ಹಳೆ ಐಫೋನ್ ಅಥವಾ ಐಪ್ಯಾಡ್ ಬಳಸಿ ಸ್ಮಾರ್ಟ್ ಸ್ಪೀಕರ್ ತಯಾರಿಸಿಕೊಳ್ಳಿ!!!
ಮಾರುಕಟ್ಟೆಯಲ್ಲಿನ ಎಲ್ಲಾ ಪ್ರಮುಖ ಸ್ಪೀಕರ್ ಮಾರಾಟಗಾರರು ಸ್ಮಾರ್ಟ್ ಅಸಿಸ್ಟೆಂಟ್ ಡೊಮೇನ್ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವುಗಳಲ್ಲಿ ಕೆಲವರು ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟವಾಗುವ ಈ ಸಾಧನಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ.
ಡಿವೈಸ್ ಗಳಾದ ಅಮೇಜಾನ್ ಅಲೆಕ್ಸಾ, ಗೂಗಲ್ ಹೋಮ್, ಕೋರ್ಟಾನ ಪವರ್ಡ್ ಸ್ಮಾರ್ಟ್ ಸ್ಪೀಕರ್ಸ್ ಮತ್ತು ಆಪಲ್ ಇತ್ತೀಚೆಗೆ ಹೋಮ್ ಪಾಡ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಇವೆಲ್ಲವೂ ಮಾರುಕಟ್ಟೆಯಲ್ಲಿ ಒಳ್ಳೆ ರೀತಿಯಲ್ಲಿ ಮಾರಾಟವೂ ಆಗುತ್ತಿದೆ.

ಆಪಲ್ ಕೂಡ ಸಿರಿ ಪವರ್ಡ್ ಸ್ಮಾರ್ಟ್ ಸ್ಪೀಕರ್ ನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಟ್ಟಿದೆ. ಆದರೆ ಇದೆಲ್ಲದಕ್ಕಿತ ಒಂದು ಉತ್ತಮ ಉಪಾಯವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಹಳೆ ಐಫೋನ್ ಇಲ್ಲವೇ ಐಪ್ಯಾಡ್ ಬಳಸಿ ಸ್ಮಾರ್ಟ್ ಸ್ಪೀಕರ್ ತಯಾರಿಸಿಕೊಳ್ಳಬಹುದು.. ಹೌದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ..
ಅಗತ್ಯತೆಗಳು :
ಯಾವುದೇ iOS ಡಿವೈಸ್ (ಐಫೋನ್ ಅಥವಾ ಐಪ್ಯಾಡ್ ಅಥ್ವಾ ಐಪಾಡ್ಟಚ್) ಗಳು ಇದೇ ಕೆಲಸವನ್ನು ಮಾಡುತ್ತದೆ .
• ಇತ್ತೀಚಿನ iOS ವರ್ಷನ್ ನಲ್ಲಿ ರನ್ ಆಗುತ್ತಿರುವ ಬಗ್ಗೆ ಖಾತ್ರಿ ಇರಲಿ.
• ಯಾವುದೇ ಸ್ಪೀಕರ್, ಅದನ್ನು AUX ಕೇಬಲ್, ಬ್ಲೂಟೂತ್ ಅಥವಾ via ಲೈಟನಿಂಗ್ ಡಾಕ್ ಪೋರ್ಟ್ ಮೂಲಕ ಕನೆಕ್ಟ್ ಮಾಡುವಂತಿರಬೇಕು .

ಅನುಸರಿಸಬೇಕಾಗಿರುವ ಹಂತಗಳು:
1. ನಿಮ್ಮ ಹಳೆಯ iOS ಡಿವೈಸ್ ನ್ನು ತೆಗೆದುಕೊಳ್ಳಿ ಮತ್ತು ಪೂರ್ತಿಯಾಗಿ ಚಾರ್ಜ್ ಮಾಡಿ.
2. Siri ತೆರೆಯಿರಿ ಮತ್ತು ವಾಯ್ಸ್ ಕಮಾಂಡ್ ಗಳಿಂದ ಸರಿಯಾಗಿ ಅದನ್ನು ಕಾನ್ಫಿಗರ್ ಮಾಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ಅದಕ್ಕೆ ಎಲ್ಲಾ ಅಗತ್ಯ ಪರ್ಮಿಷನ್ ಗಳನ್ನು ನೀಡಿರಬೇಕು.
3. ಈಗ ನೀವು ಕೆಲವು ಅಗತ್ಯ ಸೆಟ್ಟಿಂಗ್ ಬದಲಾವಣೆಗಳನ್ನು ಸಿರಿ ಆಪ್ ನಲ್ಲಿ ಮಾಡಬೇಕು.
a. ನಿಮ್ಮ ಡಿವೈಸ್ ನ ಸೆಟ್ಟಿಂಗ್ಸ್ ಗೆ ತೆರಳಿ
b. ಸಿರಿಯನ್ನು ತೆರೆಯಿರಿ ಮತ್ತು ಸರ್ಚ್ ಆಯ್ಕೆಗೆ ತೆರಳಿ
c. “Listen for Hey Siri” ಆಯ್ಕೆಯನ್ನು ಅನೇಬಲ್ ಮಾಡಿ. ಹೀಗೆ ಮಾಡುವುದರಿಂದ ನೀವು ಯಾವಾಗಲೂ ನಿಮ್ಮ ಸಿರಿಯನ್ನು ತಯಾರಾಗಿರುವಂತೆ ಮಾಡಿರುತ್ತೀರಿ.
4. ಹೀಗೆ ಅನೇಬಲ್ ಮಾಡಿದ ನಂತರ, ಆನ್-ಸ್ಕ್ರೀನ್ ಇನ್ಸ್ಟ್ರಕ್ಷನ್ ಗಳನ್ನು ಫಾಲೋ ಮಾಡಿ. ಆ ಮೂಲಕ ನಿಮ್ಮ ವಾಯ್ಸ್ ನ್ನು ಅದು ಸರಿಯಾಗಿ ಗುರುತಿಸುವಂತೆ ಆಗಬೇಕು
5. ಮೇಲಿನ ಎಲ್ಲಾ ಹಂತಗಳನ್ನ ಮುಗಿಸಿದ ನಂತರ ನಿಮ್ಮ ಸ್ಮಾರ್ಟ್ ಫೋನನ್ನು ನಿಮ್ಮ ಬಳಿ ಇರುವ ಸ್ಪೀಕರ್ ಗೆ ಕನೆಕ್ಟ್ ಮಾಡಿ ಮತ್ತು ನಿಮ್ಮ iOS ಡಿವೈಸ್ ನ್ನು ಪ್ಲಗ್ ಮಾಡಿ ಗೋಡೆಯ ಚಾರ್ಜರ್ ಗೆ ತೂಗು ಹಾಕಿ.ನಿಮ್ಮ ಬಳಿ ಲೈಟನಿಂಗ್ ಡಾಕ್ ಪೋರ್ಟ್ ಇದ್ದರೆ ಡಿವೈಸ್ ಕನೆಕ್ಟ್ ಆಗಿ ಇದ್ದಾಗಲೇ ಚಾರ್ಜ್ ಕೂಡ ಮಾಡುತ್ತಿರಬಹುದು.
6. ಈಗ ನೀವು ನಿಮ್ಮದೇ ಸ್ವಂತ Siri powered ಸ್ಮಾರ್ಟ್ ಸ್ಪೀಕರ್ ಗೆ ಕಮಾಂಡ್ ಗಳನ್ನು ನೀಡಬಹುದು.
ಸೂಚನೆ – ಉತ್ತಮ ಧ್ವನಿ ಗ್ರಹಿಸುವಿಕೆಗಾಗಿ, ನೀವು ನಿಮ್ಮ ಹೊಸ DIY ಪ್ರೊಡಕ್ಟ್ ನ್ನು ಭವಿಷ್ಯದಲ್ಲಿ ನೀವು ಎಲ್ಲಿರಿಸುತ್ತೀರೋ ಆ ಸ್ಥಳವನ್ನೇ ಆಯ್ಕೆ ಮಾಡುವುದು ಒಳಿತು.


Click it and Unblock the Notifications