ಆನ್‌ಲೈನ್‌ನಲ್ಲಿ ನೀವು ಸುರಕ್ಷರಾಗಿರಲು ತಿಳಿದಿರಲೇಬೇಕಾದ 5 ವಿಷಯಗಳು ಇವು!!

|

ಡಿಜಿಟಲ್‌ ಜಗತ್ತು ಮತ್ತುಮಾರುಕಟ್ಟೆಗಳೆರಡೂ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ 'ಪ್ರತಿಯೊಂದು ಮಾಹಿತಿಯೂ ಅಮೂಲ್ಯ' ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ, ಬಳಕೆದಾರರ ಮಾಹಿತಿ ಸೋರಿಕೆ ಅಥವಾ ಅನೈತಿಕವಾದ ಮಾಹಿತಿಯ ಮಾರಾಟ ನಡೆಯುತ್ತಿರುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಇತ್ತೀಚಿನ 'ಕೇಂಬ್ರಿಡ್ಜ್‌ ಅನಾಲಿಟಿಕಾ ಹಗರಣ'.

ನಮ್ಮ ಹಲವು ಆಪ್ತ ಹಾಗೂ ನಿತ್ಯದ ಚಟುವಟಿಕೆಗಳನ್ನು, ನಮ್ಮ ಆಸಕ್ತಿ, ಹವ್ಯಾಸ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ ನಮಗೆ ತಿಳಿಯದೇ ಹಲವು ಮಹತ್ವದ ವಿಚಾರಗಳನ್ನು ಸಾರ್ವಜನಿಕಗೊಳಿಸುತ್ತಿರುತ್ತೇವೆ. ಇದರಿಂದ ಏನು ಅಪಾಯ ಎಂದು ನಿಮಗೆ ತಿಳಿಯುವ ವೇಳೆಗೆ ನಿಮ್ಮ ಅತ್ಯಮೌಲ್ಯ ಮಾಹಿತಿ ಇನ್ನೊಬ್ಬರ ಮಾರಾಟ ವಸ್ತುವಾಗಿ ಬಿಟ್ಟಿರುತ್ತದೆ.

ಆನ್‌ಲೈನ್‌ನಲ್ಲಿ ನೀವು ಸುರಕ್ಷರಾಗಿರಲು ತಿಳಿದಿರಲೇಬೇಕಾದ 5 ವಿಷಯಗಳು ಇವು!!

ಆದರೆ, ನಮ್ಮ ದೈನಂದಿನ ಚಟುವಟಿಕೆಗಳೆಲ್ಲವೂ ಇಂಟರ್‌ನೆಟ್‌ ಅವಲಂಬಿಸಿರುವುದರಿಂದ ಇಂಟರ್‌ನೆಟ್‌ ಆಧರಿತ ಸೇವೆಗಳನ್ನು ಬಿಟ್ಟು ಬದುಕುವುದಕ್ಕಂತೂ ಸಾಧ್ಯವಿಲ್ಲ.ಹಾಗಾಗಿ, ನಿಮ್ಮ ಫೋನ್‌, ಕಂಪ್ಯೂಟರ್‌, ಇಂರ್ಟನೆಟ್‌ನಲ್ಲಿರುವ ಮಾಹಿತಿಯನ್ನು ಮೂರನೆಯ ವ್ಯಕ್ತಿ ಕೈ ಹಾಕದಂತೆ ತಡೆಯುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ನಿಮ್ಮ ಬ್ರೌಸರ್ ನಿರ್ವಹಣೆಯನ್ನು ತಿಳಿದಿರಿ!!

ನಿಮ್ಮ ಬ್ರೌಸರ್ ನಿರ್ವಹಣೆಯನ್ನು ತಿಳಿದಿರಿ!!

ಮೊಬೈಲ್‌ ಆಗಿರಲಿ, ಕಂಪ್ಯೂಟರ್‌ ಆಗಿರಲಿ, ಬ್ರೌಸರ್‌ಗಳ ನಿರ್ವಹಣೆಯನ್ನು ನೀವು ತಿಳಿದಿರಿ. , ಬ್ರೌಸರ್‌ಗಳ ಮೂಲಕ ನಾವು ಅಂತರ್ಜಾಲ ಮಾಹಿತಿಯನ್ನು ಹುಡುಕುವಾಗ ನಮ್ಮ ಬಳಕೆಯ ಮಾಹಿತಿಗಳೆಲ್ಲವೂ ಕುಕೀಸ್ ರೂಪದಲ್ಲಿ ಬ್ರೌಸರ್‌ನಲ್ಲಿ ಸಂಗ್ರಹವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇವು ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿಟ್ಟುಕೊಂಡಿರುತ್ತೇವೆ. ಹಾಗಾಗಿ, ಕುಕೀಸ್, ಕ್ಯಾಷೆ ಸ್ವಚ್ಛ ಮಾಡಿ. ಇದರಿಂದ ಬ್ರೌಸರ್‌ಗಳ ಮೂಲಕ ನಮ್ಮ ಆನ್‌ಲೈನ್‌ ಮಾಹಿತಿ ಕದಿಯಲು ಇತರರಿಗೆ ಕಷ್ಟವಾಗುತ್ತದೆ.

ಇಂತಹ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ!!

ಇಂತಹ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ!!

ಜನಪ್ರಿಯವಾಗಿರುವ ಬ್ರಾಂಡ್‌ಗಳ ಸೋಗಿನಲ್ಲಿ ಮಾಲ್‌ವೇರ್‌ಗಳನ್ನು ಹೊತ್ತಿರುವಂತಹ ಹಲವು ಲಿಂಕ್‌ಗಳು ನಿಮ್ಮ ಮೊಬೈಲ್‌ಗೆ ಸಾಮಾನ್ಯವಾಗಿ ಬರುತ್ತವೆ. ವಿವಿಧ ಆಫರ್‌ಗಳ ಸೋಗಿನಲ್ಲಿ, ವಿಶೇಷ ರಿಯಾಯಿತಿಗಳ ಹೆಸರಿನಲ್ಲಿ ಇತ್ತೀಚೆಗೆ ಸೋಷಿಯಲ್‌ ಮೆಸೆಂಜರ್‌ಗಳಲ್ಲಿ ಇಂತಹ ಲಿಂಕ್‌ಗಳನ್ನು ನೀವು ಕಾಣಬಹುದು. ಕಡಿಮೆ ಬೆಲೆ ಫೋನ್‌, ಆಕರ್ಷಕ ರಿಯಾಯಿತಿ ಇತ್ಯಾದಿಗಳ ಮೂಲಕ ಆಕರ್ಷಿಸಿ ಕ್ಲಿಕ್‌ ಮಾಡುವಂತೆ ಪ್ರೇರೇಪಿಸುವ ಲಿಂಕ್‌ ಕ್ಲಿಕ್‌ ಮಾಡಲೇಬೇಡಿ.

ಸಾರ್ವಜನಿಕ ವೈಫೈಗಳ ಬಗ್ಗೆ ಎಚ್ಚರವಿರಲಿ!!

ಸಾರ್ವಜನಿಕ ವೈಫೈಗಳ ಬಗ್ಗೆ ಎಚ್ಚರವಿರಲಿ!!

ಯಾರಾದರೂ ಉಚಿತವಾಗಿ ಏನನ್ನೋ ಕೊಡುತ್ತಿದ್ದರೆ ಅದನ್ನು ಹಿಂದೆ ಮುಂದೆ ನೋಡದೆ ತೆಗೆದುಕೊಳ್ಳುವ ಮನಸ್ಥಿತಿ ಇರುವವರು ಉಚಿತ ವೈಫೈಗಳನ್ನು ಬಳಸದೇ ಇರುತ್ತಾರ?. ಆದರೆ, ನಿಮಗೆ ತಿಳಿದಿರಲಿ ಉಚಿತ ಇಂರ್ಟನೆಟ್‌ ನೀಡುವ ಸಂಸ್ಥೆಗಳು ಬಳಕೆದಾರರ ಮಾಹಿತಿಯನ್ನು ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ. ಉಚಿತವಾಗಿ ಏನನ್ನೋ ಕೊಡುತ್ತಿದ್ದರೆ, ಅದಕ್ಕಿಂತ ಹೆಚ್ಚಿನ ಮೌಲ್ಯದ್ದೇನನ್ನೊ ಪಡೆದುಕೊಳ್ಳುತ್ತಿರುತ್ತದೆ ಎಂಬುದನ್ನು ನೀವು ಯೋಚಿಸುವುದಿಲ್ಲ.

ಟ್ರೂ ಫ್ಯಾಕ್ಟರ್‌ ಅಥೆಂಟಿಫಿಕೇಷನ್!!

ಟ್ರೂ ಫ್ಯಾಕ್ಟರ್‌ ಅಥೆಂಟಿಫಿಕೇಷನ್!!

ಟ್ರೂ ಫ್ಯಾಕ್ಟರ್‌ ಅಥೆಂಟಿಫಿಕೇಷನ್ ಸಾಮಾನ್ಯವಾಗಿ ಲಭ್ಯವಿರುವ ಸುರಕ್ಷತೆಯ ಕ್ರಮಕ್ಕಿಂತ ಒಂದು ಪದರ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಇದನ್ನು ಅನುಸರಿಸಿದರೆ, ಸೈಬರ್‌ ಅಪರಾಧಿಗಳು ನಮ್ಮಿಂದ ಮಾಹಿತಿ ಕದಿಯುವುದು ಕಷ್ಟ. ಪಾಸ್‌ವರ್ಡ್‌ ಸೃಷ್ಟಿಸುವಾಗ ಈ ಕ್ರಮವನ್ನು ಅನುಸರಿಸಿದರೆ, ನಮ್ಮ ಮಾಹಿತಿಗೆ ಯಾರೂ ಕೈ ಹಾಕಲು ಸಾಧ್ಯವಿಲ್ಲ. ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದಕ್ಕೆ ಸೇವೆ ನೀಡುವ ತಾಣಗಳೇ ಇದನ್ನು ಒದಗಿಸುವುದನ್ನು ನಾವು ನೋಡಬಹುದು.

ಮೊಬೈಲ್‌ಗಳಲ್ಲಿ ಅನುಮತಿ!!

ಮೊಬೈಲ್‌ಗಳಲ್ಲಿ ಅನುಮತಿ!!

ನೀವು ಯಾವುದೇ ಆಪ್‌ ಇನ್‌ಸ್ಟಾಲ್ ಮಾಡಿದಾಗ, ಆ ಆಪ್‌ಗಳು ನಿಮ್ಮ ಫೋಟೋ, ಕಾಂಟ್ಯಾಕ್ಟ್ ಲಿಸ್ಟ್‌ ಮುಂತಾದವುಗಳಿಗೆ ಸಂಬಂಧಿಸಿದಂತೆ ನೋಡುವ ಅಥವಾ ಬಳಸುವ ಅನುಮತಿಯನ್ನು ಪಡೆಯುತ್ತದೆ. ಆದರೆ, ಅವುಗಳ ಬಗ್ಗೆ ನಾವು ಎಚ್ಚರಿಕೆಯನ್ನು ಪಡೆಯುವುದಿಲ್ಲ. ಕೆಲವೊಂದು ಆಪ್‌ಗಳು ಇನ್ನು ಮುಂದೆ ಹೋಗಿ ದನಿಯನ್ನು ಕೇಳಿಸಿಕೊಳ್ಳುತ್ತದೆ. ಹಾಗಾಗಿ, ನಿಮ್ಮ ಮೊಬೈಲ್‌ನಲ್ಲಿರುವ ಆಪ್‌ಗಳಿಗೆ ನಿರ್ದಿಷ್ಟ ಮಾಹಿತಿ ದೊರೆಯದಂತೆ ನಿಯಂತ್ರಿಸುವುದನ್ನು ಕಲಿಯಿರಿ.

Best Mobiles in India

English summary
Protecting your personal information can help reduce your risk of identity theft.. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X