ಕೇವಲ 10 ನಿಮಿಷದಲ್ಲಿ 'ಕಂಪ್ಯೂಟರ್' ವೇಗವನ್ನು 2 ಪಟ್ಟು ಹೆಚ್ಚಿಸಬಹುದು!!..ಹೇಗೆ ಗೊತ್ತಾ?

|

ಕಡಿಮೆ RAM ಮತ್ತು ಆಂತರಿಕ ಮೆಮೊರಿ, ಹಾರ್ಡ್ ಡ್ರೈವ್‌ನಲ್ಲಿ ಸಾಕಷ್ಟು ಸ್ಥಳ ಇಲ್ಲದಿರುವುದು ಅಥವಾ ದೋಷಪೂರಿತ ಹಾರ್ಡ್‌ಡ್ರೈವ್ ಹೀಗೆ ಸಾಕಷ್ಟು ಕಾರಣಗಳಿಂದ ಸಮಯ ಕಳೆದಂತೆ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಸ್ಲೋ ಆಗುವುದು ಸಹಜ. ಆರಂಭದಲ್ಲಿದ್ದಷ್ಟು ವೇಗದಲ್ಲಿ ಕೆಲಸ ಮಾಡುವ ಇವಿಗಳು ಕೆಲವೇ ತಿಂಗಳಿನಲ್ಲಿ ತಾಪತ್ರಯ ನೀಡಲು ಶುರುಮಾಡುತ್ತವೆ.

ಹೀಗೆ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಸ್ಲೋ ಆದರೆ, ಖಂಡಿತವಾಗಿಯೂ ಅವುಗಳ ಬಳಕೆ ಕಷ್ಟಕರ. ಹಾಗಂತ ಅವುಗಳನ್ನು ಕಂಪ್ಯೂಟರ್ ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಎಂದೇನಿಲ್ಲ. ಏಕೆಂದರೆ, ಕಂಪ್ಯೂಟರ್ ಸರ್ವಿಸ್ ಸೆಂಟರಿಗೆ ಹೋಗದೆ ನಾವೇ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮವಿಲ್ಲದೆ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ಗಳ ವೇಗವನ್ನು 2 ಪಟ್ಟು ಹೆಚ್ಚಿಸಬಹುದು.

ಕೇವಲ 10 ನಿಮಿಷದಲ್ಲಿ 'ಕಂಪ್ಯೂಟರ್' ವೇಗವನ್ನು 2 ಪಟ್ಟು ಹೆಚ್ಚಿಸಬಹುದು!!..ಹೇಗೆ?

ಕಡಿಮೆ ಆಂತರಿಕ ಮೆಮೊರಿ, ಹಾರ್ಡ್ ಡ್ರೈವ್‌ ತೊಂದರೆಗಳೇ ಅಥವಾ ವೈರಸ್ ಬಾಧೆಯೇ, ಹಿನ್ನೆಲೆಯಲ್ಲಿ ಸಾಕಷ್ಟು ಪ್ರೋಗ್ರಾಂಗಳು ರನ್ ಆಗುತ್ತಿವೆಯೇ ಎಂಬ ವಿಷಯಗಳನ್ನು ನಾವುಗಳೇ ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ 10 ನಿಮಿಷದಲ್ಲಿ ಕಂಪ್ಯೂಟರ್ ವೇಗವನ್ನು ಹೆಚ್ಚಿಸಲು ಉಪಯುಕ್ತ ಸಲಹೆಗನ್ನು ನಾವು ನಿಡುತ್ತಿದ್ದೇವೆ.

ಸ್ಟಾರ್ಟ್-ಅಪ್‌ ಪ್ರೋಗ್ರಾಂ.

ಸ್ಟಾರ್ಟ್-ಅಪ್‌ ಪ್ರೋಗ್ರಾಂ.

ನೀವು ಕಂಪ್ಯೂಟರ್ ಆನ್ ಮಾಡಿದಾಗ ಆರಂಭವಾಗುವ ಪ್ರೋಗ್ರಾಂಗಳು ನಿಮ್ಮ ಕಂಪ್ಯೂಟರ್ ನಿಧಾನ ಬೂಟ್ ಆಗಲು ಕಾರಣವಾಗಬಹುದು. Start > Start Up ಫೋಲ್ಡರ್‌ನಲ್ಲಿರಬಹುದಾದ ಈ ಪ್ರೋಗ್ರಾಂಗಳನ್ನು ಕನಿಷ್ಠ ಸಂಖ್ಯೆಯಲ್ಲಿಟ್ಟುಕೊಳ್ಳಿ. ಅಗತ್ಯವಿಲ್ಲದಿರುವುದನ್ನು ಡಿಸೇಬಲ್ ಮಾಡಿಬಿಡಿ. ಬೇಕಾಗಿರುವುದನ್ನು ಬೇಕಾದಾಗ ಮಾತ್ರ ತೆರೆಯಿರಿ.

ಸಿ ಡ್ರೈವ್‌ ಮತ್ತು ಡೆಸ್ಕ್‌ಟಾಪ್ ಕ್ಲೀನ್.

ಸಿ ಡ್ರೈವ್‌ ಮತ್ತು ಡೆಸ್ಕ್‌ಟಾಪ್ ಕ್ಲೀನ್.

ಸಿ ಡ್ರೈವ್‌ನಲ್ಲಿರುವ 'ಮೈ ಡಾಕ್ಯುಮೆಂಟ್ಸ್' ವಿಭಾಗದಲ್ಲಿರುವ ಎಲ್ಲಾ ಚಿತ್ರಗಳು, ಆಡಿಯೋ, ವೀಡಿಯೋ ಫೈಲ್‌ಗಳನ್ನು ಬೇರೆ ಡ್ರೈವ್‌ಗೆ ವರ್ಗಾಯಿಸಬೇಕು. ಸಿ ಡ್ರೈವ್ ಸಾಧ್ಯಲಿದ್ದಷ್ಟೂ ಖಾಲಿ ಇರಿಸಿಕೊಂಡರೆ ಸಿಸ್ಟಂ ಸ್ಲೋ ಆಗುವುದನ್ನು ತಡೆಯಬಹುದು. ಮತ್ತು ಎಲ್ಲವನ್ನೂ ಡೆಸ್ಕ್‌ಟಾಪ್‌ನಲ್ಲೇ ಇರಿಸಿಕೊಳ್ಳುವ ಅಭ್ಯಾಸ ಕೂಡ ತಪ್ಪು.

ಕುಕೀಗಳು ಮತ್ತು ಟೆಂಪರರಿ ಫೈಲ್‌ಗಳು.

ಕುಕೀಗಳು ಮತ್ತು ಟೆಂಪರರಿ ಫೈಲ್‌ಗಳು.

ನೀವು ಕಂಪ್ಯೂಟರ್‌ನಲ್ಲಿ ಬಳಸುತ್ತಿರುವ ಬ್ರೌಸರ್‌ನಲ್ಲಿ ನಿಯಮಿತವಾಗಿ ಕುಕೀಗಳು ಹಾಗೂ ಟೆಂಪರರಿ ಫೈಲ್‌ಗಳನ್ನು (cache) ಡಿಲೀಟ್ ಮಾಡುತ್ತಿರಬೇಕು. ಕ್ರೋಮ್ ಮತ್ತು ಫೈರ್‌ಫಾಕ್ಸ್‌ನಲ್ಲಿ ಶಿಫ್ಟ್+ಕಂಟ್ರೋಲ್+ಡಿಲೀಟ್ ಬಟನ್ ಒತ್ತಿ ಅವುಗಳನ್ನು ಡಿಲೀಟ್ ಮಾಬಹುದು. ಇಲ್ಲವಾದಲ್ಲಿ, ಈ ಕೆಲಸ ಸುಲಭವಾಗಿಸುವ CCleaner ಎಂಬ ಉಚಿತ ಆಪ್ ಕೂಡ ಲಭ್ಯವಿದೆ.

ಹಾರ್ಡ್ ಡಿಸ್ಕ್ ಕ್ಲೀನ್.

ಹಾರ್ಡ್ ಡಿಸ್ಕ್ ಕ್ಲೀನ್.

ನಿಮ್ಮ ಕಂಪ್ಯೂಟರ್‌ನ ಹಾರ್ಡ್ ಡಿಸ್ಕ್‌ನಲ್ಲಿ ಎಲ್ಲ ರೀತಿಯ ಜಂಕ್ ಫೈಲ್‌ಗಳೂ ಸೇರಿಕೊಳ್ಳುತ್ತಿರುತ್ತವೆ. ಇಲ್ಲಿ ಸ್ಥಳಾವಕಾಶ ಹೆಚ್ಚು ಮಾಡಿಸುವ ಸಲುವಾಗಿ ಕಣ್ಣಿಗೆ ಕಾಣಿಸುವ ಅನಗತ್ಯ ಫೈಲ್‌ಗಳನ್ನು ನೀವೇ ಡಿಲೀಟ್ ಮಾಡಬಹುದು. ಪ್ರೋಗ್ರಾಮ್ಸ್ > ಆಕ್ಸಸರೀಸ್ > ಸಿಸ್ಟಂ ಟೂಲ್ಸ್‌ನಲ್ಲಿರುವ ಡಿಸ್ಕ್ ಕ್ಲೀನಪ್ ಅನ್ನು ವಾರಕ್ಕೊಮ್ಮೆ ರನ್ ಮಾಡುತ್ತಿರಿ.

ಅನಗತ್ಯ ಪ್ರೋಗ್ರಾಂಗಳು.

ಅನಗತ್ಯ ಪ್ರೋಗ್ರಾಂಗಳು.

ಯಾವುದೇ ಕಂಪ್ಯುಟರ್ ಪ್ರೋಗ್ರಾಂ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗಲೇ, ಅದರ ಅಗತ್ಯ ಇದೆಯೇ ಎಂದು ಎರಡೆರಡು ಬಾರಿ ಯೋಚಿಸಿ. ನಿಮ್ಮ ಪಿಸಿಯಲ್ಲಿರುವ ಎಲ್ಲ ಪ್ರೋಗ್ರಾಂಗಳೂ ಉಪಯೋಗಕ್ಕೆ ಬರಲಾರವು. ಹಾಗಾಗಿ, ಉಪಯೋಗಕ್ಕೆ ಬರದಂತಹ ಪ್ರೋಗ್ರಾಂಗಳನ್ನು ಹುಡುಕಿ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿಬಿಡಿ.

ತಂತ್ರಾಂಶ ಅಪ್‌ಡೇಟ್ ಮಾಡಿ.

ತಂತ್ರಾಂಶ ಅಪ್‌ಡೇಟ್ ಮಾಡಿ.

ನೀವು ಬಳಸುತ್ತಿರುವ ತಂತ್ರಾಂಶವನ್ನು ಆ ಕಂಪೆನಿಯು ಆಗಾಗ್ಗೆ ಅಪ್‌ಡೇಟ್ ಮಾಡುತ್ತಿರುತ್ತದೆ. ಹಾಗಾಗಿ, ಕಂಪೆನಿ ಹೊಸದಾಗಿ ಬಿಡುಗಡೆ ಮಾಡುವ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾ ಇರುವುದರಿಂದ ಪಿಸಿಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ಮತ್ತು ವೇಗವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಬಹುದು.

ಅನಗತ್ಯ ಟೂಲ್‌ಬಾರ್‌.

ಅನಗತ್ಯ ಟೂಲ್‌ಬಾರ್‌.

ಯಾವುದೇ ಹೊಸ ತಂತ್ರಾಂಶ ಅಳವಡಿಸಿಕೊಳ್ಳುವಾಗ ವಿಭಿನ್ನ ಟೂಲ್‌ಬಾರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಪಾಪ್-ಅಪ್ ಸೂಚನೆಗಳು ಬರುತ್ತವೆ. ಏನೆಂದು ನೋಡದೆ ಎಲ್ಲದಕ್ಕೂ ‘ಓಕೆ' ಎಂದು ಕ್ಲಿಕ್ ಮಾಡಬೇಡಿ. ನಿಮಗೆ ತಿಳಿಯದೆಯೇ ಕೆಲವು ಟೂಲ್‌ಬಾರ್‌ಗಳು ಇನ್‌ಸ್ಟಾಲ್ ಆಗಿ, ಕಂಪ್ಯೂಟರನ್ನು ಸ್ಲೋ ಮಾಡಬಹುದು.

ಹಾರ್ಡ್ ಡಿಸ್ಕ್ ಡೀಫ್ರ್ಯಾಗ್ಮೆಂಟ್

ಹಾರ್ಡ್ ಡಿಸ್ಕ್ ಡೀಫ್ರ್ಯಾಗ್ಮೆಂಟ್

ಕಂಪ್ಯೂಟರ್‌ನಲ್ಲಿ ಸ್ಟಾರ್ಟ್ ಬಟನ್ ಒತ್ತಿದ ಬಳಿಕ ಪ್ರೋಗ್ರಾಮ್ಸ್‌ನಲ್ಲಿ, ಆಕ್ಸಸರೀಸ್ ಎಂಬಲ್ಲಿ, ಸಿಸ್ಟಂ ಟೂಲ್ಸ್ ಎಂಬ ಫೋಲ್ಡರ್ ಇರುತ್ತದೆ. ಅದರಲ್ಲಿರುವ ಡಿಸ್ಕ್ ಡೀಫ್ರ್ಯಾಗ್ಮೆಂಟರ್ ಎಂಬುದನ್ನು ಆಯ್ಕೆ ಮಾಡಿದರೆ, ಯಾವ ಡ್ರೈವ್ (ಸಿ, ಡಿ, ಇ, ಎಫ್ ಇತ್ಯಾದಿ) ಅನ್ನು ಆಯ್ಕೆ ಮಾಡಿಕೊಂಡು, ಚದುರಿಹೋದ ಸಿಸ್ಟಂ ಫೈಲ್‌ಗಳನ್ನು ವ್ಯವಸ್ಥಿತವಾಗಿರಿಸಿ.

ಆಪರೇಟಿಂಗ್

ಆಪರೇಟಿಂಗ್

ಆಪರೇಟಿಂಗ್ ಸಿಸ್ಟಂ ಅನ್ನು ರಿ ಇನ್‌ಸ್ಟಾಲ್ ಮಾಡಿಕೊಂಡರೆ ಕಂಪ್ಯೂಟರ್ ವೇಗವಾಗಿ ಕೆಲಸ ಮಾಡುತ್ತದೆ. ಇದು ಸ್ವಲ್ಪ ಸಂಕೀರ್ಣವಾಗಿರುವುದರಿಂದ ನುರಿತವರ ಸಲಹೆ ಪಡೆದುಕೊಳ್ಳಿ. ಫಾರ್ಮ್ಯಾಟ್ ಮಾಡಿ ನೂತನವಾಗಿ ಆಪರೇಟಿಂಗ್ ಸಿಸ್ಟಂ ಹಾಕಿಕೊಂಡರೆ, ಕಂಪ್ಯೂಟರ್‌ನ ತಂತ್ರಾಂಶವು ಹೊಚ್ಚ ಹೊಸದರಂತೆ ಆಗುತ್ತದೆ.

ಶಂಕಾಸ್ಪದ ವೆಬ್ ತಾಣಗಳು!

ಶಂಕಾಸ್ಪದ ವೆಬ್ ತಾಣಗಳು!

ಶಂಕಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇವುಗಳಿಂದ ವೈರಸ್ ಸಹಿತ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರನ್ನು ಪ್ರವೇಶಿಸಿಸಬಹುದು. ಹಾಗಾಗಿ, ಕಂಪ್ಯೂಟರನ್ನು ಒಳ್ಳೆಯ ಆಯಂಟಿವೈರಸ್ ಮೂಲಕ ಸ್ಕ್ಯಾನ್ ಮಾಡಿಸಿಕೊಳ್ಳಬೇಕು. ಇದರಿಂದಲೂ ಕಂಪ್ಯೂಟರ್ ನಿಧಾನವಾಗುವುದನ್ನು ತಡೆಯಬಹುದು.

Most Read Articles
Best Mobiles in India

English summary
Run a Disk Cleanup. This can clean up hundreds of megabytes by deleting temporary files, unnecessary system files, and emptying your recycling bin.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more