ನಿಮ್ಮ ಟಿವಿ ಆಡಿಯೋ ಗುಣಮಟ್ಟ ಹೆಚ್ಚಿಸುವುದು ಹೇಗೆ..?
ಟಿವಿ ತಯಾರಿಕಾ ಕಂಪೆನಿಗಳು ಇತ್ತೀಚೆಗೆ ತಮ್ಮ ವೀಡಿಯೋ ಗುಣಮಟ್ಟವನ್ನು ಹೆಚ್ಚಿಸಲು ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ, ಅದರ ಜೊತೆಜೊತೆಗೆ ಆಡಿಯೋ ಗುಣಮಟ್ಟ ಕೂಡ ಹೆಚ್ಚಾಗುತ್ತಿದೆ ಎಂಬುದನ್ನ ಪ್ರತಿಯೊಬ್ಬ ಗ್ರಾಹಕನೂ ಗಮನ ಹರಿಸಬೇಕು. ಆದರೆ ಈಗಲೂ ಕೂಡ ಟಿವಿಯಲ್ಲಿ ಕೆಲವು ಆಡಿಯೋ ಸಂಬಂಧಿತ ಸಮಸ್ಯೆಗಳು ತಲೆದೋರುತ್ತದೆ.
ಆ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಅಪ್ ಗ್ರೇಡ್ ಗಳನ್ನು ಮಾಡಿಕೊಳ್ಳುವುದರಿಂದ ಆಡಿಯೋ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಯಾವ ಬದಲಾವಣೆಯನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ ನೋಡಿ.

ವಿಧಾನ 1: ಟಿವಿಯ ಆಡಿಯೋ ಸೆಟ್ಟಿಂಗ್ಸ್ ನ andequalizer ನ್ನು ಬಳಸಿ ಪ್ಲೇ ಮಾಡಿ.
ಸೌಂಡ್ ಔಟ್ ಪುಟ್ ನ ವಿಚಾರದಲ್ಲಿ ಇದು ಸಾಮಾನ್ಯ ಮತ್ತು ಬಹಳ ಮುಖ್ಯ ವಿಚಾರವಾಗಿದೆ. ಟಿವಿಯ ಡೀಫಾಲ್ಟ್ ಆಡಿಯೋ ಸೆಟ್ಟಿಂಗ್ ಯಾವಾಗಲೂ ಉತ್ತಮವಾಗಿರುವುದಿಲ್ಲ. ಹಾಗಾಗಿ ಅದರ ಸುತ್ತ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಆದಷ್ಟು ಉತ್ತಮ ಫಲಿತಾಂಶವನ್ನು ನಿಮ್ಮ ಟಿವಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ .
ಒಂದು ವೇಳೆ ನಿಮ್ಮ ಟಿವಿ ವಿಭಿನ್ನ ಆಡಿಯೋ ಮೋಡ್ ಗಳಾದ ಮೂವಿ, ಮ್ಯೂಸಿಕ್, ಗೇಮ್, ವಾಯ್ಸ್, ಕಸ್ಟಮ್ ಇತ್ಯಾದಿಗಳನ್ನು ಒಳಗೊಂಡು ಬಂದರೆ ಅದನ್ನು ಬದಲಾವಣೆ ಮಾಡಿ ವ್ಯತ್ಯಾಸ ನೋಡಿ. ನಿಮ್ಮ ಅಗತ್ಯತೆಗೆ ಯಾವುದು ಅನುಕೂಲಕರವಾಗಿದೆ ಎಂಬುದನ್ನ ಗಮನಿಸಿ. ಒಂದು ವೇಳೆ ಯಾವುದೇ ಮೋಡ್ ಗಳು ನಿಮಗೆ ಹೊಂದಾಣಿಕೆ ಆಗದೆ ಇದ್ದರೆ ಕಸ್ಟಮ್ ಮೋಡ್ ಗೆ ಸ್ವಿಚ್ ಆಗಿ ಮತ್ತು ಇಕ್ವಿಲೈಜರ್ ನ್ನು ಮ್ಯಾನುವಲ್ ಆಗಿ ಅಡ್ಜೆಸ್ಟ್ ಮಾಡಿ.
• bass ನ್ನು ಮ್ಯಾನೇಜ್ ಮಾಡಲು ಫ್ರೀಕ್ವೆನ್ಸಿ ಸ್ಪೈಡರ್ ರೇಂಜನ್ನು 20Hz to 250Hz ಕ್ಕೆ ಅಡ್ಜೆಸ್ಟ್ ಮಾಡಿ..
• ವೋಕಲ್ ನ್ನು ಮ್ಯಾನೇಜ್ ಮಾಡಲು ಫ್ರೀಕ್ವೆನ್ಸಿ ಯನ್ನು 250Hz to 500Hz ಕ್ಕೆ ಅಡ್ಜೆಸ್ಟ್ ಮಾಡಿ.
•Treble ಗಾಗಿ ನೀವು ಸ್ಲೈಡರ್ ಫ್ರೀಕ್ವೆನ್ಸಿಯನ್ನು , 4KHz ಯಿಂದ 20KHz ಗೆ ಅಡ್ಜೆಸ್ಟ್ ಮಾಡಿ.
ವಿಧಾನ 2: ಟಿವಿಗೆ ಟೇಬಲ್ ಮೌಂಟ್ ಸ್ಟ್ಯಾಂಡ್ ಬಳಸಿ.
ಒಂದುವೇಳೆ ಟಿವಿಗೆ ಕೆಳಭಾಗದಲ್ಲಿ ಸ್ಪೀಕರ್ ಇದ್ದಲ್ಲಿ ಅದಕ್ಕೆ ಟೇಬಲ್ ಸ್ಟ್ಯಾಂಡ್ ಬಳಸಿ. ಇದು ಆಡಿಯೋ ಹೆಚ್ಚಿಸಲು ನೆರವಾಗುತ್ತದೆ. ಟೇಬಲ್ ನ ಜಾಗವು ಟಿವಿಯಿಂದ ಬರುವ ಶಬ್ದವನ್ನು ಬೌಂನ್ಸ್ ಮಾಡಿ ಎಕ್ಸ್ಟ್ರಾ ಎಫೆಕ್ಟ್ ನೀಡಲು ಸಹಕಾರಿಯಾಗಿರುತ್ತದೆ.
ವಿಧಾನ 3: ಟಿವಿಗೆ ಸಪರೇಟ್ ಸ್ಪೀಕರ್ ಸಿಸ್ಟಮ್ ನ್ನು ಬಳಕೆ ಮಾಡಿ.
ಮೇಲಿನ ವಿಧಾನವನ್ನು ಈಗಾಗಲೇ ಅಳವಡಿಸಿದ್ದು ನಿಮ್ಮ ತೃಪ್ತಿಕರವಾಗಿಲ್ಲದೇ ಇದ್ದಲ್ಲಿ ಸೌಂಡ್ ಬಾರ್ ಅಥವಾ ಸೌಂಡ್ ಸ್ಪೀಕರ್ ಗಳ ಅಳವಡಿಕೆಯಿಂದ ನಿಮಗೆ ಖಂಡಿತ ಉತ್ತಮ ಫಲಿತಾಂಶ ಸಿಗಲಿದೆ. ಸ್ಪೀಕರ್ ಗಳನ್ನು ಖರೀದಿಸುವ ಮುನ್ನ ಅದರ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಗಮನ ಹರಿಸಿ. ನಿಮ್ಮ ಟಿವಿಗೂ ಸ್ಪೀಕರ್ ಗೂ ಕನೆಕ್ಟಿವಿಟಿಗೆ ಬೆಂಬಲವಿದೆಯೇ ಎಂಬುದನ್ನ ಗಮನಿಸಿಕೊಳ್ಳಿ.


Click it and Unblock the Notifications








