆಯ್ಕೆಯನ್ನು ತೆರೆಯಿರಿ. ಸೆಟ್ಟಿಂಗ್ಸ್ ತೆರೆದ ನಂತರ ಕೆಳಗೆ ಸ್ಕ್ರೋಲ್ ಮಾಡಿದರೆ ಸೆಕ್ಯುರಿಟಿ ಆಯ್ಕೆಯನ್ನು ಕಾಣುತ್ತೀರಾ. ಅದನ್ನು ಕ್ಲಿಕ್ ಮಾಡಿ "Encrypt Phone" ಎಂಬ ಆಯ್ಕೆಯನ್ನು ಹುಡುಕಿ.!!

ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಸ್ಟೆಪ್ 2

ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಸ್ಟೆಪ್ 2

ಸೆಕ್ಯುರಿಟಿ ಆಯ್ಕೆ ತೆರೆದ ನಂತರ ಕಾಣುವ Encrypt Phone ಐಕಾನ್ ಆಯ್ಕೆ ಮಾಡಿ. ಒಮ್ಮೆ ನೀವು ಅದನ್ನು ಕ್ಲಿಕ್ ಮಾಡಿದರೆ ಕಕನ್ಫರ್ಮೆಷನ್‌ಗಾಗಿ ಸ್ಮಾರ್ಟ್‌ಫೋನ್ ನಿಮ್ಮನ್ನು ಕೇಳುತ್ತದೆ. ನೀವು ಒಕೆ ಎಂದು ಒತ್ತಿದರೆ ನಂತರ ನಿಮ್ಮ ಫೋನ್‌ ರೀಬೂಟ್ ಆಗಲು ಶುರುವಾಗುತ್ತದೆ.!

How to save WhatsApp Status other than taking screenshots!! Kannada
ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಸ್ಟೆಪ್ 3

ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಸ್ಟೆಪ್ 3

ನಿಮ್ಮ ಸ್ಮಾರ್ಟ್‌ಫೋನ್‌ ರೀಬೂಟ್ ಆಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ನಂತರ ನಿಮ್ಮ ಫೋನ್ ಅದಾಗಿಯೇ ಎನ್‌ಸ್ಕ್ರಿಪ್ಟ್ ಆಗಿರುತ್ತದೆ. ಹಾಗಾಗಿ, ಯಾವುದೇ ಯೋಚನೆ ಇಲ್ಲದೇ ನಿಮ್ಮ ಸ್ಮಾರ್ಟ್‌ಫೊನ್ ಎನ್‌ಸ್ಕ್ರಿಪ್ಟ್ ಮಾಡಿ ನಿಮ್ಮ ಡೇಟಾವನ್ನು ಸೇಫ್ ಮಾಡಿಕೊಳ್ಳಿ.!!

ಈ 'ಮಾಯಾ ಕನ್ನಡಿ' ಬಗ್ಗೆ ತಿಳಿದರೆ ನೀವಿದನ್ನು ಈಗಲೇ ಖರೀದಿಸುತ್ತೀರಾ!..ಏಕೆ ಗೊತ್ತಾ?ಈ 'ಮಾಯಾ ಕನ್ನಡಿ' ಬಗ್ಗೆ ತಿಳಿದರೆ ನೀವಿದನ್ನು ಈಗಲೇ ಖರೀದಿಸುತ್ತೀರಾ!..ಏಕೆ ಗೊತ್ತಾ?

Best Mobiles in India

English summary
Now you can initiate the process by tapping on "Encrypt phone" option. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X