ಫೇಸ್‌ಬುಕ್‌ನಲ್ಲಿ ನಿಮ್ಮ ಮೊದಲ ಪೋಸ್ಟ್ ಯಾವುದು ಎಂದು ನೋಡುವುದು ಹೇಗೆ?
ಹಳೆಯ ನೆನಪುಗಳು ಎಲ್ಲರಿಗೂ ಖುಷಿ ನೀಡುತ್ತವೆ ಎಂಬುದಕ್ಕೆ ನಮ್ಮ ಬಾಲ್ಯವೇ ಸಾಕ್ಷಿ. ಇಂದು ನಮ್ಮ ಕಣ್ಣ ಮುಂದೆ ಬಾಲ್ಯದ ಕ್ಷಣಗಳು ಮೂಡಿದರೆ ಆ ಸಂತೋಷಕ್ಕೆ ಪಾರವೇ ಇಲ್ಲ.
ಹಳೆಯ ನೆನಪುಗಳು ಎಲ್ಲರಿಗೂ ಖುಷಿ ನೀಡುತ್ತವೆ ಎಂಬುದಕ್ಕೆ ನಮ್ಮ ಬಾಲ್ಯವೇ ಸಾಕ್ಷಿ. ಇಂದು ನಮ್ಮ ಕಣ್ಣ ಮುಂದೆ ಬಾಲ್ಯದ ಕ್ಷಣಗಳು ಮೂಡಿದರೆ ಆ ಸಂತೋಷಕ್ಕೆ ಪಾರವೇ ಇಲ್ಲ. ಆದರೆ, ಅದು ಈಗ ನೆನಪಷ್ಟೆ. ನಮ್ಮ ಬಾಲ್ಯವು ಫೋಟೊದಲ್ಲಿ ಅಥವಾ ವಿಡಿಯೋದಲ್ಲಿ ಏನಾದರೂ ಮದ್ರಿತವಾಗಿದ್ದರಷ್ಟೆ ಅದನ್ನು ಮತ್ತೆ ನಾವು ನೋಡಿ ಆನಂದಿಸಬಹುದು.
ಇದೇ ರೀತಿಯಲ್ಲಿ ನಿಮ್ಮ ಫೇಸ್‌ಬುಕ್ ಕೂಡ ನಿಮಗೆ ಹಳೆಯ ನೆನಪನ್ನು ತಂದುಕೊಡಬಹುದು. ನೀವು ಫೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿದ ಸಮಯದಲ್ಲಿ ನಿಮ್ಮ ಫಸ್ಟ್ ಪೋಟೊ ಯಾವುವು? ಆ ಪೋಸ್ಟ್‌ನಲ್ಲಿ ನೀವು ಏನನ್ನು ಶೇರ್ ಮಾಡಿದ್ದೀರಾ? ಆ ಪೋಸ್ಟ್‌ನಲ್ಲಿ ನನ್ನದೇ ಚಿತ್ರವಿದ್ದರೆ ಆಗ ನಾನು ಹೇಗಿದ್ದೀನಿ ಎಂಬ ಕುತೋಹಲ ಸಹ ನಿಮಗೆ ಮೂಡಬಹುದು.

ಇದಕ್ಕಾಗಿಯೇ ಫೇಸ್‌ಬುಕ್ ನಿಮ್ಮೆಲ್ಲಾ ಮಾಹಿತಿಗಳನ್ನು ತನ್ನಲ್ಲಿ ಅಂಗ್ರಹಿಸಿಟ್ಟುಕೊಳ್ಳುತ್ತದೆ. ಅದನ್ನು ವರ್ಷಕ್ಕೊಮ್ಮೆ ನೆನಪಿಸುವ ಕೆಲಸವನ್ನು ಸಹ ಮಾಡುತ್ತದೆ. ಆದರೆ, ನಮ್ಮ ಮೊದಲ ಪೋಸ್ಟ್ ಯಾವುದು ಎಂದು ತಿಳಿದುಕೊಳ್ಳುವುದು ಹೇಗೆ?.ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ನಿಮ್ಮ ಪ್ರಪ್ರಥಮ ಪೋಸ್ವ್ ನೀವೇ ಹುಡುಕುವುದನ್ನು ತಿಳಿಯಿರಿ.

ಪ್ರೊಫೈಲ್ ಪುಟ ತೆರೆಯಿರಿ.
ಫೇಸ್‌ಬುಕ್‌ಗೆ ಲಾಗಿನ್ ಆದ ನಂತರ ನಿಮ್ಮ ಪ್ರೊಫೈಲ್ ಪುಟವನ್ನು ತೆರೆಯಿರಿ. ಅಲ್ಲಿ ಕಾಣೀಸುವ ಕವರ್ ಪಿಕ್ಚರ್‌ನ ಬಲ ಕೆಳ ಮೂಲೆಯಲ್ಲಿ 'ವ್ಯೂ ಆ್ಯಕ್ಟಿವಿಟಿ ಲಾಗ್' ಅಂತ ಇರುವುದನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಬಲಭಾಗದಲ್ಲಿ ಇಸವಿಗಳ ಪಟ್ಟಿ ಕಾಣಿಸುತ್ತದೆ.

ಇಸವಿಯನ್ನು ಆಯ್ಕೆ ಮಾಡಿ
ಬಲಭಾಗದಲ್ಲಿ ಇಸವಿಗಳ ಪಟ್ಟಿ ಕಾಣಿಸಿದ ನಂತರ ಅಲ್ಲಿ ತಳ ಭಾಗದಲ್ಲಿರುವ ಇಸವಿಯನ್ನು ಕ್ಲಿಕ್ ಮಾಡಿ. ಅಥವಾ, ಎಡಭಾಗದಲ್ಲಿ 'ಫಿಲ್ಟರ್ಸ್' ಅಂತ ಇರುವಲ್ಲಿ 'ಪೋಸ್ಟ್ಸ್' ಎಂಬುದನ್ನು ಕೂಡ ಕ್ಲಿಕ್ ಮಾಡಿ, ಬಲಭಾಗದಲ್ಲಿರುವ ಕಟ್ಟಕಡೆಯ ಇಸವಿಯನ್ನು ನೀವಿಲ್ಲಿ ಕ್ಲಿಕ್ ಮಾಡಬಹುದು.

'ಫೋಟೋಸ್ ಆಂಡ್ ವೀಡಿಯೋಸ್'
ಅದೇ ರೀತಿಯಲ್ಲಿ, ನೀವು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ ಮೊದಲ ಫೋಟೊ ಅಥವಾ ವೀಡಿಯೊ ಯಾವುದೆಂದು ತಿಳಿಯಬೇಕಿದ್ದರೆ, ಎಡಭಾಗದಲ್ಲಿ 'ಫೋಟೋಸ್ ಆಂಡ್ ವೀಡಿಯೋಸ್' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಅಲ್ಲಿ ಲಭ್ಯವಿರುವ ಕೊನೆಯ ಇಸವಿಯನ್ನು ಆಯ್ಕೆ ಮಾಡಿ.

ಪೋಸ್ಟ್ ಮಾಡಿದ ಸಮಯಗಳನ್ನು ತಿಳಿಯಿರಿ!
ಇಷ್ಟು ಕೆಲಸದ ನಂತರ ಫೇಸ್‌ಬುಕ್‌ನಲ್ಲಿ ನೀವು ಹಾಕಿದ ಮೊದಲ ಪೋಸ್ಟ್ ಗೋಚರಿಸದಿದ್ದರೆ (ಅಂದರೆ ಖಾತೆ ತೆರೆದ ಬಳಿಕ ಪೋಸ್ಟ್ ಮಾಡಿರದೇ ಇದ್ದರೆ), ಒಂದೊಂದೇ ತಿಂಗಳ/ವರ್ಷದ ಹೆಸರಿನ ಮೇಲೆ ಕ್ಲಿಕ್ ಮಾಡುತ್ತಾ ಹೋಗಿ. ನಿಮ್ಮ ಮೊದಲ ಪೋಸ್ಟ್ ತಳ ಭಾಗದಲ್ಲಿ ಕಾಣಿಸುತ್ತದೆ.


ಖಂಡಿತ ಖುಷಿ ನಿಡುತ್ತದೆ.
ಫೇಸ್‌ಬುಕ್‌ನಲ್ಲಿ ನಾವು ಪೋಸ್ಟ್ ಮಾಡಿದ ಮೊದಲ ಪೋಸ್ಟ್ ಅಥವಾ ಚಿತ್ರ ಯಾವುದು ಎಂದು ತಿಳಿದುಕೊಳ್ಳುವುದು ನಮಗೆ ಖಂಡಿತ ಖುಷಿ ನಿಡುತ್ತದೆ. ನನ್ನ ಹಳೆಯ ಚಿತ್ರಗಳು ಹೀಗಿದ್ದವೆ, ನಾವು ಇಷ್ಟು ಬದಲಾಗಿದ್ದೇನಾ ಎಂಬ ಪ್ರಶ್ನೆಗಳ ಜೊತೆಗೆ ಹಳೆಯ ನೆನಪುಗಳು ಒಮ್ಮೆ ನಿಮ್ಮನ್ನು ಆವರಿಸಿಕೊಳ್ಳುವುದು ಮಾತ್ರ ಖಂಡಿತ.!


Click it and Unblock the Notifications








