ವಾಟ್ಸ್ಆಪ್ ಸೆಟ್ಟಿಂಗ್ಸ್‌ನಲ್ಲಿರುವ ಈ ಅದ್ಬುತ ಫೀಚರ್ಸ್‌ಗಳನ್ನು ನಾವು ಒಮ್ಮೆಯೂ ಬಳಸಿಲ್ಲ!!

|

ನಾವು ದಿನನಿತ್ಯ ಬಳಸುತ್ತಿರುವ ವಾಟ್ಸ್‌ಆಪ್‌ನಲ್ಲಿ ನಮಗೆ ಎಲ್ಲವೂ ಗೊತ್ತೆ?. ಇಂತಹದೊಂದು ಸಿಲ್ಲಿ ಪ್ರಶ್ನೆ ಕೇಳುತ್ತಿದ್ದೀರಾ ಎಂದು ನಿಮಗೆ ಅನಿಸುತ್ತಿರಬಹುದು. ಆದರೆ, ನಿಮಗೆ ಗೊತ್ತಾ? ವಾಟ್ಸ್‌ಆಪ್‌ನಲ್ಲಿರುವ ಹಲವು ವಿಶೇಷತೆಗಳ ಬಗ್ಗೆ ನಮಗೆ ಈಗಲೂ ಸಹ ಅನೇಕ ವಿಷಯಗಳು ತಿಳಿದಿಲ್ಲ. ಶೇ. 70 ಕ್ಕಿಂತ ಹೆಚ್ಚು ಜನರು ಈ ಫೀಚರ್ಸ್‌ಗಳನ್ನು ಅನ್ನು ಬಳಸುತ್ತಿಲ್ಲ.

ಹೌದು, ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ಬಳಸುತ್ತಿರುವ ಪೇಸ್‌ಬುಕ್ ಒಡೆತನಕ್ಕೆ ಸೇರಿದ ವಾಟ್ಸ್ಆಪ್ ಹಲವು ಅಗಾಧ ವಿಷಯಗಳನ್ನು ಒಳಗೊಂಡಿದೆ. ಕೆಲವು ಫೀಚರ್ಸ್‌ಗಳು ಮೊದಲಿನಿಂದಲೂ ಲಭ್ಯವಿದ್ದರೇ, ಇನ್ನು ಕೆಲವು ವಿಶೇಷ ಫೀಚರ್ಸ್‌ಗಳು ಇತ್ತೀಚಿಗೆ ಅಪ್‌ಡೇಟ್ ಆಗಿವೆ. ಆದರೆ, ನಮಗೆ ಇವುಗಳ ಮಾಹಿತಿ ಇಲ್ಲದಿರುವುದರಿಂದ ಬಳಕೆಯಾಗುತ್ತಿಲ್ಲ.

ವಾಟ್ಸ್ಆಪ್‌ನಲ್ಲಿರುವ ಈ ಅದ್ಬುತ ಫೀಚರ್ಸ್‌ಗಳನ್ನು ನಾವು ಒಮ್ಮೆಯೂ ಬಳಸಿಲ್ಲ!!

ಹಾಗಾಗಿ, ಇಂದಿನ ಲೇಖನದಲ್ಲಿ ವಾಟ್ಸ್‌ಆಪ್‌ನಲ್ಲಿರುವ ಹತ್ತು ಹಲವು ವಿಶೇಷತೆಗಳ ಬಗ್ಗೆ ನಾವು ತಿಳಿಯೋಣ. ಲಾಸ್ಟ್ ಸಿನ್, ಸ್ಟೇಟಸ್ ಹೈಡ್ ಮಾಡುವುದೇಗೆ? ಡಾಕ್ಯುಮೆಂಟ್ ಗಳನ್ನು ಕ್ಲೌಡ್‌ನಲ್ಲಿ ಸೆಂಡ್ ಮಾಡುವುದು ಹೇಗೆ ಎಂಬ ಹಲವು ನಾವು ಒಮ್ಮೆಯೂ ಬಳಸದ ವಿಷೇಶತೆಗಳ ಕುರಿತ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಒಬ್ಬರ ಕಾಂಟ್ಯಾಕ್ಟ್ ಹೈಡ್ ಮಾಡುವುದು ಹೇಗೆ?

ಒಬ್ಬರ ಕಾಂಟ್ಯಾಕ್ಟ್ ಹೈಡ್ ಮಾಡುವುದು ಹೇಗೆ?

ನಮ್ಮ ವಾಟ್ಸ್‌ಆಪ್ ಅನ್ನು ಇತರರು ತೆರೆದು ಓದುತ್ತಾರೆ ಎಂಬ ಭಯ ನಿಮಗಿದ್ದರೆ ವಾಟ್ಸ್‌ಆಪ್‌ನಲ್ಲಿ ಒಬ್ಬರ ಕಾಂಟ್ಯಾಕ್ಟ್ ಹೈಡ್ ಮಾಡಬಹುದು. ನಿಮ್ಮ ವಾಟ್ಸ್‌ಆಪ್ ಕಾಂಟ್ಯಾಕ್ಟ್ ಮೇಲೆ ಕ್ಲಿಕ್ ಮಾಡಿದ ನಂತರ ಮೇಲೆ ಮೆನು ಬಟನ್ ಪಕ್ಕದಲ್ಲಿರುವ ಆರ್ಕೈವ್ ಬಟನ್ ಅನ್ನು ಒತ್ತಿರಿ. ಇದರಿಂದ ಚಾಟ್‌ ಲೀಸ್ಟ್‌ನಲ್ಲಿರುವ ಕಾಂಟ್ಯಾಕ್ಟ್ ಹೈಡ್ ಆಗುತ್ತದೆ.

ಲಾಸ್ಟ್‌ಸೀನ್ ಮತ್ತು ಸ್ಟೇಟಸ್ ಹೈಡ್ ಮಾಡುವುದೇಗೆ?

ಲಾಸ್ಟ್‌ಸೀನ್ ಮತ್ತು ಸ್ಟೇಟಸ್ ಹೈಡ್ ಮಾಡುವುದೇಗೆ?

ಇನ್ನು ಹಲವು ಮಂದಿ ವಾಟ್ಸ್ಆಪ್ ಬಳಕೆದಾರರಿಗೆ ತಮ್ಮ ಲಾಸ್ಟ್ ಸಿನ್ ಮತ್ತು ಸ್ಟೇಟಸ್ ಹೈಡ್ ಮಾಡುವುದು ಹೇಗೆ ಎಂಬುದೇ ತಿಳಿದಿಲ್ಲ. ವಾಟ್ಸ್ಆಪ್ ಅಕೌಂಟ್ಸ್ ಸೆಟ್ಟಿಂಗ್ಸ್‌ನಲ್ಲಿ ಪ್ರೈವಸಿ ಆಯ್ಕೆಯಲ್ಲಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಪ್ರೊಫೈಲ್ ಫೋಟೊ, ಲಾಸ್ಟ್‌ಸೀನ್ ಮತ್ತು ಸ್ಟೇಟಸ್ ಹೈಡ್ ಮಾಡು ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ ಸಾಕು ನಿಮ್ಮ ಸ್ಟೇಟಸ್ ಲಾಸ್‌ ಸಿನ್ ಎಲ್ಲವೂ ಹೈಡ್ ಆಗಲಿದೆ.

ಸ್ಟೋರೆಜ್ ಯುಸೇಜ್ ನೋಡಿ

ಸ್ಟೋರೆಜ್ ಯುಸೇಜ್ ನೋಡಿ

ವಾಟ್ಸ್‌ಆಪ್‌ನಲ್ಲಿ ಹೊಸ ಫೀಚರ್ ಲಭ್ಯವಿದ್ದು, ನಿಮ್ಮ ವಾಟ್ಸ್‌ಆಪ್ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಕಾಂಟ್ಯಾಕ್ಟ್‌ಗಳು ಎಷ್ಟೇಷ್ಟು ಮೆಮೊರಿಯನ್ನು ಬಳಸಿವೆ ಎಂಬುದನ್ನು ನೋಡಬಹುದಾಗಿದೆ. ಸೆಟ್ಟಿಂಗ್ಸ್ ತೆರೆದು ಡಾಟಾ ಅಂಡ್ ಸ್ಟೋರೇಜ್ ಯೂಸೇಜ್ ಕ್ಲಿಕ್ ಮಾಡಿ. ನಂತರ ಸ್ಟೋರೇಜ್ ಯೂಸೇಜ್‌ನಲ್ಲಿ ಚಾಟ್, ಇಮೇಜ್‌ಗಳು, ವಿಡಿಯೋಗಳ ಫೈಲ್ಸ್‌ ಎಷ್ಟೇಷ್ಟು ಸ್ಟೋರೇಜ್ ಬಳಸಿವೆ ಎಂಬುದನ್ನು ತೋರಿಸುತ್ತದೆ.

ವಾಟ್ಸ್ಆಪ್ ವಾಯ್ಸ್ ಕಾಲಿಂಗ್ ನೊಂದಿಗೆ ಮೇಸೆಜ್

ವಾಟ್ಸ್ಆಪ್ ವಾಯ್ಸ್ ಕಾಲಿಂಗ್ ನೊಂದಿಗೆ ಮೇಸೆಜ್

ನೀವು ವಾಟ್ಸ್ಆಪ್ ಮೂಲಕ ವಾಯ್ಸ್ ಕಾಲ್ ಮಾಡಿ ನಿಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೆ ಅದರೊಂದಿಗೆ ಇನ್ನೊಬ್ಬ ಸ್ನೇಹಿತರೊಂದಿಗೂ ಮೇಸೆಜ್ ಮೂಲಕ ಚಾಟ್ ನಡೆಸಬಹುದಾಗಿದೆ. ನೀವು ಪೋನಿನಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಕೆಳಗೆ ನೀಡಿರುವ ಮೇಸೆಜ್ ಸಿಂಬಲ್ ಅನ್ನು ಒತ್ತುವ ಮೂಲಕ ನೀವು ಚಾಟ್ ವಿಂಡೋವನ್ನು ಪ್ರವೇಶಿಸಬಹುದಾಗಿದೆ.

ಸಣ್ಣ ಪುಟ್ಟ ವಾಯ್ಸ್ ಟೈಪಿಂಗ್

ಸಣ್ಣ ಪುಟ್ಟ ವಾಯ್ಸ್ ಟೈಪಿಂಗ್

ನೀವು ವಾಟ್ಸ್ಆಪ್ ಚಾಟಿಂಗ್ ನಡೆಸುವ ಸಂದರ್ಭಗಳಲ್ಲಿ ಮೇಸೆಜ್ ಟೈಪ್ ಮಾಡಲು ಸಮಯವಿಲ್ಲದ ಸಂದರ್ಭದಲ್ಲಿ ಮೈಕ್ ಅನ್ನು ಒತ್ತಿ ಹಿಡಿದು ವಾಯ್ಸ್ ಮೇಸೆಜ್ ಹೇಳಿದರೆ ಅದು ಹಾಗೇಯೆ ಮೇಸೆಜ್ ಮಾದರಿಯಲ್ಲಿ ಟೈಪ್ ಆಗಲಿದೆ. ಆದರೆ ಇದು ಸಣ್ಣ ಪುಟ್ಟ ವಾಕ್ಯಗಳಿಗೆ ಮಾತ್ರ ಸೀಮಿತವಾಗಿದೆ. ' how are you' 'I am fine' ಈ ರೀತಿಯ ವಾಕ್ಯ ರಚನೆಗೆ ಸಹಾಯಕಾರಿಯಾಗಿದೆ.

ಹೋಮ್ ಸ್ಕ್ರಿನ್‌ನಲ್ಲಿ ಮುಖ್ಯವಾದ ನಂಬರ್‌ಗಳು

ಹೋಮ್ ಸ್ಕ್ರಿನ್‌ನಲ್ಲಿ ಮುಖ್ಯವಾದ ನಂಬರ್‌ಗಳು

ನೀವು ಜಾಸ್ತಿ ಯಾರೊಂದಿಗೆ ಚಾಟಿಂಗ್ ನಡೆಸುವಿರೋ ಅಂತಹ ವ್ಯಕ್ತಿಯ ನಂಬರ್‌ ಅನ್ನು ನಿಮ್ಮ ಮೊಬೈಲ್‌ನ ಹೋಮ್ ಸ್ಕ್ರಿನ್‌ ನಲ್ಲಿ ಶಾರ್ಟ್‌ಕಟ್ ಆಗಿ ಇಟ್ಟುಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ವಾಟ್ಸ್ಆಪ್ ನಲ್ಲಿ ಕಾಂಟೆಕ್ ಮೇಲೆ ಲಾಂಗ್ ಪ್ರೈಸ್ ಮಾಡಿ ಸಂದರ್ಭದಲ್ಲಿ ಕಾಣುವ ಮೂರು ಚುಕ್ಕಿಗಳಲ್ಲಿ ಇರುವ ಆಯ್ಕೆಗಳಲ್ಲಿ 'ಆಡ್ ಶಾರ್ಟ್‌ಕಟ್' ಆಯ್ಕೆ ಮಾಡಿಕೊಂಡರೆ ನಿಮ್ಮ ಹೋಮ್ ಸ್ಕ್ರಿನ್‌ನಲ್ಲಿ ನೀವು ಬಯಸಿದ ನಂಬರ್ ಬಂದು ಕೂರಲಿದೆ.

ಡಾಕ್ಯುಮೆಂಟ್ ಗಳನ್ನು ಕ್ಲೌಡ್‌ನಲ್ಲಿ ಸೆಂಡ್ ಮಾಡಬಹುದು

ಡಾಕ್ಯುಮೆಂಟ್ ಗಳನ್ನು ಕ್ಲೌಡ್‌ನಲ್ಲಿ ಸೆಂಡ್ ಮಾಡಬಹುದು

ಇಷ್ಟುದಿನ ವಾಟ್ಸ್‌ಆಪ್ ನಿಂದ ಡೊಡ್ಡ ಪ್ರಮಾಣದ ಡಾಕ್ಯುಮೆಂಟ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಸದ್ಯ ನೀಡಿರುವ ಹೊಸ ಆಪ್‌ಡೇಟ್‌ನಲ್ಲಿ ಗೂಗಲ್ ಡ್ರೈವ್ ,ಡ್ರಾಪ್‌ ಬಾಕ್ಸ್, ಮೂಲಕ ಕ್ಲೌಡ್‌ನಲ್ಲಿಯೇ ಡಾಕ್ಯುಮೆಂಟ್‌ಗಳನ್ನು ಕಳುಹಿಸಬಹುದಾಗಿದೆ.

ಪ್ರೈವೆಟ್ ಆಗಿ ಸೇವ್ ಮಾಡಿ

ಪ್ರೈವೆಟ್ ಆಗಿ ಸೇವ್ ಮಾಡಿ

ಇನ್ಮುಂದೆ ನಿಮಗೆ ಬೇಕಾದ ವಾಟ್ಸ್‌ಆಪ್‌ ಫೈಲ್, ಚಾಟ್‌ಗಳನ್ನು ಖಾಸಗಿಯಾಗಿ ಶೇಖರಿಸಬಹುದಾಗಿದೆ. ಮೊದಲು ಕೇವಲ ಕಳುಹಿಸಿದ ಮತ್ತು ಸ್ವೀಕರಿಸಿದ ಫೋಲ್ಡರ್‌ಗಳಿದ್ದ ವಾಟ್ಸ್‌ಆಪ್‌ನಲ್ಲಿ ಪ್ರೈವೆಟ್ ಆಯ್ಕೆಯನ್ನು ನೀಡಿದ್ದು, ನಿಮ್ಮ ಕಾಂಟ್ಯಾಕ್ಟ್‌ ಲೀಸ್ಟ್‌ನಲ್ಲಿರುವ ಕಾಂಟ್ಯಾಕ್ಟ್‌ಗಳಲ್ಲಿ ಆಯ್ಕೆ ಮಾಡಿಕೊಂಡು ಅವುಗಳ ಮೀಡಿಯಾ ಫೈಲ್‌ಗಳನ್ನು ಖಾಸಗಿಯಾಗಿ ಶೇಖರಿಸುವ ಫೀಚರ್ ನೀಡಲಾಗಿದೆ.

ವಿಶ್ವದ ಟಾಪ್ 10 ದುಬಾರಿ ಮೊಬೈಲ್‌ಗಳು ಇವು!..ಬೆಲೆ ಕೇಳಿ ಬೆಚ್ಚಿಬೀಳದಿರಿ!!

ವಿಶ್ವದ ಟಾಪ್ 10 ದುಬಾರಿ ಮೊಬೈಲ್‌ಗಳು ಇವು!..ಬೆಲೆ ಕೇಳಿ ಬೆಚ್ಚಿಬೀಳದಿರಿ!!

ಒಂದು ಸ್ಮಾರ್ಟ್‌ಫೋನ್ ಖರೀದಿಸುವ ಸಲುವಾಗಿ ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಲು ನಾವು ಹಿಂದೆ ಮುಂದೆ ನೋಡುತ್ತೇವೆ. ಆದರೆ, ಈ ಜಗತ್ತಿನಲ್ಲಿ ಎಂತೆಂತಹ ಜನರು, ಎಂತೆಂತಹ ಸ್ಮಾರ್ಟ್‌ಫೋನ್‌ಗಳನ್ನು, ಹೇಗೆಲ್ಲಾ ಖರೀದಿಸುತ್ತಾರೆ ಎಂದು ಗೊತ್ತಾದರೆ ಈ ಮೊಬೈಲ್ ಜಗತ್ತು ಎಂಬುದು ಇಷ್ಟು ವಿಚಿತ್ರವೇ ಎನಿಸುವುದರಲ್ಲಿ ಅನುಮಾನವೇ ಇಲ್ಲ.!?

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಕೆಯು ಅಗತ್ಯಕ್ಕೆ ಮಾತ್ರವೇ ಮೀಸಲಾಗಿರದೇ ವೈಭವದ ವಿಷಯವಾಗಿದೆ. ಕೆಲವು ಜನರಿಗೆ ಸ್ಮಾರ್ಟ್‌ಫೋನ್ ವ್ಯಾಮೋಹ ಎಷ್ಟಿದೆಯೆಂದರೆ ತಮ್ಮ ಅಂಗಾಂಗಳನ್ನು ಮಾರಿ ಕೂಡ ಐಫೋನ್‌ನಂತಹ ದುಬಾರಿ ಫೋನ್‌ಗಳನ್ನು ಖರೀದಿಸಿದವರಿದ್ದಾರೆ ಎನ್ನುವುದು ಸಾಮಾನ್ಯರಿಗೂ ಸಹ ಈಗೇನು ಆಶ್ಚರ್ಯಸೂಚಕವಾಗಿಯೂ ಇಲ್ಲ.!

ಹಾಗೆಯೇ, ಐಶಾರಾಮಿ ಎಂಬ ಪದಕ್ಕೂ ಮಿತಿಯಿಲ್ಲ ಎನ್ನುವಂತಾಗಿದೆ. ಮೊಬೈಲ್ ಬಿಡಿಬಾಗಗಳನ್ನೇ ವಜ್ರ, ಚಿನ್ನ, ಪ್ಲಾಟಿನಮ್ ಸ್ಪರ್ಶಗಳನ್ನು ನೀಡಿ ಅತಿ ದುಬಾರಿ ಫೋನ್‌ಗಳನ್ನು ಕೆಲ ವಿನ್ಯಾಸಕಾರರು ತಯಾರಿಸಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಶ್ವದ ಟಾಪ್ 10 ದುಬಾರಿ ಬೆಲೆಯ ಮೊಬೈಲ್ ಪೋನ್‌ಗಳು ಯಾವುವು ಎಂಬ ಕುತೋಹಲ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

10) ವರ್ಚ್ಯು ಸಿಗ್ನೇಚರ್ ಡೈಮೆಂಡ್($88,300)

10) ವರ್ಚ್ಯು ಸಿಗ್ನೇಚರ್ ಡೈಮೆಂಡ್($88,300)

ವರ್ಚ್ಯು ಬಿಡುಗಡೆ ಮಾಡಿರುವ ದುಬಾರಿ ಫೋನ್ ಇದಾಗಿದೆ. ವಿಶ್ವದ ಟಾಪ್ 10 ಮೊಬೈಲ್ ಫೋನ್‌ಗಳ ಪಟ್ಟಿಯಲ್ಲಿ ಈ ಫೋನ್ ಕೂಡ ಸೇರಿದೆ. ಪ್ಲಾಟಿನಮ್‌ನಿಂದ ತಯಾರಿಸಲಾದ ಈ ಫೋನ್ ಬರಿಯ ಕೈಗಳಿಂದಲೇ ನಿರ್ಮಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನಿನ ಬೆಲೆ ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ 60 ಲಕ್ಞ ರೂಪಾಯಿಗಳಾಗುತ್ತವೆ.

9) ಐಫೋನ್ ಪ್ರಿನ್ಸಸ್ ಪ್ಲಸ್ ($176,400)

9) ಐಫೋನ್ ಪ್ರಿನ್ಸಸ್ ಪ್ಲಸ್ ($176,400)

ಐಫೋನ್ ಪ್ರಿನ್ಸಸ್ ಪ್ಲಸ್ ವಿಶ್ವದಲ್ಲೇ ಅತಿ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡಿದೆ. ಪೀಟರ್ ಅಲೊಯ್‌ಸನ್ ಎಂಬ ಖ್ಯಾತ ವಿನ್ಯಾಸಕಾರಈ ಐಫೋನ್ ಅನ್ನು ಸಿದ್ಧಪಡಿಸಿದ್ದು, 138 ಪ್ರಿನ್ಸಸ್ ಕಟ್ ಮತ್ತು 180 ಬ್ರಿಲಿಯಂಟ್ ಕಟ್ ಡೈಮೆಂಡ್ಸ್ ಹೊಂದಿರುವ ಈ ಮೊಬೈಲ್ ಬೆಲೆ 1.17 ಕೋಟಿ ರೂಪಾಯಿಗಳು.

8) ಸ್ಯಾವೆಲ್ಲಿ ಸ್ಮಾರ್ಟ್‌ಫೋನ್ ($ 2,50,000)

8) ಸ್ಯಾವೆಲ್ಲಿ ಸ್ಮಾರ್ಟ್‌ಫೋನ್ ($ 2,50,000)

ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಮಾರುಕಟ್ಟೆಗೆ ಬಂದ ಸ್ಯಾವೆಲ್ಲಿ ಸ್ಮಾರ್ಟ್‌ಫೋನ್ 11 ವಿವಿಧ ಮಾದರಿಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿತ್ತು. 18k ಚಿನ್ನದ ತುಣುಕುಗಳೊಂದಿಗೆ ತಯಾರಾಗಿದ್ದ ಈ ಸ್ಮಾರ್ಟ್‌ಪೋನ್ ಬೆಲೆ ಬಾರತೀಯ ರೂಪಾಯಿಗಳ ಲೆಕ್ಕದಲ್ಲಿ 1.6 ಕೋಟಿ ರೂಪಾಯಿಗಳು.

7) ಬ್ಲ್ಯಾಕ್ ಡೈಮೆಂಡ್ ವಿಐಪಿಎನ್ ಸ್ಮಾರ್ಟ್‌ಫೋನ್ ($300,000)

7) ಬ್ಲ್ಯಾಕ್ ಡೈಮೆಂಡ್ ವಿಐಪಿಎನ್ ಸ್ಮಾರ್ಟ್‌ಫೋನ್ ($300,000)

ವಿಶ್ವದ ಶ್ರೀಮಂತ ಫೋನ್‌ಗಳ ಪಟ್ಟಿಯಲ್ಲಿ ಸೋನಿ ಎರಿಕ್‌ಸನ್‌ನ ಬ್ಲ್ಯಾಕ್ ಡೈಮಂಡ್ ಕೂಡ ಸ್ಥಾನ ಪಡೆದುಕೊಂಡಿದೆ. ನ್ಯಾವಿಗೇಶನ್ ಬಟನ್ ಹೊಂದಿರುವ ಈ ಪೋನ್ ಅನ್ನು ಎರಡು ವಜ್ರಗಳನ್ನು ಬಳಸಿ ಇದನ್ನು ಅಲಂಕರಿಸಲಾಗಿದೆ. ಈ ಸ್ಮಾರ್ಟ್‌ಫೋನಿನ ಬೆಲೆ 2 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

6) ವರ್ಚ್ಯು ಸಿಗ್ನೇಚರ್ ಕೋಬ್ರಾ ($310,000)

6) ವರ್ಚ್ಯು ಸಿಗ್ನೇಚರ್ ಕೋಬ್ರಾ ($310,000)

ವಿಶ್ವದ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ವರ್ಚ್ಯು ಸಿಗ್ನೇಚರ್ ಕೋಬ್ರಾ ಪಡೆದುಕೊಂಡಿದೆ. ಫ್ರೆಂಚ್ ಜ್ಯುವೆಲ್ಲರ್ ಬೌಶೆರನ್ ಈ ಫೋನ್ ಅನ್ನು ಸಿದ್ಧಪಡಿಸಿದ್ದು, ಪಿಯರ್ ಕಟ್ ಡೈಮಂಡ್ ಅನ್ನು ಇದರಲ್ಲಿ ಬಳಸಲಾಗಿದೆ. ಈ ಸ್ಮಾರ್ಟ್‌ಫೋನಿನ ಬೆಲೆ 2 ಕೋಟಿ ರೂಪಾಯಿ ದಾಟುತ್ತದೆ.

5) ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ($ 1 million)

5) ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ($ 1 million)

ಗ್ರೆಸೊ ಹೆಸರಿನ ಫೋನ್ ಅನ್ನು ಕರೆಯುವುದು ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ಎಂಬ ಹೆಸರಿನಿಂದಾಗಿದೆ. 2005 ರಲ್ಲಿ ಈ ಫೋನ್ ಅನ್ನು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಯಿತು. 180 ಗ್ರಾಮ್‌ಗಳ ಚಿನ್ನದಿಂದ ಈ ಫೋನ್ ಅನ್ನು ತಯಾರಾಗಿದ್ದು, ಈ ಸ್ಮಾರ್ಟ್‌ಫೋನಿನ ಬೆಲೆ 6.63 ಕೋಟಿ ರೂಪಾಯಿಗಳಾಗಿವೆ.

4) ಡೈಮೆಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್ ($ 1.3 million)

4) ಡೈಮೆಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್ ($ 1.3 million)

ವಿಂಡೋಸ್ ಸಿಇ ಆಧಾರಿತ ಈ ಸ್ಮಾರ್ಟ್ ಫೋನ್ ಪೀಟರ್ ಅಲಿಸನ್‌ನಿಂದ ವಿನ್ಯಾಸಗೊಳಿಸಲಾಗಿದೆ. 50 ವಜ್ರದ ಹರಳುಗಳನ್ನು ಈ ಫೋನ್‌ನಲ್ಲಿ ಬಳಸಲಾಗಿದೆ.ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಈ ಪೋನಿನ ಬೆಲೆ 8.64 ಕೋಟಿಯಷ್ಟಾಗುತ್ತದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೆ.?

3) ಗೋಲ್ಡ್ ವಿಶ್ ಲಿ ಮಿಲಿಯನ್ ($ 1.3 million)

3) ಗೋಲ್ಡ್ ವಿಶ್ ಲಿ ಮಿಲಿಯನ್ ($ 1.3 million)

ಇಮ್ಯಾನುವಲ್ ಗುಯೆಟ್ ಎಂಬ ವಿನ್ಯಾಸಕಾರ ಈ ಸ್ಮಾರ್ಟ್‌ಫೋನ್ ಅನ್ನು ವಿನ್ಯಾಸಪಡಿಸಿದ್ದು, ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ನಿರ್ಮಾಣವಾದ ಈ ಪೋನ್ ವಿಶ್ವದ ಗಿನ್ನೇಸ್ ವರ್ಲ್ಡ್ ದಾಖಲೆಯನ್ನು ಪಡೆದುಕೊಂಡಿತ್ತು. ಈ ಸ್ಮಾರ್ಟ್‌ಪೋನಿನ ಬೆಲೆ ಕೂಡ 8.64 ಕೋಟಿ ರೂಪಾಯಿಗಳಿಗಿಂತ ಹೆಚ್ಚಿತ್ತು.

2) ಐಫೋನ್ 3 ಜಿ ಕಿಂಗ್ಸ್ ಬಟನ್ ($ 1.5 million)

2) ಐಫೋನ್ 3 ಜಿ ಕಿಂಗ್ಸ್ ಬಟನ್ ($ 1.5 million)

ವಿಶ್ವದ ಎರಡನೇ ದುಬಾರಿ ಫೋನ್ ಆಗಿ ಖ್ಯಾತಿವೆತ್ತಿರುವ ಐಫೋನ್ 3 ಜಿ ಕಿಂಗ್ಸ್ ಬಟನ್ ಸ್ಮಾರ್ಟ್‌ಫೋನ್ 6.6 ಕ್ಯಾರೆಟ್ ಗುಣಮಟ್ಟದ 138 ವಜ್ರಗಳಿಂದ ನಿರ್ಮಿತವಾಗಿದೆ. 138 ವಜ್ರಗಳಿಮದ ರೂಪಿತವಾಗಿರುವ ಈ ಸ್ಮಾರ್ಟ್‌ಫೋನಿನ ಬೆಲೆ 10 ಕೋಟಿ ರೂಪಾಯಿಗಳಾಗುತ್ತದೆ.

1) ಫಾಲ್ಕನ್ ಸೂಪರ್ನೋವಾ ಪಿಂಕ್ ಡೈಮಂಡ್ ಐಫೋನ್ 6($95.5 million)

1) ಫಾಲ್ಕನ್ ಸೂಪರ್ನೋವಾ ಪಿಂಕ್ ಡೈಮಂಡ್ ಐಫೋನ್ 6($95.5 million)

ಪ್ರಪಂಚದಲ್ಲಿಯೇ ದುಬಾರಿ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಫಾಲ್ಕನ್ ಸೂಪರ್ನೋವಾ ಪಿಂಕ್ ಡೈಮಂಡ್ ಐಫೋನ್ 6 ಹೊಂದಿದೆ. ಗುಲಾಬಿ ಮತ್ತು ನೀಲಿ ಬಣ್ಣದಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್ 18 ಕ್ಯಾರೆಟ್ ವಜ್ರದಲ್ಲಿ ರೂಪಿತವಾಗಿತ್ತು. ಈ ಸ್ಮಾರ್ಟ್‌ಫೋನಿನ ಬೆಲೆ 635 ಕೋಟಿ ರೂಪಾಯಿಗಳಾಗಿತ್ತು.

Best Mobiles in India

English summary
WhatsApp is the very popular messaging application of this modern age.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X