Home
ಟೆಕ್ ನೌಕರಿ

ಫೋನ್‌ಪೇ ಬಳಕೆದಾರರೇ ನಿಮಗಿದು ಗೊತ್ತೆ? UPI ವ್ಯವಸ್ಥೆ ಕಾರ್ಯನಿರ್ವಹಣೆ ಬಗ್ಗೆ ಇಲ್ಲಿದೆ ಮಾಹಿತಿ!

ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟುಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಭಾರತದಲ್ಲಿ UPI ವಹಿವಾಟು ಯಶಸ್ವಿಯಾಗಲಿದೆಯಾ ಅಂತಾ ಚರ್ಚೆಯಾಗ್ತಿದ್ದ UPI ಇದೀಗ ಭಾರತದಲ್ಲಿ ರಸ್ತೆ ಬದಿ ವ್ಯಾಪಾರಿಯಿಂದ ಹಿಡಿದು ಎಲ್ಲೆಡೆ ವ್ಯಾಪಕವಾಗಿ ಬಳಕೆಯಾಗ್ತಿದೆ. ಆಟೋ ರಿಕ್ಷಾದಿಂದ ಹಿಡಿದು ನಿಮ್ಮ ಸ್ಥಳೀಯ ಜನರಲ್ ಸ್ಟೋರ್‌ನಲ್ಲಿಯು ಕೂಡ UPI ವಹಿವಾಟುಗಳನ್ನು ಕಾಣಬಹುದಾಗಿದೆ.

ಹೌದು, UPI ವ್ಯವಸ್ಥೆ ನಮ್ಮ ಹಣಕಾಸು ವಹಿವಾಟಿನ ದಿಕ್ಕನ್ನೇ ಬದಲಾಯಿಸಿದೆ. ಕ್ಯಾಶ್‌ಲೆಸ್‌ ಇಂಡಿಯಾದ ಪರಿಕಲ್ಪನೆಯನ್ನು ಬಹುಪಾಲು ಯಶಸ್ವಿಗೊಳಿಸಿದೆ. ಆದರೆ ಇಷ್ಟೆಲ್ಲಾ ಪರಿಣಾಮಕಾರಿಯಾಗಿರುವ UPI ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಾದ್ರೆ UPI ವಹಿವಾಟು ಹೇಗೆ ನಡೆಯಲಿದೆ? ಇದರ ಕಾರ್ಯವ್ಯಾಪ್ತಿ ವಿಧಾನ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ಪೇ ಬಳಕೆದಾರರೇ ನಿಮಗಿದು ಗೊತ್ತೆ? UPI ವ್ಯವಸ್ಥೆ ಬಗ್ಗೆ ಇಲ್ಲಿದೆ ಮಾಹಿತಿ!

UPI ಎಂದರೇನು?
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI ) ಅಂದರೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ ವ್ಯವಸ್ಥೆಯಾಗಿದೆ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ನಿಯಂತ್ರಿಸಲ್ಪಡಲಾಗುತ್ತದೆ. ಇದು ಬಳಕೆದಾರರಿಗೆ ತಮ್ಮ ಫೋನ್ ಸಂಖ್ಯೆಗಳು ಅಥವಾ UPI ID ಗಳ ಮೂಲಕ ತ್ವರಿತವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅವಕಾಶ ನೀಡಲಿದೆ. ಇನ್ನು ಯುಪಿಐ ವಿಧಾನವು NEFT ಮತ್ತು IMPS ನಂತಹ ಪಾವತಿ ವಿಧಾನಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದೆ.

ಇನ್ನು ಭಾರತದಲ್ಲಿ ಯುಪಿಐ ವ್ಯವಸ್ಥೆ ಸಂಪೂರ್ಣವಾಗಿ ಉಚಿತವಾಗಿರುವುದರಿಂದ ಸಾಕಷ್ಟು ಯಶಸ್ವಿಯಾಗಿದೆ. ನೀವು ಹಣ ಪಾವತಿಸುವುದಕ್ಕೆ NPCI ಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾದ ಅನಿವಾರ್ಯತೆಯಿಲ್ಲದಿರುವುದು ಇದರ ಯಶಸ್ಸಿಗೆ ಕಾರಣವಾಗಿದೆ. ಅಲ್ಲದೆ ನೀವು ಯುಪಿಐ ಪಾವತಿ ವ್ಯವಸ್ಥೆಗಳಾದ ಫೋನ್‌ಪೇ, ಗೂಗಲ್‌ ಪೇ ಮೂಲಕ ಯಾವುದೇ ಸಮಯದಲ್ಲಿ ಹಣವನ್ನು ವರ್ಗಾಯಿಸಬಹುದು. ಸ್ಥಳೀಯ ಅಂಗಡಿಗಳಲ್ಲಿ ಸಣ್ಣ ಪಾವತಿಗಳನ್ನು ಮಾಡಲು ಕೂಡ ನೀವು UPI ಅನ್ನು ಬಳಸಬಹುದು.

UPI ಹೇಗೆ ಕೆಲಸ ಮಾಡುತ್ತದೆ?
ಯುಪಿಐ ಕೆಲಸ ಮಾಡುವ ವಿಧಾನ ತುಂಬಾ ಸರಳವಾಗಿದೆ. ಇದಕ್ಕಾಗಿ ನೀವು ನಿಮ್ಮ ಫೋನ್‌ನಲ್ಲಿ UPI-ಸಕ್ರಿಯಗೊಳಿಸಿದ ಫೋನ್‌ಪೇ ಗೂಗಲ್‌ಪೇ, ಪೇಟಿಎಂ ನಂತಹ ಅಪ್ಲಿಕೇಶನ್ ಹೊಂದಿರಬೇಕು. ಈ ಅಪ್ಲಿಕೇಶನ್‌ಗಳಿಗೆ ನಿಮ್ಮ ಬ್ಯಾಂಕ್ ಖಾತೆಗಳು ಅಥವಾ ವ್ಯಾಲೆಟ್‌ಗಳನ್ನು ಲಿಂಕ್ ಮಾಡಬಹುದು. ನಂತರ, ನಿಮ್ಮ ಖಾತೆಯ ವಿವರಗಳು ಅಥವಾ IFSC ಕೋಡ್‌ಗಳನ್ನು ಶೇರ್‌ ಮಾಡದೆಯೇ ಹಣವನ್ನು ಸೆಂಡ್‌ ಮಾಡುವ ಅಥವಾ ಹಣವನ್ನು ಸ್ವೀಕರಿಸುವ ಕೆಲಸ ಮಾಡಬಹುದಾಗಿದೆ. ಇದಕ್ಕಾಗಿ UPI ಪುಶ್ ಮತ್ತು ಪುಲ್ ಕಾರ್ಯವಿಧಾನವನ್ನು ಬಳಸುತ್ತದೆ.

ಪ್ರತಿ UPI ಅಪ್ಲಿಕೇಶನ್ ವಿಭಿನ್ನ UPI ಐಡಿಯನ್ನು ಏಕೆ ಹೊಂದಿಸುತ್ತದೆ?
ವಿಭಿನ್ನ ಯುಪಿಐ ಪಾವತಿ ಅಪ್ಲಿಕೇಶನ್‌ಗಳು ನಿಮಗಾಗಿ ವಿಭಿನ್ನ UPI ಐಡಿಗಳನ್ನು ನೀಡಲಿವೆ. ಏಕೆಂದರೆ ಗ್ರಾಹಕರ ವಹಿವಾಟುಗಳನ್ನು ನಿರ್ವಹಿಸಲು ವಿವಿಧ ಅಪ್ಲಿಕೇಶನ್‌ಗಳು ವಿಭಿನ್ನ ಬ್ಯಾಂಕ್‌ಗಳನ್ನು ಬಳಸುತ್ತವೆ. ಆದರಿಂದ ನೀವು ಖಾತೆಯನ್ನು ಲಿಂಕ್ ಮಾಡಿರುವ ಬ್ಯಾಂಕ್ ಅನ್ನು ಅವಲಂಬಿಸಿ ನಿಮ್ಮ UPI ಐಡಿ ಬದಲಾಗಲಿದೆ.

UPI ವಹಿವಾಟುಗಳು ಎಷ್ಟು ಸುರಕ್ಷಿತ?
UPI ವಹಿವಾಟುಗಳು RBI ಸ್ಥಾಪಿಸಿದ ಕಟ್ಟುನಿಟ್ಟಾದ ನಿಯಂತ್ರಕ ಕ್ರಮಗಳಿಂದ ಬೆಂಬಲಿತವಾಗಿದೆ. ಆದ್ದರಿಂದ ನಿಮ್ಮ ಹಣ ಅಥವಾ ನಿಮ್ಮ ಡೇಟಾದ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆಯಿಲ್ಲ. ಅಲ್ಲದೆ UPI ವಹಿವಾಟುಗಳನ್ನು TLS, AES ಮತ್ತು PKI ನಂತಹ ಸುಧಾರಿತ ಎನ್‌ಕ್ರಿಪ್ಶನ್ ಪ್ರೋಟೋಕಾಲ್‌ಗಳಿಂದ ರಕ್ಷಿಸಲಾಗಿದೆ. ಇದಲ್ಲದೆ UPI ಕೂಡ ಹಲವು ಹೊಸ ಮಾದರಿಯ ಅಪ್ಡೇಟ್‌ಗಳನ್ನು ಪಡೆದುಕೊಳ್ಳುತ್ತಿರುವುದರಿಂದ ಇದು ಇನ್ನು ಹೆಚ್ಚು ಬಳಕೆದಾರ ಸ್ನೇಹಿಯಾಗಿರಲಿದೆ ಎಂದು ಹೇಳಲಾಗಿದೆ.

Best Mobiles in India

English summary
How many of us actually know how Phonepe works? Are UPI transactions safe?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+