ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಯಾರು ನೋಡಿದ್ದಾರೆ ಎಂದು ತಿಳಿಯುವುದು ಹೇಗೆ?
ನೂರಾರು ಜನರನ್ನು ಸರ್ಚ್ ಮಾಡಿ ಅವರ ಪ್ರೋಫೈಲ್ ನೋಡುವ ನಾವು, ನಮ್ಮ ಫೆಸ್‌ಬುಕ್ ಪ್ರೊಫೈಲ್ ಯಾರು ನೋಡಿದ್ದಾರೆ ಎಂಬುದನ್ನು ತಿಳಿಯಲು ಕುತೋಹಲ ಹೊಂದಿರುತ್ತೇವೆ.!!
ಒಂದು ತಿಂಗಳು ಫೇಸ್‌ಬುಕ್ ನೋಡದಿದ್ದರೇ ಏನೋ ಕಳೆದುಕೊಂಡ ಅನುಭವ ಹೇಗೆ ಕಾಡುತ್ತದೆಯೋ ಹಾಗೆಯೇ, ನನ್ನ ಫೇಸ್‌ಬುಕ್ ಪ್ರೋಫೈಲ್ ಚೆಕ್ ಮಾಡಿ ಯಾರು ನೋಡಿದ್ದಾರೆ ಎನ್ನುವುದು ಸಹ ಎಲ್ಲಾ ಫೇಸ್‌ಬುಕ್ ಬಳಕೆದಾರರನ್ನು ಕಾಡುತ್ತಿರುತ್ತದೆ.!! ಹೌದು, ನೂರಾರು ಜನರನ್ನು ಸರ್ಚ್ ಮಾಡಿ ಅವರ ಪ್ರೋಫೈಲ್ ನೋಡುವ ನಾವು, ನಮ್ಮ ಫೆಸ್‌ಬುಕ್ ಪ್ರೊಫೈಲ್ ಯಾರು ನೋಡಿದ್ದಾರೆ ಎಂಬುದನ್ನು ತಿಳಿಯಲು ಕುತೋಹಲ ಹೊಂದಿರುತ್ತೇವೆ.!!
ಆದರೆ, ನಮ್ಮ ಫೆಸ್‌ಬುಕ್ ಪ್ರೋಫೈಲ್ ನೋಡಿದವರನ್ನು ತಿಳಿಯುವುದು ಹೇಗೆ? ಇದಕ್ಕಾಗಿ ಫೇಸ್‌ಬುಕ್‌ನಲ್ಲಿ ಯಾವುದೇ ಆಯ್ಕೆ ಇಲ್ಲವಲ್ಲ ಎಂದು ನಿಮಗೆ ಅನಿಸುತ್ತಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ.!! ಫೇಸ್‌ಬುಕ್ ನಿಮಗೆ ಇಂತಹ ಅವಕಾಶ ನೀಡಿಲ್ಲಾವಾದರೂ ಫೇಸ್‌ಬುಕ್ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಯಾರು ಯಾರು ನೋಡಿದ್ದಾರೆ ಎಂದು ತಿಳಿಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಹೇಳಿಕೊಡುತ್ತೇವೆ. ಕೆಳಗಿನ ಸ್ಲೈಡರ್‌ಗಳಲ್ಲಿ ಅದನ್ನು ತಿಳಿಯಿರಿ!!

ಪ್ರೊಫೈಲ್ ಒಪನ್ ಮಾಡಿ!!
ಫೆಸ್‌ಬುಕ್ ತೆರೆದು ನಿಮ್ಮ ಪ್ರೊಫೈಲ್ ಒಪನ್ ಮಾಡಿ. ನಿಮ್ಮ ಪ್ರೋಫೈಲ್ ತೆರೆದ ನಂತರ ಮೌಸ್‌ನ ಬಲಬಾಗದ ಬಟನ್ ಕ್ಲಿಕ್ ಮಾಡಿ. "View page Source" ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿ.

CTRL+F ಪ್ರೆಸ್ ಮಾಡಿ!!
"View page Source" ಎಂಬ ಆಯ್ಕೆಯನ್ನು ಒತ್ತಿದ ನಂತರ ನಿಮಗೆ ಮಾಹಿತಿ ಇರುವ ಪೇಜ್ ಒಂದು ತೆರೆಯುತ್ತದೆ. ಅಲ್ಲಿ CTRL+F ಪ್ರೆಸ್ ಮಾಡಿ. CTRL+F ಪ್ರೆಸ್ ಮಾಡಿದರೆ ನಿಮಗೆ ಸರ್ಚ್ ಆಗುವ ಆಯ್ಕೆ ಕಾಣುತ್ತದೆ. ಅಲ್ಲಿ 'initialchat' ಎಂದು ಟೈಪಿಸಿ ಎಂಟರ್ ಬಟನ್ ಪ್ರೆಸ್ ಮಾಡಿ.!!

ಹೆಚ್ಚಿನ ಫೇಸ್‌ಬುಕ್ ಐಡಿಗಳ ಪಟ್ಟಿ ತೆರೆದುಕೊಳ್ಳುತ್ತದೆ.!!
ಸರ್ಚ್ ಆಗುವ ಆಯ್ಕೆಯಲ್ಲಿ 'initialchat' ಎಂದು ಟೈಪಿಸಿ ಎಂಟರ್ ಬಟನ್ ಪ್ರೆಸ್ ಮಾಡಿದರೆ, ಹಲವಾರು ಫೇಸ್‌ಬುಕ್ ಐಡಿನಂಬರ್‌ಗಳು ಕಾಣಿಸುತ್ತವೆ. ಉದಾಹರಣೆಗೆ (100009387769920) ಆ ಫೇಸ್‌ಬುಕ್ ಐಡಿ ಹೊಂದಿರುವವರೆ ನಿಮ್ಮ ಪ್ರೊಫೈಲ್ ನೋಡಿರುತ್ತಾರೆ.!!

ಯುಆರ್ಎಲ್‌ನಲ್ಲಿ ಹುಡುಕಿ.!!
ಅಲ್ಲಿ ಕಾಣುವ ನೂರಾರು ಫೇಸ್‌ಬುಕ್ ಐಡಿಗಳಲ್ಲಿ ನಿಮಗೆ ಬೇಕಾದ ಫೆಸ್‌ಬುಕ್ ಐಡಿಗಳನ್ನು ಕಾಪಿ ಮಾಡಿಕೊಂಡು. www.facebook.com/ ಐಡಿ ಟೈಪಿಸಿ ಎಂಟರ್ ಮಾಡಿ (100009387769920). ನಂತರ ನಿಮ್ಮ ಪ್ರೊಫೈಲ್‌ಗೆ ಇತ್ತೀಚೆಗೆ ಭೇಟಿ ನೀಡಿರುವ ಸ್ನೇಹಿತರ ಪ್ರೊಫೈಲ್ ಒಪನ್ ಆಗುತ್ತದೆ.!!


Click it and Unblock the Notifications








