Home
ಟೆಕ್ ನೌಕರಿ

ದುರಂತವೆಂದರೆ 'ಫೇಸ್‌ಬುಕ್' ಮೋಸವನ್ನು ನೀವು ತಿಳಿಯುತ್ತಲೇ ಇಲ್ಲ!!

ಇಂದಿನ ಒಂದು ದುರಂತವೆಂದರೆ, ಫೇಸ್‌ಬುಕ್ ಮೂಲಕ ಮಾಹಿತಿ ಸೋರಿಕೆಯಾಗುವುದು ಎಲ್ಲರಿಗೂ ಒಂದು ತೀರಾ ಸಾಮಾನ್ಯ ಸಮಸ್ಯೆ ಎನಿಸಿಬಿಟ್ಟಿದೆ. ಒಬ್ಬರು ನಮ್ಮನ್ನು ನಂಬಿಸಿ ಮೋಸ ಮಾಡುವುದನ್ನು ಮರೆತು ಅವರ ಹಿಂದೆಯೇ ಹೋದಂತೆ ಭಾಸವಾಗುತ್ತಿದೆ. ಜನರು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಬಿಟ್ಟು ಹೊರಬಾರದಂತೆ ಇದು ಕಾಣುತ್ತಿದೆ.!

ಹೌದು, ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಸಾಕಷ್ಟು ಮಾಹಿತಿ ಸೋರಿಕೆಯಾಗಿದೆ ಎಂಬ ಸುದ್ದಿ ಪದೇ ಪದೇ ಬಯಲಾಗುತ್ತಿದೆ. ಇಂತಹ ದಿನಗಳಲ್ಲಿ, ಎಲ್ಲಾ ಫೇಸ್‌ಬುಕ್ ಬಳಕೆದಾರರು ತಿಳಿದಿರಬೇಕಾದ ವಿಷಯ ಎಂದರೆ, ನಿಮ್ಮ ಬ್ರೌಸಿಂಗ್ ಹಿಸ್ಟರಿ ಮೂಲಕ ನಿಮ್ಮ ಹಲವು ಖಾಸಗಿ ಮಾಹಿತಿಗಳನ್ನು ಫೇಸ್‌ಬುಕ್ ಸಂಗ್ರಹಿಸಿದೆ.!

ದುರಂತವೆಂದರೆ 'ಫೇಸ್‌ಬುಕ್' ಮೋಸವನ್ನು ನೀವು ತಿಳಿಯುತ್ತಲೇ ಇಲ್ಲ!!

ಆದರೆ, ಫೇಸ್‌ಬುಕ್ ಅನ್ನು ಬಿಟ್ಟಿರಲು ಸಾಧ್ಯವೇ ಇಲ್ಲವೆನೋ ಎಂಬ ಜಾಲದ ಮನಸ್ಥಿತಿ ಈಗ ಬೃಹದಾಕಾರವಾಗಿ ಬೆಳೆದುನಿಂತಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿರುವ ನಿಮ್ಮ ಮಾಹಿತಿಯನ್ನು ರಕ್ಷಿಸಲು ಏನು ಮಾಡಬಹುದು? ಯಾವ ಯಾವ ಸುರಕ್ಷತಾ ಕ್ರಮಗಳು ನಿಮ್ಮನ್ನು ಸುರೆಕ್ಷಿತವಾಗಿ ಇಡುತ್ತವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ.

ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ.

ಫೇಸ್‌ಬುಕ್ ಬಳಕೆದಾರರ ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ, ಸಂವಹನ ಸಾಧನಗಳನ್ನು ತಯಾರಿಸುವ ವಿವಿಧ ಕಂಪನಿಗಳ ಜತೆಗೆ ಫೇಸ್‌ಬುಕ್‌ ಬಳಕೆದಾರರ ದತ್ತಾಂಶವನ್ನು ಹಂಚಿಕೊಂಡಿದೆ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಇದು ಫೇಸ್‌ಬುಕ್ ಮತ್ತು ಮೊಬೈಲ್ ತಯಾರಕರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ನಿರಾಕರಿಸಿದವರ ಮಾಹಿತಿ ಸಹ ಬಿಟ್ಟಿಲ್ಲ.

ನಿರಾಕರಿಸಿದವರ ಮಾಹಿತಿ ಸಹ ಬಿಟ್ಟಿಲ್ಲ.

ವೈಯಕ್ತಿಕ ಮಾಹಿತಿಯನ್ನು ಬೇರೆಯವರಿಗೆ ನೀಡುವುದನ್ನು ನಿರಾಕರಿಸಿದವರ ಹಾಗೂ ಬಳಕೆದಾರರ ಗೆಳೆಯರ ಮಾಹಿತಿಯನ್ನು ಅವರ ಒಪ್ಪಿಗೆ ಪಡೆದುಕೊಳ್ಳದೆಯೇ ಮತ್ತು ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಮಾಹಿತಿಯನ್ನು ಬೇರೆಯವರ ಜತೆಗೆ ಹಂಚಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಂತರವೂ ಇದು ನಡೆದಿದೆ ಎನ್ನಲಾಗಿದೆ.

ಕೇವಲ 287 ರೂ.ಗೆ ಮಾರಾಟ!

ಕೇವಲ 287 ರೂ.ಗೆ ಮಾರಾಟ!

ಡಾರ್ಕ್​ ವೆಬ್​ ಎಂಬ ಅಂತರ್ಜಾಲ ​ಸೈಟ್​ ಫೇಸ್​ಬುಕ್ ಬಳಕೆದಾರರ ಲಾಗಿನ್ ಐಡಿ ಮತ್ತು ಪಾಸ್​ವರ್ಡ್​ಗಳನ್ನು ಕೇವಲ 287 ರೂ.( 3.9 ಡಾಲರ್)ಗೆ ಮಾರಾಟ ಮಾಡುತತ್ತಿದ್ದಾರೆ. ಈ ಮಾಹಿತಿಗಳನ್ನು ಡಾರ್ಕ್ವೆಬ್ ಪ್ರತಿಷ್ಠಿತ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಈ ಡೇಟಾ ವ್ಯವಹಾರವು ಬಿಟ್ ಕಾಯಿನ್ ಮೂಲಕ ನಡೆಯುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಎಷ್ಟು ಸುರಕ್ಷಿತ ಆನ್‌ಲೈನ್?

ಎಷ್ಟು ಸುರಕ್ಷಿತ ಆನ್‌ಲೈನ್?

ಫೇಸ್‌ಬುಕ್‌ನಲ್ಲಿ 50 ಮಿಲಿಯನ್‌ ಖಾತೆಗಳ ಮಾಹಿತಿ ಸೋರಿಕೆಯಾಗಿದ್ದು ಭಯ ಮುಡಿಸಿದೆ. ಇದಕ್ಕಿಂತಲೂ ಇನ್​ಸ್ಟಾಗ್ರಾಂ ,ಇಮೇಲ್ ಸೇರಿದಂತೆ ಎಲ್ಲಾ ಆನ್‌ಲೈನ್ ಖಾತೆಗಳ ವಿವರ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿರುವ ಸುದ್ದಿ ಎಚ್ಚರಿಕೆ ಗಂಟೆಯಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಆನ್‌ಲೈನ್ ಪ್ರಪಂಚ ಎಷ್ಟು ಸುರಕ್ಷಿತ ಎಂಬ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದೆ.

ಖಾತೆಯನ್ನು ಸುರಕ್ಷಿತಗೊಳಿಸಿ!

ಖಾತೆಯನ್ನು ಸುರಕ್ಷಿತಗೊಳಿಸಿ!

ಸಾಮಾಜಿಕ ಜಾಲತಾಣಗಳೇ ಇರಬಹುದು ಅತವಾ ಇನ್ನಾವುದೇ ಆನ್‌ಲೈನ್ ತಾಣಗಳಿರಬಹುದು ಅವುಗಳ ಖಾತೆಯನ್ನು ನೀವು ಸುರಕ್ಷಿತವಾಗಿ ಇಡಬೇಕಿದೆ. ಇವು ಕೂಡ ನಿಮ್ಮನ್ನು ಸೇಫ್ ಮಾಡುತ್ತವೆ ಎಂಬ ನಂಬಿಕೆಯತೂ ಈಗ ಇಲ್ಲ.! ಆದರೂ ಬಲವಾದ ಪಾಸ್‌ವರ್ಡ್ ಹಾಗೂ ಹಲವು ಮಾರ್ಗಗಳಿಂದ ನಿಮ್ಮ ಖಾತೆ ಸುರಕ್ಷಿತವಾಗಿರುವಂತೆ ನೀವು ಮಾಡಬಹುದು.

ಆಪ್‌ಗಳನ್ನು ಡಿಲಿಂಕ್ ಮಾಡಿ

ಆಪ್‌ಗಳನ್ನು ಡಿಲಿಂಕ್ ಮಾಡಿ

ಫೇಸ್‌ಬುಕ್ ಖಾತೆಗೆ ಹಲವು ಆಪ್‌ಗಳು ಲಿಂಕ್ ಆಗಿರುತ್ತವೆ. ಅವೆಲ್ಲವನ್ನೂ ಡಿಲಿಂಕ್ ಮಾಡುವುದು ಪ್ರಮುಖ ಕೆಲಸ. ಸೆಟಿಂಗ್ಸ್ ತೆರೆದು ಆಪ್ ಅಂಡ್ ವೆಬ್‌ಸೈಟ್‌ಗೆ ಹೋದರೆ, ಅಲ್ಲಿ ಲಿಂಕ್ ಆಗಿರುವ ಆಪ್‌ಗಳ ಪಟ್ಟಿ ದೊರೆಯುತ್ತದೆ. ಅವುಗಳನ್ನು ಟಿಕ್ ಮಾಡಿ, ಫೇಸ್‌ಬುಕ್‌ನಿಂದ ಹೊರಗೆ ಹಾಕಬಹುದು. ಜತೆಗೆ, ಉಪಯೋಗಿಸದೇ ಇರುವ ವೆಬ್‌ಸೈಟ್‌ಗಳನ್ನು ಡಿಲೀಟ್ ಮಾಡಿ.

ಫೇಸ್‌ಬುಕ್‌ನಲ್ಲಿ ಕ್ವಿಜ್ ಆಡಬೇಡಿ

ಫೇಸ್‌ಬುಕ್‌ನಲ್ಲಿ ಕ್ವಿಜ್ ಆಡಬೇಡಿ

ಫೇಸ್‌ಬುಕ್ ನಲ್ಲಿ ಮೂಡಿಬರುವ ಯಾವುದೇ ಕ್ವಿಜ್‌ಗಳನ್ನು ಅಪ್ಪಿತಪ್ಪಿಯೂ ಮುಟ್ಟಲು ಹೋಗಬೇಡಿ. ಫೇಸ್‌ಬುಕ್‌ನಿಂದ ಮಾಹಿತಿ ಕದಿಯಲು ಕೇಂಬ್ರಿಜ್ ಅನಾಲಿಟಿಕಾ ಉಪಯೋಗಿಸಿದ್ದೇ ಕ್ವಿಜ್‌ಗಳನ್ನು. ಹಾಗಾಗಿ, ನೀವು ಯಾವ ಸ್ಟಾರ್‌ನಂತೆ ಕಾಣುತ್ತೀರಾ, ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ದೇ ಎಂಬ ಪ್ರಶ್ನೆಗಳನ್ನು ಕ್ಲಿಕ್ಕಿಸುವುದು ಅತ್ಯಂತ ಅಪಾಯಕಾರಿ ಕೆಲಸ.

 ಖಾಸಾಗಿಯಾಗಿ ಬದಲಾಯಿಸಿ!

ಖಾಸಾಗಿಯಾಗಿ ಬದಲಾಯಿಸಿ!

ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ಖಾಸಗಿಯಾಗಿಯೇ ಇಡುವ ಅವಕಾಶ ಇದೆ. ವಯಸ್ಸು, ವಾಸಸ್ಥಳ, ವಿಳಾಸ, ಹುಟ್ಟಿದ ದಿನಾಂಕ, ಒಟ್ಟು ಫ್ರೆಂಡ್ಸ್ ಸಂಖ್ಯೆ ಮೊದಲಾದವುಗಳನ್ನು ಎಲ್ಲರಿಗೂ ಕಾಣಿಸುವಂತೆ ಪಬ್ಲಿಕ್ ಇಡಬೇಡಿ. ಅದನ್ನು ಖಾಸಗಿ ಮಾಡಲು ಫೇಸ್‌ಬುಕ್‌ನಲ್ಲಿ ಅವಕಾಶ ಇದೆ. ಇಂತಹ ಮಾಹಿತಿ ಹೆಚ್ಚು ಹೆಚ್ಚು ಖಾಸಗಿಯಾಗಿದ್ದಷ್ಟೂ ಒಳ್ಳೆಯದು.

Best Mobiles in India

English summary
How to hide personal information and completely customize your profile's visibility on Facebook. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+