Home
ಟೆಕ್ ನೌಕರಿ

ನಿಮ್ಮ ಫೇಸ್‌ಬುಕ್ ಖಾತೆ ಕೂಡ ಹ್ಯಾಕ್ ಆಗಿದೆಯಾ?..ಒಂದೇ ನಿಮಿಷದಲ್ಲಿ ಚೆಕ್ ಮಾಡಿ!!

ಇತ್ತೀಚಿಗಷ್ಟೇ 3 ಕೋಟಿ ಫೇಸ್‌ಬುಕ್ ಖ್ಯಾತೆಗಳು ಹ್ಯಾಕ್ ಆಗಿರುವುದನ್ನು ಒಪ್ಪಿಕೊಂಡಿದ್ದ ಫೇಸ್‌ಬುಕ್, 230 ಕೊಟಿ ಫೇಸ್‌ಬುಕ್ ಖಾತೆಗಳನ್ನು ರೀಸ್ಟಾರ್ಟ್ ಸಹ ಮಾಡಿದೆ. 230 ಕೋಟಿ ಖಾತೆಗಳನ್ನು ಲಾಗೌಟ್ ಮಾಡಿ, ಆ ಖಾತೆಗಳ ಆಕ್ಸೆಸ್ ಟೋಕನ್‌ ಅನ್ನು ಬದಲಾಯಿಸಿದ ಕಾರಣ ಹೀಗೆ ಲಾಗೌಟ್ ಮಾಡಿ ಮತ್ತೆ ಲಾಗಿನ್ ಮಾಡಲಾಗಿದೆ ಎಂದು ಫೇಸ್‌ಬುಕ್ ಹೇಳಿದೆ.

ಫೇಸ್‌ಬುಕ್ ಖಾತೆಯನ್ನು ಲಾಗೌಟ್ ಮಾಡದೆ ಸಿಸ್ಟಂ ಅನ್ನು ಆಫ್ ಮಾಡಿದ ನಂತರ, ಮತ್ತೆ ಸಿಸ್ಟಮ್ ಅನ್ನು ಆನ್‌ ಮಾಡಿ ಫೇಸ್‌ಬುಕ್ ತೆರೆದರೆ ಅದು ನೇರವಾಗಿ ನಿಮ್ಮ ಖಾತೆಗೆ ಪ್ರವೇಶ ಪಡೆಯುತ್ತದೆ. ಇದನ್ನೇ ಆಕ್ಸಸ್‌ ಟೋಕನ್ ಎನ್ನುತ್ತಾರೆ. ಇಲ್ಲಿ ಬಳಕೆದಾರರು ಈಮೇಲ್, ಪಾಸ್‌ವರ್ಡ್‌ ಹಾಕುವ ಅವಶ್ಯಕತೆ ಇರುವುದಿಲ್ಲವಾದ್ದರಿಂದ ಇದನ್ನು ಹ್ಯಾಕರ್‌ಗಳು ಕದ್ದು ಬಳಸಿದ್ದಾರೆ.

ನಿಮ್ಮ ಫೇಸ್‌ಬುಕ್ ಖಾತೆ ಕೂಡ ಹ್ಯಾಕ್ ಆಗಿದೆಯಾ?..ಒಂದೇ ನಿಮಿಷದಲ್ಲಿ ಚೆಕ್ ಮಾಡಿ!!

ಭದ್ರತೆಯ ಫೇಸ್‌ಬುಕ್ ಕಾರಣ ಖಾತೆಗಳನ್ನು ಲಾಗೌಟ್ ಮಾಡಿ ಲಾಗಿನ್ ಮಾಡುವುದು ಅವಶ್ಯಕತವಾಗಿತ್ತು. ಹಾಗಾಗಿ ಬಳಕೆದಾರರ ಖಾತೆಗಳನ್ನು ಲಾಗೌಟ್ ಮಾಡಲಾಗಿತ್ತು ಎಂದು ಕಂಪೆನಿ ಹೇಳಿದೆ. ಒಂದು ವೇಳೆ ನಿಮ್ಮ ಖಾತೆ ಸಹ ಹ್ಯಾಕ್ ಆಗಿದೆಯಾ ಎಂಬುದನ್ನು ಸಹ ತಿಳಿದುಕೊಳ್ಳುವ ಆಯ್ಕೆಯನ್ನು ಸಹ ನೀಡಿದೆ. ಹಾಗಾದರೆ, ಏನಿದು ಆಯ್ಕೆ ಎಂಬುದನ್ನು ಮುಂದೆ ತಿಳಿಯಿರಿ.

ನಿಮ್ಮ ಖಾತೆ ಸಹ ಹ್ಯಾಕ್ ಆಗಿದೆಯಾ?

ನಿಮ್ಮ ಖಾತೆ ಸಹ ಹ್ಯಾಕ್ ಆಗಿದೆಯಾ?

ಬಹುತೇಕರು ಫೇಸ್‌ಬುಕ್ ಅನ್ನು ಸಾಮಾನ್ಯವಾಗಿ ಲಾಗ್‌ಔಟ್ ಆಗದೇ ಬಳಸುವುದರಿಂದ ಅವರ ಖಾತೆಗಳು ಹ್ಯಾಕ್ ಆಗಬಹುದಾದ ಸಾಧ್ಯತೆ ಹೆಚ್ಚಿರುತ್ತದೆ. ವ್ಯೂ ಆಸ್ ಆಫ್ಷನ್ ಅನ್ನು ಬಳಸಿ ಫೇಸ್‌ಬುಕ್ ಖಾತೆಗಳಿಂದ ಕದ್ದ ಮಾಹಿತಿಯ ವಿವರವನ್ನು ಕಂಪೆನಿ ಹೊರಗೆಡವಿದೆ. ಹಾಗಾದರೆ, ನಿಮ್ಮ ಖಾತೆಯನ್ನು ಸಹ ಹ್ಯಾಕ್ ಮಾಡಲಾಗಿದೆಯೇ ಎಂಬುದನ್ನು ಹೀಗೆ ತಿಳಿಯಿರಿ.

ಕ್ವಿಕ್ ಹೆಲ್ಪ್ ಮೇಲೆ ಕ್ಲಿಕ್ ಮಾಡಿ.

ಕ್ವಿಕ್ ಹೆಲ್ಪ್ ಮೇಲೆ ಕ್ಲಿಕ್ ಮಾಡಿ.

ಮೊದಲು ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗಿ ನೋಟಿಫಿಕೇಷನ್ ಪಕ್ಕದಲ್ಲಿರುವ ಕ್ವಿಕ್ ಹೆಲ್ಪ್( ಪ್ರಶ್ನಾರ್ಥಕ ಚಿಹ್ನೆ) ಅನ್ನು ಕ್ಲಿಕ್ ಮಾಡಿ. ನಂತರ ಬಲಬದಿಯಲ್ಲಿರುವ ಹೆಲ್ಪ್ ಸೆಂಟರ್ ಅನ್ನು ಆಯ್ಕೆ ಮಾಡಿಕೊಳ್ಳಿ. ಈಗ ನೀವು ಹೆಲ್ಫ್ ಸೆಂಟರ್ ಮುಖ್ಯ ಪೇಜ್‌ಗೆ ನಾವಿಗೇಟ್ ಆಗುತ್ತೀರಾ.ಅಥವಾ ನೇರವಾಗಿ ನೀವು "https://www.facebook.com/help/securitynotice?ref=sec "ಲಿಂಕ್ ಮೇಲೆ ಕ್ಲಿಕ್ ಮಾಡಿ.

ಈ ಶೀರ್ಷಿಕೆಯನ್ನು ಹುಡುಕಿ.

ಈ ಶೀರ್ಷಿಕೆಯನ್ನು ಹುಡುಕಿ.

ಹೆಲ್ಫ್ ಸೆಂಟರ್ ಮುಖ್ಯ ಪೇಜ್‌ಗೆ ನಾವಿಗೇಟ್ ಆದ ನಂತರ ಸ್ಕ್ರಾಲ್ ಮಾಡುತ್ತಾ ಇದ್ದರೆ "Is my facebook account impacted by security issue" ಎಂಬ ಶೀರ್ಷಿಕೆ ನಿಮ್ಮ ಕಣ್ಣಿಗೆ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆಯಾ ಅಥವಾ ಇಲ್ಲವೆ ಎಂಬುದನ್ನು ತಿಳಿಸುತ್ತದೆ. ಎಷ್ಟು ಪ್ರಮಾಣದ ಹ್ಯಾಕ್ ಎಂಬುದನ್ನು ಸಹ ತಿಳಿಯಬಹುದು

 ವಿವರವಾದ ಮಾಹಿತಿ ಸಿಗುತ್ತದೆ.!

ವಿವರವಾದ ಮಾಹಿತಿ ಸಿಗುತ್ತದೆ.!

ನಿಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದರೆ, ನೀಲಿ ಬಣ್ಣದ ಬಾಕ್ಸ್‌ನಲ್ಲೊ ದೊಡ್ಡದಾಗಿ ಹ್ಯಾಕ್ ಆಗಿರುವ ಬಗ್ಗೆ ಹೌದು ಅಥವಾ ಇಲ್ಲ ಎಂಬ ಮಾಹಿತಿ ಸುಗುತ್ತದೆ. ಮಾಹಿತಿ ಕದಿಯುವಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ನಿಮ್ಮ ಖಾತೆ ಹ್ಯಾಕಿಂಗ್ ಯಾವ ವಿಭಾಗಕ್ಕೆ ಸೇರಿದ್ದು ಎಂಬ ವಿವರವನ್ನು ಸಹ ಅಲ್ಲಿ ನಿಮಗೆ ತಿಳಿಸುತ್ತದೆ. ಆ ಮೂರು ವಿಭಾಗಗಳು ಹೀಗಿವೆ.

ಮಾಹಿತಿ ಕದಿಯುವಿಕೆ..ವಿಭಾಗ 1

ಮಾಹಿತಿ ಕದಿಯುವಿಕೆ..ವಿಭಾಗ 1

ಅಲ್ಪ ಅಪಾಯದಲ್ಲಿರುವ ಫೇಸ್‌ಬುಕ್ ಖಾತೆಗಳನ್ನು ಫೇಸ್‌ಬುಕ್ ಮೊದಲ ವಿಭಾಗದಲ್ಲಿ ತಿಳಿಸಿದೆ. ಈ ವಿಭಾಗದಲ್ಲಿ ಹೆಸರು ಮತ್ತು ಕಾಂಟ್ಯಾಕ್ಟ್ ಮಾಹಿತಿ ಸೋರಿಕೆಯಾಗಿರುತ್ತದೆ. ಇದುಬಳಕೆದಾರರ ವೈಯಕ್ತಿಕ ಮಾಹಿತಿಯೊಂದು ಹ್ಯಾಕರ್‌ಗಳಿಗೆ ಸಿಕ್ಕಿರುವುದು ಸ್ಪಷ್ಟವಾಗಿದೆ. ಅಷ್ಟೇನು ಅಪಾಯವಲ್ಲದ ವಿಭಾಗವಾಗಿದ್ದರೂ ಬಳಕೆದಾರರಿಗೆ ಸಂಕಷ್ಟವೇ ಸರಿ.

ಮಾಹಿತಿ ಕದಿಯುವಿಕೆ..ವಿಭಾಗ 2

ಮಾಹಿತಿ ಕದಿಯುವಿಕೆ..ವಿಭಾಗ 2

ಹೆಸರು ಮತ್ತು ಕಾಂಟ್ಯಾಕ್ಟ್ ಮಾಹಿತಿ ಜೊತೆಗೆ, ಯೂಸರ್‌ನೇಮ್, ಲಿಂಗ್, ಭಾಷೆ, ಚೆಕ್ಕಿಂಗ್ ಪ್ಲೇಸ್, ಮೊಬೈಲ್ ಮಾಡೆಲ್, ಜನ್ಮ ದಿನಾಂಕಗಳು, ಫಾಲೊ ಮಾಡುವ ಪೇಜ್‌ಗಳು, ಇತ್ತೀಚಿನ ನಿಮ್ಮ ಸರ್ಚ್ ವಿಷಯಗಳು ಸೇರಿದಂತೆ ಅಪಾಯಕಾರಿ ಮಾಹಿತಿಗಳು ವಿಭಾಗ 2 ರಲ್ಲಿವೆ. ಈ ವಿಭಾಗದಲ್ಲಿ 14 ದಶಲಕ್ಷ ಬಳಕೆದಾರರ ಹ್ಯಾಕ್ ಆಗಿದ್ದು, ಇವರಿಗೆ ಹೆಚ್ಚು ತೊಂದರೆಯಾಗಿದೆ.

ಮಾಹಿತಿ ಕದಿಯುವಿಕೆ..ವಿಭಾಗ 3

ಮಾಹಿತಿ ಕದಿಯುವಿಕೆ..ವಿಭಾಗ 3

ಈ ವಿಭಾಗದಲ್ಲಿ ಬಳಕೆದಾರರ ಯಾವುದೇ ಮಾಹಿತಿಯನ್ನು ಕದಿಯಲು ಆಗದಿದ್ದರೂ ಸಹ ಹ್ಯಾಕ್ ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ. ಕೇವಲ 1 ಲಕ್ಷ ಬಳಕೆದಾರರು ಈ ವಿಭಾಗದಲ್ಲಿದ್ದು, ಹ್ಯಾಕರ್‌ಗಳ ಕದಿಯುವ ಯತ್ನ ಇಲ್ಲಿ ವಿಫಲವಾಗಿದೆ. ಇದರಿಂದ ಮಾಹಿತಿ ಕದಿಯುವಿಕೆಯ 3ನೇ ವಿಭಾಗದಲ್ಲಿರುವ ಬಳಕೆದಾರರು ಚಿಂತಿಸುವ ಅಗತ್ಯತೆ ಇಲ್ಲ.

Best Mobiles in India

English summary
An important update about Facebook's recent security incident. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+