Home
ಟೆಕ್ ನೌಕರಿ

ನೆಟ್‌ಫ್ಲಿಕ್ಸ್‌ ಈಗ ಉಚಿತ..! ಉಚಿತವಾಗಿ ವೀಕ್ಷಿಸಲು ಬೇಕು ಜಾಣ್ಮೆ..!

By Avinash

ಜನಪ್ರಿಯ ವೆಬ್‌ ಸಿರೀಸ್‌ಗಳು, ಸಿನಿಮಾ, ಟಿವಿ ಪ್ರೋಗ್ರಾಂಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿರುವ ನೆಟ್‌ಫ್ಲಿಕ್ಸ್‌ ಹೆಸರು ಕೇಳದವರಿಲ್ಲ. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ವೆಬ್‌ ಸಿರೀಸ್‌ಗಳಾದ ಸೆಕ್ರೇಡ್ ಗೇಮ್ಸ್‌ ಮತ್ತು ಲಕ್ಸ್‌ ಸ್ಟೋರಿಸ್‌ ಯುವಜನರಲ್ಲಿ ನೆಟ್‌ಫ್ಲಿಕ್ಸ್‌ ಕ್ರೇಜ್‌ ಹೆಚ್ಚಿಸಿವೆ. ಆದರೆ, ನೆಟ್‌ಫ್ಲಿಕ್ಸ್‌ ಪೇಡ್‌ ಸರ್ವೀಸ್‌ ಆಗಿರುವುದರಿಂದ ಬಹಳಷ್ಟು ಜನರು ಇಂತಹ ವೆಬ್‌ ಸಿರೀಸ್‌ಗಳನ್ನು ವೀಕ್ಷಿಸುವಲ್ಲಿ ವಂಚಿತವಾಗುತ್ತಿದ್ದಾರೆ.

ನೆಟ್‌ಫ್ಲಿಕ್ಸ್‌ ಈಗ ಉಚಿತ..! ಉಚಿತವಾಗಿ ವೀಕ್ಷಿಸಲು ಬೇಕು ಜಾಣ್ಮೆ..!

ಆದರೆ, ನೀವು ಒಂದಿಷ್ಟು ಜಾಣ್ಮೆ ಪ್ರದರ್ಶಿಸಿದರೆ ನೆಟ್‌ಫ್ಲಿಕ್ಸ್‌ನ್ನು ಉಚಿತವಾಗಿ ವೀಕ್ಷಿಸಬಹುದು. ಮತ್ತೇ ಹೇಳುತ್ತಿದ್ದೇವೆ ಈ ಸೌಲಭ್ಯ ಪಡೆಯಲು ಸ್ವಲ್ಪ ಜಾಣ್ಮೆ ಬೇಕೆ ಬೇಕು. ಹೌದು, ಬಹಳಷ್ಟು ಜನ ತಿಂಗಳಿಗೆ 500 ರಿಂದ 800 ರೂ.ವರೆಗೂ ಹಣ ವ್ಯಹಿಸಿ ನೆಟ್‌ಫ್ಲಿಕ್ಸ್‌ ಸಬ್‌ಸ್ಕ್ರೈಬ್ ಆಗುತ್ತಿದ್ದಾರೆ. ಆದರೆ, ಎಂತಹ ಆಪ್‌ ಅಥವಾ ವೆಬ್‌ಸೈಟ್‌ ಆಗಿರಲಿ ಲೂಪ್‌ ಹೋಲ್‌ ಇದ್ದೇ ಇರುತ್ತೆ. ಇದಕ್ಕೆ ನೆಟ್‌ಫ್ಲಿಕ್ಸ್‌ ಕೂಡ ಹೊರತಾಗಿಲ್ಲ. ಮೊದಲೇ ಹೇಳಿದಂಗೆ ಒಂದಿಷ್ಟು ನೆನಪು, ಜಾಣ್ಮೆ ಇದ್ದರೆ ನೆಟ್‌ಫ್ಲಿಕ್ಸ್‌ನ್ನು ಉಚಿತವಾಗಿ ಪಡೆದು ತಿಂಗಳಿಗೆ 500 ರಿಂದ 800ರೂ. ಉಳಿಸಬಹುದು.

ವಿವಿಧ ಪ್ಯಾಕೇಜ್‌ಗಳು

ವಿವಿಧ ಪ್ಯಾಕೇಜ್‌ಗಳು

ನೆಟ್‌ಫ್ಲಿಕ್ಸ್‌ ಮೂರು ರೀತಿಯ ಪ್ಯಾಕೇಜ್‌ಗಳನ್ನು ಪರಿಚಯಿಸಿದ್ದು, ಮೂರು ಪ್ಯಾಕ್‌ಗಳಲ್ಲೂ ಸಾಮಾನ್ಯವಾಗಿ ಪಿಸಿ, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಮೊಬೈಲ್‌ಗಳಿಗೆ ಅಕ್ಸೇಸ್ ಇದೆ, ಮತ್ತು ಅನ್‌ಲಿಮಿಟೆಡ್‌ ಟಿವಿ ಸಿರೀಸ್ ಮತ್ತು ಪ್ರೋಗ್ರಾಂಗಳಿವೆ, ಯಾವಾಗ ಬೇಕಾದರೂ ಕ್ಯಾನ್ಸಲ್ ಮಾಡಬಹುದು. ಮತ್ತು ಒಂದು ತಿಂಗಳು ಉಚಿತ ಟ್ರಯಲ್ ಆಯ್ಕೆಯನ್ನು ನೀಡಿವೆ. ಆದರೆ, 850 ರೂ. ಪ್ಯಾಕ್‌ನಲ್ಲಿ ಹೆಚ್‌ಡಿ ಮತ್ತು ಅಲ್ಟ್ರಾ ಹೆಚ್‌ಡಿ ಸ್ಟ್ರೀಮಿಂಗ್ ಸೌಲಭ್ಯ ಇದ್ದು, ಒಂದು ಬಾರಿಗೆ ನಾಲ್ಕು ಸ್ಕ್ರೀನ್‌ಗಳಲ್ಲಿ ನೋಡುವ ಅವಕಾಶ ಇದೆ. ಆದರೆ, 650 ರೂ. ಪ್ಯಾಕ್‌ನಲ್ಲಿ ಹೆಚ್‌ಡಿ ಸ್ಟ್ರೀಮಿಂಗ್ ಸೌಲಭ್ಯವಿದ್ದು, ಒಂದು ಬಾರಿಗೆ 2 ಸ್ಕ್ರೀನ್‌ಗಳಲ್ಲಿ ವೀಕ್ಷಿಸುವ ಅವಕಾಶವಿದೆ. ಇನ್ನು, 500 ರೂ. ಪ್ಯಾಕ್‌ನಲ್ಲಿ ಹೆಚ್‌ಡಿ ಮತ್ತು ಅಲ್ಟ್ರಾ ಹೆಚ್‌ಡಿ ಸೇವೆ ಇರುವುದಿಲ್ಲ ಮತ್ತು ಒಂದು ಬಾರಿಗೆ ಒಂದೇ ಸ್ಕ್ರೀನ್ ನೋಡುವ ಅವಕಾಶ ಮಾತ್ರ ಲಭ್ಯ.

ಉಚಿತ ಟ್ರಯಲ್ ಪಡೆಯುವುದು ಹೇಗೆ..?

ಉಚಿತ ಟ್ರಯಲ್ ಪಡೆಯುವುದು ಹೇಗೆ..?

ಮೊದಲೇ ಹೇಳಿದಂತೆ ಉಚಿತ ಟ್ರಯಲ್‌ ಒಂದು ತಿಂಗಳಿಗೆ ಮಾತ್ರ ಲಭ್ಯವಿದ್ದು, ನಿಮ್ಮ ಸ್ಮರಣ ಶಕ್ತಿ ಮತ್ತು ಜಾಣ್ಮೆಯಿಂದ ಅದನ್ನು ವಿಸ್ತರಿಸಿಕೊಂಡು ಜನಪ್ರಿಯ ವೆಬ್‌ ಸಿರೀಸ್‌ ಹಾಗೂ ಟಿವಿ ಪ್ರೋಗ್ರಾಂಗಳನ್ನು ಉಚಿತವಾಗಿ ನೋಡಬಹುದು. ಹೇಗೆ ಅಂದರೆ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1

ಹಂತ 1

ನೆಟ್‌ಫ್ಲಿಕ್ಸ್‌ ಆಪ್ ಅಥವಾ ವೆಬ್‌ ಸೈಟ್‌ ಒಪನ್ ಮಾಡಿದ ತಕ್ಷಣ ನಿಮಗೆ ಕಾಣುವುದೆ ಒಂದು ತಿಂಗಳು ಫ್ರೀ ಟ್ರಯಲ್‌ ಆಯ್ಕೆಯ ಟ್ಯಾಬ್ ಕಾಣುತ್ತದೆ ಅಲ್ಲಿ ಕ್ಲಿಕ್ ಮಾಡಿ.

ಹಂತ 2

ಹಂತ 2

ನಂತರ ನಿಮ್ಮ ಪ್ಲಾನ್ ಆಯ್ಕೆ ಮಾಡಿಕೊಳ್ಳಿ ಎಂಬ ಟ್ಯಾಬ್ ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿ.

ಹಂತ 3

ಹಂತ 3

ನಂತರ ಇಲ್ಲಿ 3 ರೀತಿಯ ಪ್ಲಾನ್‌ಗಳನ್ನು ನೆಟ್‌ಫ್ಲಿಕ್ಸ್‌ ನೀಡಿದ್ದು, 500 ರೂ. 650 ರೂ. 800 ರೂ. ಮೌಲ್ಯದ ಪ್ಯಾಕೇಜ್‌ಗಳನ್ನು ನೆಟ್‌ಫ್ಲಿಕ್ಸ್ ತೋರಿಸುತ್ತದೆ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 4

ಹಂತ 4

ಪ್ಲಾನ್ ಆಯ್ಕೆ ಮಾಡಿದ ನಂತರ ನಿಮಗೆ ಸೈನ್‌ ಅಪ್ ಆಯ್ಕೆ ಕಾಣುತ್ತದೆ. ನಿಮ್ಮ ಇಮೇಲ್ ಎಂಟರ್ ಮಾಡಿ. ನಂತರ ಪಾಸ್‌ವರ್ಡ್‌ ಆಯ್ಕೆ ಮಾಡಿ ಕಂಟಿನ್ಯೂ ಟ್ಯಾಬ್ ಕ್ಲಿಕ್ ಮಾಡಿ.

ಹಂತ 5

ಹಂತ 5

ಸೈನ್ ಅಪ್ ನಂತರ ನಿಮ್ಮ ಡೆಬಿಟ್‌ ಕಾರ್ಡ್‌ ವಿವರಗಳನ್ನು ನೆಟ್‌ಫ್ಲಿಕ್ಸ್‌ ಕೇಳುತ್ತದೆ. ನೀವು ನಿಮ್ಮ ಡೆಬಿಟ್‌ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್‌ ವಿವರಗಳನ್ನು ಇಲ್ಲಿ ನೀಡಬೇಕಾಗುತ್ತದೆ. ಯಾವುದೇ ಹಣವನ್ನು ನೆಟ್‌ಫ್ಲಿಕ್ಸ್‌ ಕಟ್‌ ಮಾಡುವುದಿಲ್ಲ.

ಹಂತ 6

ಹಂತ 6

ನಂತರ ನೆನಪಿನಲ್ಲಿಟ್ಟುಕೊಳ್ಳಬೇಕಿರುವುದು ವ್ಯಾಲಿಡಿಟಿ ದಿನಾಂಕ. ಇದನ್ನು ನೀವು ಸೈನ್‌ ಅಪ್‌ ಮಾಡಿ ಪ್ಲಾನ್ ಆಯ್ಕೆ ಮಾಡಿಕೊಳ್ಳುವಾಗ ನೆಟ್‌ಫ್ಲಿಕ್ಸ್‌ ತೋರಿಸುತ್ತದೆ. ಆ ದಿನಾಂಕದೊಳಗೆ ನಿಮ್ಮ ನೆಟ್‌ಫ್ಲಿಕ್ಸ್‌ ಸೇವೆಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ನೆಟ್‌ಫ್ಲಿಕ್ಸ್ ಮುಂದಿನ ತಿಂಗಳ ಪಾವತಿಯನ್ನು ನಿಮ್ಮ ಅಕೌಂಟ್‌ನಿಂದ ಕಡಿತಗೊಳಿಸುತ್ತದೆ. ಆದರೆ, ನೆಟ್‌ಫ್ಲಿಕ್ಸ್‌ ಉಚಿತ ವ್ಯಾಲಿಡಿಟಿ ಮುಗಿಯುವ ಮೂರು ದಿನಗಳ ಮುಂಚೆ ನಿಮಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ. ಆ ಮೇಲ್‌ ಬಂದ ನಂತರ ನೀವು ನೆಟ್‌ಫ್ಲಿಕ್ಸ್‌ ಸಬ್‌ಸ್ಕ್ರೀಪ್ಷನ್ ರದ್ದು ಮಾಡಬಹುದು. ಮೇಲ್ ಬರದಿದ್ದರೆ ನಾವು ಜವಾಬ್ದಾರರಲ್ಲ. ಅದಕ್ಕೆ ವ್ಯಾಲಿಡಿಟಿ ಮುಗಿಯುವ ಮುನ್ನವೇ ನೆನಪಿನಿಂದ ಸಬ್‌ಸ್ಕ್ರೀಪ್ಷನ್ ನಿಲ್ಲಿಸಿ.

ವಿಸ್ತರಣೆ ಹೇಗೆ..?

ವಿಸ್ತರಣೆ ಹೇಗೆ..?

ನೆಟ್‌ಫ್ಲಿಕ್ಸ್‌ ವಿಸ್ತರಣೆಗೆ ಬೇರೆ ಆಯ್ಕೆಯನ್ನೇನು ನೀಡಿಲ್ಲ. ಆದರೆ, ಒಂದು ಅಕೌಂಟ್‌ನಲ್ಲಿ ಒಂದು ಬಾರಿಗೆ 5 ಜನ ಸ್ಟ್ರೀಮಿಂಗ್ ಮಾಡುವ ಅವಕಾಶ ನೀಡಲಾಗಿದೆ. ಇದರಿಂದ ನೀವು ನಿಮ್ಮ ಉಚಿತ ಟ್ರಯಲ್ ಮುಂದುವರೆಸಬಹುದು. ಇದರಿಂದ ಮೊದಲ ತಿಂಗಳು ನೀವು ನಿಮ್ಮ ಇಮೇಲ್ ಮತ್ತು ಡೆಬಿಟ್ ಕಾರ್ಡ್‌ ನೀಡಿ ಉಚಿತ ಸಬ್ಸ್ಕ್ರೈಬ್ ಆಗಿದ್ದರೆ, ನಿಮ್ಮ ಇನ್ನು 4 ಜನ ಸ್ನೇಹಿತರಿಗೆ ನೆಟ್‌ಫ್ಲಿಕ್ಸ್ ಆಪ್ ಅಕ್ಸೇಸ್ ನೀಡಿ. ಮುಂದಿನ ತಿಂಗಳು ಬೇರೆಯವರು ಬೇರೆ ಮೇಲ್ ಐಡಿ, ಬೇರೆ ಡೆಬಿಟ್ ಕಾರ್ಡ್‌, ಹೀಗೆ ಒಟ್ಟು 5 ತಿಂಗಳು ನೆಟ್‌ಫ್ಲಿಕ್ಸ್ ಉಚಿತ ಟ್ರಯಲ್ ಬಳಸಬಹುದು.

ಇನ್ನು ವಿಸ್ತರಣೆಗೆ ಜಾಣ್ಮೆ ಬೇಕು..!

ಇನ್ನು ವಿಸ್ತರಣೆಗೆ ಜಾಣ್ಮೆ ಬೇಕು..!

ಇನ್ನು ಹೆಚ್ಚು ದಿನಕ್ಕೆ ವಿಸ್ತರಿಸಬೇಕೆಂದರೆ ಇಮೇಲ್ ಐಡಿ ಮತ್ತು ಡೆಬಿಟ್‌ ಕಾರ್ಡ್‌ಗೆ ಡಿಜಿಟಲ್ ಯುಗದಲ್ಲಿ ಕೊರತೆ ಇದೆಯಾ? ಪ್ರತಿಯೊಬ್ಬರ ಹತ್ತಿರ ಏನಿಲ್ಲ ಎಂದರು ಎರಡರಿಂದ ಮೂರು ಮೇಲ್ ಐಡಿ ಮತ್ತು ಡೆಬಿಟ್ ಕಾರ್ಡ್‌ ಇದ್ದೇ ಇರುತ್ತವೆ. ಏನಿಲ್ಲ ಎಂದರೂ ಒಂದು ವರ್ಷ ನೆಟ್‌ಫ್ಲಿಕ್ಸ್ ಉಚಿತವಾಗಿ ಪಡೆಯಬಹುದು.

Best Mobiles in India

English summary
How to get netflix for free. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+