ನಿಮ್ಮ ಮ್ಯಾಕ್ ಕಂಪ್ಯೂಟರ್‌ನ್ನು ಈ 9 ವಿಧಾನಗಳಿಂದ ಭದ್ರಗೊಳಿಸಿ..!

By GizBot Bureau
|

ಮ್ಯಾಕ್ ಪೂರ್ವನಿಯೋಜಿತವಾಗಿಯೇ ಸುರಕ್ಷಿತವಾಗಿರುತ್ತದೆ. ಆದರೆ ಕೆಲವೊಂದು ಭದ್ರತಾ ಅನುಷ್ಟಾನಗಳನ್ನು ತೆಗೆದುಕೊಂಡರೆ ಇನ್ನಷ್ಟು ಸುರಕ್ಷಿತವಾಗಿ ಇರಲು ಸಾಧ್ಯವಾಗುತ್ತದೆ. ಇದರರ್ಥ ಒಂದು ವೇಳೆ ನೀವು ಸಾಮಾನ್ಯ ಬಳಕೆಗಾಗಿ ಮ್ಯಾಕ್ ಡಿವೈಸ್ ನ್ನು ಬಳಕೆ ಮಾಡುತ್ತಿದ್ದು ಇನ್ನೂ ಕೂಡ ಯಾವುದೇ ಭದ್ರತಾ ಕಾರ್ಯಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಖಂಡಿತ ಹೆಚ್ಚಿನ ಬದಲಾವಣೆ ಮಾಡುವ ಅಗತ್ಯವಿಲ್ಲ.

ಆದರೆ ಒಂದು ವೇಳೆ ನೀವು ನಿಮ್ಮ ಬ್ಯುಸಿನೆಸ್ ಗಾಗಿ ಈ ಡಿವೈಸ್ ನ್ನು ಬಳಕೆ ಮಾಡುತ್ತಿದ್ದರೆ, ಆಗ ಖಂಡಿತ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿರುತ್ತದೆ. ಎಲ್ಲಾ ಸಾಧ್ಯತೆಯ ಅಟ್ಯಾಕ್ ಗಳು ಮತ್ತು ಕಳ್ಳತನಗಳಿಂದ ನಿಮ್ಮ ಮ್ಯಾಕ್ ಡಿವೈಸ್ ನ್ನು ಸುರಕ್ಷಿತವಾಗಿಡಲು ಕೆಲವು ಸರಳ ಹಂತಗಳಿವೆ.

ನಿಮ್ಮ ಮ್ಯಾಕ್ ಕಂಪ್ಯೂಟರ್‌ನ್ನು ಈ 9 ವಿಧಾನಗಳಿಂದ ಭದ್ರಗೊಳಿಸಿ..!

ನಿಮ್ಮ ಮ್ಯಾಕ್ ನ್ನು ಸಂಪೂರ್ಣವಾಗಿ ಭದ್ರಗೊಳಿಸುವ ಸರಳವಾದ 9 ವಿಧಾನಗಳ ಪರಿಪೂರ್ಣ ವಿವರಗಳನ್ನು ಈ ಲೇಖನದಲ್ಲಿ ಪಡೆದುಕೊಳ್ಳೋಣ. ಆ ಮೂಲಕ ನಿಮ್ಮ ಆಪಲ್ ಕಂಪ್ಯೂಟರ್ ನ್ನು ಹೇಗೆ ಭದ್ರವಾಗಿ ಇಟ್ಟುಕೊಳ್ಳುವುದು ಮತ್ತು ಕೆಲವು ಭದ್ರತಾ ರಿಸ್ಕ್ ನ್ನು ಎದುರಿಸುವುದು ಜೊತೆಗೆ ಕಳ್ಳರುಕಾಕರು ನಿಮ್ಮ ಸಿಸ್ಟಮ್ ನಲ್ಲಿನ ಮಾಹಿತಿಯನ್ನು ಅಕ್ರಮವಾಗಿ ಕದಿಯುವ ಭಯದಿಂದ ಹೇಗೆ ನೀವು ಸುರಕ್ಷಿತವಾಗಿರುವುದು ಎಂಬ ಬಗ್ಗೆ ವಿವರಗಳನ್ನು ಈ ಲೇಖನವು ನಿಮಗೆ ನೀಡಲಿದೆ.

ಸೈಬರ್ ಕ್ರೈಮ್ ಕೇಸ್ ಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಹಾಗಾಗಿ ನಮ್ಮ ಸುರಕ್ಷತೆಯನ್ನು ನಾವು ನೋಡಿಕೊಳ್ಳುವುದು ಬಹಳ ಮುಖ್ಯ. ನೀವು ನಿಮ್ಮ ಡಿವೈಸ್ ನ ಯಾವುದೇ ಪ್ರಮುಖ ಮಾಹಿತಿಯೂ ಕೂಡ ಸೋರಿಕೆಯಾಗದಂತೆ ನೋಡಿಕೊಂಡರೆ ಮುಂದೊಂದು ದಿನ ಎದುರಾಗುವ ಅಪಾಯವನ್ನು ತಪ್ಪಿಸಿಕೊಳ್ಳಬಹುದು. ಹಾಗಾದ್ರೆ ಏನು ಮಾಡಬೇಕು ನೋಡೋಣ ಬನ್ನಿ.

1 ಫೈಲ್ ವಾಲ್ಟ್ ಅನ್ನು ಸ್ವಿಚ್ ಆನ್ ಮಾಡಿ

1 ಫೈಲ್ ವಾಲ್ಟ್ ಅನ್ನು ಸ್ವಿಚ್ ಆನ್ ಮಾಡಿ

ಫೈಲ್ ವಾಲ್ಟ್ ಅನ್ನುವುದು ಒಂದು ಪ್ರಬಲವಾದ ಎನ್ಕ್ರಿಪ್ಷನ್ ಸಿಸ್ಟಮ್ ಆಗಿದೆ. ಇದನ್ನು ಡಿಸ್ಕ್ ನಲ್ಲಿ ಎಲ್ಲಾ ಕಟೆಂಟ್ ಗಳನ್ನು ಎನ್ಕ್ರಿಪ್ಟ್ ಮಾಡಿ ಭದ್ರಗೊಳಿಸಲು ಬಳಸಬಹುದು. ಒಂದು ವೇಳೆ ಕಳ್ಳರಿಗೆ ನಿಮ್ಮ ಫಿಸಿಕಲ್ ಹಾರ್ಡ್ ಡಿಸ್ಕ್ ಗೆ ಆಕ್ಸಿಸ್ ಸಿಕ್ಕಿದರೂ ಕೂಡ , ಪಾಸ್ ವರ್ಡ್ ಇಲ್ಲದೆಯೇ ನಿಮ್ಮ ಡಾಟಾವನ್ನು ಆಕ್ಸಿಸ್ ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ಯಾವಾಗಲೂ ಕೂಡ ಅತ್ಯುತ್ತಮವಾದ ವಾಲ್ಟ್ ಸಿಸ್ಟಮ್ ತಂತ್ರಗಳನ್ನು ಬಳಸಿ ಮತ್ತು ಡಾಟಾವನ್ನು ಹ್ಯಾಕರ್ ಗಳಿಂದ ಸೇಫ್ ಆಗಿ ಇಟ್ಟುಕೊಳ್ಳಿ.

2. ಲಾಗಿನ್ ಗಾಗಿ ಕಠಿಣ ಪಾಸ್ ವರ್ಡ್ ಗಳನ್ನು ಇಟ್ಟುಕೊಳ್ಳುವುದು.

2. ಲಾಗಿನ್ ಗಾಗಿ ಕಠಿಣ ಪಾಸ್ ವರ್ಡ್ ಗಳನ್ನು ಇಟ್ಟುಕೊಳ್ಳುವುದು.

ಈ ಸಲಹೆಯು ಕೇವಲ ಮ್ಯಾಕ್ ಡಿವೈಸ್ ನ ಭದ್ರತೆಗೆ ಮಾತ್ರ ಎಂದು ಭಾವಿಸಬೇಡಿ. ಹೆಚ್ಚಿನ ವ್ಯಕ್ತಿಗಳು ಸರಳವಾಗಿರುವ ಪಾಸ್ ವರ್ಡ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸುಲಭದಲ್ಲಿ ನೆನಪಿಡಬಹುದು ಎಂಬುದು ಅವರ ಉದ್ದೇಶವಾಗಿರಬಹುದು. ಆದರೆ ಹೀಗೆ ಸುಲಭದ ಪಾಸ್ ವರ್ಡ್ ಗಳು ಕಡಿಮೆ ಭದ್ರತೆ ಹೊಂದಿರುತ್ತದೆ. ಹಾಗಾಗಿ ಆದಷ್ಟು ಮ್ಯಾಕ್ ಡಿವೈಸ್ ಗಳಿಗೆ ಕಠಿಣ ಪಾಸ್ ವರ್ಡ್ ಗಳನ್ನು ಬಳಕೆ ಮಾಡಿ. ಆ ಮೂಲಕ ಕಠಿಣ ಪಾಸ್ ವರ್ಡ್ ಗಳು ಹೆಚ್ಚು ಭದ್ರತೆಯನ್ನು ನಿಮ್ಮ ಮ್ಯಾಕ್ ಡಿವೈಸ್ ಗಳಿಗೆ ಒದಗಿಸುತ್ತದೆ. ನಿಮ್ಮ ಪಾಸ್ ವರ್ಡ್ ಗಳು ಯಾರೂ ಊಹಿಸಲು ಸಾಧ್ಯವಾಗದಂತೆ ಇರುವುದು ಬಹಳ ಮುಖ್ಯ.

3. ಪಾಸ್ ವರ್ಡ್ ಮ್ಯಾನೇಜರ್ ಮೂಲಕ ಭದ್ರತೆ

3. ಪಾಸ್ ವರ್ಡ್ ಮ್ಯಾನೇಜರ್ ಮೂಲಕ ಭದ್ರತೆ

ನಿಮ್ಮ ಪಾಸ್ ವರ್ಡ್ ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ದೃಷ್ಟಿಯಿಂದ ಯಾವುದೇ ಫೈಲ್ ಅಥವಾ ಕ್ಲೌಡ್ ಗಳನ್ನು ತಯಾರು ಮಾಡಬೇಡಿ. ಯಾಕೆಂದರೆ ಆ ಫೈಲ್ ಗಳೂ ಕೂಡ ಹ್ಯಾಕ್ ಆಗಬಹುದು.ಹಾಗಾಗಿ ಹೆಚ್ಚು ಭದ್ರವಾಗಿರುವ ಪಾಸ್ ವರ್ಡ್ ಮ್ಯಾನೇಜರ್ ಗಳನ್ನು ಬಳಕೆ ಮಾಡಿ. ಈ ಮ್ಯಾನೇಜರ್ಸ್ ಗಳು ನಿಮ್ಮ ಎಲ್ಲಾ ಅಕೌಂಟ್ ಗಳ ಪಾಸ್ ವರ್ಡ್ ಗಳನ್ನು ತಮ್ಮ ಸರ್ವರ್ ಗಳಲ್ಲಿ ಸೇವ್ ಮಾಡಿಕೊಳ್ಳುತ್ತದೆ ಮತ್ತು ಯಾವಾಗಲೂ ಅದು ಸುರಕ್ಷಿತವಾಗಿರುತ್ತದೆ.

4.ಮಹತ್ವದ ಫೈಲ್ ಗಳನ್ನು ಪ್ರತ್ಯೇಕವಾಗಿ ಎನ್ಕ್ರಿಪ್ಟ್ ಮಾಡುವುದು

4.ಮಹತ್ವದ ಫೈಲ್ ಗಳನ್ನು ಪ್ರತ್ಯೇಕವಾಗಿ ಎನ್ಕ್ರಿಪ್ಟ್ ಮಾಡುವುದು

ಯಾವ ಫೈಲ್ ಗಳು ನಿಜಕ್ಕೂ ತುಂಬಾ ಮಹತ್ವದಾಗಿರುತ್ತದೆಯೋ ಅವುಗಳನ್ನು ಅತೀ ಹೆಚ್ಚಿನ ಸುರಕ್ಷತೆಗಾಗಿ ಪ್ರತ್ಯೇಕವಾಗಿ ಎನ್ಕ್ರಿಪ್ಟ್ ಮಾಡಬೇಕು. ಇದು ಆಯ್ದ ಕೆಲವು ಫೈಲ್ ಗಳನ್ನು ಹೆಚ್ಚಿನ ಎನ್ಕ್ರಿಪ್ಶನ್ ಗೆ ಒಳಪಡುತ್ತದೆ ಮತ್ತು ಅವುಗಳು ದಾಳಿಗೆ ಅಥವಾ ಕಳ್ಳತನಕ್ಕೆ ತುತ್ತಾಗುವ ಸಾಧ್ಯತೆಗಳು ವಿರಳವಾಗಿರುತ್ತದೆ.

5. ಮೈ ಮ್ಯಾಕ್ ನ್ನು ಹುಡುಕಿ ಮತ್ತು ಅಲಿಮೇಲ್ಟ್ ಭದ್ರತೆ ಪಡೆಯಿರಿ

5. ಮೈ ಮ್ಯಾಕ್ ನ್ನು ಹುಡುಕಿ ಮತ್ತು ಅಲಿಮೇಲ್ಟ್ ಭದ್ರತೆ ಪಡೆಯಿರಿ

ಇದು ರಿಮೋಟ್ ಸೇಫ್ಟಿ ವೈಶಿಷ್ಟ್ಯವಾಗಿದ್ದು, ಮ್ಯಾಕ್ ಡಿವೈಸ್ ಗಳ ಒಳಗೇ ಲಭ್ಯವಿರುತ್ತದೆ. ಇದನ್ನು ಆನ್ ಮಾಡಿ ಮತ್ತು ಒಂದು ವೇಳೆ ನಿಮ್ಮ ಮ್ಯಾಕ್ ಡಿವೈಸ್ ಕಳ್ಳತನವಾದರೆ ಅಥವಾ ಕಳೆದು ಹೋದರೆ, ನೀವು ಡಿವೈಸ್ ನಲ್ಲಿನ ಎಲ್ಲಾ ಡಾಟಾಗಳನ್ನು ರಿಮೂವ್ ಮಾಡಲು ಸಾಧ್ಯವಾಗುತ್ತದೆ. ಅದೂ ಕೂಡ ಕೇವಲ ಒಂದೇ ಒಂದು ಕಮಾಂಡ್ ಅಥವಾ ಕ್ಲಿಕ್ ಮೂಲಕ ನೀವು ಅದನ್ನು ಸಾಧಿಸಬಹುದು.

6. ಫೈಯರ್ ವಾಲ್ ಸ್ಟೆಲ್ತ್ ಮೋಡನ್ನು ಯಾವಾಗಲೂ ಆನ್ ಮಾಡಿ ಇಡಿ.

6. ಫೈಯರ್ ವಾಲ್ ಸ್ಟೆಲ್ತ್ ಮೋಡನ್ನು ಯಾವಾಗಲೂ ಆನ್ ಮಾಡಿ ಇಡಿ.

ಡಿಫಾಲ್ಟ್ ಆಗಿ, ಮ್ಯಾಕ್ ನ ಫೈಯರ್ ವಾಲ್ ನ್ನು ಆನ್ ಮಾಡಿ ಇಡಿ.ಆದರೆ ಒಂದು ವೇಳೆ ನೀವು ಇದನ್ನು ಸ್ವಿಚ್ ಆಫ್ ಮಾಡಿದರೆ ಆಗ ನೀವು ಇದನ್ನು ಆನ್ ಮಾಡುವುದರ ಬಗ್ಗೆ ಖಚಿತ ಪಡಿಸಿಕೊಂಡೇ ಮುಂದಿನ ಕೆಲಸಗಳನ್ನು ಮಾಡಬೇಕು. ಫೈಯರ್ ವಾಲ್ ನಿಮಗೆ ಸಮಸ್ಯೆಗಳನ್ನು ಮತ್ತು ದಾಳಿಗಳನ್ನು ಗುರುತಿಸುವುದಕ್ಕೆ ಮತ್ತು ಅದನ್ನು ತೆಗೆಯುವುದಕ್ಕೆ ಸಹಾಯ ಮಾಡುತ್ತದೆ.

7. ಮುಂದಿನ ಬಳಕೆಯವರೆಗೂ ಶೇರ್ ಮೋಡ್ ಆಫ್ ಮಾಡಿ ಇಡಿ.

7. ಮುಂದಿನ ಬಳಕೆಯವರೆಗೂ ಶೇರ್ ಮೋಡ್ ಆಫ್ ಮಾಡಿ ಇಡಿ.

ಯಾವಾಗಲ ನೀವು ನೆನಪಿನಲ್ಲಿ ಇಡಬೇಕಾಗಿರು ಅಂಶವೆಂದರೆ ನೀವು ಯಾವುದೇ ಫೈಲನ್ನು ಶೇರ್ ಮಾಡುವ ಉದ್ದೇಶದಿಂದ ಶೇರಿಂಗ್ ಮೋಡ್ ನ್ನು ಆನ್ ಮಾಡಿದ್ದರೆ, ಅದನ್ನು ಕೆಲಸ ಮುಗಿದ ಕೂಡಲೇ ಆಫ್ ಮಾಡುವುದನ್ನು ಮರೆಯಬೇಡಿ. ಈ ರೀತಿಯ ಶೇರ್ ಮೋಡ್ ಕಳ್ಳರಿಗೆ ಒಂದು ಅತ್ಯುತ್ತಮ ದಾರಿಯಾಗಿರುತ್ತದೆ ಮತ್ತು ಅವರು ಸುಲಭದಲ್ಲಿ ನಿಮ್ಮ ಮ್ಯಾಕ್ ಡಿವೈಸ್ ನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

8. ನೆಟ್ ವರ್ಕ್ ಚಟುವಟಿಕೆಯ ಬಗ್ಗೆ ಗಮನಹರಿಸಿ

8. ನೆಟ್ ವರ್ಕ್ ಚಟುವಟಿಕೆಯ ಬಗ್ಗೆ ಗಮನಹರಿಸಿ

ಸಾಕಷ್ಟು ಅಭದ್ರತೆ ಇರುವ ಆಕ್ಟಿವಿಟಿಗಳನ್ನು ಮಾಡಿರಬಹುದು ಅದು ನಿಮ್ಮ ಮ್ಯಾಕ್ ಮೇಲೆ ಕೆಟ್ಟ ಪರಿಣಾಮಗಳಿಗೆ ಕಾರಣವಾಗಬಹುದು. ಹಾಗಾಗಿ ಯಾವುದೆ ಅಂತರ್ಜಾಲ ಚಟುವಟಿಕೆಯಲ್ಲಿ ತೊಡಗಿದ್ದಾಗ ಅಂದರೆ ನೀವು ಆನ್ ಲೈನ್ ಇದ್ದಾಗ ನೀವು ಮಾಡುತ್ತಿರುವ ಕೆಲಸವು ಭದ್ರವಾಗಿ ನಡೆಯುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

9. ಬ್ಯಾಕ್ ಅಪ್ ಗಳನ್ನು ಇರಿಸಿ ಮತ್ತು ಎಲ್ಲವನ್ನೂ ಎಕ್ಟ್ರಿಪ್ಟ್ ಮಾಡಿ ಇಡಿ.

9. ಬ್ಯಾಕ್ ಅಪ್ ಗಳನ್ನು ಇರಿಸಿ ಮತ್ತು ಎಲ್ಲವನ್ನೂ ಎಕ್ಟ್ರಿಪ್ಟ್ ಮಾಡಿ ಇಡಿ.

ಭದ್ರತೆಯ ದೃಷ್ಟಿಯಿಂದ ನಿಮ್ಮ ಡಿವೈಸ್ ನ ಎಲ್ಲಾ ಡಾಟಾಗಳನ್ನು ಎನ್ಕ್ರಿಪ್ಟ್ ಮಾಡಿ ಬಾಕ್ ಅಪ್ ತೆದೆದು ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ಅದಕ್ಕಾಗಿ ನೀವು ಯಾವುದೇ ಟೂಲ್ ಗಳನ್ನು ಕೂಡ ಬಳಕೆ ಮಾಡಬಹುದು. ಒಟ್ಟಾರೆ ಎನ್ಕ್ರಿಪ್ಟ್ ಮಾಡಿ ನಿಮ್ಮ ಫೈಲ್ ಗಳನ್ನು ಬ್ಯಾಕ್ ಅಪ್ ಇಟ್ಟುಕೊಳ್ಳುವುದು ಮ್ಯಾಕ್ ನ ಹಿತದೃಷ್ಟಿಯಿಂದ ಬಹಳ ಒಳ್ಳೆಯದು.

ಅಂತಿಮವಾಗಿ, ನೀವು ಈ ಲೇಖನ ಓದಿದ ನಂತರ ಮ್ಯಾಕ್ ನ್ನು ಹೇಗೆ ಸರಳವಾದ 9 ವಿಧಾನದಿಂದ ಭದ್ರವಾಗಿ ಇಟ್ಟುಕೊಳ್ಳಬಹುದು ಎಂದು ತಿಳಿದುಕೊಂಡಿದ್ದೀರಿ. ಇಲ್ಲಿ ಬರೆದಿರುವ ಮಾಹಿತಿಗಳು ಯಾರೂ ಕೂಡ ಸರಳವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ನಿಮಗೆ ಈ ಮಾಹಿತಿಗಳು ಹೆಚ್ಚು ಸಹಾಯಕ್ಕೆ ಬರುತ್ತದೆ ಎಂದು ಭಾವಿಸಿರುತ್ತೇವೆ. ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮವರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಮತ್ತು ಕಮೆಂಟ್ ವಿಭಾಗದಲ್ಲಿ ಕಮೆಂಟಿಸಿ.

Best Mobiles in India

English summary
How to Fully Secure Your Mac with These 9 Steps. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X