ಗೂಗಲ್ ಮ್ಯಾಪ್ ಕೂಡ ಬ್ಯಾಂಕಿಂಗ್ ಸ್ಕ್ಯಾಮ್‌ಗೆ ಬಳಕೆಯಾಗಿದ್ದು ಹೇಗೆ?
ಆನ್ ಲೈನ್ ಕಳ್ಳರು ಇದೀಗ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ ಮತ್ತು ಅದಕ್ಕಾಗಿ ಗೂಗಲ್ ಸರ್ಚ್ ಇಂಜಿನ್ ನ್ನು ಬಳಕೆ ಮಾಡುತ್ತಿದ್ದಾರೆ. ಕುತೂಹಲಕಾರಿ ವಿಚಾರವೇನೆಂದರೆ ಇದು ಗೂಗಲ್ ನಿಂದ ಮಾಡಲಾಗುವ ಹ್ಯಾಕ್ ಅಥವಾ ಮೋಸ ಅಲ್ಲ ಬದಲಾಗಿ ಗೂಗಲ್ ಗ್ರಾಹಕರಿಗೆ ಸಹಾಯವಾಗಲಿ ಎಂದು ಮಾಡಿರುವ ಅಂತರ್ಜಾಲದ ಬಳಕೆದಾರರ ಮೋಸದ ಜಾಲ ಅಷ್ಟೇ.

ಮಹಾರಾಷ್ಟ್ರದ ಸೈಬರ್ ಪೋಲೀಸರು ಇದೀಗ ಜನರನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸುತ್ತಿದ್ದಾರೆ ಮತ್ತು ಬ್ಯಾಂಕ್ ಆಫ್ ಇಂಡಿಯಾ, ಇಪಿಎಫ್ಓ ಗಳು ಈ ನಿಟ್ಟಿನಲ್ಲಿ ಚಿಂತಿತರಾಗಿದ್ದಾರೆ. ನೀವು ತಿಳಿದಿರಬೇಕಾಗಿರುವ ಎಲ್ಲಾ ಅಂಶಗಳು ಇಲ್ಲಿದೆ ನೋಡಿ.
ಇಪಿಎಫ್ಓ ಪ್ರೊವಿಡೆಂಟ್ ಫಂಡ್ ಸ್ಕ್ಯಾಮ್ : ಜನರು ರಾಂಗ್ ನಂಬರ್ ಗೆ ಕರೆ ಮಾಡಿದರು ಮತ್ತು ಮೋಸ ಹೋದರು
ಸ್ಕ್ಯಾಮರ್ ಗಳು ಇತ್ತೀಚೆಗಷ್ಟೇ ಇಪಿಎಫ್ಓ ಆಫೀಸ್ ಮುಂಬೈನ ಕಾಂಟ್ಯಾಕ್ಟ್ ವಿವರಗಳನ್ನು ಗೂಗಲ್ ಸರ್ಚ್ ನಲ್ಲಿ ಬದಲಾಯಿಸಿದ್ದಾರೆ. ಯಾವಾಗ ಜನರು ಮೊಬೈಲ್ ನಂಬರ್ ಮೂಲಕ ಕರೆ ಮಾಡಿದ್ದಾರೋ ಆಗ ಸ್ಕ್ಯಾಮರ್ ಗಳು ಅವರ ವಯಕ್ತಿಕ ಮಾಹಿತಿಗಳನ್ನು ಕೇಳಿದ್ದಾರೆ ಮತ್ತು ಅವರಿಂದ ಎಲ್ಲಾ ಮಾಹಿತಿಗಳನ್ನು ಪಡೆದು ಮೋಸ ಗೊಳಿಸಿದ್ದಾರೆ.
ಈ ಸ್ಕ್ಯಾಮ್ ನಲ್ಲಿ ಜನರು ಗೂಗಲ್ ನಲ್ಲಿ ಕಾಣಿಸಿದ ನಂಬರ್ ಗೆ ಕರೆ ಮಾಡಿದ್ದಾರೆ ಮತ್ತು ಅದನ್ನು ಸರ್ಕಾರಿ ಕಛೇರಿಯ ನಂಬರ್ ಎಂದು ಭಾವಿಸಿದ್ದಾರೆ. ಆದರೆ ಮೋಸ ಹೋಗಿದ್ದಾರೆ.
ಗೂಗಲ್/ಗೂಗಲ್ ಮ್ಯಾಪ್ ನಲ್ಲಿ ನಂಬರ್ ಬದಲಾಯಿಸುವುದಕ್ಕೆ ಸ್ಕ್ಯಾಮರ್ ಗೆ ಹೇಗೆ ಸಾಧ್ಯವಾಯಿತು ?
ಗೂಗಲ್ ತನ್ನ ಬಳಕೆದಾರರಿಗೆ ಕಾಂಟ್ಯಾಕ್ಟ್ ವಿವರಗಳನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ ಅದರಲ್ಲಿ ಶಾಪ್/ ಬ್ಯಾಂಕ್ ಇತ್ಯಾದಿ. ಇದು ಗೂಗಲ್ ಸೇವೆಯನ್ನು ಇನ್ನಷ್ಟು ಪ್ರಸ್ತುತಪಡಿಸಲು ಮತ್ತು ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ಮಾಡಲಾಗಿರುವ ಅವಕಾಶ . ಇದನ್ನೇ ಸ್ಕ್ಯಾಮರ್ ಗಳು ದುರುಪಯೋಗ ಪಡಿಸಿಕೊಂಡಿದ್ದಾರೆ.
ಸ್ಕ್ಯಾಮರ್ ಗಳು ಕಾಂಟ್ಯಾಕ್ಟ್ ವಿವರಗಳನ್ನು ತಮ್ಮ ನಂಬರ್ ಗೆ ಬದಲಾಯಿಸಿದ್ದಾರೆ ಮತ್ತು ಜನರನ್ನು ಟ್ರ್ಯಾಪ್ ಮಾಡಿದ್ದಾರೆ.
ಬ್ಯಾಂಕಿನ ನಂಬರ್ ನ್ನು ಗೂಗಲ್ ಸರಿಯಾಗಿಯೇ ತೋರಿಸುತ್ತಿದೆ ಎಂದು ಭಾವಿಸಿದ ಜನರು ಅಗತ್ಯ ಬಿದ್ದಾಗ ಗೂಗಲ್ ನಲ್ಲಿ ಬ್ಯಾಂಕ್ ನಂಬರ್ ನ್ನು ಹುಡುಕಾಡಿ ಕರೆ ಮಾಡಿದ್ದಾರೆ. ಆದರೆ ಗೂಗಲ್ ನಲ್ಲಿ ಸರ್ಚ್ ಮಾಡಿ ಪಡೆದ ನಂಬರ್ ಸ್ಕ್ಯಾಮರ್ ಗಳದ್ದು ಎಂಬುದು ಜನರಿಗೆ ತಿಳಿದೇ ಇರಲಿಲ್ಲ ಹಾಗಾಗಿ ಟ್ರ್ಯಾಪ್ ಆಗಿದ್ದಾರೆ.
ಬ್ಯಾಂಕ್ ಉದ್ಯೋಗಿಗಳಂತೆಯೇ ಮಾತನಾಡಿರುವ ಸ್ಕ್ಯಾಮರ್ ಗಳು ತಮಗೆ ಕರೆ ಮಾಡಿದ ಗ್ರಾಹಕರ ಬಳಿ ವಯಕ್ತಿಕ ಮಾಹಿತಿಗಳನ್ನು ಕೇಳಿ ಪಡೆದಿದ್ದಾರೆ ಮತ್ತು ನಿಮ್ಮ ಕರೆಯನ್ನು ಪರೀಕ್ಷಿಸಲು ಇದನ್ನು ಕೇಳಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಮೊಬೈಲ್ ನಲ್ಲಿ ಸೇವೆಯನ್ನು ಪಡೆಯುವುದಕ್ಕಾಗಿ ಗ್ರಾಹಕರು ತಮ್ಮ ಕಾರ್ಡ್ ವಿವರ,ಎಟಿಎಂ ಪಿನ್ ಮತ್ತು ಇತರೆ ಪ್ರಮುಖ ಬ್ಯಾಂಕಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಕೆಲವೊಮ್ಮೆ ಈ ನಂಬರ್ ಗಳು ಫೇಕ್ IVRs ಗಳಾಗಿರುತ್ತದೆ
ಈ ಸ್ಕ್ಯಾಮ್ ಕೇವಲ ಬ್ಯಾಂಕ್ ಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಬದಲಾಗಿ ಇಪಿಎಫ್ಓ ಆಫಸ್ ಮುಂಬೈ ಶಾಖೆಯ ಫೋನ್ ನಂಬರ್ ಕೂಡ ಗೂಗಲ್ ನಲ್ಲಿ ತಪ್ಪಾಗಿ ಕಾಣಿಸಿದೆ ಮತ್ತು ಮೋಸ ಹೋದವರು ಇದ್ದಾರೆ.
ಗೂಗಲ್ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಆದರೆ ಫೋನ್ ನಂಬರ್ ಎಡಿಟ್ ಮಾಡುವ ಅವಕಾಶ ಈಗಲೂ ಮುಂದುವರಿದಿದೆ.
ಮುಂದಿನ ಬಾರಿ ಗೂಗಲ್ ಸರ್ಚ್ ಇಂಜಿನ್ ನಲ್ಲಿ ಲಭ್ಯವಾಗುವ ಕಾಂಟ್ಯಾಕ್ಟ್ ವಿವರ ಸರಿ ಇದೆ ಎಂದು ಭಾವಿಸಬೇಡಿ ಮತ್ತು ಯಾವ ಪ್ರಶ್ನೆಗೆ ಉತ್ತರಿಸಬೇಕು,ಯಾವುದಕ್ಕೆ ಉತ್ತರಿಸಬಾರದು ಎಂಬ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರಲಿ.
ಅಧಿಕೃತ ವೆಬ್ ಸೈಟ್ ಗಳಿಗೆ ತೆರಳಿ ಫೋನ್ ನಂಬರ್ ಅಥವಾ ಕಾಂಟ್ಯಾಕ್ಟ್ ವಿವರಗಳನ್ನು ಪಡೆದುಕೊಳ್ಳಿ
ಯಾವಾಗಲೂ ವಿಳಾಸ ಮತ್ತು ಬ್ಯಾಂಕಿನ,ಇಪಿಎಫ್ಓ, ಎಲ್ಐಸಿ ಮತ್ತು ಇತರೆ ಸಂಸ್ಥೆಗಳ ವಿವರಗಳನ್ನು ಅಧಿಕೃತ ವೆಬ್ ಸೈಟ್ ನಲ್ಲೇ ಪಡೆದುಕೊಳ್ಳಿ.


Click it and Unblock the Notifications








