ಮೇಲ್ ಗಳನ್ನು ಆಟೋ ಫಾರ್ವರ್ಡ್ ಮಾಡುವುದು ಹೇಗೆ..?
ಜಾಗತಿಕವಾಗಿ ಇಂದು ಸುಮಾರು ಒಂದು ಬಿಲಿಯನ್ ಮಂದಿ ಜಿಮೇಲ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಒಂದು ಆಕೌಂಟ್ ನಿಂದ ನಿನ್ನೊಂದು ಜಿಮೇಲ್ ಆಕೌಂಟ್ ಗೆ ಇಮೇಲ್ ಗಳು ಆಟೋಮೆಟಿಕ್ ಆಗಿ ಹೋಗುವಂತೆ ಮಾಡಬಹುದಾಗಿದೆ. ಈ ಕುರಿತು ನಿಮಗೆ ಮಾಹಿತಿಯನ್ನು ನೀಡುವ ಲೇಖನ ದಾಗಿದೆ.

ಹಂತ 1:
ಬಲಭಾಗದ ಮೇಲ್ತುದಿಯಲ್ಲಿರುವ ಸೆಟ್ಟಿಂಗ್ ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ ಫಾರ್ವರ್ಡಿಂಗ್ ಅಂಡ್ POP/AMAP ಟಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಫಾರ್ವರ್ಡಿಂಗ್ ಆಯ್ಕೆಯಲ್ಲಿ, ಆಡ್ ಫಾರ್ವರ್ಡಿಂಗ್ ಆಡ್ರಸ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಅಲ್ಲಿ ಆಟೋಮೆಟಿಕ್ ಆಗಿ ನಿಮ್ಮ ಈ ಮೇಲ್ ಗಳು ಫಾರ್ವಡ್ ಆಗಬೇಕಾದ ಮೇಲ್ ಐಡಿಯನ್ನು ದಾಖಲಿಸಿ.
ಹಂತ 5: ನಂತರ ನೆಕ್ಟ್ ಆಯ್ಕೆಯನ್ನು ಕ್ಲಿಕ್ ಮಾಡಿರಿ.
ಹಂತ 6: ಇದಾದ ನಂತರದಲ್ಲಿ ನಿಮ್ಮ ಮೇಲ್ ಗೆ ವೈರಿಫಿಕೇಷನ್ ಮೇಲ್ ಬರಲಿದೆ.

ಹಂತ 7:
ನಂತರ ಜಿಮೇಲ್ ಆಕೌಂಟ್ ಸೆಟ್ಟಿಂಗ್ಸ್ ಗೆ ಹೋಗಿ ರಿಫ್ರೆಶ್ ಮಾಡಿರಿ.
ಹಂತ 8: ನಂತರ ಫಾರ್ವಡಿಂಗ್ ಇನ್ ಕಂಮಿಂಗ್ ಮೇಲ್ ಮೇಲೆ ಕ್ಲಿಕ್ ಮಾಡಿ.
ಹಂತ 9: ಪೇಜ್ ಕೊನೆಯಲ್ಲಿರುವ ಸೇವ್ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ.
ಈ ಆಟೋಮೇಟಿಕ್ ಮೇಲ್ ಫಾರ್ವರ್ಡಿಂಗ್ ಆಯ್ಕೆಯನ್ನು ಸುಲಭವಾಗಿ ಡಿಸೆಬಲ್ ಸಹ ಮಾಡಬಹುದಾಗಿದೆ.

ಹಂತ
ಹಂತ 1: ಬಲಭಾಗದ ಮೇಲ್ತುದಿಯಲ್ಲಿರುವ ಸೆಟ್ಟಿಂಗ್ ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ ಫಾರ್ವರ್ಡಿಂಗ್ ಅಂಡ್ POP/AMAP ಟಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಫಾರ್ವರ್ಡಿಂಗ್ ಸೆಲೆಕ್ಷನ್ ನಲ್ಲಿ ಡಿಸೆಬಲ್ ಫಾರ್ವಡಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 4: ಪೇಜ್ ಕೊನೆಯಲ್ಲಿರುವ ಸೇವ್ ಚೆಂಜಸ್ ಮೇಲೆ ಕ್ಲಿಕ್ ಮಾಡಿ.


Click it and Unblock the Notifications








