ಮನೆಯಲ್ಲಿರುವ ಟೆಬಲ್ ಫ್ಯಾನ್ ಅನ್ನೇ ACಯಾಗಿ ಬದಲಾಯಿಸಿ!..ವಿಡಿಯೋ ನೋಡಿ!!
ಮನುಷ್ಯನ ಅವಶ್ಯಕತೆಗಳು ಹೆಚ್ಚಾದಂತೆ ಈ ಜಗತ್ತಿನಲ್ಲಿ ಸೃಜನಶೀಲತೆಯು ಹೆಚ್ಚಾಗುತ್ತದೆ. ದೊಡ್ಡ ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ನೂತನ ಸಂಶೋಧನೆಗಳಿಂದ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಸಾಧನಗಳನ್ನು ತಯಾರಿಸುತ್ತಾರೆ. ಇವುಗಳ ಮುಖ್ಯ ಉದ್ದೇಶ ಲಾಭವೇ ಆದರೂ ಸಹ ಅವುಗಳಿಂದ ಜನರಿಗೆ ಹೆಚ್ಚು ಉಪಯೋಗ.
ಇದಕ್ಕೆ ಒಂದು ಉಪಯುಕ್ತ ಉದಾಹರಣೆ ಎಂದರೆ ರೆಫ್ರಿಜಿರೇಟರ್, ಕೂಲರ್ ಮತ್ತು ಎಸಿಗಳು ಎಂದೆನ್ನಬಹುದು. ಆದರೆ, ನಿಮಗೆ ಗೊತ್ತಾ?, ಭಾರತದ ಶೇ 70ಕ್ಕಿಂತ ಹೆಚ್ಚು ಜನರೊಗೆ ಈವರೆಗೂ ಇಂತಹ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿಲ್ಲ. ಹಣದ ಅಭಾವ ಅಥವಾ ಇನ್ನಿತರ ಯಾವುದೇ ಕಾರಣಗಳಿಂದ ಇಂತಹ ವಸ್ತುಗಳಿಂದ ಅವರು ದೂರವಿದ್ದಾರೆ.

ಆದರೆ, ಇವರಲ್ಲಿ ಬಡಜನರು ಎನಿಸಿಕೊಳ್ಳುವ ಬಹುತೇಕರು ಫ್ಯಾನ್ ಅನ್ನು ಬಳಸಿಕೊಳುತ್ತಾರೆ. ಇವರ ಬಳಿ AC ಖರೀದಿಸುವಷ್ಟು ಹಣ ಇರೊದಿಲ್ಲವಲ್ಲ ಅನ್ನೋದು ನಿಜಾಂಶ. ಹಾಗಾಗಿ, ಇಂದುನ ಲೇಖನದಲ್ಲಿ ಕಡಿಮೆ ಖರ್ಚಿನಲ್ಲಿ ಮನೆಯ ಫ್ಯಾನ್ ಬಳಸಿಕೊಂಡೆ ಒಂದು AC ತಯಾರಿಸಿಸುವುದು ಹೇಗೆ ಎಂಬುದನ್ನು ವಿಡಿಯೋ ಸಹಾಯದಿಂದ ನಾವು ತಿಳಿಯೋಣ.

ಮನೆಯ ಫ್ಯಾನ್‌ನಲ್ಲಿ AC ತಯಾರಿ!!
ಡು ಇಟ್ ಯುವರ್ ಸೆಲ್ಫ್ ಅಂತ ಮನೆಯಲ್ಲಿನ ಫ್ಯಾನ್ ಅನ್ನು ಬಳಸಿಕೊಂಡೆ ಕಡಿಮೆ ಖರ್ಚಿನಲ್ಲಿ AC ತಯಾರಿಸಬಹುದಾಗಿದೆ. ಇಂತಹ ಒಂದು ಯಶಸ್ವಿ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕೆಲವೇ ಕೆಲವು ಉಪಕರಣಗಳನ್ನು ಬಳಸಿಕೊಂಡು ಫ್ಯಾನ್ ಅನ್ನು ACಯಾಗಿ ಬದಲಾಯಿಸಲಾಗಿದೆ.

AC ತಯಾರಿಗೆ ಬೇಕಾಗುವ ವಸ್ತುಗಳು?
ಅಂದಹಾಗೆ ನೀವು ಮನೆಯಲ್ಲೇ AC ತಯಾರಿಸಲು ಒಂದು ಟೇಬಲ್ ಫ್ಯಾನ್, ಮೀನಿನ ಟ್ಯಾಂಕ್ ಪಂಪ್, ತಾಮ್ರದ ಟ್ಯೂಬ್(ಕೊಳವೆ) ಮತ್ತು ಪ್ಲಾಸ್ಟಿಕ್ ಟ್ಯೂಬ್(ಕೊಳವೆ) ಬೇಕಾಗುತ್ತವೆ. ಈ ಎಲ್ಲಾ ವಸ್ತುಗಳು ಕಡಿಮೆ ಬೆಲೆಯಲ್ಲಿಯೇ ದೊರೆಯುವುದರಿಂದ ಮನೆಯ ಫ್ಯಾನ್ ಅನ್ನೇ ACಯಾಗಿ ಬದಲಾಯಿಸುವುದು ಸಾಧ್ಯವಿದೆ.

ಹೇಗೆ ತಯಾರಿಸುವುದು?
ವಿಡಿಯೋದಲ್ಲಿ ತೋರಿಸಿರುವಂತೆ ಮನೆಯಲ್ಲಿರುವ ಟೇಬಲ್ ಫ್ಯಾನ್ ಕವಚವನ್ನು ತೆರೆದು ಅದಕ್ಕೆ ತಾಮ್ರದ ಟ್ಯೂಬ್(ಕೊಳವೆ)ಅನ್ನು ಅದಕ್ಕೆ ಸುತ್ತಳಾಗಿದೆ. ತಾಮ್ರದ ಟ್ಯೂಬ್ ಅನ್ನು ಸುತ್ತಿದ ನಂತರ ಆ ಕೊಳವೆಯ ಎರಡೂ ಬದಿಗಳು ಫ್ಯಾನ್ ಹಿಂಬಾಗಕ್ಕೆ ಬರುವಂತೆ ಮಾಡಲಾಗಿದೆ. ತಾಮ್ರದ ಟ್ಯೂಬ್‌ಗೆ ಟ್ಯಾಂಕ್ ಪಂಪ್ ನೀರನ್ನು ಸಪ್ಲೇ ಮಾಡುವಂತೆ ವ್ಯವಸ್ಥೆಗೊಳಿಸಲಾಗಿದೆ.

ಪಂಪ್ ಜೊತೆ ಸಂಪರ್ಕ
ತಾಮ್ರದ ಟ್ಯೂಬ್ ಮೆದುವಾದ ಪ್ಲಾಸ್ಟಿಕ್ ಕೊಳವೆ ಜೊತೆಗೆ ಪಂಪ್ ಜೊತೆ ಸಂಪರ್ಕ ಹೊಂದಿರುತ್ತದೆ. ನಂತರ ಪಂಪ್ ಮೂಲಕ ತಾಮ್ರದ ಟ್ಯೂಬ್ ಒಳಗೆ ತಣ್ಣನೆಯ ನೀರನ್ನು ಹರಿಸಲು ಪಂಪ್ ಅನ್ನು ಚಾಲನೆ ಮಾಡಿದರೆ ಟೇಬಲ್ ಫ್ಯಾನ್ ತಣ್ಣನೆಯ ಗಾಳಿ ಬೀಸುತ್ತದೆ. ಇದೇ ವೇಳೆಯಲ್ಲಿ ಮಂಜು ಗೆಡ್ಡೆಯನ್ನು ಬಳಸಿದರೆ ACಗಿಂತ ತಣ್ಣನೆಯ ಗಾಳಿ ಬೀಸುತ್ತದೆ.

ವೀಡಿಯೋ ನೋಡಿ!
ಟೇಬಲ್ ಫ್ಯಾನ್ ಸಹಾಯದಿಂದ AC ತಯಾರಿಸುವುದು ಸುಲಭವಾಗಿ ಕಾಣುತ್ತದೆ. ಮನೆಯಲ್ಲಿ AC ತಯಾರಿ ಮಾಡುವಲ್ಲಿ ಈ ವೀಡಿಯೋ ನಿಮಗೆ ಸಹಕಾರಿಯಾಗಬಹುದು. ಒಂದು ವೆಳೆ ನೀವು ಸೃಜನಶೀಲರಾಗಿದ್ದಲ್ಲಿ, ಮನೆಯಲ್ಲಿನ ಟೇಬಲ್ ಫ್ಯಾನ್ ಸಹಾಯದಿಂದ ಹೇಗೆ AC ತಯಾರಿಸುವುದು ಎಂಬುದನ್ನು ಈ ಕೆಳಗಿನ ವೀಡಿಯೋದಲ್ಲಿ ತಿಳಿಯಬಹುದು.


Click it and Unblock the Notifications








