ಫೋಟೋಗಳಲ್ಲಿನ ಅಕ್ಷರಗಳನ್ನು ಕಾಫಿ ಮಾಡಬಹುದು..! ಹೇಗೆ ಗೊತ್ತಾ..?
ಯಾವುದೇ ಇಮೇಜ್ ನಲ್ಲಿರುವ ಟೆಕ್ಸ್ಟ್ ನ್ನು ಎಕ್ಸ್ ಟ್ರ್ಯಾಕ್ಟ್ ಮಾಡುವುದು ಆಂಡ್ರಾಯ್ಡ್ ನಲ್ಲಿ ಒಂದು ಸುಲಭದ ಕೆಲಸ. ಯಾವುದೇ ಇಮೇಜ್ ನಿಂದ ಟೆಕ್ಸ್ಟ್ ನ್ನು ಎಕ್ಸ್ ಟ್ರ್ಯಾಕ್ಟ್ ಮಾಡಲು ಬಳಸಬಹುದಾದ ಆಪ್ ಬಗ್ಗೆ ನಾವಿಲ್ಲಿ ಚರ್ಚಿಸುತ್ತೇವೆ.
ಟೆಕ್ಸ್ಟ್ ನಲ್ಲಿರುವ ಪದಗಳು ಎರಡು ವಿಭಿನ್ನ ರೀತಿಯಲ್ಲಿ ಬರುತ್ತದೆ.
1. ಆರ್ಟಿಕಲ್ಸ್, ಇಮೇಲ್, ಟ್ವೀಟ್ಸ್, ಚಾಟ್ಸ್ ಮತ್ತು ಬ್ಲಾಗ್ಸ್ ಗಳಲ್ಲಿ. ಅದನ್ನು ನೀವು ಕಾಪಿ, ಸರ್ಚ್, ಮಾಡಿಫೈ ಮತ್ತು ಸೆಲೆಕ್ಟ್ ಮಾಡಲು ಅವಕಾಶವಿರುತ್ತದೆ.
2. ಇನ್ನುಕೆಲವು ಟೆಕ್ಸ್ಟ್ ಗಳು ಜೋಕ್ಸ್, ಕಾಮಿಕ್ಸ್, ಡಾಕ್ಯುಮೆಂಟ್ ಸ್ಕ್ಯಾನ್, ಪೋಸ್ಟರ್, ಮೆಮೊ, ಚಾರ್ಟ್ ಇತ್ಯಾದಿಗಳಲ್ಲಿರುತ್ತದೆ.

ಈ ಆಪ್ ಗಳ ಮುಖಾಂತರ ನೀವು ವೇಗವಾಗಿ ಇಂತಹ ಡಾಕ್ಯುಮೆಂಟ್ ಗಳನ್ನು ಅಥವಾ ಇಮೇಜ್ ಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ಅದು ಎಲ್ಲಾ ಚಿತ್ರದಲ್ಲಿರುವ ಎಲ್ಲಾ ಆಲ್ಫಾಬೆಟ್(ಅಕ್ಷರಗಳನ್ನು) ಸ್ಕ್ಯಾನ್ ಮಾಡುತ್ತದೆ ಮತ್ತು ಅದರ ಟೆಕ್ಸ್ಟ್ ರೂಪಾಂತರವನ್ನು ಮಾತ್ರ ನಿಮಗೆ ನೀಡುತ್ತದೆ.
ಆಂಡ್ರಾಯ್ಡ್ ನ ಚಿತ್ರಗಳಲ್ಲಿರುವ ಟೆಕ್ಸ್ಟ್ ನ್ನು ಕಾಪಿ ಮತ್ತು ಎಕ್ಸ್ ಟ್ರ್ಯಾಕ್ಟ್ ಮಾಡುವುದು ಹೇಗೆ?
ವಿಧಾನ ತುಂಬಾ ಸರಳವಾಗಿದೆ. ನೀವು ಕೇವಲ ಆಪ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು ಅಷ್ಟೇ.ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆಂಡ್ರಾಯ್ಡ್ ನ ಚಿತ್ರಗಳಲ್ಲಿರುವ ಟೆಕ್ಸ್ಟ್ ನ್ನು ಕಾಪಿ ಮತ್ತು ಎಕ್ಸ್ ಟ್ರ್ಯಾಕ್ಟ್ ಮಾಡಲು ಅನುಸರಿಸಬೇಕಾಗಿರುವ ಹಂತಗಳು:
ಹಂತ 1. ಮೊದಲನೆಯದಾಗಿ, Text Fairy (OCR Text Scanner) ಅನ್ನೋ ಆಂಡ್ರಾಯ್ಡ್ ಆಪ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಈ ಆಪ್ ನಿಮಗೆ ಇಮೇಜ್ ಗಳಿಂದ ಟೆಕ್ಸ್ಟ್ ನ್ನು ಸ್ಕ್ಯಾನ್ ಔಟ್ ಮಾಡಲು ಸಹಾಯ ಮಾಡುತ್ತದೆ.

ಹಂತ 2.
ಆಪ್ ಇನ್ಸ್ಟಾಲ್ ಮಾಡಿದ ನಂತರ, ನಿಮ್ಮ ಡಿವೈಸ್ ನಲ್ಲಿ ಲಾಂಚ್ ಮಾಡಿ. ಫೋಟೋ,ಮೀಡಿಯಾ, ಮತ್ತು ಫೈಲ್ ಗಳನ್ನು ನಿಮ್ಮ ಡಿವೈಸ್ ನಿಂದ ಆಕ್ಸಿಸ್ ಮಾಡಲು ಈ ಆಪ್ ಗೆ ಪರ್ಮಿಷನ್ ನೀಡಬೇಕಾಗುತ್ತದೆ.

ಹಂತ 3.
ನಿಮಗೆ ಎರಡು ಆಯ್ಕೆಗಳಿರುತ್ತದೆ. ಹೊಸ ಚಿತ್ರವನ್ನು ಕ್ಲಿಕ್ಕಿಸಲು ಅಥವಾ ಗ್ಯಾಲರಿಯಲ್ಲಿರುವ ಚಿತ್ರವನ್ನು ಆಯ್ಕೆ ಮಾಡಲು. ಆಯ್ಕೆ ನಿಮ್ಮದು.

ಹಂತ 4.
ಈಗ ನೀವು ಯಾವ ಭಾಷೆಯಲ್ಲಿ ಸ್ಕ್ಯಾನಿಂಗ್ ಮಾಡಬೇಕು ಎಂಬುದನ್ನು ಆಯ್ಕೆ ಮಾಡಬೇಕು.

ಹಂತ 5.
ಈಗ ನಿಮ್ಮ ಬಳಿ ಟೆಕ್ಸ್ಟ್ ಇರುವ ಚಿತ್ರವಿರುತ್ತದೆ. Start Text recognition ಬಟನ್ ನ್ನು ಆಪ್ ನಲ್ಲಿ ಕ್ಲಿಕ್ಕಿಸಿ. ಆಪ್ ಸಂಪೂರ್ಣ ಚಿತ್ರವನ್ನು ಸ್ಕ್ಯಾನ್ ಮಾಡಲು ಆರಂಭಿಸುತ್ತದೆ. ಕೆಲವು ಸೆಕೆಂಡ್ ವರೆಗೆ ಕಾಯಿರಿ. ಟೆಕ್ಸ್ಟ್ ಸ್ಕ್ಯಾನ್ ಆಗಿ ಪ್ಲೈನ್ ಟೆಕ್ಸ್ಟ್ ಫಾರ್ಮೆಟ್ ನಲ್ಲಿ ಡಿಸ್ಪ್ಲೇ ಆಗುತ್ತದೆ. ಅದನ್ನು ನೀವು ಲಾಂಗ್ ಟ್ಯಾಪಿಂಗ್ ಮಾಡುವ ಮೂಲಕ ಕಾಪಿ ಮಾಡಿಕೊಳ್ಳಬಹುದು.

ಹಂತ 6.
ಟೆಕ್ಸ್ಟ್ ನ್ನು ಓದಿದ ನಂತರ, ಆಪ್ ನಿಮಗೆ "That Went Well" ಅನ್ನೋ ಮೆಸೇಜ್ ನೀಡುತ್ತದೆ ಮತ್ತು ಶೇರ್, ಕಾಪಿ, ಸೇವ್ ಆಸ್ ಪಿಡಿಎಫ್ ಆಯ್ಕೆಗಳನ್ನು ನೀಡುತ್ತದೆ.

ಕ್ಯಾಮ್ ಸ್ಕ್ಯಾನರ್ ನ್ನು ಬಳಸುವುದು:
ಮೊಬೈಲ್ ನಲ್ಲಿ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಮತ್ತು ಶೇರಿಂಗ್ ಗೆ ಬಳಸುವ ಒಂದು ಜನಪ್ರಿಯ ಆಪ್ ಕ್ಯಾಮ್ ಸ್ಕ್ಯಾನರ್, ಸುಮಾರು 200 ದೇಶಗಳಲ್ಲಿ 100 ಮಿಲಿಯನ್ ಮಂದಿ ಇದನ್ನು ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.ಕ್ಯಾಮ್ ಸ್ಕ್ಯಾನರ್ ಆಪ್ ಸ್ಕ್ಯಾನಿಂಗ್, ಸ್ಟೋರ್, ಸಿನ್ಕ್ರನೈಜ್, ಮತ್ತು ಕೊಲಾಬರೇಟ್ ಮಾಡುವ ಕೆಲಸವನ್ನು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ ಗಳಲ್ಲಿ ಮಾಡುತ್ತದೆ.

ಕ್ಯಾಮ್ ಸ್ಕ್ಯಾನರ್ ನ ವೈಶಿಷ್ಟ್ಯತೆಗಳು :
ನಿಮ್ಮ ಫೋನ್ ಕ್ಯಾಮರಾವನ್ನು ರಿಸಿಪ್ಟ್ಸ್,ನೋಟ್ಸ್, ಇನ್ ವಾಯ್ಸ್, ವೈಟ್ ಬೋರ್ಡ್ ಡಿಸ್ಕಷನ್, ಸರ್ಟಿಫಿಕೇಟ್ ಇತ್ಯಾದಿಗಳನ್ನು ಸ್ಕ್ಯಾನ್ ಮಾಡಲು ಬಳಸಿ.
ಸ್ಮಾರ್ಟ್ ಕ್ರಾಪಿಂಗ್ ನಿಂದಾಗಿ ನಿಮ್ಮ ಟೆಕ್ಸ್ಟ್ ಗಳು ಮತ್ತು ಗ್ರಾಫಿಕ್ಸ್ ಗಳು ಕ್ಲೀನ್ ಆಗಿ ಮತ್ತು ಶಾರ್ಪ್ ಆಗಿ ಕಾಣಿಸುತ್ತದೆ.
OCR (optical character recognition )ಮುಂದಿನ ಎಡಿಟಿಂಗ್ ಗಾಗಿ ಟೆಕ್ಸ್ಟ್ ಗಳನ್ನು ಎಕ್ಸ್ ಟ್ರ್ಯಾಕ್ಟ್ ಮಾಡುತ್ತದೆ ಅಥವಾ .txt ಶೇರಿಂಗ್ ಗೆ ಸಹಕಾರಿ (ಲೈಸನ್ಸ್ ಇರಬೇಕು)
ಪಿಡಿಎಫ್ ಅಥವಾ ಜೆಪಿಇಜಿ ಫಾರ್ಮೆಟ್ ನಲ್ಲಿ ಸುಲಭದಲ್ಲಿ ಡಾಕ್ಯುಮೆಂಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ, ಇಮೇಲ್ ಗಳಲ್ಲಿ ಅಥವಾ ಡಾಕ್ಯುಮೆಂಟ್ ಲಿಂಕ್ ಆಗಿ ಹಂಚಿಕೊಳ್ಳುವುದಕ್ಕೆ ನೆರವಾಗುತ್ತದೆ.

ಹಂತ 1.
ಮೊದಲನೆಯದಾಗಿ ಕ್ಯಾಮ್ ಸ್ಕ್ಯಾನರ್ ನ್ನು ನಿಮ್ಮ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

ಹಂತ 2.
ಒಮ್ಮೆ ಲಾಂಚ್ ಆದ ನಂತರ, ಸೈನ್ ಇನ್ ಅಥವಾ ರಿಜಿಸ್ಟ್ರರ್ ಮಾಡಿಕೊಳ್ಳಲು ಕೇಳಲಾಗುತ್ತದೆ. ಅದಕ್ಕಾಗಿ "Use Now." ನ್ನು ಕ್ಲಿಕ್ಕಿಸಿ.

ಹಂತ 3.
ಈಗ ನೀವು ಸ್ಟಾರ್ಟ್ ಸ್ಕ್ಯಾನಿಂಗ್ ನ್ನು ಟ್ಯಾಪ ಮಾಡಿ. ಕ್ಯಾಮರಾ ಐಕಾನ್ ನ್ನು ಕ್ಲಿಕ್ಕಿಸಿದರೆ ಡಾಕ್ಯುಮೆಂಟ್ ಕ್ಯಾಮರಾ ಮೂಲಕ ಸ್ಕ್ಯಾನ್ ಆಗುತ್ತದೆ.

ಹಂತ 4.
ನೀವು ಪಿಕ್ಚರ್ ಮತ್ತು ವೀಡಿಯೋ ತೆಗೆಯಲು ಪರ್ಮಿಷನ್ ನೀಡಬೇಕು. ಮುಂದುವರಿಯಲು "Allow" ಬಟನ್ ನ್ನು ಕ್ಲಿಕ್ಕಿಸಿ.

ಹಂತ 5.
ಯಾವ ಇಮೇಜ್ ನಲ್ಲಿ ಟೆಕ್ಸ್ಟ್ ಕಾಪಿ ಮಾಡಬೇಕು ಆ ಇಮೇಜ್ ನ್ನು ನೀವು ಸ್ಕ್ಯಾನ್ ಮಾಡಬೇಕು.

ಹಂತ 6.
ನೀವು ಜಾಗವನ್ನು ಆಯ್ಕೆ ಮಾಡಬಹುದು ಅಥವಾ ಪೂರ್ತಿ ಇಮೇಜ್ ನ್ನು ಬೇಕಿದ್ದರೂ ಸ್ಕ್ಯಾನ್ ಮಾಡಬಹುದು. "Recognize full page."ನ್ನು ಟ್ಯಾಪ್ ಮಾಡಿ. ನೀವು ಫುಲ್ ಟೆಕ್ಸ್ಟ್ ಸ್ಕ್ಯಾನ್ ಆಗಿ ಬಂದಿರುವುದನ್ನು ಗಮನಿಸಬಹುದು. ನಂತರ ನೀವು ಇದನ್ನು ಪಿಡಿಎಫ್ ಫಾರ್ಮೇಟ್ ನಲ್ಲಿ ಇಂಪೋರ್ಟ್ ಮಾಡಿಕೊಳ್ಳಬಹುದು.


Click it and Unblock the Notifications








