Home
ಟೆಕ್ ನೌಕರಿ

ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡುದ್ರೆ ಸಾಕು!!

ನೀವು ಎಷ್ಟು ಹಣತೆತ್ತು ಸ್ಮಾರ್ಟ್‌ಫೋನ್ ಖರಿದಿಸಿದ್ದರೂ ಸಹ ಬ್ಯಾಟರಿ ಬಾಳಿಕೆ ಇಲ್ಲದ ಸ್ಮಾರ್ಟ್‌ಫೋನ್ ಒಂದು ಆಟಿಕೆಗಿಂತ ಹೆಚ್ಚೇನೂ ಅಲ್ಲ ಎಂಬ ಮಾತಿದೆ. ಆದರೆ, ಇಂದು ಎಲ್ಲರೂ ಖರೀದಿಸುತ್ತಿರುವ ಸ್ಮಾರ್ಟ್‌ಪೋನ್‌ಗಳಲ್ಲಿಯೂ ಶಕ್ತಿಯುತ ಬ್ಯಾಟರಿಗಳನ್ನು ಅಳವಡಿಸಲಾಗಿದ್ದರೂ ಕೂಡ ಅವರ ಸ್ಮಾರ್ಟ್‌ಪೋನ್ ಬ್ಯಾಟರಿ ಶಕ್ತಿ ಬಹುಬೇಗ ಕಡಿಮೆಯಾಗುತ್ತಿರುತ್ತದೆ.

ಹೌದು, ನೂರು ಜನ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ತೊಂಬತ್ತು ಜನರಿಗೆ ನನ್ನ ಸ್ಮಾರ್ಟ್‌ಪೋನ್ ಮಾತ್ರ ಹೆಚ್ಚು ಹೊತ್ತು ಚಾರ್ಜ್ ನೀಡುತ್ತಿಲ್ಲ ಎಂಬ ಅನುಭವವಾಗುತ್ತದೆಯಂತೆ. ನನ್ನ ಗೆಳೆಯ ಮತ್ತು ನಾನು ಒಂದೇ ಪೋನ್ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಖರಿದಿಸಿದ್ದರೂ ಸಹ ಅವನ ಸ್ಮಾರ್ಟ್‌ಪೋನ್ ಬ್ಯಾಟರಿ ಬಾಳಿಕೆ ಹೆಚ್ಚಿದೆ ಎಂದು ಹೇಳುವವರನ್ನು ನೋಡಬಹುದು.

ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡುದ್ರೆ ಸಾಕು!!

ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಮಾತ್ರ ಹೆಚ್ಚು ಹೊತ್ತು ಚಾರ್ಜ್ ನೀಡುತ್ತಿಲ್ಲ ಎಂಬ ಅನುಭವ ನಿಮಗಾಗಿದ್ದರೆ ಅದು ಖಂಡಿತ ಅದು ನಿಮ್ಮ ತಪ್ಪು ಎಂದು ಹೇಳಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಲು ನೀವು ಏನು ಮಾಡಬೇಕು? ನಿಮಗೆ ಬೇಕಾದ ಉಪಯುಕ್ತ ಸಲಹೆಗಳು ಯಾವುವು ಎಂಬುದನ್ನು ಮುಂದೆ ನೋಡಿ.

ವೈಬ್ರೇಷನ್ ಆಫ್ ಮಾಡಿ

ವೈಬ್ರೇಷನ್ ಆಫ್ ಮಾಡಿ

ಸ್ಮಾರ್ಟ್‌ಫೋನ್ ವೈಬ್ರೇಟ್ ರಿಂಗ್ ಆಗುವ ರೀತಿ ಸೆಟ್ಟಿಂಗ್ಸ್ ಬೇಡವೇ ಬೇಡ. ಏಕೆಂದರೆ, ವೈಬ್ರೇಷನ್ ಎಷ್ಟು ಜೋರಾಗಿ ಇರುತ್ತದೋ ಅಷ್ಟೇ ಹೆಚ್ಚು ಬ್ಯಾಟರಿ ಬಳಕೆಯಾಗುತ್ತದೆ. ಪೋನಿನಲ್ಲಿ ವೈಬ್ರೇಷನ್ ಹುಟ್ಟಿಹಾಕಲು ಇರುವ ಸಾಧನವೇ ಬೇರೆ ಇರುವುದರಿಂದ ಬ್ಯಾಟರಿ ಬಹಳ ವೇಗವಾಗಿ ವಿನಿಯೋಗವಾಗುತ್ತದೆ.

ಲೊಕೇಷನ್ ಬಳಕೆ ಬೇಡ

ಲೊಕೇಷನ್ ಬಳಕೆ ಬೇಡ

ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಬೇಕೆಂದರೆ ಯಾವಾಗಲೂ ಲೊಕೇಷನ್ ಬಳಕೆ ಮಾಡದಿರುವುದು ಉತ್ತಮ. ಏಕೆಂದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಲೊಕೇಷನ್ ಸರ್ವೀಸ್ ಬಳಕೆ ಹೆಚ್ಚು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳಲಿದೆ. ಹಾಗಾಗಿ, ಬ್ಯಾಟರಿ ಸೇವಿಂಗ್ ಮೋಡ್‌ನಲ್ಲಿ ಲೊಕೇಷನ್ ಸರ್ವೀಸ್ ಬಳಸಿದರೆ ಒಳ್ಳೆಯದು.

ಅನಗತ್ಯವಾಗಿ ಓವರ್ ಚಾರ್ಜ್ ಮಾಡಬೇಡಿ

ಅನಗತ್ಯವಾಗಿ ಓವರ್ ಚಾರ್ಜ್ ಮಾಡಬೇಡಿ

ಎಂದಿಗೂ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಅನಗತ್ಯವಾಗಿ ಓವರ್ ಚಾರ್ಜ್ ಮಾಡಬೇಡಿ. ಸ್ಮಾರ್ಟ್‌ಫೋನ್ ಚಾರ್ಜ್ ಆಗಲು ಯಾವಾಗಲೂ ಪ್ಲಗ್ ಮಾಡಿ ಬಿಟ್ಟರೆ ಬ್ಯಾಟರಿ ಸೆಲ್ಸ್‌ಗಳು ಬಹುಬೇಗ ಹಾಳಾಗುತ್ತವೆ. ಇದರಿಂದ ಸ್ವಲ್ಪ ದಿವಸಗಳಲ್ಲಿಯೇ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ತನ್ನ ಶಕ್ತಿಯನ್ನು ಕಳೆದುಕೊಳ್ಳಬಹುದು.

ನೋಟಿಫಿಕೇಷನ್‌ಗಳಿಗೆ ಗುಡ್‌ಬೈ ಹೇಳಿ

ನೋಟಿಫಿಕೇಷನ್‌ಗಳಿಗೆ ಗುಡ್‌ಬೈ ಹೇಳಿ

ಒಂದು ಅಂದಾಜಿನ ಪ್ರಕಾರ ಪ್ರತಿಯೋರ್ವರ ಸ್ಮಾರ್ಟ್‌ಪೋನಿಗೆ ಪ್ರತಿದಿನ 50 ಕ್ಕೂ ಹೆಚ್ಚು ನೋಟಿಫಿಕೇಷನ್‌ಗಳು ಬರುತ್ತವೆಯಂತೆ. ಮೆಸೇಜ್, ಆಪ್‌ಗಳು ಹೀಗೆ ಹಲವು ನೋಟಿಫಿಕೇಷನ್‌ಗಳು ಬ್ಯಾಟರಿಯನ್ನು ತಿನ್ನುತ್ತಿವೆ. ಹಾಗಾಗಿ, ಅಗತ್ಯಗತ್ಯವೆನಿಸಿದ ಇಮೇಲ್ ನೋಟಿಫಿಕೇಷನ್ ಮಾತ್ರ ಎನೇಬಲ್ ಮಾಡಿ ಬ್ಯಾಟರಿ ಉಳಿಸಿಕೊಳ್ಳಿ.

ಸ್ಕ್ರೀನ್ ಟೈಮ್ ಔಟ್

ಸ್ಕ್ರೀನ್ ಟೈಮ್ ಔಟ್

ನಿಮಗೆ ಗೊತ್ತಾ? ಮೊಬೈಲ್ ಟಾರ್ಚ್ ಆನ್ ಆದಾಗ ಬಳಕೆಯಾಗುವ ಬ್ಯಾಟರಿ ಶಕ್ತಿಗಿಂತ ಸ್ಕ್ರೀನ್ ಆನ್ ಆಗಿದ್ದಾಗ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಸ್ಕ್ರೀನ್ ಟೈಮ್ ಔಟ್ ಸೆಟ್ ಮಾಡುವಾಗ ಅತೀ ಕಡಿಮೆ ಅವಧಿಯ ಟೈಮ್ ಔಟ್ ಸೆಟ್ ಮಾಡಿ ಬ್ಯಾಟರಿಯನ್ನು ಉಳಿಸಿ.

 ಬ್ಲೂಟೂತ್ ಮತ್ತು ವೈಫೈ

ಬ್ಲೂಟೂತ್ ಮತ್ತು ವೈಫೈ

ಬ್ಯಾಟರಿ ಹೆಚ್ಚು ಹೊತ್ತು ಬಾಳಿಕೆ ಬರುವಂತೆ ಮಾಡಲು ಬ್ಲೂಟೂತ್ ಮತ್ತು ವೈಫೈಗಳನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿಕೊಳ್ಳಿ. ಕೆಲವೊಮ್ಮೆ ಈ ಎಲ್ಲಾ ಆಯ್ಕೆಗಳನ್ನು ನಿಮಗೆ ಗೊತ್ತಿಲ್ಲದೇ ನೀವು ಆನ್ ಮಾಡಿರುವುದರಿಂದ ನಿಮ್ಮ ಬ್ಯಾಟರಿ ನಿಮಗೇ ಗೊತ್ತಿಲ್ಲದಂತೆ ಖಾಲಿಯಾಗುತ್ತಿರುತ್ತದೆ.

Best Mobiles in India

English summary
I'll give you the tl;dr right off the bat: if you really want to stretch your phone battery life, the approach that makes the most impact is to lower your. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+