Subscribe to Gizbot

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?..ಮಾಡಲೇಬೇಕು ಏಕೆ?

Written By:

ಸರ್ಕಾರದ ಎಲ್ಲಾ ಸವಲತ್ತುಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಮೂಲಕ ಕಾರಣವೆ ಭ್ರಷ್ಟಾಚಾರ ತಪ್ಪಿಸುವುದು ,ತೆರಿಗೆ ಕಳ್ಳತನ ಮತ್ತು ಸರ್ಕಾರಿ ಸವಲತ್ತುಗಳನ್ನು ಸೇರಿ ಎಲ್ಲಾ ಅಕ್ರಮಗಳಿಗೆ ತಡೆಹಾಕುವುದು.! ಆದರೆ, ನಿಮ್ಮ ಆಧಾರ್ ಕಾರ್ಡ್ ಅಕ್ರಮಕ್ಕೆ ಬಲಿಯಾದರೆ??

ಹೌದು, ನಿಮ್ಮ ಆಧಾರ್ ಕಾರ್ಡ್ ಅಕ್ರಮಕ್ಕೆ ಒಳಗಾಗುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಬಯೋಮೆಟ್ರಿಕ್ ವಿವರ ಸೇರಿದಂತೆ ನಮ್ಮ ಜನ್ಮ ಜಾತಕವನ್ನೆ ಹೊಂದಿರುವ ಆಧಾರ್ ಕಾರ್ಡ್ ಏನಾದರೂ ಕ್ರಿಮಿನಲ್‌ಗಳ ಪಾಲಾದರೆ ಸರ್ಕಾರಿ ಸವಲತ್ತು, ಸಿಮ್‌ಕಾರ್ಡ್‌ಗಳಿಗೆ ಅದನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು.!!

ಹಾಗಾಗಿ, ಆಧಾರ್ ಕಾರ್ಡ್‌ ಸುರಕ್ಷತೆ ಬಹಳ ಮುಖ್ಯ.! ಇದಕ್ಕಾಗಿಯೇ ಗುರುತಿನ ಚೀಟಿ ಪ್ರಾಧಿಕಾರ ವಿಶೇಷ ಪರಿಹಾರವೊಂದನ್ನು ನೀಡಿದ್ದು, ಆಧಾರ್‌ ಕಾರ್ಡ್‌ ಅನ್ನು ಲಾಕ್ ಮಾಡಿ ಸಂರಕ್ಷಣೆ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್ ಕಾರ್ಡ್‌ ಲಾಕ್ ಮಾಡಿ.!!

ಆಧಾರ್ ಕಾರ್ಡ್‌ ಲಾಕ್ ಮಾಡಿ.!!

ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್ ಮಾಹಿತಿಯು ದುರ್ಬಳಕೆಯಾಗದಂತೆ ತಡೆಯಲು ಆನ್‌ಲೈನ್‌ನಲ್ಲಿಯೇ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಬಹುದು. ಲಾಕ್ ಮಾಡಿದರೆ ಯಾರೇ ಆಗಲಿ ನಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಬಳಸಲು ಅಥವಾ ಕದಿಯಲು ಸಾಧ್ಯವಿಲ್ಲಾ.!!

 ನಿಮ್ಮ ಮೊಬೈಲ್ ನಂಬರ್ ಬೇಕು!!

ನಿಮ್ಮ ಮೊಬೈಲ್ ನಂಬರ್ ಬೇಕು!!

ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇದ್ದರೆ ಆಧಾರ್ ಕಾರ್ಡ್‌ ಲಾಕ್ ಮಾಡಬಹುದು. ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಪಡೆದು ಆಧಾರ್ ಲಾಕ್ ಮಾಡುವುದು ಬಹಳ ಸುಲಭ ಎನ್ನಬಹುದು.!!

ಆಧಾರ್ ಕಾರ್ಡ್‌ ಲಾಕ್ ಮಾಡುವುದು ಹೇಗೆ?

ಆಧಾರ್ ಕಾರ್ಡ್‌ ಲಾಕ್ ಮಾಡುವುದು ಹೇಗೆ?

ಗುರುತಿನ ಚೀಟಿ ಪ್ರಾಧಿಕಾರದ ಅಫಿಶಿಯಲ್ ವೆಬ್‌ಸೈಟ್‌ ತೆರೆದು ಆಧಾರ್‌ ಸರ್ವಿಸಸ್ ಎಂಬ ಆಯ್ಕೆ ಕಾಣಿಸುತ್ತದೆ. ನಂತರ ಅದರಲ್ಲಿ ಲಾಕ್/ ಅನ್‌ಲಾಕ್ ಬಯೋಮೆಟ್ರಿಕ್ ಎಂಬ ಆಯ್ಕೆ ಒತ್ತಿದರೆ ನಿಮಗೆ ಆಧಾರ್‌ ಕಾರ್ಡ್‌ ಲಾಕ್ ಮಾಡಬಹುದಾದ ಹೊಸ ಪೇಜ್ ತೆರೆಯುತ್ತದೆ.!!

ನಿಮ್ಮ ನಂಬರ್ ನೀಡಿ ಕ್ಯಾಪ್ಚಾ ಎಂಟರ್ ಮಾಡಿ!!

ನಿಮ್ಮ ನಂಬರ್ ನೀಡಿ ಕ್ಯಾಪ್ಚಾ ಎಂಟರ್ ಮಾಡಿ!!

ಹೊಸ ಪೇಜ್ ತೆರೆದ ನಂತರ ನಿಮ್ಮ ನಂಬರ್ ನೀಡಿ ಕ್ಯಾಪ್ಚಾ ಎಂಟರ್ ಮಾಡಲು ತೀರಿಸುತ್ತದೆ. ಅಲ್ಲಿನ ಸೂಚನೆಗಳನ್ನು ಓದಿಕೊಂಡು ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನೀಡಿ. ನಂತರ ನಿಮಗೆ ಒನ್ ಟೈಮ್ ಪಾಸ್‌ವರ್ಡ್ ಬರುತ್ತದೆ. ಅದನ್ನು ಹಾಕಿ ಎಂಟರ್ ಒತ್ತಿರಿ.

ಆಧಾರ್ ಕಾರ್ಡ್‌ ಲಾಕ್ ಆಗಿದೆ.!!

ಆಧಾರ್ ಕಾರ್ಡ್‌ ಲಾಕ್ ಆಗಿದೆ.!!

ಒನ್ ಟೈಮ್ ಪಾಸ್‌ವರ್ಡ್ ನೀಡಿ ಎಂಟರ್ ಒತ್ತಿದ ನಂತರ ನಿಮ್ಮ ಆಧಾರ್ ಕಾರ್ಡ್‌ ಲಾಕ್ ಆಗುತ್ತದೆ. ನಂತರ ನಿವು ಲಾಕ್ ಓಪನ್ ಮಾಡುವುದು ಇದೇ ರೀತಿಯಲ್ಲಿಯೇ ಇರುತ್ತದೆ. ಹಾಗೆಯೇ ನಿಮ್ಮ ಆಧಾರ್ ಕಾರ್ಡ್ ಸೇಫ್ ಆಗಿಯೂ ಇರುತ್ತದೆ.!!

ಓದಿರಿ:ಮಿಸ್ ಕಾಲ್, ಆಂಡ್ರಾಯ್ಡ್ ಅಂತ ಜನರಿಗೆ ಹೆಸರಿಡ್ತಾರೆ ಈ ಊರಲ್ಲಿ!! ಎಲ್ಲಿ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
UIDAI allows you to lock your biometrics, so that no one can access your information without your consent.to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot