ವಿಂಡೋಸ್ 10 ನಲ್ಲಿನ ಪ್ರೋಗ್ರಾಂನ EXE ಫೈಲ್ ಅನ್ನು ಕಂಡುಹಿಡಿಯುವುದು ಹೇಗೆ?

|

ಸಾಫ್ಟ್‌‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ಕಂಪೆನಿ ಈಗಾಗ್ಲೆ ವಿಂಡೋಸ್‌ 10 ಆಪರೇಟಿಂಗ್‌ ಸಿಸ್ಟ್ಂ ಅನ್ನ ಪರಿಚಯಿಸಿರೊದು ನಿಮಗೆಲ್ಲಾ ಗೊತ್ತೆ ಇದೆ. 2015 ರಲ್ಲಿ ವಿಂಡೋಸ್ 8 ರಿಂದ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್‌ಗೆ ಬದಲಾದ ನಂತರ ತನ್ನ ಬಳಕೆದಾರರಿಗೆ ಆಗಾ ಹೊಸ ರೀತಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಈಗಾಗ್ಲೆ ವಿಂಡೋಸ್ 10os ಎಕೋಸಿಸ್ಟಮ್‌ಗೆ ಸಂಬಂದಿಸಿದಂತೆ ಸ್ಯಾಂಡ್‌ಬಾಕ್ಸ್, ಸರ್ಚ್, ಮತ್ತು ಕೊರ್ಟಾನಾ ಫೀಚರ್ಸ್‌ಗಳನ್ನ ಪರಿಚಯಿಸಿ ಸಾಕಷ್ಟು ಅನುಕೂಲವನ್ನು ಮಾಡಿಕೊಟ್ಟಿದೆ. ಇನ್ನು ವಿಂಡೋಸ್‌ 10ನಲ್ಲಿ ಪ್ರೋಗ್ರಾಂ ಅಥವಾ ಅಪ್ಲಿಕೇಶನ್‌ exe ಫೈಲ್‌ ಅನ್ನು ಕಂಡುಹಿಡಿಯುವ ವಿಧಾನ ಕೆಲವರಿಗೆ ತಿಳಿದೆ ಇರುವುದಿಲ್ಲ.

ವಿಂಡೋಸ್ 10

ಹೌದು, ವಿಂಡೋಸ್ 10 ಬಳಕೆದಾರರ ಅನುಭವವನ್ನು ಸಾಕಷ್ಟು ಉತ್ತಮಗೊಳಿಸಿದೆ. ಇದರಲ್ಲಿ ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವುದರಿಂದ ಸಾಕಷ್ಟು ಅನುಕೂಲಕರವಾಗಿದೆ. ಇನ್ನು ಕೆಲವೊಮ್ಮೆ ನಿಮ್ಮ ವಿಂಡೋಸ್ 10 ನಲ್ಲಿ ಪ್ರೋಗ್ರಾಂ ಅಥವಾ ಅಪ್ಲಿಕೇಶನ್‌ನ EXE ಫೈಲ್ ಅನ್ನು ಕಂಡುಹಿಡಿಯಬೇಕು ಎಂದೆನಿಸದಾ, ನಿಮಗೆ ಸಾಕಷ್ಟು ಸಮಯ ಹಿಡಿಯಬಹುದು. ಆದರೆ ವಿಂಡೋಸ್ 10 ಪಿಸಿಯಲ್ಲಿ ಫೈಲ್ ಎಕ್ಸ್‌ಪ್ಲೋರರ್‌ನಲ್ಲಿ ನೀವು ಪ್ರೋಗ್ರಾಂ ಅಥವಾ ಅಪ್ಲಿಕೇಶನ್ ಸ್ಥಳವನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದನ್ನು ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಂಡೋಸ್ 10 ನಲ್ಲಿ ಪ್ರೋಗ್ರಾಂನ EXE ಫೈಲ್ ಅನ್ನು ಪಡೆಯುವುದು ಹೇಗೆ?

ವಿಂಡೋಸ್ 10 ನಲ್ಲಿ ಪ್ರೋಗ್ರಾಂನ EXE ಫೈಲ್ ಅನ್ನು ಪಡೆಯುವುದು ಹೇಗೆ?

ವಿಂಡೋಸ್‌ 10ನಲ್ಲಿ ಪ್ರೋಗ್ರಾಂನ EXE ಫೈಲ್ ಅನ್ನು ಪತ್ತೆಹಚ್ಚಲು ಸುಲಭವಾದ ಮಾರ್ಗವೆಂದರೆ ಶಾರ್ಟ್‌ಕಟ್ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು ಫೈಲ್ ಎಕ್ಸ್ಪ್ಲೋರರ್ ಅನ್ನು ತೆರೆಯಲು ಓಪನ್ ಫೈಲ್ ಲೊಕೇಶನ್‌ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೋಗ್ರಾಂ ಅಥವಾ ಅಪ್ಲಿಕೇಶನ್ ಅನ್ನು ಕಂಡುಹಿಡಿಯಬಹುದಾಗಿದೆ.

ಪ್ರೋಗ್ರಾಂನ EXE ಫೈಲ್

ಇನ್ನು ಪ್ರೋಗ್ರಾಂನ EXE ಫೈಲ್ ಅನ್ನು ಕಂಡುಹಿಡಿಯುವ ಇನ್ನೊಂದು ಮಾರ್ಗವೆಂದರೆ ಪ್ರೋಗ್ರಾಂ ಅಥವಾ ಅಪ್ಲಿಕೇಶನ್ ಶಾರ್ಟ್‌ಕಟ್ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಆಯ್ಕೆಮಾಡಿ. ನೀವು ಟಾಸ್ಕ್ ಬಾರ್ ಶಾರ್ಟ್‌ಕಟ್‌ ಅನ್ನು ರೈಟ್‌ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಆಯ್ಕೆ ಮಾಡಬಹುದು. ಅಪ್ಲಿಕೇಶನ್ ಅಥವಾ ಪ್ರೋಗ್ರಾಂ ಶಾರ್ಟ್ಕಟ್ ಸ್ಟಾರ್ಟ್ ಮೆನುವಿನಲ್ಲಿದ್ದರೆ, ಅಪ್ಲಿಕೇಶನ್ ಅಥವಾ ಪ್ರೋಗ್ರಾಂನ ಸ್ಟಾರ್ಟ್ ಮೆನು ಶಾರ್ಟ್ಕಟ್ ಮೇಲೆ ಬಲ ಕ್ಲಿಕ್ ಮಾಡಿ, ಮತ್ತು ಮೋರ್‌ -> ಓಪನ್ ಫೈಲ್ ಸ್ಥಳವನ್ನು ಆಯ್ಕೆ ಮಾಡಿ. ನಂತರ ಪ್ರಾಪರ್ಟೀಸ್ ವಿಂಡೋ ತೆರೆಯುತ್ತದೆ ಮತ್ತು ನೀವು ಟಾರ್ಗೆಟ್ ಕ್ಷೇತ್ರದಲ್ಲಿ ಫೈಲ್ ಅನ್ನು ನೋಡಬಹುದು.

ಗೂಗಲ್

ಇದಲ್ಲದೆ ಗೂಗಲ್ ಕ್ರೋಮ್ ಡೆಸ್ಕ್‌ಟಾಪ್ ಮೇಲೆ ರೈಟ್‌ ಕ್ಲಿಕ್ ಮಾಡಿ ಮತ್ತು ಫೈಲ್ ಲೋಕೇಶನ್‌ ಅನ್ನು ತೆರೆಯಿರಿ ಆಯ್ಕೆಮಾಡಿ ಅಥವಾ ಫೈಲ್ ಲೋಕೇಶನ್‌ ಅನ್ನು ತೆರೆಯಲು ಪ್ರಾಪರ್ಟೀಸ್ ಬಳಸಿ. ನಿಮ್ಮನ್ನು ವಿಂಡೋಸ್ ಎಕ್ಸ್‌ಪ್ಲೋರರ್‌ನಲ್ಲಿನ Chrome.exe ಫೈಲ್‌ಗೆ ಕರೆದೊಯ್ಯಲಾಗುತ್ತದೆ.

Best Mobiles in India

English summary
locate the program or app location in the file explorer on your Windows 10 PC. Here’s how to locate to EXE file of a program in Windows 10.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X