Home
ಟೆಕ್ ನೌಕರಿ

ವಾಟ್ಸ್ಆಪ್‌ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದರೆ ತಿಳಿಯುವುದು ಹೇಗೆ?

By Bhaskar N J

ವಾಟ್ಸ್ಆಪ್‌ನಲ್ಲಿ ಯಾರನ್ನಾದರೂ ನಾವು ಬ್ಲಾಕ್ ಮಾಡುವ ಆಯ್ಕೆ ಇದೆಯೇ ಹೊರತು, ಯಾರಾದರೂ ನಮ್ಮನ್ನು ಬ್ಲಾಕ್ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ನೇರವಾಗಿ ಸಾಧ್ಯವಿಲ್ಲ. ಹಾಗಾಗಿ, ಒಮ್ಮೊಮ್ಮೆ ನಮಗೆ ಬೇಕಾದವರು, ಗೊತ್ತಿರುವವರು ಸಹ ಅಚಾನಕ್ ಆಗಿ ನಮ್ಮ ನಂಬರ್ ಅನ್ನು ಬ್ಲಾಕ್ ಮಾಡಿದರೂ ನಮಗದು ತಿಳಿಯುವುದಿಲ್ಲ.!

ವಾಟ್ಸ್ಆಪ್‌ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದರೆ ತಿಳಿಯುವುದು ಹೇಗೆ?

ಇದರಿಂದಾಗಿ ನಮ್ಮ ಮತ್ತು ನಮ್ಮವರ ನಡುವೆ ಕೆಲವೊಮ್ಮೆ ಸಂಭಾಷಣೆ ಇಲ್ಲದೆ ತೊಂದರೆಯಾಗಬಹುದು. ಹಾಗಾಗಿ, ಇಂತಹ ಪರಿಸ್ಥಿತಿ ಬಾರದಂತೆ ಇರಬೇಕಾದರೆ ವಾಟ್ಸಾಪ್‌ನಲ್ಲಿ ನಿಮ್ಮನ್ನು ಬೇರೆಯವರು ಬ್ಲಾಕ್ ಮಾಡಿದ್ದಾರೋ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಬೇಕು.! ಹಾಗಾದರೆ, ತಿಳಿಯುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!

1. ಸ್ಟೇಟಸ್ ನಿಮಗೆ ಕಾಣಿಸಲ್ಲ

1. ಸ್ಟೇಟಸ್ ನಿಮಗೆ ಕಾಣಿಸಲ್ಲ

ವಾಟ್ಸಾಪ್‌ನಲ್ಲಿ ಯಾರಾದರೂ ಬಳಕೆದಾರು ನಿಮ್ಮನ್ನು ಬ್ಲಾಕ್ ಮಾಡಿದ್ದರೆ ಅವರ ಸ್ಟೇಟಸ್ ನಿಮಗೆ ಕಾಣಿಸಲ್ಲ. ಅಂದರೆ ಅವರು ಆನ್‌ಲೈನ್‌ನಲ್ಲಿ ಇದ್ದಾರಾ, ಆಫ್‌ಲೈನ್‌ನಲ್ಲಿ ಇದ್ದಾರಾ ಎಂಬ ಸಂಗತಿ ನಿಮಗೆ ಗೊತ್ತಾಗಲ್ಲ. ಆದರೆ ಈ ಸೆಟ್ಟಿಂಗ್ ಬ್ಲಾಕ್ ಮಾಡದಿದ್ದರೂ ಎಲ್ಲರಿಗೂ ಲಭ್ಯವಿರುತ್ತದೆ. ಆದರೆ ಬ್ಲಾಕ್ ಮಾಡಿದರೆ ಮಾತ್ರ ಆ ಯೂಸರ್ ಸ್ಟೇಟಸ್ ನಿಮಗೆ ಕಾಣಿಸಲ್ಲ. ಇದರಿಂದ ಆ ಬಳಕೆದಾರ ನಿಮ್ಮನ್ನು ಬ್ಲಾಕ್ ಮಾಡಿದ್ದಾನೆಂದು ತಿಳಿದುಕೊಳ್ಳಬೇಕು.

2. ಪ್ರೊಫೈಲ್ ನೋಡಲಾರಿರಿ

2. ಪ್ರೊಫೈಲ್ ನೋಡಲಾರಿರಿ

ಯಾರಾದರೂ ನಿಮ್ಮನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದರೆ ನೀವು ಆ ಬಳಕೆದಾರರ ಪ್ರೊಫೈಲ್ ನೋಡಲಾರಿರಿ. ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೂ ಬ್ಲಾಂಕ್ ಸರ್ಕಲ್ ಬರುತ್ತದೆ. ಯಾವುದೇ ಫೋಟೋ ಕಾಣಿಸಲ್ಲ. ಈ ರೀತಿ ಇದ್ದರು ಬೇರೆಯವರು ಬ್ಲಾಕ್ ಮಾಡಿದ್ದಾರೆಂದು ಗುರುತಿಸಬೇಕು.

How to Send a WhatsApp Message Without Saving the Contact in Your Phone - GIZBOT KANNADA
3. ಸಿಂಗಲ್ ಟಿಕ್ ಮಾತ್ರ ತೋರಿಸುತ್ತದೆ

3. ಸಿಂಗಲ್ ಟಿಕ್ ಮಾತ್ರ ತೋರಿಸುತ್ತದೆ

ಯಾರಿಗಾದರೂ ನೀವು ಒಂದು ಮೆಸೇಜ್ ಕಳುಹಿಸಿದರೆ ಅದಕ್ಕೆ ಕೇವಲ ಸಿಂಗಲ್ ಟಿಕ್ ಮಾತ್ರ ತೋರಿಸುತ್ತದೆ ಆಗ ನಿಮ್ಮನ್ನು ಆ ಬಳಕೆದಾರ ಬ್ಲಾಕ್ ಮಾಡಿದಂತೆ ತಿಳಿದುಕೊಳ್ಳಬೇಕು. ಬ್ಲಾಕ್ ಮಾಡದಿದ್ದರೆ ಮೆಸೇಜ್ ಡೆಲಿವರಿ ಆದಂತೆ ಡಬಲ್ ಟಿಕ್ ಬರುತ್ತದೆ. ಯೂಸರ್ ಆ ಮೆಸೇಜ್ ನೋಡಿದ ಮೇಲೆ ಬ್ಲೂ ಟಿಕ್ ಕಾಣಿಸುತ್ತದೆ.

4. ವಾಯ್ಸ್ ಅಥವಾ ವಿಡಿಯೋ ಕಾಲ್ಸ್

4. ವಾಯ್ಸ್ ಅಥವಾ ವಿಡಿಯೋ ಕಾಲ್ಸ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೊಬೈಲ್ ಡಾಟಾ ಅಥವಾ ವೈಫೈ ಸಿಗ್ನಲ್ ಚೆನ್ನಾಗಿಯೇ ಇದ್ದರೂ ನೀವು ವಾಟ್ಸಾಪ್‌ನಲ್ಲಿ ಯಾರಿಗಾದರೂ ವಾಯ್ಸ್ ಅಥವಾ ವಿಡಿಯೋ ಕಾಲ್ಸ್ ಮಾಡಿದರೆ ಅದು ಸಂಪರ್ಕಿಸದಿದ್ದರೆ ಆ ಯೂಸರ್ ನಿಮ್ಮನ್ನು ಬ್ಲಾಕ್ ಮಾಡಿದ್ದಾಗಿ ಗುರುತಿಸಬೇಕು.

5. ಇನ್‌ವೈಟ್ ಮಾಡಿದಾಗ

5. ಇನ್‌ವೈಟ್ ಮಾಡಿದಾಗ

ನೀವು ಒಂದು ಗ್ರೂಪ್ ಕ್ರಿಯೇಟ್ ಮಾಡಿ ಅದರಲ್ಲಿ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಯನ್ನು ಇನ್‌ವೈಟ್ ಮಾಡಿದಾಗ ನಿಮಗೆ You are not authorized to add this contact ಈ ರೀತಿ ಕಾಣಿಸಿದರೆ ಆಗ ಆತ ನಿಮ್ಮನ್ನು ಖಚಿತವಾಗಿ ಬ್ಲಾಕ್ ಮಾಡಿದ್ದಾನೆಂದು ತಿಳಿದುಕೊಳ್ಳಬೇಕು.

Best Mobiles in India

English summary
You can no longer see a contact's last seen or online in the chat window.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+