ನಿಮ್ಮ ಪೆನ್‌ಡ್ರೈವ್‌ ನಿಧಾನವಾಗಿದೆಯಾ..? ವೇಗ ಹೆಚ್ಚಿಸುವುದು ಹೇಗೆ ಗೊತ್ತಾ..?

By Avinash
|

ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಂಡಿದ್ದು, ಕಾರ್ಯನಿರ್ವಹಣೆ ವೇಗ ಹೆಚ್ಚಿಸಿರುವುದಲ್ಲದೇ ಮಾನವ ಸಂಪನ್ಮೂಲದ ಅವಶ್ಯಕತೆಯನ್ನು ಕಡಿಮೆ ಮಾಡಿದೆ. ಕಂಪ್ಯೂಟರ್‌ನಲ್ಲಿ ಯಾವುದೇ ಪ್ರಮಾಣದ ಡಾಟಾವನ್ನು ಶೇಖರಿಸಬಹುದು ಮತ್ತು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಬಳಸಬಹುದಾಗಿದೆ. ನಾವೂ ಡಾಟಾ ವರ್ಗಾವಣೆ ಮಾಡಲು ಸಿಡಿ, ಡಿವಿಡಿ ಬಳಸುತ್ತಿದ್ದೇವು, ಈಗ ಪೆನ್‌ಡ್ರೈವ್‌ ಬಳಸುತ್ತಿದ್ದು, ಇಂಟರ್‌ನೆಟ್‌ ಅವಶ್ಯಕತೆಯಿಲ್ಲದೇ ಒಂದು ಕಂಪ್ಯೂಟರ್‌ನಿಂದ ಇನ್ನೊಂದು ಕಂಪ್ಯೂಟರ್‌ಗೆ ಮಾಹಿತಿ ವರ್ಗಾಯಿಸಬಹುದಾಗಿದೆ.

ನಿಮ್ಮ ಪೆನ್‌ಡ್ರೈವ್‌  ನಿಧಾನವಾಗಿದೆಯಾ..? ವೇಗ ಹೆಚ್ಚಿಸುವುದು ಹೇಗೆ ಗೊತ್ತಾ..?

ಪೆನ್‌ಡ್ರೈವ್‌ ಪೋರ್ಟೆಬಲ್‌ ಸಾಧನವಾಗಿದ್ದು, ಎಷ್ಟು ಪ್ರಮಾಣದ ಮಾಹಿತಿಯನ್ನಾದ್ರೂ ಶೇಖರಿಸಿಡಬಹುದಾಗಿದೆ. ಆದರೆ, ಪೆನ್‌ಡ್ರೈವ್‌ ವೇಗ ಮಾತ್ರ 1.5Mbps ನಿಂದ 12Mbpsವರೆಗೆ ಮಾತ್ರ ಇದ್ದು, ವೈರಸ್‌, ಒಎಸ್‌ ಎರರ್‌ಗಳಿಂದ ಪೆನ್‌ಡ್ರೈವ್‌ ವೇಗ ತಗ್ಗಿರುತ್ತದೆ. ನಾವು ಪೆನ್‌ಡ್ರೈವ್‌ನ್ನು ಹೆಚ್ಚುವರಿ RAM ಅಗಿಯೂ ಬಳಸಬಹುದಾಗಿದೆ. ಆದರೆ, ಎಲ್ಲರ ಸಮಸ್ಯೆಯೆನೆಂದರೆ ಪೆನ್‌ಡ್ರೈವ್‌ ವೇಗ ಕಡಿಮೆಯಾಗುವುದು. ಆದ್ದರಿಂದ ಈ ಸಮಸ್ಯೆ ಬಗೆಹರಿಸಲು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸಿ ಪೆನ್‌ಡ್ರೈವ್‌ ವೇಗವನ್ನು ಹೆಚ್ಚಿಸಿ.

ಹೇಗೆ ವೇಗ ಹೆಚ್ಚಿಸಬಹುದು..?

ಹೇಗೆ ವೇಗ ಹೆಚ್ಚಿಸಬಹುದು..?

ಪೆನ್‌ಡ್ರೈವ್ ವೇಗವನ್ನು ಹೆಚ್ಚಿಸಲು ಹಲವು ವಿಧಗಳಿದ್ದು, ಅವುಗಳನ್ನು ಅನುಸರಿಸಿದರೆ ಪೆನ್‌ಡ್ರೈವ್ ವೇಗ ಹೆಚ್ಚಾಗುತ್ತದೆ.
1. ಮೊದಲು ಫೈಲ್‌ ವ್ಯವಸ್ಥೆಯನ್ನು ಬದಲಾಯಿಸಬೇಕು. ಏಕೆಂದರೆ, FAT32 ಫೈಲ್ ವ್ಯವಸ್ಥೆ ಬಹಳಷ್ಟು ಪ್ರಮಾಣದ ಡಾಟಾವನ್ನು ಬಯಸುತ್ತದೆ.
2. ಡಿವೈಸ್‌ ಪಾಲಿಸಿ ಬದಲಾಯಿಸಬೇಕು.
3. ಫೈಲ್‌ ವಿಧಗಳನ್ನು ಪರಿಶೀಲಿಸಿ.
4. ಒಎಸ್‌ ಹಾಗೂ ಹಾರ್ಡ್‌ವೇರ್ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ.
5. ಮತ್ತೀತರ ಹಲವು ಅಂಶಗಳನ್ನು ಅನುಸರಿಸಿ.

ಫೈಲ್‌ ವ್ಯವಸ್ಥೆ ಬದಲಾಯಿಸಿ

ಫೈಲ್‌ ವ್ಯವಸ್ಥೆ ಬದಲಾಯಿಸಿ

1. ಮೊದಲು ನಿಮ್ಮ ಪೆನ್‌ಡ್ರೈವ್‌ನ್ನು ಕಂಪ್ಯೂಟರ್‌ಗೆ ಪ್ಲಗ್‌ ಮಾಡಿ.
2. ನಂತರ ನಿಮ್ಮ ಪೆನ್‌ಡ್ರೈವ್‌ ಐಕಾನ್‌ ಮೇಲೆ ರೈಟ್‌ಕ್ಲಿಕ್‌ ಮಾಡಿ. ಅಲ್ಲೊಂದು ಪಾಪ್‌ಅಪ್‌ ತೆರೆಯುತ್ತದೆ.
3. ಹೊಸ ಪಾಪ್‌ಅಪ್‌ನಲ್ಲಿ ಪ್ರಾಪರ್ಟಿಸ್‌ ಆಯ್ಕೆ ಕ್ಲಿಕ್ ಮಾಡಿ.
4. ನಂತರ ಫಾರ್ಮ್ಯಾಟ್‌ ಆಯ್ಕೆ ಕ್ಲಿಕ್ ಮಾಡಿ.
5. ನಂತರ ಫೈಲ್‌ ಸಿಸ್ಟಮ್‌ನಲ್ಲಿ NTFS ಫೈಲ್‌ ವ್ಯವಸ್ಥೆ ಆಯ್ಕೆ ಮಾಡಿ. ಮತ್ತು ಕ್ವಿಕ್ ಫಾರ್ಮ್ಯಾಟ್‌ ಆಯ್ಕೆಯನ್ನು ಅನ್‌ಚೆಕ್‌ ಮಾಡಿ.
6. ನಂತರ ಸ್ಟಾರ್ಟ್‌ ಬಟನ್‌ ಕ್ಲಿಕ್ ಮಾಡಿ.
ಈಗ ನಿಮ್ಮ ಪೆನ್‌ಡ್ರೈವ್‌ನ ಫೈಲ್‌ ವ್ಯವಸ್ಥೆ ಬದಲಾಗುತ್ತದೆ.
ಸೂಚನೆ: ಪೆನ್‌ಡ್ರೈವ್ ಫಾರ್ಮ್ಯಾಟ್ ಮಾಡುವ ಮುಂಚೆ ನಿಮ್ಮ ಪೆನ್‌ಡ್ರೈವ್‌ನಲ್ಲಿನ ಡಾಟಾವನ್ನು ಬ್ಯಾಕ್‌ಅಪ್‌ ತೆಗೆದಿಟ್ಟುಕೊಳ್ಳಿ ಇಲ್ಲದಿದ್ದರೆ ಎಲ್ಲಾ ಡಾಟಾ ಅಳಿಸಿ ಹೋಗುತ್ತದೆ.

ಡಿವೈಸ್ ಪಾಲಿಸಿ ಬದಲಾಯಿಸಿ ಭಾಗ-1

ಡಿವೈಸ್ ಪಾಲಿಸಿ ಬದಲಾಯಿಸಿ ಭಾಗ-1

1. ಮೊದಲು ನಿಮ್ಮ ಪೆನ್‌ಡ್ರೈವ್‌ನ್ನು ಕಂಪ್ಯೂಟರ್‌ಗೆ ಪ್ಲಗ್‌ ಮಾಡಿ.
2. ನಂತರ ನಿಮ್ಮ ಪೆನ್‌ಡ್ರೈವ್‌ ಐಕಾನ್‌ ಮೇಲೆ ರೈಟ್‌ಕ್ಲಿಕ್‌ ಮಾಡಿ. ಅಲ್ಲೊಂದು ಪಾಪ್‌ಅಪ್‌ ತೆರೆಯುತ್ತದೆ.
3. ಹೊಸ ಪಾಪ್‌ಅಪ್‌ನಲ್ಲಿ ಪ್ರಾಪರ್ಟಿಸ್‌ ಆಯ್ಕೆ ಕ್ಲಿಕ್ ಮಾಡಿ.
4. ನಂತರ, ಹಾರ್ಡ್‌ವೇರ್‌ ಟ್ಯಾಬ್‌ ಆಯ್ಕೆ ಮಾಡಿ.
5. ಈಗ ನಿಮಗೆ ಡ್ರೈವರ್‌ಗಳ ಪಟ್ಟಿಯನ್ನು ಹಾರ್ಡ್‌ವೇರ್‌ ಟ್ಯಾಬ್‌ನಲ್ಲಿ ಕಾಣುತ್ತೇವೆ.

ಡಿವೈಸ್ ಪಾಲಿಸಿ ಬದಲಾಯಿಸಿ ಭಾಗ-2

ಡಿವೈಸ್ ಪಾಲಿಸಿ ಬದಲಾಯಿಸಿ ಭಾಗ-2

6. ಆ ಡ್ರೈವರ್‌ಗಳ ಪಟ್ಟಿಯಲ್ಲಿ ನಿಮ್ಮ ಡ್ರೈವ್ ಆಯ್ಕೆ ಮಾಡಿಕೊಂಡು, ಪ್ರಾಪರ್ಟಿಸ್ ಬಟನ್ ಕ್ಲಿಕ್ ಮಾಡಿ.
7. ಮುಂದಿನ ವಿಜಾರ್ಡ್‌ನಲ್ಲಿ ಸಾಮಾನ್ಯ ಟ್ಯಾಬ್‌ ಸೃಷ್ಟಿಯಾಗುತ್ತದೆ. ಅಲ್ಲಿ ಚೆಂಜ್‌ ಸೆಟ್ಟಿಂಗ್‌ ಬಟನ್‌ ಕ್ಲಿಕ್ ಮಾಡಿ.

ಡಿವೈಸ್ ಪಾಲಿಸಿ ಬದಲಾಯಿಸಿ ಭಾಗ-3

ಡಿವೈಸ್ ಪಾಲಿಸಿ ಬದಲಾಯಿಸಿ ಭಾಗ-3

8. ನಂತರ ಕಾಣುವ ಪಾಲಿಸಿ ಟ್ಯಾಬ್ ಆಯ್ಕೆ ಮಾಡಿ.
9. ಈಗ ಬೆಟರ್ ಪರ್ಫಾರ್ಮೆನ್ಸ್‌ ಆಯ್ಕೆಯನ್ನು ಕ್ಲಿಕ್ ಮಾಡಿ.
ಆಗ ನಿಮ್ಮ ಪೆನ್‌ಡ್ರೈವ್‌ ಡಿವೈಸ್ ಪಾಲಿಸಿ ಬದಲಾಗಿ, ನಿಮ್ಮ ಪೆನ್‌ಡ್ರೈವ್‌ ವೇಗ ಹೆಚ್ಚಾಗುತ್ತದೆ.

ಪಿಸಿ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ

ಪಿಸಿ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ

ಕೆಲವೊಂದು ಬಾರಿ ನಿಮ್ಮ ಪೆನ್‌ಡ್ರೈವ್‌ ವೇಗ ಕಂಪ್ಯೂಟರ್‌ನ್ನು ಕೂಡ ಅವಲಭಿಸಿರುತ್ತದೆ. ಆದ್ದರಿಮದ ಪಿಸಿ ಕಾರ್ಯನಿರ್ವಹಣೆಯನ್ನು ಸಹ ಪರಿಶೀಲಿಸಬೇಕು. ಟೆಂಪ್ರವರಿ ಫೈಲ್‌ಗಳನ್ನು ಡಿಲೇಟ್‌ ಮಾಡಿ, ರಿಸೈಕಲ್‌ ಬಿನ್ ಖಾಲಿ ಮಾಡಿ, ಡೆಸ್ಕಟಾಪ್‌ನಲ್ಲಿ ಬೇಡದೆ ಇರುವ ಫೈಲ್‌ಗಳನ್ನು ಇಡಬೇಡಿ.

ಯುಎಸ್‌ಬಿ ಡ್ರೈವರ್ ಅಪ್‌ಡೇಟ್‌ ಮಾಡಿ

ಯುಎಸ್‌ಬಿ ಡ್ರೈವರ್ ಅಪ್‌ಡೇಟ್‌ ಮಾಡಿ

ನಿಮ್ಮ ಕಂಪ್ಯೂಟರ್‌ನಲ್ಲಿರುವ ಯುಎಸ್‌ಬಿ ಪೋರ್ಟ್‌ ಡ್ರೈವರ್‌ನ್ನು 2.0 ದಿಂದ 3.0 ಅಥವಾ ಅದಕ್ಕಿಂತಲೂ ಹೆಚ್ಚಿನ ಆವೃತ್ತಿಗೆ ಅಪ್‌ಡೇಟ್‌ ಮಾಡಿ.

ರೈಟಿಂಗ್ ಕಡಿಮೆಯಿರಲಿ

ರೈಟಿಂಗ್ ಕಡಿಮೆಯಿರಲಿ

ಒಂದೇ ಡ್ರೈವ್‌ಗೆ ಮತ್ತೆ ಮತ್ತೆ ರೈಟ್‌ ಮಾಡುವುದರಿಂದ ಪೆನ್‌ಡ್ರೈವ್‌ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಫೈಲ್ ರೈಟಿಂಗ್ ಕಡಿಮೆ ಮಾಡಿ.

ನಿಯಮಿತ ಫಾರ್ಮ್ಯಾಟ್‌ ಇರಲಿ

ನಿಯಮಿತ ಫಾರ್ಮ್ಯಾಟ್‌ ಇರಲಿ

ಏನಿಲ್ಲವೆಂದರೂ ತಿಂಗಳಿಗೆ ಒಂದು ಬಾರಿ ನಿಮ್ಮ ಪೆನ್‌ಡ್ರೈವ್‌ನ್ನು ಫಾರ್ಮ್ಯಾಟ್‌ ಮಾಡಿ. ಇದರಿಂದ ಪೆನ್‌ಡ್ರೈವ್‌ಗೆ ವೇಗ ಸಿಗುತ್ತದೆ.

ಬ್ಯಾಡ್‌ ಸೆಕ್ಟರ್‌ ಎರರ್ ಪರಿಶೀಲಿಸಿ

ಬ್ಯಾಡ್‌ ಸೆಕ್ಟರ್‌ ಎರರ್ ಪರಿಶೀಲಿಸಿ

1. ಮೊದಲು ನಿಮ್ಮ ಪೆನ್‌ಡ್ರೈವ್‌ನ್ನು ಕಂಪ್ಯೂಟರ್‌ಗೆ ಪ್ಲಗ್‌ ಮಾಡಿ.
2. ನಂತರ ನಿಮ್ಮ ಪೆನ್‌ಡ್ರೈವ್‌ ಐಕಾನ್‌ ಮೇಲೆ ರೈಟ್‌ಕ್ಲಿಕ್‌ ಮಾಡಿ. ಅಲ್ಲೊಂದು ಪಾಪ್‌ಅಪ್‌ ತೆರೆಯುತ್ತದೆ.
3. ಹೊಸ ಪಾಪ್‌ಅಪ್‌ನಲ್ಲಿ ಪ್ರಾಪರ್ಟಿಸ್‌ ಆಯ್ಕೆ ಕ್ಲಿಕ್ ಮಾಡಿ.
4. ನಂತರ ಟೂಲ್ಸ್‌ ಟ್ಯಾಬ್‌ ಆಯ್ಕೆ ಮಾಡಿ, ಕ್ಲಿಕ್ ನೌ ಬಟನ್‌ ಕ್ಲಿಕ್ ಮಾಡಿ.
5. ಇಲ್ಲಿ ಟೂಲ್ಸ್‌ ಆಟೋಮೆಟಿಕ್‌ ಆಗಿ ಸ್ಕ್ಯಾನ್ ಆಗಿ ಬ್ಯಾಡ್‌ ಸೆಕ್ಟರ್ ಎರರ್‌ಗಳನ್ನು ರಿಕವರ್‌ ಮಾಡುತ್ತದೆ. ಇದರಿಂದಲೂ ನಿಮ್ಮ ಪೆನ್‌ಡ್ರೈವ್ ವೇಗವಾಗುತ್ತದೆ.

Best Mobiles in India

English summary
How To Increase Pendrive Speed (Data Transfer). To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X