ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್, ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವುದು ಹೇಗೆ?

|

ಎಲ್ಲಾ ಟೆಲಿಕಾಂ ಕಂಪೆನಿಗಳು ಸದ್ಯ ವಿಭಿನ್ನವಾಗಿರುವ ಮತ್ತು ಆಕರ್ಷಕವಾಗಿರುವ ಜೊತೆಗೆ ಕೈಗೆಟುಕುವಂತಿರುವ ತಾರಿಫ್ ಪ್ಲಾನ್ ಗಳನ್ನು ಬಳಕೆದಾರರ ಗಮನದಲ್ಲಿಟ್ಟುಕೊಂಡು ನೀಡುವುದಕ್ಕೆ ಮುಂದಾಗುತ್ತಿದೆ. ಇದಿಷ್ಟೇ ಅಲ್ಲದೆ ಟೆಲಿಕಾಂ ಆಪರೇಟರ್ ಗಳು ಪ್ರಮುಖ ಒಟಿಟಿ ಪ್ಲೇಯರ್ ಗಳ ಜೊತೆಗೆ ಕೈಜೋಡಿಸಿದ್ದು ಗ್ರಾಹಕರಿಗೆ ಆಕರ್ಷಕವಾಗಿರುವ ಪ್ಲಾನ್ ಗಳನ್ನು ನೀಡುವುದಕ್ಕೆ ಮುಂದಾಗಿದೆ.

ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವುದು ಹೇಗೆ?

ಏರ್ ಟೆಲ್, ವಡಾಫೋನ್, ರಿಲಯನ್ಸ್ ಜಿಯೋ ಮತ್ತು ಬಿಎಸ್ಎನ್ಎಲ್ ಗಳು ಅಮೇಜಾನ್ ಪ್ರೈಮ್, ಹಾಟ್ ಸ್ಟಾರ್ ಮತ್ತು ನೆಟ್ ಫ್ಲಿಕ್ಸ್ ಗಳ ಚಂದಾದಾರಿಕೆಯನ್ನು ತಮ್ಮ ರೀಚಾರ್ಜ್ ಪ್ಲಾನ್ ಗಳಲ್ಲಿ ಉಚಿತವಾಗಿ ನೀಡುವ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದೆ.

ಏರ್ ಟೆಲ್ ಇನ್ಫಿನಿಟಿ ಪ್ಲಾನ್

ಏರ್ ಟೆಲ್ ಇನ್ಫಿನಿಟಿ ಪ್ಲಾನ್

ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಆಗಿರುವ ಏರ್ ಟೆಲ್ ಝೀ5 ಆಪ್ ಮತ್ತು ನೆಟ್ ಫ್ಲಿಕ್ಸ್ ಜೊತೆಗೆ ಇದೇ ವರ್ಷದ ಅಕ್ಟೋಬರ್ ನಲ್ಲಿ ಕೈಜೋಡಿಸಿದೆ ಮತ್ತು ಗ್ರಾಹಕರಿಗೆ ಇನ್ಫಿನಿಟಿ ಪೋಸ್ಟ್ ಪೇಯ್ಡ್ ಪ್ಲಾನ್ ರುಪಾಯಿ 499 ನ್ನು ಪರಿಚಯಿಸಿದೆ. ಇದರ ಅನುಸಾರ 1500 ರುಪಾಯಿ ಬೆಲೆಬಾಳುವ 3 ತಿಂಗಳ ನೆಟ್ ಫ್ಲಿಕ್ಸ್ ಚಂದಾದಾರಿಕೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ ಗ್ರಾಹಕರಿಗೆ ಲಭ್ಯವಾಗುತ್ತದೆ.

ಒಂದು ವೇಳೆ ಗ್ರಾಹಕರು ಈಗಾಗಲೆ ನೆಟ್ ಫ್ಲಿಕ್ಸ್ ಚಂದಾದಾರರಾಗಿದ್ದಲ್ಲಿ ಅವರೂ ಕೂಡ ಈ ಗಿಫ್ಟ್ ನ್ನು ಪಡೆಯುತ್ತಾರೆ ಮತ್ತು 1500 ರುಪಾಯಿ ಅವರ ನೆಟ್ ಫ್ಲಿಕ್ಸ್ ಖಾತೆಯಲ್ಲಿ ಜಮೆಯಾಗುತ್ತದೆ. ಇದಕ್ಕೆ ಅರ್ಹರಾಗಿರುವ ಗ್ರಾಹಕರು 3 ತಿಂಗಳ ನೆಟ್ ಫ್ಲಿಕ್ಸ್ ಚಂದಾದಾರಿಕೆಯ ಗಿಫ್ಟ್ ನ್ನು ಏರ್ ಟೆಲ್ ಟಿವಿ ಆಪ್ ಅಥವಾ ಮೈಏರ್ ಟೆಲ್ ಮೂಲಕ ಪಡೆದುಕೊಳ್ಳಬಹುದು.

ಏರ್ ಟೆಲ್ ಅಮೇಜಾನ್ ಪ್ರೈಮ್ ನ್ನು ಕೂಡ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೀಡುತ್ತದೆ. 499 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಇನ್ಫಿನಿಟಿ ಪ್ಲಾನ್ ನ್ನು ಖರೀದಿಸಿದಾಗ ಒಂದು ವರ್ಷದ ಅವಧಿಯ 999 ರುಪಾಯಿ ಬೆಲೆಬಾಳುವ ಅಮೇಜಾನ್ ಪ್ರೈಮ್ ಚಂದಾದಾರಿಕೆಯನ್ನು ಏರ್ ಟೆಲ್ ಪೋಸ್ಟ್ ಪೇಯ್ಡ್ ಗ್ರಾಹಕರು ಪಡೆದುಕೊಳ್ಳಬಹುದು. ಅದರಲ್ಲಿ ಅನಿಯಮಿತ ಪ್ರೈಮ್ ವೀಡಿಯೋ ಆಕ್ಸಿಸ್ ಇದ್ದು ಅದಕ್ಕಾಗಿ ಹೆಚ್ಚುವರಿ ಶುಲ್ಕ ಪಾವತಿ ಅಗತ್ಯವಿರುವುದಿಲ್ಲ.

ಬಿಎಸ್ಎನ್ಎಲ್

ಬಿಎಸ್ಎನ್ಎಲ್

ಬಿಎಸ್ಎನ್ಎಲ್ ಕೂಡ 999 ರುಪಾಯಿ ಬೆಲೆಬಾಳುವ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ತನ್ನ ಪೋಸ್ಟ್ ಪೇಯ್ಡ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ನೀಡುತ್ತದೆ. ಇದು ಕೂಡ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಒಂದು ವರ್ಷದ ಚಂದಾದಾರಿಕೆ ಆಗಿರುತ್ತದೆ.

ದೇಶಾದ್ಯಂತ ಇರುವ ಬಿಎಸ್ಎನ್ಎಲ್ ಗ್ರಾಹಕರು ರುಪಾಯಿ 399+ ಪೋಸ್ಟ್ ಪೇಯ್ಡ್ ಅಥವಾ ರುಪಾಯಿ 745+ ಬ್ರಾಡ್ ಬ್ಯಾಂಡ್ ಲ್ಯಾಂಡ್ ಲೈನ್ ಪ್ಲಾನ್ ನಲ್ಲಿ ಇರುವವರು ಹೆಚ್ಚುವರಿ ಶುಲ್ಕವಿಲ್ಲದೆ ಇದನ್ನು ಪಡೆಯಬಹುದು.

ಇದರ ಜೊತೆಗೆ ಇತರೆ ಒಟಿಟಿ ಪ್ಲೇಯರ್ ಗಳಾಗಿರುವ ಹಾಟ್ ಸ್ಟಾರ್ ಮತ್ತು ನೆಟ್ ಫ್ಲಿಕ್ಸ್ ಗಳ ಜೊತೆಗೆ ಕೂಡ ಕಂಪೆನಿ ಮಾತುಕತೆ ನಡೆಸುತ್ತಿದೆ. ಬಿಎಸ್ಎನ್ಎಲ್ ಚೇರ್ ಮೆನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅನುಪಮ್ ಶ್ರೀವಾತ್ಸವ್ ಗಿಝ್ಬೂಟ್ ಗೆ ನೀಡಿರುವ ಮಾಹಿತಿಯ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ನೆಟ್ ಫ್ಲಿಕ್ಸ್ ಜೊತೆಗಿನ ಸಹಭಾಗಿತ್ವದ ಬಗ್ಗೆ ಬಿಎಸ್ಎನ್ಎಲ್ ಪ್ರಕಟಿಸಲಿದ್ದು ಯಾವ ರೀತಿಯ ಆಫರ್ ಗಳನ್ನು ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಹಾಟ್ ಸ್ಟಾರ್ ಜೊತೆಗೆ ಕೂಡ ಮಾತುಕತೆ ನಡೆಯುತ್ತಿದ್ದು ಮುಂದಿನ ಒಂದುವರೆ ತಿಂಗಳಲ್ಲಿ ಅದೂ ಕೂಡ ಪ್ರಕಟವಾಗಲಿದೆ.

ವಡಾಫೋನ್

ವಡಾಫೋನ್

ವಡಾಫೋನ್ ಕೂಡ ತನ್ನ ರೆಡ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 999 ರುಪಾಯಿ ಬೆಲೆಬಾಳುವ ಒಂದು ವರ್ಷದ ಅವಧಿಯ ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನೀಡುತ್ತದೆ.

ಗ್ರಾಕರಿಗೆ ಪ್ರೈಮ್ ವೀಡಿಯೋ, ಪ್ರೈಮ್ ಮ್ಯೂಸಿಕ್ ಮತ್ತು ಮಿಲಿಯನ್ ಗಟ್ಟಲೆ ವಸ್ತುಗಳಿಗೆ ಅನಿಯಮಿತ ಉಚಿತ ಫಾಸ್ಟ್ ಶಿಪ್ಪಿಂಗ್ ಮತ್ತು ಎಕ್ಸ್ ಕ್ಲೂಸೀವ್ ವೇಗದ ಆಕ್ಸಿಸ್ ನ್ನು ಈ ಡೀಲ್ ಮೂಲಕ ಅಮೇಜಾನ್.ಇನ್ ನಲ್ಲಿ ಪಡೆಯುವುದಕ್ಕೆ ಅವಕಾಶವಿರುತ್ತದೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಯುರೋಸ್ ಇಂಟರ್ನ್ಯಾಷನಲ್ ಮತ್ತು ವೀಡಿಯೋ ಸ್ಟ್ರೀಮಿಂಗ್ ಆಪ್ ಎಎಲ್ ಟಿ ಬಾಲಾಜಿ ಜೊತೆಗೆ ಕೈಜೋಡಿಸಿದ್ದು ಜಿಯೋ ಸಿನಿಮಾ ಮತ್ತು ಜಿಯೋ ಟಿವಿಯಲ್ಲಿ ಒರಿಜಿನಲ್ ಕಟೆಂಟ್ ನ್ನು ನೋಡಲು ಅವಕಾಶ ನೀಡುತ್ತದೆ.

ಎಎಲ್ ಟಿ ಬಾಲಾಜಿ ಸದ್ಯ 14 ಒರಿಜಿನಲ್ ಶೋ ಗಳನ್ನು ಬೇರೆಬೇರೆ ಭಾಷೆಗಳಲ್ಲಿ ಆಫರ್ ಮಾಡುತ್ತದೆ ಮತ್ತು ಅದರಲ್ಲಿ ರೊಮ್ಯಾನ್ಸ್, ಮಿಸ್ಟರಿ, ಡ್ರಾಮಾ ಮತ್ತು ಕಾಮಿಡಿ ಎಲ್ಲಾ ವಿಭಾಗವನ್ನು ಒಳಗೊಂಡಿರುವ ವಿಭಿನ್ನ ಶೋಗಳಾಗಿದೆ.

Best Mobiles in India

English summary
Bharti Airtel has joined hands with ZEE5 app and Netflix this year in October and to begin with mobile customers on Infinity Postpaid plans of Rs 499 and above are getting three months Netflix subscription gift worth Rs 1500 at no extra charge.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X