ಆಂಡ್ರಾಯ್ಡ್ ಪಿಯ ಎಮೋಜಿ, ಫಾಂಟ್ ಗಳನ್ನು ನಿಮ್ಮ ಡಿವೈಸ್ ಗೆ ಇನ್ಸ್ಟಾಲ್ ಮಾಡೋದು ಹೇಗೆ ಗೊತ್ತಾ?

By GizBot Bureau
|

ಮೇಸೇಜ್ ಮಾಡ್ತಿದ್ದೀವಿ ಅಂದರೆ ಅದರ ಡಿಫರೆಂಟ್ ಫಾಂಟ್ ಮತ್ತು ಎಮೋಜಿಗಳೇ ಒಂಥರಾ ಮೆಸೇಜ್ ಗಳ ಅಟ್ರಾಕ್ಷನ್..ಏನು ಮಾಡ್ತಾ ಇದ್ದೀಯಾ ಅಂತ ಇಷ್ಟುದ್ದ ಬರೆಯೋ ಬದಲು ಜಸ್ಟ್ ಒಂದು” ? “( ಪ್ರಶ್ನಾರ್ತಕ ಚಿಹ್ನೆ) ಹಾಕಿ ಮೆಸೇಜ್ ಮಾಡೋ ಕಾಲ ಇದು. ಹಾಗಿರುವಾಗ ಹೆಚ್ಚಿನ ಸಂದೇಶಗಳು ಕೇವಲ ಈ ಸ್ಮೈಲೀಸ್, ಎಮೋಜಿ ಗಳಲ್ಲೇ ನಡೆಸಲು ಇಚ್ಛಿಸುವ ಮಂದಿಗೇನು ಕೊರತೆ ಇಲ್ಲ.

ಅಂಗಾಂಗ ರವಾನೆಗೆ ಐಐಎಸ್ಸಿಯಿಂದ ಡ್ರೋನ್ ಸಾಧನ ಆವಿಷ್ಕಾರ..!ಅಂಗಾಂಗ ರವಾನೆಗೆ ಐಐಎಸ್ಸಿಯಿಂದ ಡ್ರೋನ್ ಸಾಧನ ಆವಿಷ್ಕಾರ..!

ಆದರೆ ಇತ್ತೀಚೆಗೆ ಬಿಡುಗಡೆಗೊಂಡ ಆಂಡ್ರಾಯ್ಡ್ ಪಿ ನಲ್ಲಿರುವ ಎಮೋಜಿಗಳು ನಿಮಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಬರುತ್ತಿಲ್ಲವಾದರೆ ಏನು ಮಾಡಬೇಕು ಗೊತ್ತಾ? ಆಂಡ್ರಾಯ್ಡ್ ಪಿನಲ್ಲಿರುವ ಎಮೋಜಿ ಮತ್ತು ಫಾಂಟ್ ಗಳನ್ನು ನಿಮ್ಮ ಫೋನ್ ಗಳಿಗೂ ಇನ್ಸ್ಟಾಲ್ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ ಪಿಯ ಎಮೋಜಿ, ಫಾಂಟ್  ನಿಮ್ಮ ಡಿವೈಸ್ ಗೆ ಇನ್ಸ್ಟಾಲ್ ಮಾಡೋದು  ಹೇಗೆ..?

ಗೂಗಲ್ ಸಂಸ್ಥೆ ಇತ್ತೀಚೆಗಷ್ಟೇ ಮುಂದಿನ ಆಂಡ್ರಾಯ್ಡ್ ವರ್ಷನ್ ಆಂಡ್ರಾಯ್ಡ್ ಪಿ ನ ಬೆಟಾ 2 ವರ್ಷನ್ ಅಥವಾ ಡೆವಲಪರ್ ಪ್ರೀವ್ಯೂ 3ಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಹಲವು ವೈಶಿಷ್ಟ್ಯತೆಗಳಿದ್ದು ಪ್ರಮುಖವಾಗಿ ಗೂಗಲ್ ಸುಮಾರು 157 ಹೊಸ ಎಮೋಜಿಗಳನ್ನು ಇದರಲ್ಲಿ ಸೇರಿಸಿದೆ. ಸೂಪರ್ ಹೀರೋ, ಲಾಮಾಸ ಹಾಟ್ ಮತ್ತು ಕೋಲ್ಡ್ ಫೇಸ್ ಇತ್ಯಾದಿಗಳು.

ಸದ್ಯ ಒಂದು ವೇಳೆ ನೀವು ನಾನ್ – ಪಿಕ್ಸಲ್ ಡಿವೈಸ್ ಬಳಸುತ್ತಿದ್ದು, ಈ ಎಮೋಜಿಗಳನ್ನು ನಿಮ್ಮ ಡಿವೈಸ್ ನಲ್ಲೂ ಬರಬೇಕು ಎಂದು ಬಯಸುತ್ತಿದ್ದರೆ, ಅದಕ್ಕೊಂದು ಸರಳ ಮಾರ್ಗವಿದೆ. ಅದ್ಹೇಗೆ ಅಂತ ತಿಳಿದುಕೊಳ್ಳಬೇಕಾ.. ಮತ್ಯಾಕೆ ತಡ.. ಲೇಖನದ ಮುಂದಿನ ಭಾಗವನ್ನು ಓದಿ..

ಆಂಡ್ರಾಯ್ಡ್ ಪಿಯ ಎಮೋಜಿ, ಫಾಂಟ್  ನಿಮ್ಮ ಡಿವೈಸ್ ಗೆ ಇನ್ಸ್ಟಾಲ್ ಮಾಡೋದು  ಹೇಗೆ..?

ಆಂಡ್ರಾಯ್ಡ್ ಪಿನ ಎಮೋಜಿಯನ್ನು ನಿಮ್ಮ ಆಂಡ್ರಾಯ್ಡ್ ಗೆ ಹೀಗೆ ಇನ್ಸ್ಟಾಲ್ ಮಾಡಿ. ನಾವು ಇದನ್ನು ನಮ್ಮ ಮೋಟೋ ಜಿ5ಎಸ್ ಪ್ಲಸ್ ನ Android Oreo 8.1ನಲ್ಲಿ ಪ್ರಯತ್ನಿಸಿದೆವು. ಮತ್ತು ಇದು ಸರಿಯಾಗಿ ಕೆಲಸ ಮಾಡಿದೆ.

ಹಂತ 1.

ಹಂತ 1.

ಮೊದಲಿಗೆ, Android P Fonts & Emojis Magisk Module(ಉಚಿತವಾದದ್ದು) ಇದನ್ನು ನಿಮ್ಮ ಡಿವೈಸ್ ಗೆ ಡೌನ್ ಲೋಡ್ ಮಾಡಿ.

ಹಂತ 2

ಹಂತ 2

Magisk Manager ನ್ನು ಓಪನ್ ಮಾಡಿ ಮತ್ತು ಹ್ಯಾಮ್ ಬರ್ಗರ್ ಮೆನುವನ್ನು ಟ್ಯಾಪ್ ಮಾಡಿ.. ಅಲ್ಲಿ ಮೋಡ್ಯೂಲ್ಸ್ (Modules) ನ್ನು ಟ್ಯಾಪ್ ಮಾಡಿ.

ಹಂತ 3

ಹಂತ 3

ಈಗ, "+" ಇಕಾನ್ ನ್ನು ಟ್ಯಾಪ್ ಮಾಡಿ. ಇದು ಸ್ಕ್ರೀನಿನ ಕೆಳಭಾಗದಲ್ಲಿರುತ್ತದೆ. ನಂತರ ನೀವು ಡೌನ್ ಲೋಡ್ ಮಾಡಿರುವ Magisk module ನ ಫೋಲ್ಡರ್ ನ್ನು ನೇವಿಗೇಟ್ ಮಾಡಿ.. ಮತ್ತು ಅದನ್ನು ಆಯ್ಕೆ ಮಾಡಿ.

ಹಂತ 4

ಹಂತ 4

ಈಗ Magisk ಅಟೋಮ್ಯಾಟಿಕ್ ಆಗಿ ನಿಮ್ಮ ಡಿವೈಸ್ ನಲ್ಲಿ ಆಂಡ್ರಾಯ್ಡ್ ಪಿನ ಎಮೋಜಿ ಮತ್ತು ಫಾಂಟ್ ಗಳನ್ನು ಫ್ಲ್ಯಾಶ್ ಮಾಡಲು ಪ್ರಾರಂಭಿಸುತ್ತೆ. ಇದು ಮುಗಿದ ಕೂಡಲೇ "Reboot" ಆಯ್ಕೆಯನ್ನು ಟ್ಯಾಪ್ ಮಾಡಿ.. ಇದು ಬಲಭಾಗದ ಕೆಳಗೆ ಇರುತ್ತೆ. ಮತ್ತು ಡಿವೈಸ್ ನ್ನು ರಿಬೂಟ್ ಮಾಡಿ.

How to Send Message to Multiple Contacts on WhatsApp - GIZBOT KANNADA
ಹಂತ 5

ಹಂತ 5

ಇಷ್ಟೇ ಮುಗಿತು.. ಈಗ ಆಂಡ್ರಾಯ್ಡ್ ಪಿನ ಫಾಂಟ್ ಮತ್ತು ಎಮೋಜಿಗಳು ನಿಮ್ಮ ಆಂಡ್ರಾಯ್ಡ್ ನಲ್ಲಿ ಇನ್ಸ್ಟಾಲ್ ಆಗಿದೆ.
ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಆಂಡ್ರಾಯ್ಡ್ ಪಿ ಎಮೋಜಿಗಳನ್ನು ಎಂಜಾಯ್ ಮಾಡಿ. ನೀವೂ ಟ್ರೈ ಮಾಡಿ. ಮತ್ತು ನಿಮ್ಮ ಯಾವ ಮೊಬೈಲ್ ನಲ್ಲಿ ಇದು ವರ್ಕ್ ಆಗಿದೆ ಎಂಬುದನ್ನು ನಮಗೆ ತಿಳಿಸಿ.. ಶೇರ್ ಮಾಡಿ..

Best Mobiles in India

English summary
How to Install Android P Emojis and Fonts on Any Android Device

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X