ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ..? ಆಗಿದ್ರೇ ಹೀಗೆ ಮಾಡಿ..!
ಇಂಟರ್‌ನೆಟ್ ಯುಗದಲ್ಲಿರುವ ನಮಗೆಲ್ಲ ಸ್ಮಾರ್ಟ್‌ಫೋನ್, ಗ್ಯಾಡ್ಜೆಟ್‌ಗಳೇ ಸಂಬಂಧಿಕರಾಗಿವೆ. ಅವುಗಳಿಲ್ಲದೇ ನಮಗೆ ಜೀವನವೇ ಇಲ್ಲ ಎನ್ನುವಂತಾಗಿದೆ. ಆದ್ದರಿಂದ ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಎಷ್ಟೇ ಚೆನ್ನಾಗಿರುವ ಮೊಬೈಲ್ ತೆಗೆದುಕೊಂಡರು ಎಲ್ಲದರದ್ದೂ ಒಂದೇ ಸಮಸ್ಯೆ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ದಿನಕ್ಕೆರಡು ಬಾರಿ ಚಾರ್ಜ್ ಹಾಕಬೇಕು ಎನ್ನುವುದು ಎಲ್ಲರ ಗೋಳು. ದಿನಪೂರ್ತಿ ಇಂಟರ್‌ನೆಟ್, ಹೆಚ್‌ಡಿ ಕ್ವಾಲಿಟಿ ವಿಡಿಯೋಗಳನ್ನು ವೀಕ್ಷಿಸಿದರೆ ಬ್ಯಾಟರಿ ಬೇಗ ಖಾಲಿಯಾಗುವುದು ಸರ್ವೇ ಸಾಮಾನ್ಯವಾಗಿದೆ.

ಹೀಗಿಗ ಪವರ್ ಬ್ಯಾಂಕ್ ಬಂದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಿದ್ದರೂ ಎಲ್ಲರತ್ತಿರ ಪವರ್ ಬ್ಯಾಂಕ್ ಇರಬೇಕಲ್ಲ. ಇದ್ದರೂ ಎಲ್ಲಾ ಕಡೆಯೂ ತೆಗೆದುಕೊಂಡು ಹೋಗ್ಬೇಕಲ್ಲ. ಅದಕ್ಕಾಗಿಯೇ ಎಲ್ಲಾ ಸ್ಮಾರ್ಟ್‌ಫೋನ್ ಕಂಪನಿಗಳು ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ. ಆದರೆ, ಅದು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಾಕಿದಂತಾಗುತ್ತಿದೆ. ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯ ಸಾಮರ್ಥ್ಯವನ್ನು ಹೆಚ್ಚಿಸಲು ಏನೇನು ಮಾಡಬೇಕು ಎಂಬುದಕ್ಕೆ ಕೆಲವು ಸಲಹೆಗಳನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ. ನೋಡಿ ಬ್ಯಾಟರಿ ಬೇಗ ಖಾಲಿಯಾಗ್ತಿದೆ ಎಂದರೆ ಒಂದು ಬಾರಿ ಪ್ರಯತ್ನಿಸಿ. ಪ್ರಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ ಅಲ್ವಾ..!

ಹೆಚ್ಚು ಶಕ್ತಿ ಬಯಸುವ ಆಪ್‌ಗಳನ್ನು ಪರಿಶೀಲಿಸಿ
ನೀವು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿರುತ್ತಿರಿ. ಆದರೆ, ಎಲ್ಲಾ ಆಪ್‌ಗಳು ಒಂದೇ ರೀತಿಯ ಬ್ಯಾಟರಿ ಶಕ್ತಿಯನ್ನು ಬಳಸುವುದಿಲ್ಲ. ಆದ್ದರಿಂದ ಪರಿಶೀಲಿಸಿ ಯಾವುದು ಹೆಚ್ಚು ಬ್ಯಾಟರಿ ಬಳಸುತ್ತದೆಯೋ ಅದನ್ನು ಅನ್‌ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಿ. ನಿಮಗೆ ಉಪಯೋಗಕ್ಕೆ ಬರದ ಆಪ್ ಆದರೆ ಮತ್ಯಾಕೆ ಇಟ್ಕೊಳ್ತಿರಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Setting > About phone > Battery ಎಂಬ ಆಯ್ಕೆ ಕ್ಲಿಕ್ ಮಾಡಿ ಹೆಚ್ಚು ಶಕ್ತಿ ಬಯಸುವ ಆಪ್‌ಗಳನ್ನು ಪರಿಶೀಲಿಸಿ.

ಬೇಡದ ಸೇವೆಗಳನ್ನು ನಿಲ್ಲಿಸಿ
ಆಂಡ್ರಾಯ್ಡ್ ಡಿವೈಸ್‌ನಲ್ಲಿ ಸಾಕಷ್ಟು ಬೇಡದೆ ಇರೋ ಕೆಲಸಗಳು ಬ್ಯಾಕ್‌ಗ್ರೌಂಡ್‌ನಲ್ಲಿ ನಡೆಯುತ್ತಿರುತ್ತದೆ. ಅದಕ್ಕಾಗಿಯೇ ನಿಮಗೆ ಬೇಕಿಲ್ಲದ ಸೇವೆಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ಈ ಆಪ್‌ಗಳು RAM ಮತ್ತು ಬ್ಯಾಟರಿಯನ್ನು ಹೆಚ್ಚು ಅಪೇಕ್ಷಿಸುತ್ತವೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Settings > Applications > Running services.ಆಯ್ಕೆ ಕ್ಲಿಕ್ ಮಾಡಿ ನಂತರ ಮತ್ತೊಂದು ವಿಂಡೋ ತೆರೆಯುತ್ತದೆ. ಅಲ್ಲಿ ನಿಮಗೆ RAM ಬಳಕೆಯಾಗಿರುವ ಮಾಹಿತಿ ದೊರೆಯುತ್ತದೆ. ಆಟೋಮೆಟಿಕ್ ಆಗಿ ಕಾರ್ಯನಿರ್ವಹಿಸುವ ಸಾಫ್ಟ್‌ವೇರ್ ಅಪ್‌ಡೇಟ್, ಇಮೇಲ್ ಮುಂತಾದವುಗಳನ್ನು ಆಫ್ ಮಾಡಿದರೆ ಬೇಕಾದಾಗ ಆನ್ ಮಾಡಿಕೊಂಡು ಅಪ್‌ಡೇಟ್ ಮಾಡಬಹುದು. ಇದರಿಂದ ಬ್ಯಾಟರಿ ಸಾಮರ್ಥ್ಯ ಹೆಚ್ಚುತ್ತದೆ.

ಬಳಕೆಯ ನಂತರ ಬ್ಲೂಟೂಥ್ ಮತ್ತು ವೈ-ಫೈ ಆಫ್ ಮಾಡಿ
ಇಂಟರ್‌ನೆಟ್‌ಗಾಗಿ ಅಥವಾ ಫೈಲ್ ಶೇರಿಂಗ್‌ಗಾಗಿ ಬ್ಲೂಟೂಥ್ ಅಥವಾ ವೈ-ಫೈ ಬಳಸುತ್ತೇವೆ. ಯಾವಾಗ ನಾವೂ ಬ್ಲೂಟೂಥ್ ಮತ್ತು ವೈ-ಫೈ ಆನ್ ಮಾಡುತ್ತೇವೆ ಆಗ ನಮ್ಮ ಸ್ಮಾರ್ಟ್‌ಫೋನ್‌ನಿಂದ ತರಂಗಾಂತರಗಳು ಉತ್ಪತ್ತಿಯಾಗುತ್ತವೆ. ಈ ಪ್ರಕ್ರಿಯೆಗೆ ಹೆಚ್ಚು ಬ್ಯಾಟರಿಯ ಅವಶ್ಯಕತೆಯಿದೆ. ಆದ್ದರಿಂದ ಬಳಕೆಯ ನಂತರ ವೈ-ಫೈ ಮತ್ತು ಬ್ಲೂಟೂಥ್ ಆಫ್ ಮಾಡಿದರೆ ನಮಗೆ ಲಾಭ.

ಬಹುಕಾರ್ಯಗಳನ್ನು ಕಡಿಮೆ ಮಾಡಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಬಾರಿಗೆ ಹಲವು ಆಪ್‌ಗಳು ಕಾರ್ಯನಿರ್ವಹಿಸುತ್ತವೆ. ನಾವು ಒಂದೇ ಬಾರಿಗೆ ಅನೇಕ ಆಪ್‌ಗಳನ್ನು ಬಳಸಿದಾಗ ಸಿಪಿಯು ಹೆಚ್ಚು ಬ್ಯಾಟರಿಯನ್ನು ಅಪೇಕ್ಷಿಸುತ್ತದೆ. ಪ್ರೊಸೆಸರ್ ಅನೇಕ ಆಪ್‌ಗಳ ಕಾರ್ಯನಿರ್ವಹಣೆಯಲ್ಲಿ ಮುಂದುವರೆದರೆ ಸ್ಮಾರ್ಟ್‌ಫೋನ್ RAMಗೂ ಹೆಚ್ಚಿನ ಒತ್ತಡ ಬಿದ್ದು, ಡಿವೈಸ್ ನಿಧಾನವಾಗುತ್ತದೆ. ಆದ್ದರಿಂದ ಆಪ್‌ಗಳನ್ನು ಸ್ಥಗಿತಗೊಳಿಸಿ, ಬೇಕಾದ ಆಪ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸಿ.

ಬಳಕೆಯ ನಂತರ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಿ
ಎಲ್ಲರೂ ಮಾಡುವ ತಪ್ಪೆಂದರೆ ಇಂಟರ್‌ನೆಟ್‌ನ್ನು ದಿನದ 24 ಗಂಟೆಯೂ ಆನ್ ಮಾಡಿ ಇಡುವುದು. ಇದರಿಂದ ಬ್ಯಾಟರಿ ಸಾಮರ್ಥ್ಯ ಕುಗ್ಗುತ್ತದೆ. ಯಾಕೆಂದರೆ ಅನೇಕ ಆಪ್‌ಗಳು ಇಂಟರ್‌ನೆಟ್ ಆನ್ ಇದೆ ಎಂದ ತಕ್ಷಣ ಅಪ್‌ಡೇಟ್ ಆಗುತ್ತವೆ. ಆದ್ದರಿಂದ ಪ್ರೊಸೆಸರ್ ಹೆಚ್ಚಿನ ಶಕ್ತಿಯನ್ನು ಬಯಸುತ್ತದೆ. ಹಾಗಾಗೀ ಬೇಕಾದಾಗ ಮಾತ್ರ ಇಂಟರ್‌ನೆಟ್ ಆನ್ ಮಾಡಿಕೊಂಡು ಬಳಕೆಯ ನಂತರ ಇಂಟರ್‌ನೆಟ್ ಸ್ಥಗಿತಗೊಳಿಸುವುದು ಉತ್ತಮ ನಡೆ.

ಜಿಪಿಎಸ್ ಆಪ್ ಮಾಡಿ
ಆಂಡ್ರಾಯ್ಡ್ ಡಿವೈಸ್‌ನಲ್ಲಿ ಜಿಪಿಎಸ್ ಡಿಫಾಲ್ಟ್ ಆಗಿ ಸಕ್ರಿಯವಾಗಿರುತ್ತದೆ. ಜಿಪಿಎಸ್ ಸಕ್ರಿಯವಾಗಿರುವಾಗ ಡಿವೈಸ್ ಉಪಗ್ರಹಗಳನ್ನು ಹುಡುಕುತ್ತದೆ ಮತ್ತು ಪ್ರೊಸೆಸರ್ ಮಾಹಿತಿಯನ್ನು ನಿಮ್ಮ ಆಪ್‌ಗಳಿಗೆ ಕಳುಹಿಸುತ್ತದೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಿಪಿಎಸ್ ಆಧಾರಿತ ಯಾವುದೇ ಆಪ್‌ಗಳು ಇನ್‌ಸ್ಟಾಲ್ ಆಗಿಲ್ಲವೆಂದರೆ ಜಿಪಿಎಸ್‌ನಿಂದ ಏನು ಉಪಯೋಗವಿಲ್ಲ. ಆದ್ದರಿಂದ ಜಿಪಿಎಸ್ ಆಫ್ ಮಾಡುವುದು ಉತ್ತಮ. ಜಿಪಿಎಸ್ ಆಫ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Settings > Security and Location > Enable/disable GPS .ಈ ರೀತಿ ಮಾಡಿ.

ಬಳಸಿದ ನಂತರ ಹಾಟ್‌ಸ್ಪಾಟ್ ಆಫ್ ಮಾಡಿ
ಆಂಡ್ರಾಯ್ಡ್‌ನಲ್ಲಿ ಮತ್ತೊಂದು ಪ್ರಮುಖ ಫೀಚರ್ ಎಂದರೆ ಹಾಟ್‌ಸ್ಪಾಟ್. ಹಾಟ್‌ಸ್ಪಾಟ್‌ನಿಂದ ನಮ್ಮ ಡೇಟಾವನ್ನು ಲ್ಯಾಪ್‌ಟಾಪ್ ಮತ್ತು ಇತರೆಸ ಸ್ಮಾರ್ಟ್‌ಫೋನ್‌ಗಳಿಗೆ ಶೇರ್ ಮಾಡಬಹುದಾಗಿದೆ. ಆದರೆ, ಈ ಪ್ರಕ್ರಿಯೆ ಹೆಚ್ಚು ಬ್ಯಾಟರಿ ಸಾಮರ್ಥ್ಯವನ್ನು ಬಯಸುತ್ತದೆ. ಆದ್ದರಿಂದ ಬಳಕೆಯ ನಂತರ ಹಾಟ್‌ಸ್ಪಾಟ್ ಆಫ್ ಮಾಡುವುದು ಉತ್ತಮ ಆಯ್ಕೆ.

ಡಿಸ್‌ಪ್ಲೇ ಬೆಳಕನ್ನು ಕಡಿಮೆ ಮಾಡಿ ಅಥವಾ ಆಟೋ ಆಯ್ಕೆಯನ್ನು ಆಫ್ ಮಾಡಿ
ಡಿಸ್‌ಪ್ಲೇ ಬ್ರೈಟ್‌ನೆಸ್ ನಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಕ್ಷಮತೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವಾಗಿದೆ. ಡಿಸ್‌ಪ್ಲೇ ಬ್ರೈಟ್‌ನೆಸ್ ಹೆಚ್ಚಿದ್ದರೆ ಪಿಕ್ಸೆಲ್ ಕಲರ್ ಡೆನ್ಸಿಟಿಯನ್ನು ಇಲುಮಿನೇಟ್ ಮಾಡಲು ಬ್ಯಾಟರಿ ಹೆಚ್ಚಿಗೆ ಬೇಕಾಗುತ್ತದೆ. ಆದ್ದರಿಂದ ಡಿಸ್‌ಪ್ಲೇ ಬ್ರೈಟ್‌ನೆಸ್ ಸ್ವಲ್ಪ ತಗ್ಗಿಸಿ. ಮತ್ತು ಆಟೋ ಬ್ರೈಟ್‌ನೆಸ್‌ನ್ನು ಆಫ್ ಮಾಡಿ, ಅವಶ್ಯಕತೆಗೆ ತಕ್ಕಂತೆ ಡಿಸ್‌ಪ್ಲೇ ಬ್ರೈಟ್‌ನೆಸ್ ಹೊಂದಿಸಿಕೊಳ್ಳುವುದು ಉತ್ತಮ.

ಪವರ್ ಸೇವ್ ಮೋಡ್ ಆನ್ ಮಾಡಿ
ಈ ಫೀಚರ್ ಬಹಳ ವಿಶೇಷವಾಗಿದ್ದು, ಸ್ಯಾಮ್‌ಸಂಗ್ ಮೊಬೈಲ್‌ಗಳಲ್ಲಿ ಈ ಫೀಚರ್ ಲಭ್ಯವಿದೆ. ಬೇರೆ ಸ್ಮಾರ್ಟ್‌ಫೋನ್‌ಗಳಿಗೂ ಪವರ್ ಸೇವ್ ಮೋಡ್ ಇದ್ದರೆ ಆ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಉತ್ತಮವಾಗಿರುತ್ತದೆ. ಪವರ್ ಸೇವ್ ಮೋಡ್‌ನಲ್ಲಿ ಬೇಡದ ಕಾರ್ಯಗಳು ಎಲ್ಲಾ ಸ್ಥಗಿತಗೊಂಡು, ಬ್ರೈಟ್‌ನೆಸ್ ಕಡಿಮೆಯಾಗಿ ಸ್ಮಾರ್ಟ್‌ಫೋನ್‌ನ್ನು ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಬ್ಯಾಟರಿ ಒವರ್ ಚಾರ್ಜಿಂಗ್ ಮಾಡುವುದು ಬೇಡ
ಬಹಳಷ್ಟು ಜನ ಸ್ಮಾರ್ಟ್‌ಫೋನ್‌ನ್ನು ಚಾರ್ಜರ್ ಪ್ಲಗ್‌ಗೆ ಅಂಟಿಸಿಬಿಟ್ಟಿರುತ್ತಾರೆ. ಇದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆಯ ಸಾಮರ್ಥ್ಯ ಕುಂಠಿತವಾಗುತ್ತದೆ. ಬ್ಯಾಟರಿ ಪೂರ್ತಿ ಚಾರ್ಜ್ ಆದ ನಂತರ ಚಾರ್ಜರ್ ರಿಮೂವ್ ಮಾಡುವುದು ಬೆಸ್ಟ್. ಇಲ್ಲ ಎಂದರೆ ಫೋನ್ ಹೆಚ್ಚು ಬಿಸಿಯಾಗುತ್ತದೆ ಮತ್ತು ಸ್ಮಾರ್ಟ್‌ಫೋನ್‌ನ ಇತರ ಕಂಪೋನೆಂಟ್‌ಗಳು ಹಾಳಾಗುತ್ತವೆ. ಆದ್ದರಿಂದ ಒವರ್‌ಚಾರ್ಜಿಂಗ್ ಮಾಡಬೇಡಿ.

ಅಂಬಾನಿಗೆ ಜಿಯೋ ಗಳಿಸಿ ಕೊಟ್ಟಿದ್ದು ಎಷ್ಟು..? ಇಲ್ಲಿದೆ ಪಿನ್ ಟು ಪಿನ್ ಮಾಹಿತಿ..!
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಡು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಜಿಯೋ ಸಾಧನೆಯ ರಿಸಲ್ಟ್ ಆಚೆ ಬಂದಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ. 03ರಷ್ಟು ಏರಿಕೆ ಮಾಡಿಕೊಂಡಿದೆ. ಇದರಲ್ಲಿ ದೊಡ್ಡ ಪ್ರಮಾಣದ ಆದಾಯ ಜಿಯೋ ದಿಂದಲೇ ಬಂದಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಲ್ಲವಾದರೂ ಸಹ ಅಲ್ಪ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ. ಇದಲ್ಲದೇ ದೇಶಿಯ ಮಾರುಕಟ್ಟೆಯಲ್ಲಿ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಕೆ ಮಾಡಿಕೊಂಡರೆ ಭಾರೀ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ. ಇತರೆ ಕಂಪನಿಗಳು ಇಷ್ಟು ಪ್ರಮಾಣದ ಲಾಭವನ್ನು ಮಾಡಿಕೊಳ್ಳಲು ಪರದಾಡುತ್ತಿವೆ.

9,485 ಕೋಟಿ ರೂ ನಿವ್ವಳ ಲಾಭ:
ಕಳೆದ ಬಾರಿಯ ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕದಲ್ಲಿ 9,435 ಕೋಟಿ ನಿವ್ವಳ ಲಾಭ ತೋರಿಸಿತ್ತು. ಈ ಬಾರಿ ಅದರಲ್ಲಿ ಏರಿಕೆಯಾಗಿದ್ದು, ಈ ಬಾರಿಯ ಮೊದಲ ತ್ರೈಮಾಸಿಕ ಅವಧಿಯಲ್ಲಿ 9,485 ಕೋಟಿ ರೂ ನಿವ್ವಳ ಲಾಭ ಮಾಡಿಕೊಂಡಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಬೇಡಿಕೆಯನ್ನು ತೋರಿಸಲಿದೆ.

ಜಿಯೋ ಲಾಭ ಕೂಡ ಅಧಿಕ:
ರಿಲಯನ್ಸ್ ಇಂಡಸ್ಟ್ರೀಸ್ ನ ಒಂದು ಭಾಗವಾಗಿರುವ ಜಿಯೋ ಕೂಡ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಏಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಜಿಯೋ 612 ಕೋಟಿ ರೂ ಲಾಭ ಗಳಿಸಿದೆ. ಹಿಂದಿನ ಅವಧಿಯಲ್ಲಿ 510 ಕೋಟಿ ಲಾಭ ಪಡೆದುಕೊಂಡಿತ್ತು.

ಶೇ. 20ರಷ್ಟು ಹೆಚ್ಚಳ:
ಕಳೆದ ಮೂರು ತಿಂಗಳ ಅವಧಿಯಲ್ಲಿ 510 ಕೋಟಿ ಲಾಭ ಮಾಡಿಕೊಂಡಿದ್ದ ಜಿಯೋ ಈ ಬಾರಿ ಶೇ. 20ರಷ್ಟು ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಜಿಯೋ ಬೇಡಿಕೆಯನ್ನು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಜಿಯೋ ಆದಾಯವೂ ಅಧಿಕವಾಗಿದೆ. ಬೇರೆ ಟೆಲಿಕಾಂ ಕಂಪನಿಗಳು ಈ ಪ್ರಮಾಣಷ್ಟು ಆದಾಯವನ್ನು ಪಡೆದುಕೊಂಡಿಲ್ಲ ಎನ್ನಲಾಗಿದೆ.

ಬಳಕೆದಾರರ ಸಂಖ್ಯೆಯೂ ಅಧಿಕ:
ಇದಲ್ಲದೇ ಜಿಯೋ ಬಳಕೆದಾರರ ಸಂಖ್ಯೆಯೂ ಅಧಿಕವಾಗುತ್ತಿದೆ. ಜಿಯೋ ಸೇವೆಯನ್ನು ಆರಂಭಿಸಿದ 22 ತಿಂಗಳ ನಂತರದಲ್ಲಿ 215 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇಷ್ಟು ಸಣ್ಣ ಪ್ರಮಾಣದಲ್ಲಿ ಯಾವ ಕಂಪನಿಗಳು ಲಾಭವನ್ನು ಮಾಡಿಕೊಂಡಿಲ್ಲ.


Click it and Unblock the Notifications








