ಮೊಬೈಲ್ ನಂಬರ್, ಪ್ಯಾನ್‌ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್‌ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಎನ್ನುವುದು ಬಹುತೇಕರಿಗೆ ಈಗಾಗಲೇ ತಿಳಿದಿದೆ. ಆದರೆ, ವಿಮೆ ಪಾಲಿಸಿಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಕಡ್ಡಾಯಗೊಳಿಸಿರುವುದು ಹಲವರಿಗೆ ತಿಳಿದಿಲ್ಲ.!!
ಹೌದು, ಕಾಳಧನ ನಿಗ್ರಹಿಸಲು ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರಕಾರವು ಆಧಾರ್ ಅನ್ನು ಅಸ್ತ್ರದಂತೆ ಬಳಸುತ್ತಿದ್ದು, ಈಗ ಆಧಾರ್ ಮತ್ತು ಪ್ಯಾನ್ ಅನ್ನು ವಿಮಾ ಪಾಲಿಸಿಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.!! ಹಾಗಾದರೆ, ಆನ್‌ಲೈನ್‌ನಲ್ಲಿ ವಿಮೆ ಪಾಲಿಸಿಗಳಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!
ಡಿ.31ರೊಳಗೆ ಜೋಡಣೆ ಮಾಡಬೇಕು.!!
ಆಧಾರ್ ಅನ್ನು ಇತರ ಎಲ್ಲಾ ಯೋಜನೆಗಳೊಂದಿಗೆ ಲಿಂಕ್ ಮಾಡಲು ಸಮಯ ನೀಡಿರುವಂತೆ ವಿಮೆ ಪಾಲಿಸಿಗಳಿಗೆ ಆಧಾರ್ ಲಿಂಕ್ ಮಾಡಲು ಸಮಯ ನಿಗದಿ ಮಾಡಲಾಗಿದೆ. ಇದೆ ತಿಂಗಳ ಡಿ.31ರೊಳಗೆ ಗ್ರಾಹಕರು ವಿಮೆ ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡುವಂತೆ ಈಗಾಗಲೇ ಎಲ್‌ಐಸಿ ಸೂಚನೆ ನೀಡಿದೆ.!!
ಎಲ್‌ಐಸಿ ವೆಬ್‌ಸೈಟ್ ತೆರೆಯಿರಿ.!!
ಭಾರತೀಯ ಜೀವ ವಿಮಾ ನಿಗಮದ ಜಾಲತಾಣಕ್ಕೆ ಭೇಟಿ ನೀಡಿದರೆ ಮುಖಪುಟದಲ್ಲಿಯೇ 'ಲಿಂಕ್ ಆಧಾರ್ ಆಯಂಡ್ ಪ್ಯಾನ್ ಟೂ ಪಾಲಿಸಿ' ಎನ್ನುವ ಲಿಂಕ್‌ವೊಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ನೀವು ಏನನ್ನು ಮಾಡಬೇಕು ಎಂದು ಅಲ್ಲಿ ಸೂಚನೆಗಳಿರುತ್ತವೆ.!!
ಮೊಬೈಲ್ ಸಂಖ್ಯೆ ನೋಂದಣಿ!!
ಯುಐಡಿಎಐಗೆ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿಯಾಗಿದೆಯೇ ಎಂಬುದನ್ನು ಗಮನಿಸಿ. ಹೌದು ಅನ್ನುವುದಾದರೆ, ಒಂದು ಅವಧಿಯ ಪಾಸ್‌ವರ್ಡ್(ಒಟಿಪಿ) ನಿಮ್ಮ ಮೊಬೈಲ್‌ಗೆ ಬರುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್ ಸಂಖ್ಯೆ ಅಪ್‌ಡೇಟ್ ಆಗದೇ ಇದ್ದರೆ, ಆಧಾರ್ ಜೋಡಣೆ ಸಲುವಾಗಿ ಎಲ್‌ಐಸಿ ಶಾಖೆಗೆ ಭೇಟಿ ನೀಡಿ.
'ಪ್ರೊಸೀಡ್' ನೀಡಿ.!!
ಸೂಚನೆಗಳನ್ನು ಓದಿದ ತರುವಾಯ 'ಪ್ರೊಸೀಡ್' ಎನ್ನುವ ಇನ್ನೊಂದು ಕೊಂಡಿಯನ್ನು ಕ್ಲಿಕ್ ಮಾಡಿ. ಆಗ ಅಲ್ಲಿ ನಿಮ್ಮ ಹೆಸರು, ಇಮೇಲ್ ಐಡಿ, ಪ್ಯಾನ್ ಸಂಖ್ಯೆ, ಜನ್ಮದಿನಾಂಕ, ಆಧಾರ್ ಸಂಖ್ಯೆ, ಲಿಂಗ ಮತ್ತು ಆಧಾರ್‌ಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ, ನಿಮ್ಮ ವಿಮಾ ಪಾಲಿಸಿಯ ಸಂಖ್ಯೆಯನ್ನು ಕೇಳಲಾಗುತ್ತದೆ. ಅವುಗಳನ್ನು ಭರ್ತಿ ಮಾಡಿ, ಓಕೆ ಮಾಡಿ.!!
ಜೋಡಣೆ ಪ್ರಕ್ರಿಯೆ ಯಶಸ್ವಿ!!
ನೀವು ನೀಡಿರುವ ಎಲ್ಲ ವಿವರಗಳೂ ಸರಿಯಾಗಿದ್ದ ಪಕ್ಷದಲ್ಲಿ, ವಿಮೆ ಪಾಲಿಸಿಗಳಿಗೆ ಆಧಾರ್ ಜೋಡಣೆಪ್ರಕ್ರಿಯೆ ಯಶಸ್ವಿಯಾಗಿದೆ' ಎನ್ನುವ ಸಂದೇಶ ನಿಮಗೆ ತೆರೆ ಮೇಲೆ ಕಾಣಿಸುತ್ತದೆ. ಕೆಲವು ದಿನಗಳ ಬಳಿಕ ನಿಮ್ಮ ಮೊಬೈಲ್‌ಗೆ ಈ ಬಗ್ಗೆ ಎಲ್‌ಐಸಿಯಿಂದ ಸಂದೇಶವೂ ಬರುತ್ತದೆ.!!
ಎಸ್‌ಎಂಎಸ್ ಆಯ್ಕೆ ಇಲ್ಲ!!
'ಎಸ್‌ಎಂಎಸ್ ಮೂಲಕ ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್ ಮಾಡಿ' ಎನ್ನುವ ಕೆಲವು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಎಸ್‌ಎಂಎಸ್ ಮುಖಾಂತರ ವಿಮೆ ಪಾಲಿಸಿಗೆ ಆಧಾರ್ ಅಥವಾ ಪ್ಯಾನ್ ಸಂಖ್ಯೆ ಜೋಡಣೆ ಮಾಡುವ ಆಯ್ಕೆಯನ್ನು ಎಲ್‌ಐಸಿ ನೀಡಿಲ್ಲ.! ಹಾಗಾಗಿ, ಆನ್‌ಲೈನ್‌ನಲ್ಲಿಯೇ ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್ ಮಾಡಿ.!!
ಓದಿರಿ:ವಿಶ್ವದ ಕೆಲವೇ ನಗರಗಳು ಹೊಂದಿರುವ ಇಂಟರ್‌ನೆಟ್ ಸ್ಪೀಡ್ ಈಗ ಬೆಂಗಳೂರಿನಲ್ಲಿ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.