ನೀವು ತಿನ್ನುವ ಶೈಲಿಯನ್ನು ಬದಲಿಸುವುದಕ್ಕೆ ಮೆಕ್ ಡೊನಾಲ್ಡ್ ಪ್ಲಾನ್ ಹೇಗಿದೆ ಗೊತ್ತಾ?
ತಂತ್ರಜ್ಞಾನವು ಕಳೆದ ಕೆಲವು ದಿನಗಳಲ್ಲಿ ಆಹಾರ, ಆತಿಥ್ಯ ಮತ್ತು ರೆಸ್ಟೋರೆಂಟ್ ಬ್ಯುಸಿನೆಸ್ ಗಳ ಮೇಲೆ ಅತಿಕ್ರಮಣ ಮಾಡಿಬಿಟ್ಟಿದೆ. ಮೊದಲಿಗಿಂತಲೂ ಇದೀಗ ಆಹಾರವನ್ನು ಆರ್ಡರ್ ಮಾಡುವುದು, ಹೊಟೆಲ್ ಬುಕ್ಕಿಂಗ್ ಮಾಡುವುದು ಇತ್ಯಾದಿಗಳು ಬಹಳ ಸುಲಭವಾಗಿಬಿಟ್ಟಿದೆ. ಆದರೆ ಇದೀಗ ಮೆಕ್ ಡೊನಾಲ್ಡ್ ಜನರು ತಿನ್ನುವ ಶೈಲಿಯನ್ನು ಬದಲಾಯಿಸುವುದಕ್ಕೆ ಮುಂದಾಗುತ್ತಿದೆ.

ಬ್ಲೂಮ್ ಬರ್ಗ್ ನ ವರದಿಯ ಪ್ರಕಾರ ಮೆಕ್ಡಾನಾಲ್ಡ್ 300 ಮಿಲಿಯನ್ ಡಾಲರ್ ಗೆ ಡೈನಾಮಿಕ್ ಇಳುವರಿ ಕಂಪೆನಿ “ಡಿಸಿಷನ್ ಲಾಜಿಕ್”ಟೆಕ್ನಾಲಜಿ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ.
ಬ್ಲೂಮ್ ಬರ್ಗ್ ವರದಿ ಹೇಳುವ ಪ್ರಕಾರ “ ಹೊಸ ತಂತ್ರಜ್ಞಾನದಿಂದಾಗಿ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಗಳು ತನ್ನ ಎಲೆಕ್ಟ್ರಾನಿಕ್ ಮೆನು ಬೋರ್ಡ್ ನ್ನು ಬೇರೆಬೇರೆ ರೀತಿಯಲ್ಲಿ ಬದಲಿಸಬಹುದು. ವಸ್ತುಗಳ ಡಿಸ್ಪ್ಲೇಯನ್ನು ಬೇರೆಬೇರೆ ಅಂಶಗಳನ್ನು ಆಧರಿಸಿ ನೀಡಬಹುದು ಉದಾಹರಣೆಗೆ ಹವಾಮಾನ. ತಣ್ಣನೆಯ ವಾತಾವರಣದ ಸಮಯದಲ್ಲಿ ಹೆಚ್ಚು ಕಾಫಿ, ಬೇಸಿಗೆಯ ಸಮಯದಲ್ಲಿ ಹೆಚ್ಚು ಮೆಕ್ಫ್ಲೂರೀಸ್ ಗಳು. ಮೆನುವಿನಲ್ಲಿ ಆಡ್ ಆನ್ ಐಟಂಗಳನ್ನು ಕೂಡ ಗ್ರಾಹಕರಿಗೆ ಸಲಹೆ ನೀಡುತ್ತದೆ.
ಹೊಸ ತಂತ್ರಗಾರಿಕೆಯಿಂದಾಗಿ ಮೆಕ್ ಡೊನಾಲ್ಡ್ ನ ಗ್ರಾಹಕರು ತಮ್ಮ ಡಿನ್ನರ್ ಗೆ ಬಹಳ ವಯಕ್ತಿಕ ಅನುಭವವನ್ನು ನೀಡಬಹುದು. ಕಳೆದ ಕೆಲವು ವರ್ಷಗಳಲ್ಲಿ ಮೆಕ್ ಡೊನಾಲ್ಡ್ ಸಾಕಷ್ಟು ತಾಂತ್ರಿಕ ಅಭಿವೃದ್ಧಿಯನ್ನು ನೀಡಿದೆ. ಈ ತಂತ್ರಗಾರಿಕೆಯ ಪ್ರಭಾವವನ್ನು ನಾವು ಸೆಲ್ಫ್ ಆರ್ಡರ್ ಗಳು, ಡಿಜಿಟಲ್ ಮೆನುಗಳು ಮತ್ತು ಡೆಲಿವರಿ ಆಯ್ಕೆಗಳಲ್ಲಿ ಗಮನಿಸಬಹುದಾಗಿದೆ. ಹೇಗೆ ಮತ್ತು ಯಾವಾಗ ಈ ಮೆಕ್ ಡೊನಾಲ್ಡ್ ನ ಹೊಸ ಅತಿಕ್ರಮಣವು ನಡೆಯುತ್ತದೆ ಮತ್ತು ವಿಶ್ವದಾದ್ಯಂತ ತನ್ನ ಔಟ್ ಲೆಟ್ ಗಳಲ್ಲಿ ಯಾವಾಗ ಅದು ಪ್ರತಿಫಲಿಸುತ್ತದೆ ಎಂಬುದರ ಬಗ್ಗೆಯೂ ಬ್ಲೂಮ್ ಬರ್ಗ್ ವರದಿ ತಿಳಿಸಿದೆ.
ಯುಎಸ್ ನಲ್ಲಿ ಮೊದಲ ಬಾರಿಗೆ 2018 ರಲ್ಲಿ ಈ ತಂತ್ರಗಾರಿಕೆಯನ್ನು ಮೆಕ್ ಡೊನಾಲ್ಡ್ ಪರೀಕ್ಷಿಸಿದೆ. ಮೆಕ್ ಡೊನಾಲ್ಡ್ ಮತ್ತು ಡೈನಾಮಿಕ್ ಈಲ್ಡ್ ನಡುವೆ ಅಧಿಕೃತವಾಗಿ ಈ ಡೀಲ್ ಅಂತಿಮಗೊಂಡ ಕೂಡಲೇ .ಜಗತ್ತಿನಾದ್ಯಂತ ಹಹೊಸ ಮೆನುವನ್ನು ಪರಿಚಯಿಸಲಾಗುತ್ತದೆ ಎಂದು ಇದು ತಿಳಿಸಿದೆ.
ಈ ವರ್ಷಾಂತ್ಯದಲ್ಲಿ ವಿಶ್ವದಾದ್ಯಂತದ ಮಾರುಕಟ್ಟೆಯನ್ನು ಈ ತಂತ್ರಗಾರಿಕೆಯ ವಿಸ್ತರಣೆ ನಡೆಯಲಿದೆ.
ಈ ಡೀಲ್ ನ್ನು ಫಾಸ್ಟ್ ಫುಡ್ ಚೈನ್ ನಲ್ಲಿ ಕಳೆದ ಕೆಲವು ವರ್ಷಗಳಲ್ಲೇ ನಡೆಯುವ ದೊಡ್ಡದು ಎಂದು ಪರಿಗಣಿಸಲಾಗುತ್ತದೆ. ಮೆಕ್ ಡೊನಾಲ್ಡ್ ಸಿಇಓ ಸ್ಟೀವ್ ಈಸ್ಟರ್ ಬುಕ್ ಈ ತಂತ್ರಗಾರಿಕೆಯು ಮೆಕ್ ಡೊನಾಲ್ಡ್ ಭವಿಷ್ಯದ ಪ್ರಮುಖ ಅಂಶ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ತನ್ನ ಗ್ರಾಹಕರಿಗೆ ಹೆಚ್ಚಿನ ವಯಕ್ತಿಕವಾದ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಈ ತಂತ್ರಜ್ಞಾನವು ಹೆಚ್ಚು ಮಹತ್ವಪೂರ್ಣವಾಗಿರುತ್ತದೆ ಎಂಬುದಾಗಿ ಸಿಇಓ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೆಕ್ ಡೊನಾಲ್ಡ್ ನ ಫುಡ್ ಸಿಸ್ಟಮ್ ಯಾವ ರೀತಿಯ ಬದಲಾವಣೆ ಆಗುತ್ತದೆ ಕಾದು ನೋಡಬೇಕಿದೆ.


Click it and Unblock the Notifications








