ನಿಮ್ಮ ಗೂಗಲ್ ವಾಯ್ಸ್ ಮತ್ತು ಆಡಿಯೋ ಆಕ್ಟಿವಿಟಿಯನ್ನು ಮ್ಯಾನೇಜ್ ಮಾಡುವುದು ಹೇಗೆ?
ಗೂಗಲ್ ನಮ್ಮ ವಾಯ್ಸ್ ಮತ್ತು ಆಡಿಯೋ ಸರ್ಚ್ ಗಳನ್ನು ರೆಕಾರ್ಡ್ ಮಾಡುತ್ತದೆ, ನಾವು "ಮೈ ಆಕ್ಟಿವಿಟಿ ಪೇಜ್" ನಲ್ಲಿ ಇದನ್ನು ಡಿಲೀಟ್ ಮಾಡಬಹುದಲ್ಲದೆ ಬೇರೆ ಸೆಟ್ಟಿಂಗ್ ಗಳನ್ನು ಮ್ಯಾನೇಜ್ ಮಾಡಬಹುದು
ಗೂಗಲ್ ನಮ್ಮ ಸರ್ಚ್ ರೆಕಾರ್ಡ್ಗಳನ್ನು ಜಾಹೀರಾತು ಮಾರಾಟದ ಸಲುವಾಗಿ ತೆಗೆದಿರಿಸುತ್ತದೆ ಎನ್ನುವುದು ನಮಗೆ ತಿಳಿದೇ ಇದೆ. ಆದರೆ ಗೂಗಲ್ ನಮ್ಮ ವಾಯ್ಸ್ ಸರ್ಚ್ ಗಳನ್ನೂ ರೆಕಾರ್ಡ್ ಮಾಡುತ್ತದೆ ಎನ್ನುವುದು ನಿಮಗೆ ತಿಳಿದಿದೆಯೇ? ಕೆಲವು ವರ್ಷಗಳ ಹಿಂದೆ ಗೂಗಲ್ ನಮ್ಮ ಗೂಗಲ್ ಖಾತೆ ಸಂಬಂಧಿತ ಚಟುವಟಿಕೆಗಳನ್ನು ನಿಭಾಯಿಸಲೆಂದೇ ಹೊಸ ಪೋರ್ಟಲ್ ಒಂದನ್ನು ಲಾಂಚ್ ಮಾಡಿತ್ತು.

ಈ ಪೋರ್ಟಲ್ನಲ್ಲಿ ನೀವು ನಿಮ್ಮ ಪ್ರೈವೆಸಿ ಸೆಟ್ಟಿಂಗ್ ಗಳನ್ನು ಮ್ಯಾನೇಜ್ ಮಾಡಬಹುದಲ್ಲದೆ ,ನೀವು ಗೂಗಲ್ ನಲ್ಲಿ ಏನೆಲ್ಲಾ ಹುಡುಕಿದ್ದೀರಿ , ಗೂಗಲ್ ನಿಮ್ಮ ಯಾವೆಲ್ಲಾ ಲೊಕೇಶನ್ ಗಳನ್ನು ಲಾಗ್ ಮಾಡಿದೆ ಮುಂತಾದ ವಿಷಯಗಳನ್ನೂ ತಿಳಿದುಕೊಳ್ಳಬಹುದು.
ನೀವು ನಿಮ್ಮ ಗೂಗಲ್ ನ ವಾಯ್ಸ್ ಮತ್ತು ಆಡಿಯೋ ಚಟುವಟಿಕೆಗಳ ಪುಟಕ್ಕೆ ಹೋಗ ಬಯಸಿದರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ( https://history.google.com/history/audio).ಇದನ್ನು ತೆರೆಯಲು ನೀವು ನಿಮ್ಮ ಗೂಗಲ್ ಖಾತೆಗೆ ಸೈನ್-ಇನ್ ಮಾಡಿರಬೇಕು. ಒಂದು ವೇಳೆ ನೀವು ನಿಮ್ಮ " ಮೈ ಆಕ್ಟಿವಿಟಿ ಪೇಜ್" ನಲ್ಲಿದ್ದರೆ, ಆ ಪುಟದ ಮೇಲ್ಭಾಗದಲ್ಲಿ ಎಡ ಬದಿಯಲ್ಲಿರುವ 3 ಗೆರೆಗಳ ಮೆನು ಮೇಲೆ ಕ್ಲಿಕ್ ಮಾಡಿ "ವಾಯ್ಸ್ ಆಂಡ್ ಆಡಿಯೋ ಆಕ್ಟಿವಿಟಿ" ಅನ್ನು ಆಯ್ಕೆ ಮಾಡಿ.

ನಂತರ ನೀವು ನಿಮ್ಮ ಸಂಪೂರ್ಣ ಸರ್ಚ್ ಹಿಸ್ಟರಿ ಅಥವಾ ಬೇಕಾದ ಕೆಲವು ಸರ್ಚ್ ಐಟಮ್ ಗಳನ್ನು ಈ ಕೆಳಗಿನಂತೆ ಡಿಲೀಟ್ ಮಾಡಬಹುದು
ಹಂತ 1: ಪುಟದ ಮೇಲ್ಭಾಗದ ಬಲ ಬದಿಯಲ್ಲಿರುವ ಮೂರು ಚುಕ್ಕೆಗಳ ಮೆನು ಮೇಲೆ ಕ್ಲಿಕ್ ಮಾಡಿ
ಹಂತ 2: "ಡಿಲೀಟ್" ಅನ್ನು ಆಯ್ಕೆಮಾಡಿ
ಹಂತ 3: "ಅಡ್ವಾನ್ಸ್ಡ್" ಮೇಲೆ ಕ್ಲಿಕ್ ಮಾಡಿ
ಹಂತ 4: "ಆಲ್ ಟೈಮ್" ಅನ್ನು ಆಯ್ಕೆ ಮಾಡಿ
ಹಂತ 5: ಡಿಲೀಟ್ ಮೇಲೆ ಕ್ಲಿಕ್ ಮಾಡಿ

ಭವಿಷ್ಯದಲ್ಲಿ ಗೂಗಲ್ ನಿಮ್ಮ ವಾಯ್ಸ್ ಮತ್ತು ಆಡಿಯೋ ಸರ್ಚ್ ಗಳನ್ನು ಸೇವ್ ಮಾಡುವುದನ್ನು ತಪ್ಪಿಸಲು ಹೀಗೆ ಮಾಡಿ
ಹಂತ 1: ಈ ಕೆಳಗಿನ ಲಿಂಕ್ ಒತ್ತುವ ಮೂಲಕ ನಿಮ್ಮ ಆಡಿಯೋ ಕಂಟ್ರೋಲ್ಸ್ ಪುಟಕ್ಕೆ ಹೋಗಿ
"https://www.google.com/settings/accounthistory/audio"
ಹಂತ 2: ಇಲ್ಲಿ ಕಾಣಸಿಗುವ ಸ್ವಿಚ್ ಅನ್ನು " ಆಫ್ " ಗೆ ಸ್ಲೈಡ್ ಮಾಡಿ
ನಿಮಗೆ ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ "ಶೋ ಮೋರ್ ಕಂಟ್ರೋಲ್ಸ್" ಮೇಲೆ ಕ್ಲಿಕ್ ಮಾಡುವ ಮೂಲಕ ಹಲವಾರು ಇತರ ಸೆಟ್ಟಿಂಗ್ ಗಳನ್ನು ಕಾಣಿರಿ.


Click it and Unblock the Notifications








