Home
ಟೆಕ್ ನೌಕರಿ

ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?

ಒಮ್ಮೆಲೆ ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ಇತರ ಎಲ್ಲಾ ಜಾಲತಾಣಗಳಲ್ಲಿಯೂ ವಿಡಿಯೊ ಲೈವ್ ಮಾಡುವುದು ಹೇಗೆ?

By Bhaskar N J

ಯಾವುದೇ ಸಮಾರಂಭಗಳಿದ್ದರೂ ಎಲ್ಲರೂ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ವಿಡಿಯೋ ಮಾಡುವುದು ಇಂದು ಸಾಮಾನ್ಯವಾಗಿದೆ. ಫೇಸ್‌ಬುಕ್‌ನಲ್ಲಿ ವಿಡಿಯೊ ಲೈವ್ ಮಾಡುವವರ ಸಂಖ್ಯೆ ಹೆಚ್ಚಿದ್ದರೆ ಯೂಟ್ಯೂಬ್‍ನಲ್ಲಿ ವಿಡಿಯೊ ಲೈವ್ ಮಾಡುವವರ ಸಂಖ್ಯೆ ಕಡಿಮೆ ಎಂದು ಹೇಳಬಹುದು.!!

ಹಾಗಾಗಿ, ಇಂದಿನ ಲೇಖನದಲ್ಲಿ ಯೂಟ್ಯೂಬ್‍ನಲ್ಲಿ ವಿಡಿಯೊ ಲೈವ್ ಮಾಡುವುದು ಹೇಗೆ? ಮತ್ತು ಒಮ್ಮೆಲೆ ಯೂಟ್ಯೂಬ್ , ಫೇಸ್‌ಬುಕ್ ಸೇರಿದಂತೆ ಇತರ ಎಲ್ಲಾ ಜಾಲತಾಣಗಳಲ್ಲಿಯೂ ವಿಡಿಯೊ ಲೈವ್ ಮಾಡುವುದು ಹೇಗೆ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.! ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯೂಟ್ಯೂಬ್‍ನಿಂದ ಲೈವ್ ವಿಡಿಯೊ!!

ಯೂಟ್ಯೂಬ್‍ನಿಂದ ಲೈವ್ ವಿಡಿಯೊ!!

ಯೂಟ್ಯೂಬ್ ಆಪ್‍‍ ತೆರೆಯಿರಿ. ಆಪ್ ತೆರೆದ ನಂತರ ಆಪ್‌ನ ಮೇಲ್ಭಾಗದಲ್ಲಿ ಕಾಣುವ ಕ್ಯಾಮೆರಾ ಚಿತ್ರದ ಮೇಲೆ ಒತ್ತಿ. ಕಾಣುವ ಆಯ್ಕೆಗಳಲ್ಲಿ GO LIVE ಎಂಬಲ್ಲಿ ಒತ್ತಿ. ಈಗ ವಿಡಿಯೊ ಲೈವ್ಗೆ ಒಂದು ಹೆಸರು ಕೊಡಿ. ಬಳಿಕ ವಿಡಿಯೊ ಬಗ್ಗೆ ವಿವರಣೆ ಬರೆದು NEXT ಒತ್ತಿರಿ.!!

ವಿಡಿಯೊ ಲೈವ್ ಆಗುತ್ತದೆ.!!

ವಿಡಿಯೊ ಲೈವ್ ಆಗುತ್ತದೆ.!!

ವಿಡಿಯೊ ಬಗ್ಗೆ ವಿವರಣೆ ಬರೆದು NEXT ಒತ್ತಿದ ನಂತರ ಕೆಲವು ಸೆಕೆಂಡ್‍‍ಗಳಲ್ಲಿ ಲೈವ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅಲ್ಲಿ GO LIVE ಎಂಬಲ್ಲಿ ಒತ್ತಿದ ನಂತರ ನಿಮ್ಮ ನೆಟ್‌ವರ್ಕ್ ವೇಗಕ್ಕೆ ಅನುಗುಣವಾಗಿ ವಿಡಿಯೊ ಲೈವ್ ಆಗುತ್ತದೆ. ವಿಡಿಯೊ ಲೈವ್ ಆಗುತ್ತಿರುವಾಗ ಸ್ಕ್ರೀನ್‍‍ನ ಎಡಭಾಗದಲ್ಲಿ LIVE ಎಂದು ಕಾಣಿಸುತ್ತಿರುತ್ತದೆ.!!

ಒಮ್ಮೆಲೆ ಯೂಟ್ಯೂಬ್, ಫೇಸ್‌ಬುಕ್ ಲೈವ್ ವಿಡಿಯೋ!!

ಒಮ್ಮೆಲೆ ಯೂಟ್ಯೂಬ್, ಫೇಸ್‌ಬುಕ್ ಲೈವ್ ವಿಡಿಯೋ!!

ಯೂಟ್ಯೂಬ್ ಮೂಲಕ ಲೈವ್ ವಿಡಿಯೊ ಅನ್ನು ನೀವು ಇತರೆ ಸಾಮಾಜಿಕ ಮಾಧ್ಯಮಗಳಲ್ಲೂ ಹಂಚಿಕೊಳ್ಳಬಹುದಾಗಿದ್ದು, ಸ್ಕ್ರೀನ್‍ನ ಬಲಭಾಗದಲ್ಲಿ ಕೆಳಗೆ ಕಾಣುವ ಮೂರು ಚುಕ್ಕೆಯ ಆಯ್ಕೆ ಮೇಲೆ ಒತ್ತಿ. ಇಲ್ಲಿ ಕಾಣುವ ಆಯ್ಕೆಗಳಲ್ಲಿ Share ಮೇಲೆ ಕ್ಲಿಕ್ ಮಾಡಿದರೆ ಹಲವು ಸಾಮಾಜಿಕ ಜಾಲತಾಣಗಳ ಆಯ್ಕೆ ಕಾಣಿಸುತ್ತದೆ.!!

ಎಲ್ಲೆಲ್ಲಿ ಶೇರ್ ಮಾಡಬಹುದು.!!

ಎಲ್ಲೆಲ್ಲಿ ಶೇರ್ ಮಾಡಬಹುದು.!!

ಫೇಸ್‌ಬುಕ್, ಟ್ವಿಟರ್, ವಾಟ್ಸ್ಆಪ್ ಮತ್ತು ಇ-ಮೇಲ್ ಸೇರಿದಂತೆ ಹಲವು ಶೇರಿಂಗ್ ಆಯ್ಕೆಗಳು ಯೂಟ್ಯೂಬ್ ಮೂಲಕ ಲೈವ್ ವಿಡಿಯೊ ಶೇರ್ ಮಾಡಲು ಕಾಣಸಿಗುತ್ತವೆ. ವಿಡಿಯೊ ಲೈವ್ ನಿಂತ ಬಳಿಕ ಎಷ್ಟು ಜನ ನಿಮ್ಮ ಲೈವ್ ವಿಡಿಯೊ ನೋಡಿದ್ದಾರೆ. ಎಷ್ಟು ಹೊತ್ತು ವಿಡಿಯೊ ಲೈವ್ ಆಗಿದೆ ಎಂಬ ಮಾಹಿತಿ ಸಹ ಕಾಣಿಸಸುತ್ತದೆ.!!

ವಿಡಿಯೊ ಲೈವ್ ನಿಲ್ಲಿಸುವುದು ಹೇಗೆ?

ವಿಡಿಯೊ ಲೈವ್ ನಿಲ್ಲಿಸುವುದು ಹೇಗೆ?

ವಿಡಿಯೋ ಲೈವ್ ಸೇವೆಯನ್ನು ನಿಲ್ಲಿಸಬೇಕು ಎಂದರೆ ವಿಡಿಯೋ ಲೈವ್ ಆಗುವಾಗಲೆ FINISH ಎಂಬ ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯನ್ನು ಒತ್ತಿ. ಈಗ ವಿಡಿಯೊ ಲೈವ್ ನಿಲ್ಲಿಸಲು ಸಮ್ಮತಿ ಇದೆಯೇ ಎಂಬ ಅನುಮತಿ ಕೇಳುತ್ತದೆ.. ಕೊನೆಗೆ ಕಾಣುವ Done ಎಂಬಲ್ಲಿ ಒತ್ತಿದರೆ ನಿಮ್ಮ ವಿಡಿಯೊ ಲೈವ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Best Mobiles in India

English summary
Go to YouTube.Open a new web browser tab or window, and go to YouTube.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+