ಶಿಯೋಮಿ ಸ್ಮಾರ್ಟ್‌ಫೋನ್ ಬಳಸಿ ತೆರಿಗೆ ಪಾವತಿ ಮಾಡುವುದು ಹೇಗೆ ಗೊತ್ತಾ..?

By GizBot Bureau
|

ಇನ್ನು ತೆರಿಗೆ ಪಾವತಿ ಮಾಡಿಲ್ವಾ? ತೆರಿಗೆ ಪಾವತಿ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಇದು ಭಾರತೀಯ ತೆರಿಗೆ ಪಾವತಿದಾರರಿಗೆ ತಮ್ಮ ತೆರಿಗೆಯ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವ ಮತ್ತು ಒಂದು ವೇಳೆ ಮರುಪಾವತಿ ಮಾಡಿಕೊಳ್ಳುವ ಅವಕಾಶವಿದ್ದಲ್ಲಿ ಪಡೆದುಕೊಳ್ಳುವ ಸಮಯ. ಭಾರತೀಯ ತೆರಿಗೆ ಇಲಾಖೆಗೆ 2017-2018 ನೇ ಸಾಲಿನ ವ್ಯಕ್ತಿಗತ ತೆರಿಗೆಯ ವಿವರವನ್ನು ಕಳುಹಿಸುವುದಕ್ಕೆ ಜುಲೈ 31 ಕೊನೆಯ ದಿನಾಂಕವಾಗಿತ್ತು.

ಆದರೆ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಬೇಕು ಯಾಕೆಂದರೆ ಈ ದಿನಾಂಕವನ್ನು ಈಗ ಅಗಸ್ಟ್ 31 ರವರೆಗೆ ವಿಸ್ತರಣೆ ಮಾಡಲಾಗಿದೆ. ಒಂದು ವೇಳೆ ಇದುವರೆಗೂ ನೀವು ನಿಮ್ಮ ತೆರಿಗೆ ವಿವರವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡದೇ ಇದ್ದಲ್ಲಿ, ನಿಮ್ಮ ಶಿಯೋಮಿ ಸ್ಮಾರ್ಟ್ ಫೋನ್ ಬಳಸಿಯೇ ಈ ಕೆಲಸವನ್ನು ಮಾಡಬಹುದು.

 ಶಿಯೋಮಿ ಸ್ಮಾರ್ಟ್‌ಫೋನ್ ಬಳಸಿ ತೆರಿಗೆ ಪಾವತಿ ಮಾಡುವುದು ಹೇಗೆ ಗೊತ್ತಾ..?

ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ತನ್ನ ಎಂಐ ಕ್ಯಾಲೆಂಡರ್ ನೊಂದಿಗೆ ಕ್ಲಿಯರ್ ಟ್ಯಾಕ್ಸ್ ನ್ನು ಸಂಯೋಜಿಸಿದ್ದು ಇದು ಸ್ಮಾರ್ಟ್ ಫೋನಿನ ಎಂಐಯುಓ ಕಸ್ಟಮ್ ಸ್ಕಿನ್ ನ ಮೇಲೆ ರನ್ ಆಗುತ್ತದೆ.ಕ್ಲಿಯರ್ ಟ್ಯಾಕ್ಸ್ ಅನ್ನುವುದು ಒಂದು ಆನ್ ಲೈನ್ ಪೋರ್ಟಲ್ ಆಗಿದ್ದು ವ್ಯವಹಾರಿಕ ಮತ್ತು ವಯಕ್ತಿಕ ತೆರಿಗೆ ರಿಟರ್ನ್ ಸಲ್ಲಿಸಿಕೊಳ್ಳಲು ಆನ್ ಲೈನ್ ನಲ್ಲೇ ಅನುಕೂಲ ಮಾಡಿಕೊಡುತ್ತದೆ. ಈ ಸಂಯೋಜನೆಯಿಂದಾಗಿ ಶಿಯೋಮಿ ತಮ್ಮ ಬಳಕೆದಾರರಿಗೆ ತೆರಿಗೆ(ಐಟಿಆರ್) ಸಲ್ಲಿಕೆಯ ಕಾರ್ಯ ಸುಲಭಗೊಳ್ಳಬೇಕು ಎಂದು ಬಯಸುತ್ತಿದೆ.

ಎಂಐ ಕ್ಯಾಲೆಂಡರ್ ಆಪ್ ಬಳಸಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಹೇಗೆ ಸಲ್ಲಿಸುವುದು?

ಮೊದಲನೆಯದಾಗಿ ಎಂಐ ಕ್ಯಾಲೆಂಡರ್ ಆಫ್ ನ್ನು ತೆರೆಯಿರಿ ಮತ್ತು ಆಗಸ್ಟ್ 31 ನ್ನು ಟ್ಯಾಪ್ ಮಾಡಿ. ಇದು ನಿಮಗೆ ಒಂದು ಲಿಂಕನ್ನು ತೋರಿಸುತ್ತದೆ ಮತ್ತು ನಿಮಗೆ ಇದು ಐಟಿಆರ್ ಸಲ್ಲಿಕೆಗೆ ಇರುವ ಕೊನೆಯ ದಿನ ಆಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಆ ಲಿಂಕ್ ನ್ನು ಟ್ಯಾಪ್ ಮಾಡಿ ಮತ್ತು ಒಂದು ಪೇಜ್ ತೆರೆದುಕೊಳ್ಳುತ್ತದೆ. ಇದು ನೀವು ತೆರಿಗೆಯನ್ನು ಸ್ವತಃ ನೀವೇ ಪಾವತಿ ಮಾಡಲು ಅಥವಾ ಸಿಎ ಫೈಲ್ ರಿಟರ್ನ್ ಮಾಡಲು ಅನುವು ಮಾಡಿಕೊಡುತ್ತದೆ.

ಈ ಲಿಂಕಿನ ಕೆಳಗೆ, ಇನ್ನೊಂದು ಲಿಂಕ್ ನಿಮಗೆ ವ್ಯವಸ್ಥಿತ ಹೂಡಿಕೆ ಯೋಜನೆಯ ಬಗೆಗಿನ ಮಾಹಿತಿಯನ್ನು ನೀಡುತ್ತದೆ, ಐಟಿಆರ್ ಫೈಲ್ ಮಾಡುವುದರ ಲಾಭಗಳು ಮತ್ತು ಫಾರ್ಮ್ ನಂಬರ್ 16 ಇಲ್ಲದೇ ಐಟಿಆರ್ ಫೈಲ್ ಮಾಡುವುದು ಹೇಗೆ ಎಂಬಿತ್ಯಾದಿ ಮಾಹಿತಿಗಳಿವೆ.

ನೀವು ಮೊದಲ ಆಯ್ಕೆಯನ್ನು ಟ್ಯಾಪ್ ಮಾಡಿದರೆ, ಫಾರ್ಮ್ ನಂಬರ್ 16 ಬಳಸಿ ನೀವೇ ಸ್ವತಃ ಐಟಿಆರ್ ಫೈಲ್ ಮಾಡಲು ಅವಕಾಶ ಕಲ್ಪಿಸುತ್ತದೆ. ನೀವು ಕೇವಲ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು ಮತ್ತು ಆದಾಯ ತೆರಿಗೆ ರಿಟರ್ನ್ ನ್ನು ಸಲ್ಲಿಸಬಹುದು.

ಒಂದು ವೇಳೆ ನೀವು ಸಿಎ ಸಲಹೆಯನ್ನು ಪಡೆಯುವುದಾದರೆ, ನೀವು ಎರಡನೇ ಆಯ್ಕೆಯನ್ನು ಮಾಡಬಹುದು. ಎರಡನೇ ಆಯ್ಕೆಯು ನಿಮಗೆ ಕೆಲವು ಮೂಲ ಮಾಹಿತಿಗಳನ್ನು ಕೇಳುತ್ತದೆ ಮತ್ತು ಸಿಎ ನಿಮ್ಮ ಜೊತೆ ಸಂಪರ್ಕಕ್ಕೆ ಸಿಗುತ್ತಾರೆ. ಆಗ ನೀವು ಎಲ್ಲಾ ಸ್ಕ್ಯಾನ್ ಮಾಡಿದ ಎಲ್ಲಾ ಡಾಂಕ್ಯುಮೆಂಟ್ ಗಳ ಕಾಪಿಯನ್ನು ಮೈಲ್ ಮೂಲಕ ಒದಗಿಸಬೇಕು ಮತ್ತು ಸಿಎ ಎಲ್ಲವನ್ನೂ ಲೆಕ್ಕಾಚಾರ ಹಾಕಿ ಐಟಿಆರ್ ನ್ನು ಫೈಲ್ ಮಾಡುತ್ತಾರೆ.

ಸಿಎ ಆಯ್ಕೆಯನ್ನು ಮಾಡಿದರೆ ಶುಲ್ಕ ಪ್ರಾರಂಭಿಕವಾಗಿ ರೂಪಾಯಿ 799 ರಿಂದ ಸುಮಾರು ರುಪಾಯಿ 6500 ರ ವರೆಗೂ ಇರುತ್ತದೆ. ಇದು ತುಂಬಾ ವೇಗವಾದ ಮತ್ತು ಸರಳವಾದ ಐಟಿಆರ್ ಫೈಲ್ ಮಾಡುವ ಒಂದು ವಿಧಾನವೂ ಆಗಿರುತ್ತದೆ.

ಆದರೆ ಪ್ರಶ್ನೆಯೇನಂದರೆ ನಿಮಗೆ ಅಪರಿಚಿತವಿರುವ ವ್ಯಕ್ತಿಯೊಬ್ಬರಿಗೆ ಹೀಗೆ ನಿಮ್ಮ ವಯಕ್ತಿಯ ಹೂಡಿಕೆಯ ವಿವರವನ್ನು ಹಂಚಿಕೊಳ್ಳೋದು ಎಷ್ಟು ಸುರಕ್ಷಿತ ಎಂಬುದು. ಯಾವ ವ್ಯಕ್ತಿಯು ಹೀಗೆ ಐಟಿಆರ್ ಫೈಲ್ ಮಾಡುತ್ತಾನೋ ಆತ ನಿಜಕ್ಕೂ ಪ್ರಮಾಣೀಕೃತವಾಗಿರುವ ಸಿಎ ವ್ಯಕ್ತಿ ಹೌದೋ ಅಲ್ಲವೋ ಎಂಬುದು ತಿಳಿಯುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇದರಲ್ಲಿ ನಾವು ಯಾವ ವೆಬ್ ಸೈಟ್ ಗೆ ಹೋಗುತ್ತಿದ್ದೇವೆ ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಆನ್ ಲೈನ್ ಡಾಟಾಗಳು ತಿರುಚುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಯಾವುದಕ್ಕೂ ಹುಷಾರಾಗಿರಿ.

Best Mobiles in India

English summary
How to file income tax returns using Xiaomi smartphone. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X