Subscribe to Gizbot

ಜಿಯೋ ನೆಟ್‌ವರ್ಕ್ ಸ್ಲೋ ಆಗಲು ಕಾರಣ ಬ್ಯಾಂಡ್ ಸಮಸ್ಯೆ!!?

Written By:

ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ಟ್ರಾಯ್ ಬಿಡುಗಡೆ ಮಾಡಿರುವ ಮಾಹಿತಿಯಂತೆ ಭಾರತದಲ್ಲಿ ಜಿಯೋನೆ ಅತ್ಯುತ್ತಮ ವೇಗದ 4G ಸೇವೆಯನ್ನು ಒದಗಿಸುತ್ತಿದೆ.!! ಆದರೆ, ಜಿಯೋ ಬಳಕೆದಾರರು ಮಾತ್ರ ನಮಗೆ ನೆಟ್‌ವರ್ಕ್ ಸಮಸ್ಯೆ ಇದೆ. ಡೇಟಾ ಸ್ಪೀಡ್‌ ಇಲ್ಲ ಎಂದು ದೂರೂತ್ತಲೇ ಇದ್ದಾರೆ.!! ಜಿಯೋ ನೆಟ್‌ವರ್ಕ್ ಸರಿಯಾಗಿ ಸಿಗದೇ ಇರಲು ಕಾರಣ ಏನು? ಎಂದು ಹುಡುಕಿದರೆ ಜಿಯೋ ಎಲ್‌ಟಿಇ ಬ್ಯಾಂಡ್ ಸಹ ಇದಕ್ಕೆ ಒಂದು ಕಾರಣವಾಗಿದೆ!!

4Gಸೇವೆ ನೀಡುತ್ತಿರುವ ಎಲ್‌ಟಿಇ ನೆಟ್‌ವರ್ಕ್ ಸೇವೆ ಬೇರೆ ಬೇರೆ ತರಂಗಾಂತರಗಳಿಂದ ಕೂಡಿದೆ. ಪ್ರತಿಯೊಂದು 4G ಸೇವಾ ಕಂಪೆನಿಯೂ ಕೂಡ ಒಂದೊಂದು ತರಂಗಾಂತರ ಬ್ಯಾಂಡ್‌ಗಳನ್ನು ಹೊಂದಿದೆ. ಏರ್‌ಟೆಲ್ 40 ನೇ ಬ್ಯಾಂಡ್‌ ನಲ್ಲಿ ಕಾರ್ಯ ನಿರ್ವಹಣೆ ನೀಡಿದರೆ, ವೊಡಾಫೋನ್ 3 ನೇ ಬ್ಯಾಂಡ್‌ಗೆ ಸಪೋರ್ಟ್ ಆಗುತ್ತದೆ. ಇನ್ನು ಜಿಯೋ 3, 5 ಮತ್ತು 40 ನೇ ಬ್ಯಾಂಡ್‌ನಲ್ಲಿಯೂ ಸಪೋರ್ಟ್ ಆಗುತ್ತದೆ.!!

ಜಿಯೋ ನೆಟ್‌ವರ್ಕ್ ಸ್ಲೋ ಆಗಲು ಕಾರಣ ಬ್ಯಾಂಡ್ ಸಮಸ್ಯೆ!!?

LTE ಬ್ಯಾಂಡ್‌ ಬದಲಾವಣೆ ಬ್ಯಾಂಡ್ 3 ಮತ್ತು 5 ನೀಡುವ ಕವರೇಜ್‌ಗಿಂತ, ಬ್ಯಾಂಡ್‌ 40 ಅತ್ಯುತ್ತಮ ವೇಗವನ್ನು ಆಫರ್‌ ಮಾಡುತ್ತದೆ. 'ಬ್ಯಾಂಡ್ 40' ಡೌನ್‌ಲೋಡ್‌ ವೇಗವನ್ನು ನೆಟ್‌ವರ್ಕ್‌ ಗುಣಮಟ್ಟ ಮತ್ತು ಸಿಗ್ನಲ್‌ ಸಾಮರ್ಥ್ಯದ ಆಧಾರದಲ್ಲಿ ನೀಡುತ್ತದೆ. ನಿಮ್ಮ ಫೋನ್‌ ಕ್ವಾಲ್ಕಂ ಮತ್ತು ಮೀಡಿಯಾ ಟೆಕ್‌ ಚಿಪ್‌ಸೆಟ್‌ ಆಗಿದ್ದಲ್ಲಿ, LTE ಬ್ಯಾಂಡ್‌ನಿಂದ, ಬ್ಯಾಂಡ್‌ 40 ಗೆ ಬದಲಾವಣೆ ಮಾಡಬಹುದು. ಅದು ಹೇಗೆ ಎಂದು ಮುಂದೆ ತಿಳಿಯಿರಿ.

ಜಿಯೋ ನೆಟ್‌ವರ್ಕ್ ಸ್ಲೋ ಆಗಲು ಕಾರಣ ಬ್ಯಾಂಡ್ ಸಮಸ್ಯೆ!!?

ಶಾರ್ಟ್‌ಕಟ್ ಮಾಸ್ಟರ್( shortcut master lite) ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿರಿ. ನಂತರ ಆಪ್‌ ತೆರೆದು ಮೆನು ಮೇಲೆ ಕ್ಲಿಕ್ ಮಾಡಿ "Super code Explorer" ಎಂಬ ಐಕಾನ್ ಆಯ್ಕೆ ಮಾಡಿ. ನಂತರ ಕೆಲ ನಿಮಿಷಗಳಲ್ಲಿ ನಿಮಗೆ ಕೆಲವು ಕೋಡ್ ಆಯ್ಕೆಗಳು ಕಾಣಿಸುತ್ತವೆ.!!

ಜಿಯೋ ನೆಟ್‌ವರ್ಕ್ ಸ್ಲೋ ಆಗಲು ಕಾರಣ ಬ್ಯಾಂಡ್ ಸಮಸ್ಯೆ!!?

ನಂತರ ಗೂಗಲ್‌ ತೆರೆದು ನಿಮ್ಮ ಸ್ಮಾರ್ಟ್‌ಫೋನ್ ಬ್ರಾಂಡ್ ಎಂಟರ್‌ ಮಾಡಿ ನಂತರ "ಬ್ಯಾಂಡ್ ಸಪೋರ್ಟ್ ಕೋಡ್" ಎಂದು ಟೈಪ್ ಮಾಡಿ. ನಿಮ್ಮ ಸ್ಮಾರ್ಟ್‌ಫೋನ್ ಬ್ರಾಂಡ್ ಬ್ಯಾಂಡ್ ಸಪೋರ್ಟ್ ಕೋಡ್ ತೆರಯುತ್ತದೆ. ಅದನ್ನು ನೋಡಿ. "Super code Explorer"ಕೋಡ್ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್ ಸಪೋರ್ಟ್ ಕೋಡ್ ಆಯ್ಕೆ ಮಾಡಿ. ಲಾಂಚ್ "0" ಕ್ಲಿಕ್ ಮಾಡಿ. ನಂತರ ಬ್ಯಾಂಡ್‌ 40 ಗೆ ಬದಲಾವಣೆಯಾಗಿ.!!

ಜಿಯೋಗೆ ಪೋರ್ಟ್ ಆಗಬೇಕೆ? ರೀಚಾರ್ಜ್ ಮಾಡಿಸಬೇಕೆ? ಲೇಖನ ಓದಿ ಡಿಸೈಡ್ ಮಾಡಿ!!

English summary
Undoubtedly, Reliance Jio is the best mobile network that exists right now and it is evident from our speed test comparing Reliance Jio, Vodafone 4G and Airtel 4G.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot