Home
ಟೆಕ್ ನೌಕರಿ

ಜಿಮೇಲ್ ಸ್ಟೋರೇಜ್ ನಿಭಾಯಿಸುವುದು ಹೇಗೆ ಗೊತ್ತಾ..?

By Gizbot Bureau

ಇಂದಿನ ದಿನಗಳಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಇ-ಮೇಲ್ ಸೇವೆ ಅಂದರೆ ಅದು ಜಿ-ಮೇಲ್ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಬಳಕೆದಾರ ಸ್ನೇಹಿ ಆಗಿದೆ ಮತ್ತು ಹಲವಾರು ಮೋಡ್ ಗಳು ಮತ್ತು ವೈಶಿಷ್ಟ್ಯ ತೆಗಳಿಂದ ಕೂಡಿದೆ. ಇದು ಬಹಳ ಪ್ರಯೋಜನಕಾರಿಯಾದ ಮತ್ತು ತುಂಬಾ ಸಹಕಾರಿಯಾಗಿರುವ ಸೇವೆಗಳಲ್ಲಿ ಒಂದಾಗಿದೆ. ಆದರೆ ಪ್ರತಿಯೊಬ್ಬರೂ ದೂರುವ ಒಂದು ಸಮಸ್ಯೆಯೆಂದರೆ ಸ್ಟೋರೇಜ್ ನ್ನು ಮ್ಯಾನೇಜ್ ಮಾಡುವುದು ಕಷ್ಟ ಎಂಬುದೇ ಆಗಿದೆ.

15ಜಿಬಿ ಸ್ಟೋರೇಜ್ ಬಳಸಲು ಜಿಮೇಲ್‌ ಅವಕಾಶ ನೀಡುತ್ತದೆ ಮತ್ತು ಅದರ ಟ್ರ್ಯಾಕ್ ಇಟ್ಟುಕೊಳ್ಳುವುದು ಬಳಕೆದಾರನಿಗೆ ಕಷ್ಟವೂ ಹೌದು. 15ಜಿಬಿಯ ನಂತರದ ಸ್ಟೋರೇಜ್ ಬಳಕೆಗೆ‌ ಗೂಗಲ್ ನಮ್ಮ ಬಳಿ ಹಣ ಪಾವತಿಸುವಂತೆ ಹೇಳುತ್ತದೆ.ಆದರೆ ಒಂದು ವೇಳೆ ನೀವು ಇಂತಹ ಸನ್ನಿವೇಶವನ್ನು ಎದುರಿಸುತ್ತಿದ್ದರೆ, ಈ ಲೇಖನವನ್ನು ಒಮ್ಮೆ ಪೂರ್ತಿ ಓದಿ. ನಾವಿಲ್ಲಿ ನಿಯಂತ್ರಿತ ಸ್ಟೋರೇಜ್ ನ್ನು ಬಳಕೆ‌ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡುತ್ತಿದ್ದೇವೆ.

ಜಿಮೇಲ್ ಸ್ಟೋರೇಜ್ ನಿಭಾಯಿಸುವುದು ಹೇಗೆ ಗೊತ್ತಾ..?

ಹಂತ 1: ಜಿಮೇಲ್ ನ್ನು ತೆರೆಯಿರಿ

ಹಂತ 2 : ಬಟನ್ ನ್ನು ಸ್ಕ್ರೋಲ್ ಡೌನ್ ಮಾಡಿ. ನೀವೆಷ್ಟು ಸ್ಟೋರೇಜ್ ಬಳಸಿದ್ದೀರಿ ಎಂಬುದು ಅಲ್ಲಿ ತಿಳಿಯಲಿದೆ. ಅದರ ಕೆಳಗೆ ಬರೆದಿರುವ ಮ್ಯಾನೇಜ್ ಬಟನ್ ನ್ನು ಕ್ಲಿಕ್ಕಿಸಿ.

ಹಂತ 3: ಇದನ್ನ ಕ್ಲಿಕ್ಕಿಸುವುದರಿಂದಾಗಿ ನೀವು ಡ್ರೈವ್ ಸ್ಟೋರೇಜ್ ಅನ್ನೋ ಪೇಜಿಗೆ ತರರಳುತ್ತೀರಿ. ಇಲ್ಲಿ ನೀವು ಒಂದು ಪೈ ಚಾರ್ಟ್ ನ್ನು ಗಮನಿಸಬಹುದು ಮತ್ತು ನೀವೆಷ್ಟು ಸ್ಟೋರೇಜ್ ಬಳಸಿದ್ದೀರಿ ಜೊತೆಗೆ ಹೆಚ್ಚುವರಿ ಸ್ಟೋರೇಜ್ ಖರೀದಿಸಲು ಇರುವ ಬೇರೆಬೇರೆ ಅವಕಾಶಗಳನ್ನೂ ನಮೂದಿಸಲಾಗಿರುತ್ತದೆ.

ಹಂತ 4: ಪೇ ಚಾರ್ಟ್ ನ ಕೆಳಗೆ ಇರುವ ವ್ಯೂ ಡೀಟೇಲ್ಸ್ ನ್ನು ಕ್ಲಿಕ್ಕಿಸಿ.

ಹಂತ 5: ಇದನ್ನು ಮಾಡುವುದರಿಂದಾಗಿ ನೀವು ಗೂಗಲ್ ಡ್ರೈವ್, ಜಿಮೇಲ್ ಮತ್ತು ಫೋಟೋಸ್ ನಲ್ಲಿ ಖಚಿತವಾಗಿ ಎಷ್ಟು ಸ್ಟೋರೇಜ್ ಬಳಸಿದ್ದೀರಿ ಎಂಬುದು ತಿಳಿಯುತ್ತದೆ.

ಹಂತ 6: ಲರ್ನ್ ಮೋರ್ ಆಯ್ಕೆಯನ್ನು ಒತ್ತಿ

ಹಂತ 7: ಇದು ನಿಮ್ಮನ್ನ ಗೂಗಲ್ ಡ್ರೈವ್ ಹೆಲ್ಪ್ ಪೇಜಿಗೆ ಕರೆದುಕೊಂಡು ಹೋಗುತ್ತದೆ. ಇಲ್ಲಿ ನೀವು ನಿಮ್ಮ ಸ್ಟೋರೇಜ್ ನ್ನು ಹೇಗೆ ಮ್ಯಾನೇಜ್ ಮಾಡಬೇಕು ಎಂಬ ಬಗ್ಗೆ ಸಾಕಷ್ಟು ಸಲಹೆ ಸೂಚನೆಗಳನ್ನ ಗಮನಿಸಬಹುದು.

ಹಂತ 8: ಒಂದು ವೇಳೆ ನಿಮ್ಮ ತ್ರ್ಯಾಷ್ ನಲ್ಲಿ ಸಾಕಷ್ಟು ಐಟಂಗಳಿದ್ದಲ್ಲಿ ಆಗ ಡ್ರೈವ್.ಗೂಗಲ್.ಕಾಮ್ ಗೆ ತೆರಳಿ. ಇದಾದ ನಂತರ ಎಡಬದಿಯಲ್ಲಿರು ತ್ರ್ಯಾಷ್ ನ್ನು ಕ್ಲಿಕ್ ಮಾಡಿ. ತ್ರ್ಯಾಷ್ ನಲ್ಲಿರುವ ಯಾವುದೇ ಫೈಲ್ ಗಳು ನಿಮಗೆ ಅಗತ್ಯವಿಲ್ಲ, ಯಾವುದನ್ನೂ ರಿಕವರ್ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಖಾತ್ರಿ ಪಡಿಸಿಕೊಂಡ ನಂತರ ಎಮ್ಟಿ ತ್ರ್ಯಾಷ್ ನ್ನು ಕ್ಲಿಕ್ಕಿಸಿ.

ಹಂತ 9: ಗೂಗಲ್ ಡ್ರೈವ್ ಹೆಲ್ಪ್ ನ 'ಆಪ್ಶನ್1:ಕ್ಲಿಯರ್ ಸ್ಪೇಸ್' ವಿಭಾಗದಲ್ಲಿ ಒಂದು ಲಿಂಕ್ ಇದೆ. ಅದರಲ್ಲಿ ನಿಮ್ಮ ಯಾವ ಫೈಲ್ ಅತೀ ಹೆಚ್ಚು ಜಾಗವನ್ನು ತೆಗೆದುಕೊಂಡಿದೆ ಎಂಬುದರ ಮಾಹಿತಿ ಸಿಗುತ್ತದೆ.ಇದನ್ನು ಗಮನಿಸಿದ ನಂತರ ನಿಮಗೆ ಅವುಗಳಲ್ಲಿ ಯಾವುದಾದರೂ ಫೈಲ್ ಅಗತ್ಯವಿಲ್ಲದಿದ್ದರೆ ಅದನ್ನು ಡಿಲೀಟ್ ಮಾಡಬಹುದು

ಹಂತ10:
ಒಂದು ವೇಳೆ ನಿಮ್ಮ ಫೋಟೊ ಅತೀ ಹೆಚ್ಚು ಸ್ಟೋರೇಜ್ ತೆಗೆದುಕೊಂಡಿದ್ದರೆ ಆಗ ಗೂಗಲ್ ಡ್ರೈವ್ ಹೆಲ್ಪ್ ನಲ್ಲಿ "ಲರ್ನ್‌ಮೋರ್ ಅಬೌಟ್ ಫೋಟೋಸ್ " ‌ಗೆ ತೆರಳಿ. ಆಗ ನೀವೊಂದು ಹೊಸ ಪೇಜ್ ಗೆ ತೆರಳುತ್ತೀರಿ ಮತ್ತು ಅಲ್ಲಿ ನಿಮಗೆ ಫೋಟೋ ಗುಣಮಟ್ಟವನ್ನು ಬದಲಿಸಲು ಅವಕಾಶ ನೀಡಲಾಗುತ್ತದೆ.

ಹಂತ 11: ಜಿಮೇಲ್ ನ ತ್ರ್ಯಾಷ್ ಮತ್ತು ಸ್ಪ್ಯಾಮ್ ಫೋಲ್ಡರ್ ನ್ನು ಖಾಲಿ ಮಾಡಿ ಯಾಕೆಂದರೆ ಅವುಗಳೆ ನಿಮ್ಮ ಹೆಚ್ಚು ಜಾಗವನ್ನು ತಿನ್ನುತ್ತವೆ ಮತ್ತು ಯಾವಾಗಲೂ ನಿಮ್ಮ ಜಿಮೇಲ್ ನಿಂದ ಅನಗತ್ಯವಾಗಿರುವ ಜಿಮೇಲ್ ನ್ನು ಡಿಲೀಟ್ ಮಾಡುತ್ತಾ ಇರುವುದು ಬಹಳ ಒಳ್ಳೆಯದು.

Best Mobiles in India

English summary
How to manage storage on Gmail. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+