Home
ಟೆಕ್ ನೌಕರಿ

ಪಬ್‌ಜಿ ಗೇಮ್‌ನಲ್ಲಿನ ಇಂಟರ್‌ನೆಟ್ ಎರರ್ ನಿವಾರಿಸುವುದು ಹೇಗೆ..?

By Gizbot Bureau

ಪಿಯುಬಿಜಿ ಮೊಬೈಲ್ ಗೇಮ್ ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಲಭ್ಯವಿದೆ. ಇದು ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದು ಜಗತ್ತಿನಾದ್ಯಂತ ಹಲವಾರು ಮಂದಿ ಲೈಕ್ ಮುದ್ರೆಯನ್ನು ಒತ್ತಿದ್ದಾರೆ. ಪಿಯುಬಿಜಿ ಅನ್ನುವುದು ಒಂದು ಬದುಕುಳಿಯಲು ಹೋರಾಡುವ ಗೇಮ್ ನಂತೆ. ಯುದ್ಧಭೂಮಿಯ ಆಟ. ಅಲ್ಲಿ ನೀವು ಸಾಯದೇ ಹೋರಾಟ ನಡೆಸುತ್ತಾ ಮುಂದೆ ಸಾಗಬೇಕು.

ಪಬ್‌ಜಿ ಗೇಮ್‌ನಲ್ಲಿನ ಇಂಟರ್‌ನೆಟ್ ಎರರ್ ನಿವಾರಿಸುವುದು ಹೇಗೆ..?

ಇದರ ಗೇಮ್ ಪ್ಲೇ ಮತ್ತು ವಿಷುವಲ್ ಗಳು ಭಾರೀ ಆಕರ್ಷಕವಾಗಿದೆ. ಇದೊಂದು ಆನ್ ಲೈನ್ ಗೇಮ್ ಆಗಿದ್ದು, ನೀವಿದನ್ನು ಆಡಬೇಕು ಎಂದರೆ ಇಂಟರ್ನೆಟ್ ಕನೆಕ್ಷನ್ ವರ್ಕ್ ಆಗುತ್ತಲೇ ಇರಬೇಕು. ಆಗ ಮಾತ್ರ ಆಂಡ್ರಾಯ್ಡ್ ನಲ್ಲಾಗಲಿ ಅಥವಾ ಐಓಎಸ್ ನಲ್ಲಾಗಲಿ ನೀವು ಈ ಆಟವನ್ನು ಸಂತೋಷಿಸಲು ಸಾಧ್ಯವಾಗುತ್ತದೆ. ಆದರೆ, ಪಿಯುಬಿಜಿಯ ಬಗ್ ಕೆಲವೊಮ್ಮೆ ಬಳಕೆದಾರರಿಗೆ ಆಟದಲ್ಲಿ ಕೆಲವು ನಿಯಮಗಳನ್ನು ಹೇರುತ್ತದೆ.

ಇಂಟರ್‌ನೆಟ್‌ ಎರರ್

ಇಂಟರ್‌ನೆಟ್‌ ಎರರ್

ಸರ್ವರ್ ಗೆ ಕನೆಕ್ಟ್ ಆಗಿದ್ದಾಗ ಪಿಯುಬಿಜಿಯನ್ನು ಪ್ರೀತಿಸುವವರಿಗೆ ಇಂಟರ್ನೆಟ್ ಎರರ್ ಕಾಣಿಸುತ್ತದೆ. ಹಾಗಾಗಿ ನಿಮಗೂ ಕೂಡ ಇದೇ ಬಗ್ ಕಾಣಿಸಿಕೊಂಡಿದ್ದರೆ ಅದನ್ನು ನಿವಾರಿಸುವ ತಂತ್ರ ಹೇಗೆ ಎಂಬುದರ ಬಗ್ಗೆ ಈ ಲೇಖನ ಗಮನ ಹರಿಸುತ್ತಿದೆ. ಕೆಲವು ಸರಳ ವಿಧಾನಗಳನ್ನು ನಾವು ಪಿಯುಬಿಜಿ ಇಂಟರ್ನೆಟ್ ಎರರ್ ನ್ನು ಫಿಕ್ಸ್ ಮಾಡಲು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಕೆಲವು ಮೂಲ ವಿಚಾರಗಳನ್ನು ನೀವು ಮೊದಲು ಪರೀಕ್ಷಿಸಬೇಕು:

ಕೆಲವು ಮೂಲ ವಿಚಾರಗಳನ್ನು ನೀವು ಮೊದಲು ಪರೀಕ್ಷಿಸಬೇಕು:

ಪಿಯುಬಿಜಿ ಎರರ್ ಐಓಎಸ್ ಮತ್ತು ಆಂಡ್ರಾಯ್ಡ್ ಎರಡೂ ಬಳಕೆದಾರರಿಗೂ ತೊಂದರೆ ಕೊಡುತ್ತದೆ. ಈ ಎರರ್ ನ್ನು ನಿವಾರಿಸಬೇಕು ಎಂದರೆ ಕೆಲವು ಮೂಲ ವಿಚಾರಗಳನ್ನು ಮೊದಲು ತಿಳಿದಿರಬೇಕು.

1.ನಿಮ್ಮ ಅಂತರ್ಜಾಲ ಸಂಪರ್ಕ ಕೆಲಸ ಮಾಡುತ್ತಿದ್ದೆಯಾ ಅಥವಾ ಇಲ್ಲವಾ ಪರೀಕ್ಷಿಸಿಕೊಳ್ಳಿ.

2.ನಿಮ್ಮ ಅಂತರ್ಜಾಲದ ವೇಗ ಚೆನ್ನಾಗಿದೆ ಎಂದು ಪರೀಕ್ಷಿಸಿಕೊಳ್ಳಿ. ಯಾಕೆಂದರೆ ಹಲವಾರು ಮಂದಿ ಒಮ್ಮೆಲೆ ಆಡುವ ಆಟ ಇದು.

3.ಸಾಧ್ಯವಾದರೆ, ನಿಮ್ಮ ಸ್ಮಾರ್ಟ್ ಫೋನ್ ಅಥವಾ ರೂಟರ್ ನ್ನು ರೀಸ್ಟಾರ್ಟ್ ಮಾಡಿ . ನಂತರ ಅದೇ ಎರರ್ ನಿಮಗೆ ಮತ್ತೆ ಬರುತ್ತಿದೆಯಾ ಎಂಬುದನ್ನು ಪರೀಕ್ಷಿಸಿ

ನೀವು ಈ ಎಲ್ಲಾ ಮೂಲ ವಿಚಾರಗಳನ್ನು ಪರೀಕ್ಷಿಸಿದ ನಂತರವೂ ಸಮಸ್ಯೆ ಹಾಗೆಯೇ ಇದ್ದಲ್ಲಿ, ನಾವು ಕೆಳಗೆ ತಿಳಿಸುವ ಹಂತಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೀವು ನಿಮ್ಮ ಡಿಎನ್ ಎಸ್ ನ್ನು ಬದಲಾಯಿಸಿದರೆ ಈ ಪಿಯುಬಿಜಿ ಮೊಬೈಲ್ ಇಂಟರ್ನೆಟ್ ಎರರ್ ನ್ನು ಸರಿಪರಿಸಿಕೊಳ್ಳಬಹುದು. ಹಾಗಾದ್ರೆ ಕೆಲವು ವಿಧಾನಗಳನ್ನು ಪರಿಕ್ಷಿಸೋಣ.

ಆಂಡ್ರಾಯ್ಡ್ ಬಳಕೆದಾರರಿಗೆ :

ಆಂಡ್ರಾಯ್ಡ್ ಬಳಕೆದಾರರಿಗೆ :

ಡಿಎನ್ಎಸ್ ಸೆಟ್ಟಿಂಗ್ ನಲ್ಲಿ ಆಂಡ್ರಾಯ್ಡ್ ನಲ್ಲಿ ಬದಲಾಯಿಸುವುದು ಬಹಳ ಸುಲಭ. ಆದರೆ ಸರಿಯಾದ ಫಲಿತಾಂಶ ಪಡೆಯಲು ನಮಗೆ ಗೂಗಲ್ ಡಿಎನ್ಎಸ್ ಕೂಡ ಬೇಕಾಗುತ್ತದೆ. ಡಿಎನ್ಎಸ್ ಬದಲಾಯಿಸುವುದರಿಂದಾಗಿ ನಿಮಗೆ ಅಂತರ್ಜಾಲದ ವೇಗವೂ ಹೆಚ್ಚುತ್ತದೆ. ಈ ಕೆಳಗೆ ಕೆಲವು ಡಿಎನ್ಎಸ್ ಸೆಟ್ಟಿಂಗ್ ಗಳನ್ನು ತಿಳಿಸಲಾಗಿದೆ.

ಓಪನ್ ಡಿಎನ್ಎಸ್

208.67.222.123

208.67.220.123

ಗೂಗಲ್ ಡಿಎನ್ಎಸ್

8.8.8.8
8.8.4.4

ಡಿಎನ್ಎಸ್ ಸೆಟ್ಟಿಂಗ್ ಬದಲಾಯಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

 ಸೆಟ್ಟಿಂಗ್ಸ್ >ವೈ-ಫೈ ಯನ್ನು ಬ್ರೌಸ್ ಮಾಡಿ.

ವೈಫೈ ನೆಟ್ ವರ್ಕ್( ಕನೆಕ್ಟೆಡ್) ಇದನ್ನು ಲಾಂಗ್ ಪ್ರೆಸ್ ಮಾಡಿ ಮತ್ತು ‘Modify network' ನ್ನು ಟ್ಯಾಪ್ ಮಾಡಿ.

‘Show advanced options'ಅನೇಬಲ್ ಮಾಡಿ.

ಐಪಿ ಸೆಟ್ಟಿಂಗ್ ನ್ನು‘Static'ಎಂದು ಬದಲಾಯಿಸಿ.

ಈಗ ನೀವು ಡಿಎನ್ಎಸ್ ಸರ್ವರ್ ಐಪಿಯನ್ನು ಡಿಎನ್ಎಸ್1 ಮತ್ತು ಡಿಎನ್ಎಸ್ 2 ಜಾಗದಲ್ಲಿ ಸೇರಿಸಬೇಕು.

ಸೇವ್ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ನೆಟ್ ವರ್ಕ್ ಗೆ ರಿಕನೆಕ್ಟ್ ಆಗಿ.

ಅಷ್ಟೇ. ನಿಮ್ಮ ಕೆಲಸ ಆಯಿತು. ಈಗ ಮತ್ತೆ ಪಿಯುಬಿಜಿ ರನ್ ಮಾಡಿ ಮತ್ತು ನೀವು ಇಂಟರ್ನೆಟ್ ಎರರ್ ಸಮಸ್ಯೆಯನ್ನು ಮತ್ತೆ ಎದುರಿಸುವುದಿಲ್ಲ. ಹೀಗೆ ನೀವು ಆಂಡ್ರಾಯ್ಡ್ ನಲ್ಲಿ ಪಿಯುಬಿಜಿ ಎರರ್ ನ್ನು ಫಿಕ್ಸ್ ಮಾಡಿಕೊಳ್ಳಬಹುದು.

ಐಓಎಸ್ ಬಳಕೆದಾರರಿಗೆ:

ಐಓಎಸ್ ಬಳಕೆದಾರರಿಗೆ:

ಆಂಡ್ರಾಯ್ಡ್ ನಂತೆಯೇ ಐಓಎಸ್ ನಲ್ಲೂ ಕೂಡ ಕೆಲವು ಮಾಡಿಫಿಕೇಷನ್ ಗಳನ್ನು ಮಾಡಬೇಕು. ಇಲ್ಲೂ ಕೂಡ ಅದೇ ಗೂಗಲ್ ಡಿಎನ್ಎಸ್ ಅಥವಾ ಐಓಎಸ್ ನ ಓಪನ್ ಡಿಎನ್ಎಸ್ ನ್ನು ಬಳಕೆ ಮಾಡಬಹುದು. ಈ ಕೆಳಗೆ ತಿಳಿಸಲಾಗುವ ಸರಳ ಹಂತಗಳನ್ನು ಅನುಸರಿಸಿದರೆ ಆಯಿತು.

ಸೆಟ್ಟಿಂಗ್ಸ್ > ವೈಫೈಯನ್ನು ಬ್ರೌಸ್ ಮಾಡಿ.

ಕನೆಕ್ಟ್ ಆಗಿರುವ ನೆಟ್ ವರ್ಕ್ ನ್ನು ಟ್ಯಾಪ್ ಮಾಡಿ ಮತ್ತು ‘Configure DNS'ಹುಡುಕಾಡಿ.

ಮುಂದಿನ ಸ್ಕ್ರೀನ್ ನಲ್ಲಿ ‘Manual'ನ್ನು ಆಯ್ಕೆ ಮಾಡಿ.

‘Add Server'ಟ್ಯಾಪ್ ಮಾಡಿ ಮತ್ತು ಅಲ್ಲಿ ಡಿಎನ್ಎಸ್ ಅಡ್ರೆಸ್ ನ್ನು ಎಂಟರ್ ಮಾಡಿ.

ಅಷ್ಟೇ.ಅಲ್ಲಿಗೆ ಮುಗಿಯಿತು. ಐಓಎಸ್ ನಲ್ಲೂ ಕೂಡ ಪಿಯುಬಿಜಿ ಮೊಬೈಲ್ ಎರರ್ ಸಮಸ್ಯೆ ನಿವಾರಣೆಯಾಗುತ್ತೆ.

ಇದು ಒಟ್ಟಾರೆ ಹೇಗೆ ಪಿಯುಬಿಜಿ ಎರರ್ ನ್ನು ಫಿಕ್ಸ್ ಮಾಡುವುದು ಎಂಬ ಸರಳ ಹಂತಗಳು. ಇನ್ನು ಹೆಚ್ಚಿನ ಹಂತಗಳು ನಿಮಗೆ ತಿಳಿದಿದ್ದರೆ ಕಮೆಂಟ್ ಮೂಲಕ ತಿಳಿಸಿ.

Best Mobiles in India

English summary
How To Fix ‘Internet Error’ On PUBG Mobile for Android & iOS. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+