Home
ಟೆಕ್ ನೌಕರಿ

ಗೂಗಲ್ ಸರ್ಚ್ ಮಾಡಿದರೆ ನಿಮ್ಮ ಫೋಟೊ ಬರಬೇಕೆ?..ಇಲ್ಲಿದೆ ಸಿಂಪಲ್ ಟ್ರಿಕ್ಸ್!!

ನನ್ನ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ನನ್ನ ಚಿತ್ರ ಗೂಗಲ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ.

ನನ್ನ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ನನ್ನ ಚಿತ್ರ ಗೂಗಲ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಒಂದಲ್ಲಾ ಒಂದು ದಿನ ಏನಾದರೂ ಸಾಧನೆ ಮಾಡಿ ನಾವೂ ಗೂಗಲ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ, ಗೂಗಲ್‌ನಲ್ಲಿ ತಮ್ಮ ಚಿತ್ರವನ್ನು ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯೇ.

ಹಾಗಾಗಿ, ಯಾವುದೇ ಸಾಧನೆ ಮಾಡದಿದ್ದರೂ ಕೂಡ ನಿಮ್ಮ ಚಿತ್ರ ಗೂಗಲ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ನಿಮಗಿದ್ದರೆ, ನಾನು ನಿಮಗೆ ಸಹಾಯ ಮಾಡುತ್ತೇನೆ. ಆದರೆ, ನೀವು ಜೀವನದಲ್ಲಿ ಏನಾದರೂ ಅತ್ಯುತ್ತಮ ಸಾಧನೆ ಮಾಡಿ ಗೂಗಲ್‌ನಲ್ಲಿ ನಿಮ್ಮ ಭಾವಚಿತ್ರ ಬರುವಂತೆ ಮಾಡಿಕೊಳ್ಳಲು ಮೊದಲಿಗೆ ನಾನು ಆಶಿಸುತ್ತೇನೆ.

ಗೂಗಲ್ ಸರ್ಚ್ ಮಾಡಿದರೆ ನಿಮ್ಮ ಫೋಟೊ ಬರಬೇಕೆ?..ಇಲ್ಲಿದೆ ಸಿಂಪಲ್ ಟ್ರಿಕ್ಸ್!!

ರಾಜಕೀಯ ವ್ಯಕ್ತಿಗಳು ಅಥವಾ ಸಿನಿಮಾ ನಟರಂತಹ ಹೆಸರಾಂತ ವ್ಯಕ್ತಿಗಳ ಜೊತೆಗೆ ಗೂಗಲ್‌ನಲ್ಲಿ ನಿಮ್ಮ ಫೋಟೊ ಕೂಡ ಕಾಣಿಸಿಕೊಳ್ಳಬೆಕು ಎಂದರೆ ಒಂದು ಸಿಂಪಲ್ ಟ್ರಿಕ್ಸ್ ಇದೆ.ಗೂಗಲ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಿದರೆ ನಿಮ್ಮ ಫೋಟೊ ಕಾಣಿಸಿಕೊಳ್ಳಬೇಕು ಎಂದರೆ ಏನು ಮಾಡುಬೇಕು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಫೋಟೊಥಿಂಗ್ ವೆಬ್‌ಸೈಟ್ ತೆರೆಯಿರಿ

ಫೋಟೊಥಿಂಗ್ ವೆಬ್‌ಸೈಟ್ ತೆರೆಯಿರಿ

ಗೂಗಲ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಿದರೆ ನಿಮ್ಮ ಫೋಟೊ ಕಾಣಿಸಿಕೊಳ್ಳಬೇಕು ಎಂದರೆ ನೀವು ಮೊದಲು ಫೋಟೊಥಿಂಗ್ (Photothing) ಎಂಬ ವೆಬ್‌ಸೈಟ್ ತೆರೆಯಿರಿ. ಈ ವೆಬ್‌ಸೈಟ್ ತೆರೆದು ನಿಮಮ್ಮ ಭಾವಚಿತ್ರವನ್ನು ಈ ವೆಬ್‌ಸೆಟ್ ಮೂಲಕ ಗೂಗಲ್‌ಗೆ 'ಆಡ್' ಮಾಡಿದರೆ, ಗೂಗಲ್‌ನಲ್ಲಿ ನಿಮ್ಮ ಕಾಣಿಸಿಕೊಳ್ಳುತ್ತದೆ.

ವೆಬ್‌ಸೈಟ್‌ಗೆ ರಿಜಿಸ್ಟರ್ ಆಗಿ.

ವೆಬ್‌ಸೈಟ್‌ಗೆ ರಿಜಿಸ್ಟರ್ ಆಗಿ.

ಫೋಟೊಥಿಂಗ್ (Photothing ) ವೆಬ್‌ಸೈಟ್ ತೆರೆದ ನಂತರ, ಆ ವೆಬ್‌ಸೈಟ್‌ಗೆ ನೀವು ರಿಜಿಸ್ಟರ್ ಆಗಿ. ನಿಮ್ಮ ಇ ಮೇಲ್ ಅಡ್ರೆಸ್ ಅನ್ನು ನೀಡಿ ಫೋಟೊಥಿಂಗ್ (Photothing ) ವೆಬ್‌ಸೈಟ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿ, ನಂತರ ಆ ಕೆಳಗೆ "JOIN" ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಒತ್ತಿ ಅಕೌಂಟ್ ಕ್ರಿಯೇಟ್ ಮಾಡಿರಿ.

ವೆಬ್‌ಸೈಟ್‌ಗೆ ಲಾಗಿನ್ ಆಗಿ.

ವೆಬ್‌ಸೈಟ್‌ಗೆ ಲಾಗಿನ್ ಆಗಿ.

ಫೋಟೊಥಿಂಗ್ (Photothing ) ವೆಬ್‌ಸೈಟ್‌ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ ನಂತರ, ನೀವೇ ನೀಡಿದ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿ ಅಕೌಂಟ್‌ಗೆ ಲಾಗಿನ್ ಆಗಿರಿ. ನಂತರ ವೆಎಬ್‌ಸೈಟ್ ಹೋಮ್‌ ಪೇಜ್ ತೆರೆಯುತ್ತದೆ. ಅಲ್ಲಿ ಹೋಮ್ ಬಟನ್ ಪಕ್ಕದಲ್ಲಿ ಕಾಣಿಸುವ ಅಪ್‌ಲೋಡ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ನಿಮ್ಮ ಪೋಟೊ ಅಪ್‌ಲೋಡ್ ಮಾಡಿ.

ನಿಮ್ಮ ಪೋಟೊ ಅಪ್‌ಲೋಡ್ ಮಾಡಿ.

ಅಪ್‌ಲೋಡ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿದ ನಂತರ ಅಲ್ಲಿ ಕಾಣುವ ಆಯ್ಕೆಗಳಲ್ಲಿ "ಚೂಸ್ ಪೈಲ್" ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕಂಪ್ಯೂಟರ್‌ನಲ್ಲಿರುವ ನಿಮ್ಮ ಪೋಟೊವನ್ನು ಸೆಲೆಕ್ಟ್ ಮಾಡಿಕೊಂಡು 'ಓಪನ್' ಎಂದು ಕ್ಲಿಕ್ ಮಾಡಿ. ನಂತರ ನಿಮ್ಮ ಪೋಟೊ ವೆಬ್‌ಸೈಟ್ ಸೇರುತ್ತದೆ.

How to Send a WhatsApp Message Without Saving the Contact in Your Phone - GIZBOT KANNADA
ಗೂಗಲ್‌ನಲ್ಲಿ ನಿಮ್ಮ ಪೋಟೊ!

ಗೂಗಲ್‌ನಲ್ಲಿ ನಿಮ್ಮ ಪೋಟೊ!

ನಿಮ್ಮ ಪೋಟೊವನ್ನು ಸೆಲೆಕ್ಟ್ ಮಾಡಿದ ನಂತರ, ಆ ಕೆಳಗೆ ಟ್ಯಾಗ್ಸ್ ಎಂಬ ಕಾಲಮ್ ಇರುತ್ತದೆ. ಆ ಕಾಲಮ್ ಬಹಳ ಮುಖ್ಯವಾಗಿದ್ದು, ಅದರಲ್ಲಿ ನೀವು ಗೂಗಲ್‌ನಲ್ಲಿ ಹುಡುಕುವ ಹೆಸರುಗಳಲ್ಲಿ ( 3 ರಿಂದ 4 ಇರಲಿ) ಸೇರಿಸಿ. ಡಿಸ್ಕ್ರಿಪ್ಷನ್ ಎಂದು ಟೈಪ್ ಮಾಡಿ ಫೊಟೊ ಅಪ್‌ಲೋಡ್ ಮಾಡಿ. ನಂತರ ಟ್ಯಾಗ್ಸ್ ಕಾಲಮ್‌ನಲ್ಲಿ ನೀವು ನೀಡಿದ ಹೆಸರುಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ನಿಮ್ಮ ಪೋಟೊ ಗೂಗಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
-How far down the page do you look when you google someone?. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+